ವರದಕ್ಷಿಣೆ
ಕಿರುಕುಳ ಪ್ರಕರಣ:
ಮಹಾಗಾಂವ
ಪೊಲೀಸ್ ಠಾಣೆ :ಶ್ರೀಮತಿ ಅನ್ನಪೂರ್ಣ ಗಂ
ಶಿವಾನಂದ ಚೂರಿ ವ||22 ವರ್ಷ ಸಾ|| ಹರಸೂರ ತಾ||ಜಿ|| ಗುಲಬರ್ಗಾ ರವರು ನನಗೆ ಎರಡು ವರ್ಷಗಳ
ಹಿಂದೆ ಹರಸೂರ ಗ್ರಾಮದ ಶಿವಾನಂದ ಇತನು ಆಗಾಗ ನಮ್ಮೂರಿಗೆ ಬರುತ್ತಿರುವುದರಿಂದ ನಮ್ಮಿಬರ ಮಧ್ಯ ಪ್ರಿತಿಯಾಗಿ
ಒಂದೂವರೆ ವರ್ಷದ ಹಿಂದೆ ನಾನು ಮತ್ತು ಶಿವಾನಂದ ಇಬ್ಬರೂ ಚಿತ್ತಾಪೂರ ರಜೀಸ್ಟರ ಆಫೀಸದಲ್ಲಿ ಮದುವೆಯಾಗಿದ್ದು,
ಮದುವೆ ಕಾಲಕ್ಕೆ ನಾನು ತವರು ಮನೆಯವರಿಗೆ ವಿರುದ್ದವಾಗಿ ಮದುವೆಯಾಗಿದ್ದರಿಂದ ನನ್ನ ತವರು
ಮನೆಯವರು ಏನು ಕೊಟ್ಟಿರುವದಿಲ್ಲ. ಮದುವೆಯಾದ ನಂತರ
ನಾಲ್ಕು-ಐದು ತಿಂಗಳ ನಂತರ ನನ್ನ ತಾಯಿಯಾದ ಶಾಂತಾಬಾಯಿ ಇವಳು ನಮ್ಮ ಮನೆಗೆ ಬಂದಳು, ನನ್ನ
ಗಂಡನಾದ ಶಿವಾನಂದ ,ರೇವಣಸಿದ್ದಪ್ಪ ಚೂರಿ, ಭಾವನಾದ ಬಸವ , ಮತ್ತು ಅತ್ತೆ ಮರೇಮ್ಮ ಮಾವ
ರೇವಣಸಿದ್ದಪ್ಪ ಇವರೆಲ್ಲರೂ ನನ್ನನ್ನು ನಿನ್ನ
ತವರು ಮನೆಯವರು ವರದಕ್ಷಿಣೆ ಏನು? ವರದಕ್ಷಿಣೆ
ಕೊಟ್ಟ ಹಾಗೆ ನಮ್ಮ ಮನೆಗೆ ಬರುತ್ತಾರೆ, ನಾಚಿಕೆ ಅನ್ನೊದು ಇಲ್ವಾ ಅಂತಾ ದಿನಾಲು ಅವಾಚ್ಯವಾಗಿ ನಿನ್ನ
ತವರು ಮನೆಯವರು ನಮ್ಮ ಮನೆಗೆ ಬರಕೂಡದು, ನೀನು ನಿನ್ನ ತವರು ಮನೆಯಿಂದ ವರದಕ್ಷಿಣೆ ತರಬೇಕು ಅಂತಾ ನನ್ನಗೆ ದಿನಾಲು ಹೊಡೆಬಡೆ ಮಾಡುತ್ತಾ
ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರು. ನನಗೆ 5 ತಿಂಗಳ ಪುಷ್ಪಾ ಅಂತಾ ಮಗಳಿರುತ್ತಾಳೆ. ನನ್ನ
ಗಂಡನ ಮನೆಯವರು ನನ್ನೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 83/2012 ಕಲಂ 498 (ಎ) 504,506, ಸಂ 34 ಐ,ಪಿ,ಸಿ ಮತ್ತು 3
& 4 ಡಿ,ಪಿ, ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment