ಮಂಗಳಸೂತ್ರ ದೋಚಿದ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀಮತಿ ಉಮಾದೇವಿ ಗಂಡ ಮೋಹನ ಚಂದ್ರ ಪಾಟೀಲ ರವರು ನಾನು ದಿನಾಂಕಃ 18.10.2012 ರಂದು
ರಾತ್ರಿ 8.40 ಗಂಟೆ ಸುಮಾರಿಗೆ ಸಂದಲ ಗಲ್ಲಿಯ ನಮ್ಮ ಮನೆಯಿಂದ ಹಿಂಗುಲಾಂಬಿಕ ದೇವಸ್ಥಾನಕ್ಕೆ
ಹೋರಟಾಗ ಗಣೇಶ ಮಂದಿರ ಕಡೆಯಿಂದ ಎರಡು ಜನ ಮೋಟಾರು ಸೈಕಲ ಮೇಲೆ ಬಂದು ಹಿಂದೆ ಕುಳಿತವನು ಒಮ್ಮೇಲೆ ನನ್ನ ಕೊರಳಿಗೆ ಕೈಹಾಕಿ ಬಂಗಾರದ ತಾಳಿ ಚೈನ್ ನ್ನು
ಕಿತ್ತಿಕೊಂಡು ತನ್ನ ಮೊಟಾರ ಸೈಕಲನ್ನು ವೇಗವಾಗಿ ಓಡಿಸಿಕೊಂಡು ನ್ಯಾಷನಲ ಕಾಲೇಜ ಕಡೆ ಹೋಗಿದ್ದು
ನನ್ನ ತಾಳಿ ಚೈನ ಅಂದಾಜು 4 ½ ತೊಲೆ ತೂಕ ಇದ್ದು ಅದರ ಅಃಕಿಃ 1,30,000-00
ರೂ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:167/2012 ಕಲಂ 392
ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ
ಪ್ರಕರಣ:
ಚೌಕ
ಪೊಲೀಸ್ ಠಾಣೆ:ಶ್ರೀ ರಮೇಶ ತಂದೆ
ಭೀಮಶ್ಯಾ ಬೇಲೂರ ವಯಃ30 ವರ್ಷ ಜಾಃ ಲಿಂಗಾಯಿತ ಉಃ ಜೈ ಭವಾನಿ ಟ್ರಾನ್ಸಪೂರ್ಟ ಸಾಃ ದೇವಿ ನಗರ
ಗುಲಬರ್ಗಾ ರವರು ನಾನು ದಿನಾಂಕಃ08.10.2012 ರಂದು ನನ್ನ ಲಾರಿ ನಂ ಕೆಎ-32, 6474 ನೇದ್ದು ಲಾರಿ
ತಂಗುದಾಣದಲ್ಲಿ ನಿಲ್ಲಿಸಿದ್ದಾಗ ಯಾರೋ ಕಳ್ಳರು ಲಾರಿಯನ್ನು ಕಳ್ಳತನ ಮಾಡಿ ಕೊಂಡು ಹೋಗಿದ್ದರು. ದಿನಾಂಕಃ
11.10.2012 ರಂದು 4-00 ಪಿ.ಎಮ್ ಸುಮಾರಿಗೆ ತಾವೆರಗೇರಾ ಗ್ರಾಮದ ಅಡವಿಯಲ್ಲಿ ಯಾವುದೋ ಒಂದು
ಲಾರಿ ಇದೆ ಎಂದು ಮಾಹಿತಿ ಮೇರೆಗೆ ನಾನು ಮತ್ತು ನನ್ನ ಸಂಗಡ ಚಂದ್ರಕಾಂತ, ಸಂತೋಷ ರವರು ಕೊಡಿ ತಾವರಗೇರಾ ಹೋಗಿ ನೋಡಲಾಗಿ ಕೋಠಾರಿ
ಎಂಬುವರ ಹೋಲದಲ್ಲಿ ನಮ್ಮ ಲಾರಿಯನ್ನು ನಿಂತಿದ್ದು, ಆದರೆ ಲಾರಿಯ ಆರು ಟೈಯರಗಳು ಸಿದ್ದು, ಮಲ್ಲಿಕಾರ್ಜುನ , ರಮೇಶ ಮತ್ತು ಮಚೇಂದ್ರ ಎಂಬುವವರು ನಮ್ಮ ಲಾರಿಯನ್ನು ಕಳ್ಳತನ
ಮಾಡಿಕೊಂಡು ಹೋಗಿ ತಾವರಗೇರಾ ಸಿಮೇಯಲ್ಲಿ 6 ಟೈಯರಗಳು
ಡಿಸ್ಕ ಸಮೇತಾ ಕಳುವು ಮಾಡಿಕೊಂಡು ಹೋಗಿದ್ದು ತಿಳಿದು ಬಂದಿರುತ್ತದೆ. ಕಾರಣ ಕಳ್ಳತನ ಮಾಡಿದವರ
ಮೇಲೆ ಕಾನೂನು ಕ್ರಮ ಜರಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 166/2012
ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ಹೆಚ್ಚುವರಿ
ಸಂಚಾರಿ ಪೊಲೀಸ್ ಠಾಣೆ: ಶ್ರೀ ಗುರುಶಾಂತಪ್ಪಾ
ತಂದೆ ಚಂದ್ರಶೇಖರ ಮಾಲಿ ಪಾಟೀಲ ಸಾ:ಹನುಮಾನ ಗುಡಿ ಹತ್ತಿರ ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:18-10-2012 ರಂದು ಸಾಯಂಕಾಲ 5=30
ಗಂಟೆಯ ಸುಮಾರಿಗೆ ನನ್ನ ಮೋಟಾರ ಸೈಕಲ ನಂ: ಕೆಎ-32 ಯು-1474 ನೇದ್ದರ ಮೇಲೆ ನನ್ನ ಹಿಂದುಗಡೆ ಶ್ರೀದರ ಕುಳಿತುಕೊಂಡಿದ್ದು ಜಗತ ಸರ್ಕಲ
ಕಡೆಯಿಂದ ಬಂದು ಮಹಾನಗರ ಪಾಲಿಕೆ ಕಡೆಗೆ ಹೋಗುತ್ತಿರುವಾಗ ಪಟೇಲ್ ಸರ್ಕಲ್ ಕಡೆಯಿಂದ ಬಸ ಬರುವುದನ್ನು
ನೋಡಿ ನಾನು ನನ್ನ ಮೋಟಾರ ಸೈಕಲ ಇಂಡಿಕೇಟರ ಹಾಕಿ ಬಸ ಹೋಗುವರಿಗೆ ನಿಂತಿರುವಾಗ ಮಹೀಂದ್ರ
ಗೂಡ್ಸ ನಂಬರ ಕೆಎ-32 ಟಿ ಆರ್- 0937 ನೇದ್ದರ ಚಾಲಕ ರಾಜು ಇತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ
ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ: 106/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment