ಜಾತಿ ನಿಂದನೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ : ಶ್ರೀ ಸುಭಾಸ ತಂದೆ ಬಂಡೆಪ್ಪ ವ|| 22 ವರ್ಷ, ಜಾ|| ಎಸ್.ಸಿ ಸಾ|| ಭೂಸನೂರ ರವರು ಐ.ಟಿ.ಐ ಮತ್ತು ಡಿಪ್ಲೊಮಾ ವಿಧ್ಯಾಭ್ಯಾಸ ಮುಗಿಸಿಕೊಂಡಿದ್ದು ಸುಮಾರು 1 ತಿಂಗಳ ಹಿಂದೆ ಎನ.ಎಸ್.ಎಲ ಸುಗರ್ಸ ಭೂಸನೂರ ಇವರು ತಮ್ಮ ಪ್ಯಾಕ್ಟರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರಿಂದ ಫಿರ್ಯಾದಿದಾರರು ದಿನಾಂಕ 05/10/2012 ರಂದು ಮುಂಜಾನೆ ಫ್ಯಾಕ್ಟರಿಗೆ ಇಂಟರವೀವ ಕೊಡಲು ಹೋಗಿದ್ದು ಅಲ್ಲಿ ಹೆಚ.ಆರ್ ವಿಭಾಗದ ಮ್ಯಾನೇಜರ ಆದ ರಾಜೆಂದ್ರಸಿಂಗ ಇವರ ಆಫೀಸನಲ್ಲಿ ಹೋಗಿ ತನ್ನ ವಿಧ್ಯಾಭ್ಯಾಸದ ಕಾಗದ ಪತ್ರಗಳನ್ನು ತೋರಿಸಿದ್ದು ಕಾಗದ ಪತ್ರ ಪರಿಶೀಲಿಸಿದ ನಂತರ ಜಾತಿಯ ಬಗ್ಗೆ ವಿಚಾರಿಸಿ ನಂತರ ಎಸ.ಸಿ ಕಾಸ್ಟ ಇದ್ದು ಅದರಲ್ಲಿ ಹೊಲೆಯ ಎಂಬ ಜಾತಿಗೆ ಸೇರಿದವರು ಅಂತ ತಿಳಿಸಿದ ಮೇರೆಗೆ ಅಂತಹ ಜಾತಿಯವರಿಗೆ ಕೆಲಸಕ್ಕೆ ತೆಗೆದುಕೊಳ್ಳುವದಿಲ್ಲ ಅಂತ ಮ್ಯಾನೇಜರ ರವರು ಜಾತಿ ನಿಂದನೆ ಮಾಡಿದ್ದು ಮತ್ತು ಅವರ ಮುಂದೆ ಕುಳಿತಿದ್ದ ಅಧಿಕಾರಿಗಳಾದ ಶಿವಯೋಗಿ ಮತ್ತು ಜಗದೀಶ ಇವರಿಬ್ಬರೂ ನಿಮ್ಮೂರ ಹೊಲೆಯರಿಗೆ ಕೆಲಸಕ್ಕೆ ತೆಗೆದುಕೊಳ್ಳುವದಿಲ್ಲ ಎಂದು ಹೇಳಿದ್ದು ಆಗ ಹಾಗೆಲ್ಲಾ ಹೇಳಬೇಡಿ ಸರ ಎಂದು ಕೇಳಿಕೊಂಡಾಗ ಮ್ಯಾನೇಜರ ರಾಜೆಂದ್ರಸಿಂಗ ರವರು ಹೊಲೆ ಸೂಳೆ ಮಕ್ಕಳಿಗೆ ಹೊರಗೆ ಹಾಕಿ ಅಂತ ಹಿಂದಿ ಭಾಷೆಯಲ್ಲಿ ಹೇಳಿದರು ಯಾಕೆ ಸರ ಅಂತ ಕೇಳಿದಾಗ ಗೆಟ ಔಟ ಅಂತ ಕುತ್ತಿಗೆ ಹಿಡಿದು ಹೊರಗೆ ನೂಕಿದ್ದರಿಂದ ಹಣೆಗೆ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ. 87/2012 ಕಲಂ 323, 324, 504 ಸಂ. 34 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ : ಶ್ರೀ ರಾಜೆಂದ್ರಸಿಂಗ ತಂದೆ ಹೋರಿ ಸಿಂಗ ವ|| 56 ವರ್ಷ, ಜಾ|| ಜಾಡ, ಉ|| ಮ್ಯಾನೇಜರ (ಹೆಚ್.ಆರ್ & ಎ.ಡಿ.ಎಮ) ಎನ.ಎಸ್.ಎಲ. ಸುಗರ್ಸ ಲಿಮಿಟೇಡ ಘಟಕ – 02 ಭೂಸನೂರ, ಸಾ|| ಭಾರತೀಯ ಗ್ರಾಮ, ಪೋಸ್ಟ || ಗಜುರಲ್ಲಾ, ತಾ|| ಹಸನಪೂರ, ಜಿ|| ಅಮರೋಹಾ ( ಜ್ಯೋತಿಬಾ ಫುಲೇ ನಗರ ) ರಾಜ್ಯ|| ಉತ್ತರ ಪ್ರದೇಶ, ಹಾ||ವಾ|| ಎನ.ಎಸ್.ಎಲ. ಸುಗರ್ಸ ಲಿಮಿಟೇಡ ಘಟಕ – 02 ಭೂಸನೂರ ಇವರು ದಿನಾಂಕ 05/10/2012 ರಂದು ತಮ್ಮ ಆಫೀಸನಲ್ಲಿದ್ದಾಗ ಸುಭಾಸ ಈತನು ಬಂದು ಫ್ಯಾಕ್ಟರಿಯಲ್ಲಿ ನೌಕರಿ ಸಲುವಾಗಿ ಕೇಳಿದ್ದು ಈಗ ಫ್ಯಾಕ್ಟರಿಯಲ್ಲಿ ಯಾವುದೆ ಖಾಲಿ ಹುದ್ದೆ ಇರುವದಿಲ್ಲ ಮತ್ತು ಯಾವುದೆ ಇಂಟರವೀವ ಇರುವದಿಲ್ಲ ಹಾಗೂ ಫ್ಯಾಕ್ಟರಿಯಲ್ಲಿ ಇಂಟರವೀವ ಇದ್ದಾಗ ಬಂದು ಹಾಜರಾಗಲು ತಿಳಿಸಿದ್ದು, ಆಗ ಸುಭಾಸ ಈತನು ಟೇಬಲ ಮೇಲಿದ್ದ ಪೇಪರ ವೇಟನ್ನು ತೆಗೆದುಕೊಂಡು ಫಿರ್ಯಾದಿಯ ಮುಖಕ್ಕೆ ಮತ್ತು ಮೂಗಿಗೆ ಹೊಡೆದಿದ್ದರಿಂದ ರಕ್ತ ಮತ್ತು ಗುಪ್ತಗಾಯವಾಗಿದ್ದು, ಮತ್ತು ಬಲಗಣ್ಣಿಗೆ ಹೊಡೆದಿದ್ದರಿಂದ ಕನ್ನಡಕ ಒಡೆದು ಮೂಗಿಗೆ ಚುಚ್ಚಿ ರಕ್ತಗಾಯವಾಗಿರುತ್ತದೆ. ಆಗ ಆರೋಪಿತನು ನಾನು ಎಸ್.ಸಿ ಕಾಸ್ಟದವನಿದ್ದು ನಿಮ್ಮ ಮೇಲೆ ಅಟ್ರಾಸಿಟಿ ಕಾಯ್ದೆಯಲ್ಲಿ ಕೇಸು ಮಾಡಿಸುತ್ತೇನೆ ಅಂತಾ ಅನ್ನುತ್ತಾ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 86/2012 ಕಲಂ 341, 323, 324 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪ್ರವೀಣಕುಮಾರ ತಂದೆ ಶಿವರಾಯ ತಳವಾರ ರವರು ದಿನಾಂಕ: 05-10-2012 ರಂದು ಬೆಳಗ್ಗೆ ತನ್ನ ಮೊ/ಸೈಕಲ್ ನಂ: ಕೆಎ 32 ಎಲ್ 9246 ನೆದ್ದರ ಮೇಲೆ ಹರೀಶ ಈತನಿಗೆ ಕೂಡಿಸಿಕೊಂಡು ದೇವಿ ನಗರ ಕಾಸ್ ಧಾಟಿ ಹೋಗಿ ಪೆಟ್ರೋಲ್ ಪಂಪ ಹತ್ತಿರ ಹರೀಶ ಈತನಿಗೆ ಬಿಟ್ಟು ರೋಡ ದಾಟುತ್ತಿದ್ದಾಗ ಶಾಹಾಬಜಾರ ನಾಕಾ ಕಡೆಯಿಂದ ಟಿ.ವಿ.ಎಸ್.ಎಕ್ಸ.ಎಲ್. ಮೋ/ಸೈಕಲ್ ನಂ: ಕೆಎ 32 ಕ್ಯೂ 524 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಿಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಸವಾರ ಹೊರಟು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆ ಗುನ್ನೆ ನಂ 102/12 ಕಲಂ: 279,338 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಾಂತಪ್ಪ ತಂದೆ ಸಿದ್ದಪ್ಪಾ ನೀಲಿ, ವಯ; 62 ವರ್ಷ, ಉ: ಒಕ್ಕಲುತನ , ಸಾ: ತಾಜಸುಲ್ತಾನಪೂರ ರವರ ಸೇವಕರಾದ ಪೂಜಾರಿ ಬಸಣ್ಣ ಮತ್ತು ಅಮೃತ, ನಾಗಣ್ಣ ಇವರು ತಮ್ಮ ಹೋರಿಯನ್ನು ದಿನಾಂಕ 27-09-2012 ರಂದು ಕೊಟ್ಟಿಗೆಯಲ್ಲಿ ಕಟ್ಟಿ ಊಟಕ್ಕೆ ಹೋಗಿದ್ದು ಅಂದು ಊರಲ್ಲಿ ಗಣೇಶ ಉತ್ಸವವಿದ್ದ ಪ್ರಯುಕ್ತ ಮರುದಿವಸ ಬೆಳಗ್ಗೆ ಬಂದು ನೋಡಲು ಹೋರಿ ಇರಲಿಲ್ಲ ನನಗೆ ಪೋನ ಮುಖಾಂತರ ತಿಳಿಸಿದ್ದು ನಾನು ಹೋಗಿ ನೋಡಲಾಗಿ ಕಪ್ಪು ಬಿಳಿ ಚುಕ್ಕಿಯ ಬಣ್ಣದ ಹೊರಿ ಸುಮಾರು 3 ವರ್ಷದ ಹೋರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದರ ಅಂದಾಜು ಕಿಮ್ಮತ್ತು 45,000/- ರೂ ಗಳಿದ್ದು ನನ್ನ ಹೋರಿಯನ್ನು ಹುಡುಕಿಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 316/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment