ವರದಕ್ಷಿಣೆ ಕಿರಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ,
ಇಂದುಮತಿ ಗಂಡ ಅರುಣಕುಮಾರ ಚವ್ಹಾಣ ವಯ:28 ವರ್ಷ ಉ:ಸಹಶಿಕ್ಷಕಿ
ಸಾ:ಅಂಬಿಕಾನಗರ ಹಾವ: ಶರಣ ಕೃಪಾ
ಕುವೆಂಪುನಗರ ಗುಲಬರ್ಗಾ ರವರು ನನ್ನ ಮದುವೆಯು ದಿನಾಂಕ:18-11-2011
ರಂದು ಅರುಣಕುಮಾರ ತಂದೆ ಶಿವಾಜಿ ಚವ್ಹಾಣ ಸಾ|| ಅಂಬಿಕಾನಗರ ಗುಲಬಗರ್ಗಾ ಇತನ್ನೊಂದಿಗೆ ನೇರವೆರಿದ್ದು,
ಲಗ್ನದ ಸಮಯದಲ್ಲಿ ಅರುಣಕುಮಾರ ನಿಗೆ ವರದಕ್ಷಿಣೆ
ಅಂತಾ ಒಂದು ಲಕ್ಷ ರೂಪಾಯಿ ವರದಕ್ಷಿಣೆ, 5 ತೊಲೆ
ಬಂಗಾರ ಮತ್ತು ನಿಶ್ಚಯ ಕಾಲಕ್ಕೆ 2 ತೊಲೆ ಬಂಗಾರ
ಮತ್ತು ಒಂದು ಹೊಂಡಾ ಶೈನ ಮೋಟಾರ ಸೈಕಲ ಮತ್ತು ಮನೆ ಬಳಕೆಯ ಸಾಮಾನುಗಳು ತೆಗೆದುಕೊಂಡಿದ್ದಲ್ಲದೇ
ಅರುಣಕುಮಾರ ಇತನು ಮೊದಲ ಸಲ ನಮ್ಮ ಮನೆಗೆ ಬಂದಾಗ
ಒಂದು ತೊಲೆ ಬಂಗಾರ ಮಾಡಿಸಿಕೊಂಡಿದ್ದು
ಇರುತ್ತದೆ. ನಂತರ ಗಂಡನಾದ ಅರುಣಕುಮಾರ, ಅತ್ತೆ, ಮಾವ, ಭಾವಂದಿರು
ಅಶೋಕ ಹೆಂಡತಿ ಮೈದುನ ಇವರೆಲ್ಲರೂ ಇನ್ನೂ 50, ಸಾವಿರ ರೂಪಾಯಿಗಳು ಒಮದು ತೋಲಿ ಬಂಗಾರ ತೆಗೆದುಕೊಂಡು ಬರಬೇಕು ಮತ್ತು ಮದುವೆ ಮುಂಚಿತ 4
ವರ್ಷ ಶಿಕ್ಷಕಿ ಅಂತಾ ಕೆಲಸ ಮಾಡಿದ ಹಣ ಕೂಡಾ ತೆಗೆದುಕೊಂಡು ಬರಬೇಕು ಅಂತಾ ಹೇಳಿ ಎಲ್ಲರೂ ಚಿತ್ರ ಹಿಂಸೆಕೊಟ್ಟು ಮನೆಯಿಂದ ಹೊರಗೆ ಹಾಕಿರುತ್ತಾರೆ.
ನಮ್ಮ ತಂದೆಯವರು ನನ್ನ ಗಂಡನ ಮನೆಗೆ ಬಂದು ತೊಂದರೆ ಕೋಡಬೇಡಿರಿ ಅಂತಾ ಹೇಳಿದ್ದರೂ ಕೂಡಾ ಮೇಲಿನಂತೆ
ಹಣ ಬಂಗಾರ ತಂದಾಗ ಮಾತ್ರ ಮನೆಯಲ್ಲಿ ಕರೆದುಕೊಳ್ಳುವುದಾಗಿ ಚಿತ್ರಹಿಂಸೆ ಕೊಟ್ಟು ಮನೆಯಿಂದ ಹೊರಗೆ
ಹಾಕಿದ್ದು ಇರುತ್ತದೆ. ದಿನಾಂಕ:07-10-2012 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ನನ್ನ
ಕಾಕನಾದ ಗೋವಿಂದ ಇವರು ಗಂಡನ ಮನೆಯಾದ ಅಂಬಿಕಾನಗರಕ್ಕೆ ಹೋದಾಗ ನನ್ನ ಗಂಡ, ಅತ್ತೆ, ಮಾವ, ಹಾಗೂ
ಭಾವ ಸೂರ್ಯಕಾಂತ ಇವರೆಲ್ಲರೂ ಗೋವಿಂದ ರಾಠೋಡ ಇವರಿಗೆ ಇಂದುಮತಿಗೆ ಯಾಕೆ ಕರೆದುಕೊಂಡು ಬಂದೆ ಅಂತಾ
ಕೇಳಿದ್ದಕ್ಕೆ ನಮಗೆ ಹೆಚ್ಚಿನ ವರದಕ್ಷಿಣೆ ಕೊಡುವುದು ಆಗುವುದಿಲ್ಲಾ ಅಂತಾ ನನ್ನ ಕಾಕ ಗೋವಿಂದ ರಾಠೋಡ ಅಂದಾಗ ನನಗೆ, ನನ್ನ ಗಂಡ ಅತ್ತೆ ಮಾವ , ಭಾವ
ಮತ್ತು ಇತರರು ಅವಾಚ್ಯ ಶಬ್ದಗಳಿಂದ ಬೈದ್ದು
ಕೈಯಿಂದ ಹೊಡೆಬಡೆ ಮಾಡಿ ವರದಕ್ಷಿಣೆ ಹಣ ತರುವಂತೆ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ: 76/2012 ಕಲಂ, 143, 147, 498 (ಎ) 323, 504,
506 ಐಪಿಸಿ ಸಂಗಡ 149 ಐಪಿಸಿ ಮತ್ತು 3 & 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಪೊಲೀಸ್
ಪೇದೆ ಕೊಲೆ ಪ್ರಕರಣ:
ಬ್ರಹ್ಮಪೂರ
ಪೊಲೀಸ್ ಠಾಣೆ:ಶ್ರೀಮತಿ.
ಮಂಜುಳಾ ಗಂಡ ಶರಣಬಸಪ್ಪ ಚಕ್ಕಿ, ಸಾ|| ಮಕ್ತಂಪೂರ ಗುಲಬರ್ಗಾ ರವರು ನಾನು 11 ವರ್ಷಗಳ ಹಿಂದೆ ಮಕ್ತಂಪೂರ ಬಡಾವಣೆಯ
ಶರಣಬಸಪ್ಪ ಈತನೊಂದಿಗೆ ಮದುವೆಯಾಗಿದ್ದು, ನನ್ನ ಗಂಡನು ಪೊಲೀಸ ಇಲಾಖೆಯಲ್ಲಿ
ಪೊಲೀಸ ಕಾನ್ಸಟೇಬಲ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ಯ
ಅವರು ಗುಲಬರ್ಗಾದ ಅಬಕಾರಿ ಮತ್ತು ಲಾಟರಿ ನಿಷೇದ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಾ
ಬಂದಿರುತ್ತಾರೆ. ಮದುವೆಯಾದ ಒಂದು ವರ್ಷದ ನಂತರ
ನನ್ನ ಗಂಡನು ಕರಜಗಿ ಗ್ರಾಮದ ಕವಿತಾ ಅನ್ನುವಳೊಂದಿಗೆ ಯಾವುದೋ ಗುಡಿಯಲ್ಲಿ ಹಾರ ಬದಲಾಯಿಸಿಕೊಂಡು
ನಂತರ 8-10 ವರ್ಷಗಳ ಹಿಂದ ಅವಳಿಂದ ಬೇರೆಯಾಗಿರುವ ವಿಷಯ ನನಗೆ ಗೊತ್ತಾಗಿರುತ್ತದೆ. ದಿನಾಂಕ:
24/10/2012 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ನಾದನಿ, ನಮ್ಮ ತಮ್ಮ ಎಲ್ಲರೂ
ನಮ್ಮ ಮನೆಯಲ್ಲಿ ಇರುವಾಗ ಇಬ್ಬರು ಪೊಲೀಸರು ನಮ್ಮ ಮನೆಗೆ ಬಂದು ಶರಣಬಸಪ್ಪನಿಗೆ ಯಾರೋ ಹೊಟ್ಟೆಗೆ
ಚಾಕುವಿನಿಂದ ಯಾವುದೋ ಸ್ಥಳದಲ್ಲಿ ಹೊಡೆದು ಶವವನ್ನು ಬ್ರಹ್ಮಪೂರ ಠಾಣೆಯ ಹಿಂದುಗಡೆ ಕಂಪೌಂಡ
ಹತ್ತಿರ ತಂದು ಬಿಸಾಕಿರುತ್ತಾರೆ. ಅಂತಾ ತಿಳಿಸಿದ ಮೇರೆಗೆ ನಾವು ಮೂವರು ಗಾಬರಿಯಾಗಿ ಸ್ಥಳಕ್ಕೆ
ಬಂದು ನೋಡಲು ಯಾರೋ ದುಷ್ಕರ್ಮಿಗಳು ನನ್ನ ಗಂಡನಿಗೆ ಹೊಟ್ಟೆಗೆ ಹಾಗೂ ಬಲಗಡೆ ಕಿವಿಯ ಹತ್ತಿರ
ಮತ್ತು ಎಡಗಡೆ ತುಟಿಯ ಮೇಲೆ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಕಂಡು ಬರುತ್ತದೆ. ನನ್ನ ಗಂಡನು
ನಿನ್ನೆ ದಿನಾಂಕ:23/10/2012 ರಂದು ರಾತ್ರಿ 7:00 ಗಂಟೆಗೆ ರಾತ್ರಿ ಕರ್ತವ್ಯ ಇರುತ್ತದೆ ಅಂತಾ
ಮನೆಯಿಂದ ಹೇಳಿ ಹೋಗಿರುತ್ತಾರೆ. ನನ್ನ ಗಂಡನ ಶವದ ಸ್ಥಿತಿ ನೋಡಲು ಯಾರೋ ದುಷ್ಕರ್ಮಿಗಳು ದಿನಾಂಕ:
24/10/2012 ರಂದು ಬೆಳಿಗ್ಗಿನ ಜಾವ 04-00 ಗಂಟೆಯಿಂದ 06-00 ಗಂಟೆಯ ಮದ್ಯದ ಅವಧಿಯಲ್ಲಿ
ಹೊಟ್ಟೆಗೆ ಮತ್ತು ಶರೀರದ ಇತರೆ ಭಾಗಗಳಲ್ಲಿ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ.
ಕಾರಣ ನನ್ನ ಗಂಡನಿಗೆ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿಯ ಕ್ರಮ
ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:112/2012 ಕಲಂ: 302
ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment