Police Bhavan Kalaburagi

Police Bhavan Kalaburagi

Sunday, October 28, 2012

BIDAR DISTRICT DAILY CRIME UPDATE 28-10-2012

                                              ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-10-2012

ಬೇಮಳಖೇಡಾ ಪೊಲೀಸ ಠಾಣೆ ಗುನ್ನೆ ನಂ. 74/2012 ಕಲಂ ಕಲಂ 279, 337, ಐ.ಪಿ.ಸಿ ಜೊತೆ 187 ಐ.ಎಮ್.ವಿ ಕಾಯ್ದೆ :-
ದಿನಾಂಕ: 27-10-2012 ರಂದು 0900 ಗಂಟೆಗೆ ಫಿರ್ಯಾದಿ ಶ್ರೀಮತಿ ತುಳಜಮ್ಮಾ ಗಂಡ ಶಾಮರಾವ ವಾಡೇಕಾರ ವಯ: 34 ವರ್ಷ ಜಾ: ವಡ್ಡರ ಉ: ಕೂಲಿ ಕೆಲಸ ಸಾ: ಉಡಮನಳ್ಳಿ ಮತ್ತು ಅವಳ ಮಗಳಾದ ಪ್ರಿಯಾ 12 ವರ್ಷ ಹಾಗೂ ಇನ್ನೋಬ್ಬ ತಿಪ್ಪಣ್ಣ 3 ಜನರು ಕುಳಿತು ಅಟೋ ನಂ ಕೆಎ 32 ಬಿ 3758 ನೇದರಲ್ಲಿ ಉಡಮನಳ್ಳಿಯಿಂದ ಬೇಮಳಖೇಡಾ ಕಡೆಗೆ ಬರುತ್ತಿದ್ದಾಗ ಉಡಮನಳ್ಳಿ ದಾಟಿ 1 ಕಿ.ಮೀ ಅಂತರದಲ್ಲಿರುವ ಶಾಮರಾವ ಬಾತೆ ರವರ ಹೊಲದ ಹತ್ತಿರ ಹಿಂದಿನಿಂದ ಬರುತ್ತಿದ್ದ ಕ್ರೂಜರ ವಾಹನ ಸಂಖ್ಯೆ ಕೆಎ 49 ಎಮ್ 732 ನೇದರ ಚಾಲಕನಾದ ಮಾರುತಿ ತಂದೆ ಫುಂಡಲೀಕ ಮರಾಠಾ ಸಾ: ಉಡಮನಳ್ಳಿ ಇವನು ಸದರಿ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ತಂದು ಫಿರ್ಯಾದಿ ಇದ್ದ ಅಟೋದ ಹಿಂಭಾಗಕ್ಕೆ ಡಿಕ್ಕಿ ಮಾಡಿ ಸ್ಥಳದಲ್ಲಿ ಕ್ರೂಜರ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ. ಇದರ ಪರಿಣಾಮ ಫಿರ್ಯಾದಿಯ ಎಡಕಣ್ಣಿನ ಪಕ್ಕದಲ್ಲಿ, ಎಡಕಣ್ಣಿನ ಕೆಳಗೆ, ಬಲಕಣ್ಣಿನ ಪಕ್ಕದಲ್ಲಿ ತರಚಿದ ಹಾಗೂ ಬಲ ತೋಡೆಯಲ್ಲಿ, ಎಡಗಡೆ ಎದೆಯಲ್ಲಿ ಒಳಗಾಯಗಳಿರುತ್ತವೆ. ಮತ್ತು ಪ್ರಿಯಾಳ ಬಲಕಿವಿಯ ಮೇಲಿನ ತಲೆಯ ರಕ್ತಗಾಯ ಹಾಗೂ ಎಡಸೊಂಟದ ಕೆಳಗೆ ತೊಡೆಯ ಮೇಲೆ ಒಳಗಾಯಗಳಾಗಿರುತ್ತವೆ ಅಂತ ಕೊಟ್ಟ ಫಿರ್ಯದಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ. 19/2012 ಕಲಂ 174 (ಸಿ) ಸಿ.ಆರ್.ಪಿ.ಸಿ :-

ದಿನಾಂಕ 25/10/2012 ರಂದು 1930 ಗಂಟೆಗೆ ಫಿರ್ಯಾದಿ ಶ್ರೀ ಚನ್ನಬಸಪ್ಪಾ ತಂದೆ ತಿಪ್ಪಣ್ಣಾ ಮರಪಳ್ಳಿ ವಯ 52 ವರ್ಷ ಜಾತಿ ಹರಿಜನ ಉ// ಸಹ ಶಿಕ್ಷಕ ಸಾ// ಇಟಗಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖೀತ ಅಜರ್ಿಸಲ್ಲಿಸಿದ್ದು ಸಾರಂಶವೆನೆಂದರೆ ಫಿರ್ಯಾದಿಯ ಮಗ ಓಂಪ್ರಕಾಶ ಮರಪಳ್ಳಿ ವಯ 24 ವರ್ಷ ಈತನು ದಿನಾಂಕ 25/10/2012 ರಂದು ಮದ್ಯಾಹ್ನ 1210 ಗಂಟೆಗೆ ತನ್ನ ಗೆಳೆಯರ ಜೊತೆ ಕೊಮಟಗೇರ ಬಾವಿಗೆ ಈಜಾಡಲು ಹೋಗಿರುತ್ತಾನೆ. ಸದರಿ ಮೃತ ಓಂಪ್ರಕಾಶಗೆ ಕನಿಷ್ಠವು ಈಜಾಡಲು ಬರುತಿರಲಿಲ್ಲಾ ಅವನ ಗೆಳೆಯನ ಒತ್ತಾಯದ ಮೇರೆಗೆ ಕಲಿಯುವ ಉದ್ದೇಶ ದಿಂದ ಮೋಸ ಹೋಗಿ ಬಾವಿಗೆ ಬಿದ್ದಾನೋ ಅಥವಾ ಯಾರಾದರು ಅಂದರೆ ಶಂಬುಲಿಂಗ ತಂದೆ ವೈಜೀನಾಥ ಸಿಂಧೆ ಈವನು ದಬ್ಬಿದಾನು ಗೊತ್ತಿಲ್ಲಾ ಸಾವು ಅನುಮಾನಾಸ್ಪದ ಎಂದು ಕಂಡು ಬರುತ್ತಿದೆ ಪ್ರಯುಕ್ತ ಅವನ ಜೊತೆ ಯಾರೂ ಯಾರು ಈಜಾಡಲು ಹೋಗಿರುತ್ತಾರೋ ಎಂಬುದು ಸದರಿ ಶಂಬುಲಿಂಗನನ್ನು ವಿಚಾರಿಸಿದಾಗ ತಿಳಿದುಕೊಳ್ಳ ಬಹುದು ನಮಗೆ ಶಂಬುಲಿಂಗನ ಮೇಲೆ ಅನುಮಾನ ಇದೆ ಅವನಿಗೆ ವಿಚಾರಿಸಿ ಕಾನೂನು ಕ್ರಮ ಕೈಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. ಅಂದರೆ ಕುಮಾರ ಶಂಬುಲಿಂಗನೆ ತನ್ನ ಮಗನಿಗೆ ಬಾವಿಗೆ ಈಜಾಡಲು ಮನೆಯಿಂದ ಕರೆದುಕೊಂಡು ಹೋಗಿ ಬಾವಿಗೆ ತಳಿ ಹಾಕಿರುತ್ತಾನೆ ಅವನ ಮೇಲೆ ಕಾನೂನು ಪ್ರಕಾರ ಬಂದಿಸಿ ವಿಚಾರಣೆಗೆ ಒಳ ಪಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕೊಟ್ಟ ಫಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾತದೆ.

 
ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 79/2012 ಕಲಂ 87 ಕೆ.ಪಿ ಕಾಯ್ದೆ :-


ದಿನಾಂಕ: 27/10/2012 ರಂದು 1330 ಗಂಟೆಗೆ ಪಿಎಸ್ಐ ರವರಿಗೆ ಶೆಂಬೆಳ್ಳಿ ಗ್ರಾಮದಲ್ಲಿ ಶರಣಪ್ಪಾ ಥಪಟೆ ರವರ ಹೋಟಲ ಹತ್ತಿರ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಇಸ್ಟೇಟ ಎಲೆಗಳಿಂದ ಅಂದ ಬಾಹರ ಎನ್ನುವ ಜೂಜಾಟ ಆಡುತ್ತಿದ್ದಾರೆ ಎಂಬು ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಶೆಂಬೆಳ್ಳಿ ಗ್ರಾಮದ ಶರಣಪ್ಪಾ ಥಪೆ ರವರ ಹೋಟಲ ಹತ್ತರಿ ಹೋಗಿ ನೋಡಲು ಅಲ್ಲಿ ಆರೋಪಿ 1) ಸಂಜೂಕುಮಾರ ತಂದೆ ಬಸಪ್ಪಾ ಢೋಣೆ 2) ಶ್ರೀಮಂತ ತಂದೆ ಶಂಕರ ಥಪಟೆ, 3) ಸಂಜುಕುಮಾರ ತಂದೆ ಅರ್ಜುನ್ ಥಪಟೆ, 4) ರಾಹುಲ ತಂದೆ ಸಂಗಪ್ಪಾ ಮಡಿಕೆ, 5) ಶಾಮ @ ಸ್ವಾಮಿದಾಸ ತಂದೆ ಕಾಶಿನಾಥ ಮೇಲ್ಮನೆ, 6) ಎಸವಂತ ತಂದೆ ಅಜರ್ುನ ಥಪಟೆ, 7) ಅಶೋಕ ತಂದೆ ರಾಮಪ್ಪ ಢಂಪರೆ, 8) ವಿಜಯಕುಮಾರ ತಂದೆ ಸೋಪಾನರಾವ ಥಪಟೆ, 9) ಶಾಮ ತಂದೆ ಅಜರ್ುನ ಹಲಗೆ, 10) ಪ್ರಭು ತಂದೆ ಶರಣಪ್ಪಾ ಸಿಂದೆ ಸಾ: ಎಲ್ಲರೂ ಶೆಂಬೆಳ್ಳಿ ರವರ ಮೇಲೆ ದಾಳಿ ಮಾಡಿ ಸದರಿ ಜನರ ವಶದಿಂದ 1800/- ರೂ ಮತ್ತು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿದ್ದು ಸದರಿ ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 178/2012 ಕಲಂ 283, 338 ಐಪಿಸಿ :-

ದಿನಾಂಕ :  27/10/2012 ರಂದು 0600 ಗಂಟೆಗೆ ಫಿರ್ಯಾದಿ ಶ್ರೀ ಅಖೀಲ ತಂದೆ ಅಮೀರೊದ್ದಿನ ಸಾ : ಭಾತಂಬ್ರಾ ರವರು ಠಾಣೆಗೆ ಹಾಜರಾಗಿ ದೂರು ನಿಡಿದ್ದು ಅದರ ಸಾರಾಂಶವೇನಂದರೆ ಭಾಲ್ಕಿ ಸಿರ್ಸೆ ಪೇಟ್ರೊಲ ಬಂಕ ಎದುರಿಗೆ ಇರುವ ಫಿರ್ಯಾದಿಯ ಟೈರ ಪಂಪಚರ ಅಂಗಡಿಯಲ್ಲಿ ರಾಮ ತಂದೆ ವಿಠಲ ರೊಡ್ಡೆ ಇತನು ಕೂಲಿ ಕೆಲಸ ಮಾಡುತ್ತಾನೆ. ಹಾಗು ದಿನಾಲು ಭಾಲ್ಕಿಯಿಂದ ಹೋಗಿ ಬರುವದು ಮಾಡುತ್ತಾನೆ . ಹೀಗಿರುವಾಗ ದಿನಾಂಕ : 26/10/12 ರಂದು ಕೂಡಾ ಬೆಳಗ್ಗೆ ಭಾಲ್ಕಿಗೆ ಬಂದು ಸಾಯಂಕಾಲ ವರೆಗೆ ಕೆಲಸ ಮಾಡಿ 7-30  ಗಂಟೆಗೆ  ಸುಜುಕಿ ಮೋಟಾರ ಸೈಕಲ ನಂ : ಕೆಎ-39-ಇ-3548 ನೇದರ ಮೇಲೆ ಭಾತಂಬ್ರಾ ಹೋಗುತ್ತೆನೆ ಎಂದು ಹೇಳಿ ಹೋದನು. ನಂತರ 10 ನಿಮಿಷದ ಬಳಿಕ ಫಿರ್ಯಾದಿ ಕೂಡಾ ಭಾತಂಬ್ರಾಕ್ಕೆ ಹೋಗುತ್ತಿದ್ದಾಗ ಭಾಲ್ಕಿ - ಭಾತಂಬ್ರಾ ರಸ್ತೆ ಚರ್ಚ ಹತ್ತಿರ ರಾಮ ಈತನು ಕತ್ತಲಲ್ಲಿ ನಿಂತ ಟ್ಯಾಕ್ಟರ ನಂ : ಕೆಎ-39-ಟಿ-134 ಟ್ರಾಲಿ ನಂ : ಕೆಎ-39-ಟಿ-135 ನೇದಕ್ಕೆ ಡಿಕ್ಕಿ ಮಾಡಿ ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದನ್ನು  ನೋಡಿ ಎಬ್ಬಿಸಲು ಆತನಿಗೆ ಹಣೆಯ ಮೇಲೆ ಭಾರಿ ರಕ್ತಗಾಯ ತಲೆಯ ಹಿಂದೆ ಗುಪ್ತಗಾಯ ಮತ್ತು ಎಡಗೈ ರಟ್ಟೆಯ ಮೇಲೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರ ಭಾಲ್ಕಿ - ಭಾತಂಬ್ರಾ ರಸ್ತೆ ಚರ್ಚ ಎದುರಗಡೆ ಕತ್ತಲಲ್ಲಿ ಅಪಾಯಕಾರಿಯಾಗಿ ಯಾವದೆ ಮುಂಜಾಗತ್ರೆ ವಹಿಸದೆ ಮತ್ತು ಪಾರ್ಕಿಂಗ್ ದೀಪ ಹಾಕದೆ ನಿಲ್ಲಿಸಿದರಿಂದ ರಾಮ ಈತನು ತನಗೆ ಗೊತ್ತಾಗದೆ ಟ್ರ್ಯಾಕ್ಟರ ಡಿಕ್ಕಿ ಮಾಡಿ ಗಾಯಗೊಂಡಿರುತ್ತಾನೆ . ಟ್ರ್ಯಾಕ್ಟರ ಚಾಲಕ ಮೇಲೆ ಕಾನೂನ ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 179/2012 ಕಲಂ 279 ಐಪಿಸಿ :-

ದಿನಾಂಕ : 26/10/2012 ರಂದು 2000 ಗಂಟೆಗೆ ಫಿರ್ಯಾದಿ ಶ್ರೀ ಸಂಜೀವಕುಮಾರ ತಂದೆ ನೀಲಕಂಟ ಮೇತ್ರೆ ವಯ 32 ವರ್ಷ ಜಾತಿ ಕುರಬ ಉ: ಚಾಲಕ ಸಾ: ಹಲಸಿ (ಎಲ) ಇವರ ಟ್ಯಾಕ್ಟರ ನಂ : ಕೆಎ-39-ಟಿ-134 ಟ್ರಾಲಿ ನಂ : ಕೆಎ-39-ಟಿ-135 ನೇದರ ಮುಂದಿನ ಎಡಭಾಗದ ಟಾಯರಿನ ಬೇರಿಂಗ ಮುರಿದು ಕೆಟ್ಟು ಹೊಗಿದ್ದರಿಂದ ಭಾಲ್ಕಿ - ಭಾತಂಬ್ರಾ ರಸ್ತೆ ಚರ್ಚ ಹತ್ತಿರ ರಸ್ತೆಯ ಮೇಲೆ ನಿಲ್ಲಿಸಿದಾಗ ಅದೆ ಸಮಯಕ್ಕೆ ಸುಜುಕಿ ಮೋಟಾರ ಸೈಕಲ ನಂ : ಕೆಎ-39-ಇ-3548 ನೇದರ ಚಾಲಕ ರಾಮ ತಂದೆ ವಿಠಲ ಸಾ : ಭಾತಂಬ್ರಾ ಇತನು ಭಾಲ್ಕಿ ಕಡೆಯಿಂದ ತನ್ನ ಮೋಟಾರ ಸೈಕಲ ಅತಿ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ಕೊಂಡು ಬಂದು ಫಿರ್ಯಾದಿಯ ಟ್ರ್ಯಾಕ್ಟೆರಗೆ ಡಿಕ್ಕಿ ಮಾಡಿದರಿಂದ ಸದರಿ ಡಿಕ್ಕಿಯಿಂದ ರಾಮ ಈತನಿಗೆ ಹಣೆಯ ಮೇಲೆ ಹಾಗು ತಲೆಯ ಹಿಂದೆ ಭಾರಿ ರಕ್ತಗಾಯವಾಗಿರುತ್ತದೆ. ಹಾಗು ಎಡಗೈ ರಟ್ಟೆಗೆ ಭಾರಿ ರಕ್ತ ಗಾಯವಾಗಿ ಮುರಿದಿರುತ್ತದೆ ಅಂತ ಕೊಟ್ಟ ಫಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬೀದರ ನಗರ ಪೊಲೀಸ್ ಠಾಣೆ ಗುನ್ನೆ ನಂ. 85/2012 ಕಲಂ 341, 324, 504 ಜೊತೆ 34 ಐಪಿಸಿ :-

ದಿನಾಂಕ:27/10/2012 ರಂದು ಫಿರ್ಯಾದಿ ಶ್ರೀ ಕಾಶಿನಾಥ ತಂದೆ ರಾಮಣ್ಣಾ ಸಾ:ಕುಂಬರವಾಡಾ ಬೀದರ ಇವರು  ಅಕರ್ಾಟಗಲ್ಲಿಯಲ್ಲಿರುವ ತನ್ನ ಸ್ನೆಹಿತನ ಮನೆಯಲ್ಲಿ  ಗೆಳೆಯರೊಂದಿಗೆ ಪಾಟರ್ಿ ಮಾಡುತ್ತಿದ್ದಾಗ ಪಕ್ಕದ ಮನೆಯ ಬಾಬುರಾವ ಶೀಲವಂತ ಈತನು ಫಿರ್ಯಾದಿಗೆ ಮನೆಯಿಂದ ಹೊರಗೆ ಕರೆದು ಅವಾಚ್ಯವಾಗಿ ಬೈಯ್ದು, ಆರೋಪಿತರು ಬಾಬುರಾವ ಶೀಲವಂತ ಹಾಗು ಆತನ ಮಗ ಇಬ್ಬರು ಸಾ:ಅಕರ್ಾಟಗಲ್ಲಿ ಬೀದರ ವಿರುಗಳು ಫಿರ್ಯಾದಿಗೆ ಒತ್ತಿ ಹಿಡಿದು, ಬಡಗೆಯಿಂದ ಫಿರ್ಯಾದಿಯ ತಲೆಯಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದು, ಕೈಮುಂಗೈ ಮೇಲೆ ಹೊಡೆದು ತರಚಿದ ಗಾಯಪಡಿಸಿರುತ್ತಾರೆ ಅಂತಾ ಫಿರ್ಯಾದು  ಕೊಟ್ಟ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 126/2012 ಕಲಂ 79, 80 ಕೆಪಿ ಕಾಯ್ದೆ :-


ದಿನಾಂಕ 27-10-2012 ರಂದು 1500 ಗಂಟೆಗೆ ಪಿ ಎಸ್ ಐ [ಕಾ,ಸು] ರವರು ಠಾಣೆಯಲ್ಲಿದ್ದಾಗ ಖಚಿತ ಭಾತ್ಮಿ ಬಂದಿದ್ದೇನೆಂದರೆ, ಅಂಬೆಸಾಂಗ್ವಿ ಕ್ರಾಸ ಹತ್ತಿರ ನರಸಿಂಗರಾವ ಮಾನಕಾರಿ ಇವನ ಕಬ್ಬಿಣದ ಶೆಡ್ಡಿನಲ್ಲಿ ಕೆಲವರು ಪರೆಲ ಎಂಬ 3 ಎಲೆಯ ಇಸ್ಪೀಟ್ ಜೂಜಾಟ ಹಣ ಹಚ್ಚಿ ಪಣ ತೊಟ್ಟು ಆಡುತ್ತಿದ್ದಾರೆ, ಅಂತಾ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ನರಸಿಂಗರಾವ ಮಾನಕಾರಿ ಇವನ ಕಬ್ಬಿಣದ ತಗಡದ ಶೆಡ್ಡಿನಲ್ಲಿ ಹೋಗಿ 1630 ಗಂಟೆಗೆ ಓಳಗೆ ಇಸ್ಪೀಟ್ ಜೂಜಾಟ ಆಡುತ್ತಿದ್ದ ವಿಶ್ವನಾಥ ತಂದೆ ಶಂಕರರಾವ ಶಿಂದೆ ಹಾಗು ಇನ್ನು 5 ಜನರು ಸಾ:: ಅಂಬೆಸಾಂಗವಿ, ಕಳಸದಾಳ, ಬೀರಿ(ಬಿ) ತಾಂಡಾ, ವಳಸಂಗ ಇವರ ಮೇಲೆ ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ಸಂಬಂಧಪಟ್ಟ ಒಟ್ಟು ಹಣ 6560/- ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಆರೋಪಿತರಿಗೆ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 248/2012 ಕಲಂ 279, 337, 338 ಐ.ಪಿ.ಸಿ. ಜೋತೆ 185 ಐಎಂವಿ ಕಾಯ್ದೆ :-

ದಿನಾಂಕ 27/10/2012 ರಂದು 18:00 ಗಂಟೆಗೆ ಫಿರ್ಯಾದಿ ಶ್ರೀ ಶರಣಪ್ಪ ತಂದೆ ರಾಮಶೆಟ್ಟಿ ಪಾಟೀಲ್ 57 ವರ್ಷ ಸಾ: ಅಕ್ಕಮಹಾದೇವಿ ಕಾಲೋನಿ ಬೀದರ ಇವರ ಅಣ್ಣನಾದ ಸುಭಾಷ ತಂದೆ ರಾಮಶೆಟ್ಟಿ ಪಾಟೀಲ ಇವರು ಬೀದರ ಕುಂಬರವಾಡಾ ಕಮಾನ ಎದುರಿನ ರೊಡಿನ ಮೇಲೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಮೋಟಾರ ಸೈಕಲ ಚಾಲಕನಾದ ಸಂಜುಕುಮಾರ ತಂದೆ ಮಾಣಿಕಪ್ಪಾ ಸಾ: ಬೀದರ ಈತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಭಾಷ ಪಾಟೀಲ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ ಪಡೆಸಿ ಸದರಿ ಚಾಲಕನು ಸಹ ಗಾಯಗೊಂಡಿರುತ್ತಾನೆ. ಅಂತ ಕೊಟ್ಟ ಫಿರ್ಯಾದಿಯ ಮೌಖಿಕ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: