ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:13/10/2012
ರಂದು ಸಾಯಾಕಾಂಲ 6:00 ಗಂಟೆಯಿಂದ 6:30 ಗಂಟೆಯ ಮಧ್ಯದ ಅವಧಿಯಲ್ಲಿ ಮೃತ ಅಪರಿಚಿತ ಹೆಣ್ಣು ಹುಡಗಿ ಅಂದಾಜ
15-16 ವರ್ಷ ವಯಸ್ಸಿನವಳು ಗುಲಬರ್ಗಾ ಕಡೆಯಿಂದ
ಕೆರೆಬೋಸಗಾ ಕ್ರಾಸ ಕಡೆಗೆ ರೋಡಿನ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಅಂದರೆ ಗುಲಬರ್ಗಾ ಕಡೆಯಿಂದ
ಪ್ರಭು ತಂದೆ ಸಿದ್ದಣ್ಣಾ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ
ನಡೆಸಿಕೊಂಡು ಬಂದು ಅಪರಿಚಿತ ಹುಡುಗಿಗೆ ಡಿಕ್ಕಿ ಹೊಡೆದಿದ್ದರಿಂದ, ಅವಳ ತಲೆಗೆ ಭಾರಿ ರಕ್ತಗಾಯ ಸ್ದಳದಲ್ಲಿಯೇ ಮೃತ ಪಟ್ಟಿದ್ದು
ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರ ತನ್ನ ವಾಹನ ನಿಲ್ಲಿಸದೇ
ಹಾಗೆಯೇ ಹೋಗಿರುತ್ತಾನೆ.ಸದರಿ ರೋಡಿಗೆ ಹೋಗಿ ಬರುವ ವಾಹನಗಳು ಮೃತಳ ತಲೆಯ ಮೇಲಿಂದ ಹೋಗಿದ್ದರಿಂದ ಅವಳ ತಲೆ ಒಡೆದು ಮೆದುಳು
ಚೆಲ್ಲಾಪೆಲ್ಲಿಯಾಗಿ ರೋಡಿಗೆ ಬಿದ್ದಿದ್ದು ಇರುತ್ತದೆ. ಮೋಟಾರ ಸೈಕಲ ನಂಬರ
ತಿಳಿದಿರುವದಿಲ್ಲ ಅಂತಾ ಶ್ರೀ ಬ್ರಹ್ಮಾನಂದ ತಂದೆ ವಿಷ್ಟು ಕೋಥಾಳೆ ಸಾ:ಆಳಂದ ಚೆಕ್ಕಪೊಸ್ಸ
ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:328/2012 ಕಲಂ 279,
304 (ಎ) ಐಪಿಸಿ ಸಂಗಡ 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
No comments:
Post a Comment