ಅಪಘಾತ
ಪ್ರಕರಣ:
ಶಹಾಬಾದ
ನಗರ ಪೊಲೀಸ ಠಾಣೆ: ಶ್ರೀ ಹರೀಶಕುಮಾರ ತಂದೆ ರಾಮು ಸಾ:ಹೆಚ್‌ಎಮ್‌ಪಿ ಕಾಲೋನಿ
ಶಹಾಬಾದ ರವರು ನಾನು ದಿನಾಂಕ:28/10/2012 ರಂದು
6.00 ಪಿಎಂ ಸುಮಾರಿಗೆ ನಮ್ಮ ಕಾಲೋನಿಯ ಟೇನಿಸನ್
ರವರ ಸಿಟಿ-100 ಮೋಟಾರ ಸೈ ನಂ.ಕೆಎ-32 ಆರ್-1540 ನೇದ್ದನ್ನು ತೆಗೆದುಕೊಂಡು ನನ್ನ ಗೆಳೆಯ
ರಮೇಶನೊಂದಿಗೆ, ರಮೇಶನ ಹೊಲಕ್ಕೆ ಹೋಗಿ ಮರಳಿ ಶಹಾಬಾಕ್ಕೆ ಬರುವಾಗ ಮೊಟಾರ ಸೈಕಲ ರಮೇಶ ಇತನು
ಚಲಾಯಿಸುತ್ತಿದ್ದನು. ನಾನು ಹಿಂದುಗಡೆ ಕುಳಿತಿದ್ದೆ. ಅಂದಾಜು 7.30 ಪಿಎಂ ಸುಮಾರಿಗೆ ನಾವು ಕಾಗಿಣಾ ಬ್ರೀಜ
ದಾಟಿ ವೇಟ ಬ್ರೀಜ ಹತ್ತಿರ ಮೋಟಾರ ಸಿಲ್ಲಿಸಿ ಮೋಟಾರ ಸೈಕಲದಿಂದ ಇಳಿಯುತ್ತಿರುವಾಗ ಹಿಂದುಗಡೆಯಿಂದ
ಒಬ್ಬ ಟಂಟಂ ಚಾಲಕನು ತನ್ನ ಟಂಟಂ ಅನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು
ಬಲಗಾಲಿಗೆ ಡಿಕ್ಕಿ ಪಡಿಸಿ ಭಾರಿ ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ:136/2012 ಕಲಂ:279,337,338 ಐಪಿಸಿ ಸಂ:187 ಐಎಮ್‌ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ: ಶ್ರೀ ಮಾರುತಿ ತಂದೆ ಮಾಣಿಕರಾವ ಪಿಂಪಲೆ ಸಾಃ ಎಂ.ಬಿ ನಗರ ಹೊಸ ಬಡಾವಣೆ ಗುಲಬರ್ಗಾ ರವರು ದಿನಾಂಕ:28/10/2012
ರಂದು ರಾತ್ರಿ 11:00 ಪಿ.ಎಮ. ಕ್ಕೆ ಎಂ.ಬಿ ನಗರ ಹೊಸ ಬಡಾವಣೆಯಲ್ಲಿರುವ ಖಾನ್ ಕಾಂಪ್ಲೆಕ್ಸ
ನಲ್ಲಿರುವ ಅಲ್ಟ್ರಾಟೆಕ್ ಸಿಸ್ಟಮ್ ಗೋದಾಮಿನ ಬೀಗವನ್ನು ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕಃ29/10/2012
ರಂದು 10:00 ಎ.ಎಂ ಕ್ಕೆ ಗೋದಾಮಿಗೆ ಬಂದು ನೋಡಲು ಗೋದಾಮ ಬಾಗಿಲಿನ ಕೀಲಿ ಮುರಿದು ಯಾರೋ ಕಳ್ಳರು ಗೋದಾಮಿನಲ್ಲಿರುವ ಹಾವೆಲ್ಸ್
ಕಂಪನೀಯ
ಕಾಪರ್ ವೈರ್ ಗಳು ಅ||ಕಿ|| 2,95,060/- ನೇದ್ದವುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು
ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:114/2012 ಕಲಂ 457,
454, 380 ಐಪಿಸಿ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಧರ್ಮಿಂದ್ರಕುಮಾರ ತಂದೆ ರಾಮಲಾಲ ಠಾಕೂರ ಸಾ|| ಠಾಕೂರ ಗೌರಿ (ಯುಪಿ)
ಹಾ.ವ||
ಕೋಡ್ಲಾ
ಕ್ರಾಸ ವಿ.ಎಸ್.ಎಫ್. ಸೇಡಂ ರವರು ನಾನು ದಿನಾಂಕ:29-10-2012 ರಂದು ಮುಂಜಾನೆ 8-00 ಗಂಟೆಯ
ಸುಮಾರಿಗೆ ಪ್ರತಿ ದಿವಸದಂತೆ ಲೈನ್ ಒನ್ನ ಇ,ಎಸ್,ಪಿ ವಿ,ಸಿ ಎಫ್, ಸೇಡಂದಲ್ಲಿ ಕೆಲಸ ಮಾಡಲು
ಹೋದೆನು ನನ್ನ ಹಾಗೆಯ ನಬಬುಲ್ ತಂದೆ ಶೀರಾಜೊದ್ದಿನ್, ಬಿಂದ ಯಾದವ್, ಫತ್ರು ಚವ್ಹಾಣ
ಕೂಡಿಕೊಂಡು ಪ್ಯಾನೇಲ್ ಡಿಸ ಮೇಂಟಲಿಂಗ ಕಟಿಂಗ ಕೆಲಸ ಮಾಡುತ್ತಿದ್ದೆವು, ಮದ್ಯಾಹ್ನ 14-10 ಗಂಟೆ
ಸುಮಾರಿಗೆ ನಾನು ಕೆಲಸ ಮಾಡುವಾಗ ನಬಬುಲ್ ಇತನು ಸೇಪಟಿ ವಸ್ತುಗಳನ್ನು ಹಾಕಿಕೊಳ್ಳದೆ
ಇದ್ದುದ್ದರಿಂದ ಕೆಲಸ ಮಾಡುವಾಗ ಆತನ ಕಾಲು ಜಾರಿ ಮೇಲಿಂದ ಕೆಳಗೆ ಮುಖಮಾಡಿ ಬಿದ್ದನು ಆಗಾ
ಆತನೊಂದಿಗೆ ಕೆಸಲ ಮಾಡುತ್ತಿರುವ ನಾವೆಲ್ಲರು ಕೆಳಗೆ ಬಂದು ನೋಡಲು ಆತನ ಹಾಣೆಯ ಬಲಬಾಗಕ್ಕೆ ಹಾಗೂ
ಬಲಗೈ ಮಣ ಕೈಕೆಳಗೆ ಭಾರಿ ರಕ್ತಗಾಯಾಗಳಾಗಿದ್ದವು. ಉಪಚಾರ ಕುರಿತು ಹೈದ್ರಾಬಾದ ಗ್ಲೋಬಲ್ ಆಸ್ಪತ್ರೆಗೆ ಸೇರಿಕೆ
ಮಾಡಿದ್ದು, ಉಪಚಾರ ಫಲಕಾರಿಯಾಗದೆ ಸಾಯಂಕಾಲ ಮೃತ್ತ
ಪಟ್ಟಿರುತ್ತಾನೆ, ನಬಬುಲ್ ಇತನು ಕೆಲಸ ಮಾಡುವಾಗ ಆತನಿಗೆ ಸೇಫ್ಟಿ ಸಲುವಾಗಿ ಗುತ್ತೇದಾರನಾದ
ಸಂದೀಪ ನಾಯರ ಎಂ.ಡಿ ಹಾಗೂ ಸೈಟ್ ಇಂಜನೀಯರ ಖತೀರ ವೇಲ್ ತಂದೆ ಶೇಲ್ವಂ ಹಾಗೂ ಪ್ಯಾಕ್ಟರಿಯ ಜನರಲ್
ಮ್ಯಾನೇಜರ ಆರ್,ಎಸ್,ಪಾಟೀಲ ರವರ ಅತೀವ ನೀಷ್ಕಾಳಜಿತದಿಂದ ಈ ಘಟನೆ ಜರಗಿರುತ್ತದೆ, ಸದರಿಯವರ ಮೇಲೆ
ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:222/2012
ಕಲಂ 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment