ಕಳ್ಳತನ
ಪ್ರಕರಣ:
ರಾಘವೇಂದ್ರ
ನಗರ ಪೊಲೀಸ್ ಠಾಣೆ:ಶ್ರೀ ಲಕ್ಷ್ಮಣ ತಂದೆ ನಾಗಪ್ಪ ವಠಾರ ವ|| 44, ಉ|| ಸರ್ಕಾರಿ ನೌಕರ, ಸಾ||
ಕೆರಿ ಭೋಸಗಾ ತಾ|| ಜಿ|| ಗುಲಬರ್ಗಾ ಹಾ||ವ|| ಜೆ.ಆರ್ ನಗರ ಅಳಂದ ರೋಡ ಗುಲಬರ್ಗಾ ರವರು ದಿನಾಂಕ
28-09-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ನನ್ನ ಹೀರೊ ಹೊಂಡಾ
ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ. ಕೆಎ-32/ಎಸ್-3502 ನೇದ್ದನ್ನು ನಿಲ್ಲಿಸಿರುತ್ತೆನೆ. ಬೆಳಿಗ್ಗೆ
ಎದ್ದು ನೋಡಲು ನನ್ನ ಮೊಟಾರ್ ಸೈಕಲ್ ಇರಲ್ಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಮೊಟಾರ್ ಸೈಕಲ್ ಸಿಕ್ಕಿರುವದಿಲ್ಲ
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:71/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ
ಮತ್ತು ಜಾತಿ ನಿಂದನೆ ಪ್ರಕರಣ:
ರೇವೂರ
ಪೊಲೀಸ್ ಠಾಣೆ:ಶ್ರೀ ಅಶೋಕ ತಂದೆ ಮಾಣಿಕ ದಾಡಿ ಸಾ:ಚಿಂಚನಸೂರ ಹಾವ:ಮುಂಬೈ ರವರು ನಾನು ದಿ:30/09/2012 ರಂದು
ರಾತ್ರಿ 11:00 ಗಂಟೆ ಸುಮಾರಿಗೆ ಬೈರಾಮಡಗಿ ಗ್ರಾಮದ ದಾವಲಮಲಿಕ ದೇವರ ಜಾತ್ರೆ ಕಾರ್ಯಾಕ್ರಮದಲ್ಲಿ ಹರಿಜನ ಹೆಣ್ಣು
ಮಕ್ಕಳು ದೇವರಿಗೆ ಅಡ್ಡ ಬಿಳುತ್ತಿರುವಾಗ ಗುರು ತಂದೆ ಬಸವರಾಜ ಪೊಲೀಸ್ ಪಾಟೀಲ್ ಇತನು ಜಾತಿ
ಎತ್ತಿ ಬೈದು ಹೇಗೆ ಅಡ್ಡ ಬಿಳತಾರ ನೋಡು ಅಂತ ಅಂದಾಗ ನಾನು ಯಾಕೆ ಬೈಯುತ್ತಿದ್ದಿರಿ ಅಂತ ಕೇಳಿದ್ದಕ್ಕೆ,
ಗುರು ತಂದೆ ಬಸವರಾಜ ಪೊಲೀಸ್ ಪಾಟೀಲ್, ಶರಣಬಸಪ್ಪ ತಂದೆ ಗುರಲಿಂಗಪ್ಪ ಕಲಬುರ್ಗಿ,ಮೋದಿನ ತಂದೆ ಬಾವಾಸಾಬ
ಕಾನಳ್ಳಿ, ಮಡಿವಾಳಪ್ಪ ತಂದೆ ಗಂಗಪ್ಪ ಖಂಡೆಕರ, ಸೋಮುಗೌಡ ತಂದೆ ಬಸವರಾಜ ಪೊಲೀಸ್ ಪಾಟೀಲ, ಸಿದ್ದಲಿಂಗ
ತಂದೆ ಪಂಡಿತ ಪೊಲೀಸ್ ಪಾಟೀಲ, ಬಸವರಾಜ ತಂದೆ ಗುರುಲಿಂಗಪ್ಪ ಪೊಲೀಸ್ ಪಾಟೀಲ, ಶರಣಪ್ಪ ಜಮದಿ ಇಬ್ಬರು
ಇಕ್ಕಳಿಗೆ ಸೊಕ್ಕು ಬಹಳ ಬಂದಿದೆ, ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೊಡೆಯುತ್ತಿದ್ದಾಗ ಅಲ್ಲೆ
ಇದ್ದ ಲಕ್ಷ್ಮಣ ತಂದೆ ಗುರಪ್ಪ ಅಳ್ಳಗಿ, ಮಹಾಂತಪ್ಪ ತಂದೆ ಶರಣಪ್ಪ ಸುತಾರ, ದತ್ತಪ್ಪ ತಂದೆ ಲಕ್ಷ್ಮಣ ಸಾಗರ, ಸಿದ್ದಾರಾಮ ತಂದೆ ಮಾಪಣ್ಣ ಸಾಗರ, ರವರು ಜಗಳ ಬಿಡಿಸಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 90/12 ಕಲಂ
143,147,341,323,324,504 ಸಂ 149 ಐ.ಪಿ.ಸಿ ಮತ್ತು
3 (1) (10) ಎಸ್.ಸಿ ಎಸ್,.ಟಿ ಪಿ,ಎ ಆಕ್ಟ 1989 ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment