ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ ಪ್ರವೀಣ ಕುಲ್ಕರ್ಣಿ ತಂದೆ ಪ್ರಕಾಶ ಕುಲ್ಕರ್ಣಿ ಉ|| ವಕೀಲರು ಮತ್ತು ಆಡಳಿತಾಧಿಕಾರಿಗಳು ವಿದ್ಯಾನಿಧಿ ಪ್ರತಿಷ್ಠಾಣ
ಚಿಂಚೋಳಿ ಸಾ|| ಸೇಡಂ, ಹಾ||ವ|| ಮನೆ ವೆಂಕಟೇಶ್ವರ ಮಂದಿರ ಹತ್ತಿರ
ಬ್ರಾಹ್ಮಣಗಲ್ಲಿ ಚಿಂಚೋಳಿ ರವರು ದಿನಾಂಕ 07-10-2012 ರಿಂದ ರಜೆ
ಇರುವದರಿಂದ ಸೇಡಂಗೆ ಹೋಗಿ, ಅಲ್ಲಿಂದ
ದಿನಾಂಕ:08-10-2012 ರಿಂದ 17-10-2012 ರವರೆಗೆ ಆರ್.ಎಸ್.ಎಸ್ ಕ್ಯಾಂಪ ಕುರಿತು ಶಾಹಾಬಾದಿಗೆ ಹೋಗಿದ್ದು ಸದರಿ ಕ್ಯಾಂಪನಲ್ಲಿದ್ದಾಗ ಬಾಸ್ಕರ್ ಕುಲ್ಕರ್ಣಿ ಎಂಬುವವರು ದಿನಾಂಕ:12-10-2012 ರಂದು ಮಧ್ಯರಾತ್ರಿ 3-00 ಗಂಟೆಗೆ ತನ್ನ ಮನೆ
ಕಳತನವಾಗಿದ್ದ ಬಗ್ಗೆ ತಿಳಿಸಿದ್ದು ಇಂದು ದಿನಾಂಕ 18-10-2012
ರಂದು ತಾನು ಬಾಡಿಗೆ ಇರುವ ಮನೆಗೆ ಬಂದು ನೋಡಲು ಮನೆ ಬೀಗ ಕಪ್ಪಿ ಒಡೆದು ಯಾರೋ ಕಳ್ಳರು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಒಂದು ತೋಲೆ ಬಂಗಾರದ ಚೈನು ಅ.ಕಿ.32000 ರೂ.ಗಳು ಮತ್ತು ನಗದು ಹಣ 10,000 ಸಾವಿರ ರೂ ಗಳು ಹಿಗೆ
ಒಟ್ಟು 42,000/- ಸಾವಿರ ರೂ ಗಳು ದಿನಾಂಕ:11-10-2012 ರಂದು 11-00 ರಾತ್ರಿ ಗಂಟೆಯಿಂದ ಬೆಳಗಿನ ಜಾವ 3-00 ಗಂಟೆಯ ಒಳಗಿನ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ:102/2012 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment