ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ ಮಹಾದೇವಪ್ಪ
ತಂದೆ ತಿಪ್ಪಣ್ಣ ಬಂದ್ರೂರ ಸಾ||ಹಂದರಕಿ ಗ್ರಾಮ
ತಾ:ಸೇಡಂ ರವರು ನಾನು ಮತ್ತು ನನ್ನ ಹೆಂಡತಿಯಾದ ಗೌರಮ್ಮ ಹಾಗೂ ನನ್ನ ಅಳಿಯನಾದ ಹಣಮಂತ ಮೂರು
ಜನ ಕೂಡಿಕೊಂಡು ದಿನಾಂಕ:04-10-2012 ರಂದು ಬೆಳಿಗ್ಗೆ 10-00 ಗಂಟೆಯ
ಸುಮಾರಿಗೆ ನಮ್ಮ ಹೊಲದಲ್ಲಿಯ ಸಜ್ಜಿ ರಾಶಿ ಮಾಡಿಕೊಂಡು ಮನೆಯ ಕಡೆಗೆ ನಾವೆಲ್ಲರೂ ನಡೆದುಕೊಂಡು ಶರಣಪ್ಪಾ
ಮಾದರ ಇವರ ಹೊಲದ ಸಮಿಪದಿಂದ ಮನೆಗೆ ಹೊರಟಿದೇವು, ನನ್ನ ಹೆಂಡತಿಯಾದ ಗೌರಮ್ಮ ಇವಳು ರೋಡ ದಾಟುವಾಗ ಯಾದಗಿರ
ಕಡೆಯಿಂದ ಕೆಎ-02 ಬಿ-2265 ನೇದ್ದರ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ಹಾಗೂ
ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿದನು. ಅಪಘಾತ ಪಡಿಸಿದ ರಭಸಕ್ಕೆ ಅವಳ
ಮುಖವು ಜಜ್ಜಿದಂತಾಗಿ ಬಲಗಣ್ಣಿನ ಗುಡ್ಡೆ ಹೊರಗಡೆ ಬಂದಿದ್ದು ತಲೆಯ ಮೆದಳು ಚೆಲ್ಲಾಪಿಲ್ಲಿಯಾಗಿ
ಬಿದ್ದಿದ್ದು ಸ್ಥಳದಲ್ಲಿ ಭಾರಿ ರಕ್ತವಾಗಿ ನನ್ನ ಹೆಂಡತಿ ಗೌರಮ್ಮ ಇವಳು ಮೃತಪಟ್ಟಿರುತ್ತಾಳೆ.
ಲಾರಿ ಚಾಲಕನ ಹೆಸರು ವೇಣುಗೋಪಾಲ ತಂದೆ ಕೊಂಡಯ್ಯ
ಸಾ:ಹಾಲಹಳ್ಳಿ ಸ್ಲಂಬೋರ್ಡ, ಮಂಡ್ಯ
ಜಿಲ್ಲಾ:ಮಂಡ್ಯ ಅಂತ ತಿಳಿದು ಬಂದಿದ್ದು, ಆತನ ಮೇಲೆ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು
ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 208/2012 ಕಲಂ, 279, 304 (ಎ) ಐಪಿಸಿ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ
ಮೈನು @ ಮೈನೊದ್ದಿನ ತಂದೆ ಯಾಸಿನಸಾಬ ಲೋಹಾರ ಸಾ|| ಮುಸ್ಲಿಂ ಸಂಘ ಗುಲಬರ್ಗಾರವರು ನಾನು ಮತ್ತು ನನ್ನ ಅಣ್ಣನಾದ ರಿಯಾಜ ಮತ್ತು ರಿಯಾಜನ ಗೆಳೆಯ
ಚಾಂದ ಎಲ್ಲರೂ ಕೂಡಿಕೊಂಡು ದಿನಾಂಕ: 04-10-2012 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಆಳಂದ
ಚೆಕ್ಕ ಪೋಸ್ಟ ಹತ್ತಿರದ ಭಾಲೇಶ್ವರ ವೈನ ಶಾಪದಲ್ಲಿ ಸರಾಯಿ ಕುಡಿಯುತ್ತಿದ್ದು, ನಾನು ಇನ್ನೂ
ಸರಾಯಿ ಕುಡಿಸಬೇಕೆಂದು ರಿಯಾಜ ಮತ್ತು ಆತನ ಗೆಳೆಯನಿಗೆ ಕೇಳಲಾಗಿ ಅವರು ಹಣ ಕೊಡುತ್ತೆವೆ ಅಂತಾ
ಸ್ಪಲ್ಪ ದೂರು ಕಡೆದುಕೊಂಡು ಹೋಗಿದ ಹಣ ಇಲ್ಲ ಅಂತಾ ಹೇಳಿದರು.ನನಗೆ ಹಣ ಕೊಡದೆ ಇದ್ದರೆ
ಇಲ್ಲಿಯವರೆಗೆ ಯಾಕೇ ಕರೆದುಕೊಂಡು ಬಂದಿದ್ದಿರಿ ಅಂತಾ ಕೇಳಿದಕ್ಕೆ, ಅವಾಚ್ಯವಾಗಿ ಬೈದು ಕೈ ಮುಷ್ಟಿ ಮಾಡಿ ಹೊಡೆದು
ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ: 314/2012 ಕಲಂ, 504, 323, 324, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀಮತಿ ಗೌಸಿಯಾಬೇಗಂ ಗಂಡ ಮಹಮ್ಮದ ಇಸ್ಮಾಯಿಲ್ ಅಲಿ ವ;45
ವರ್ಷ ಸಾ|| ಮುಸ್ಲಿಂ ಸಂಘ ಟಿಪ್ಪು ಸುಲ್ತಾನ ಚೌಕ ಹತ್ತಿರ
ಅಜಾದಪುರ ರೋಡ ಗುಲಬರ್ಗಾ ರವರು ನಾನು ಮತ್ತು ನನ್ನ ಗಂಡ ಕೂಡಿಕೊಂಡು ದಿನಾಂಕ: 04-10-2012 ರಂದು ಮದ್ಯಾಹ್ನ ಸುಮಾರಿಗೆ ಟಿವಿಎಸ್
ಎಕ್ಸ್ ಮೋಟಾರ ಸೈಕಲ ನಂ ಕೆಎ-32
ಎಕ್ಸ್-4133 ನೇದ್ದರ
ಮೇಲೆ ಆಳಂದ ರೋಡ ಹತ್ತಿರ ಹೋಗುತ್ತಿದ್ದಾಗ ನನ್ನ ಸೀರೆಯು ಹಿಂದಿನ ಗಾಲಿಯಲ್ಲಿ
ಸಿಕ್ಕಿದ್ದರಿಂದ ಕೆಳಗೆ ಬಿದ್ದು ತಲೆಗೆ ಹಣೆಗೆ ಎಡಗಣ್ಣಿನ ಹತ್ತಿರ ಕಾಲಿಗೆ ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ: 315/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment