Police Bhavan Kalaburagi

Police Bhavan Kalaburagi

Wednesday, October 31, 2012

GULBARGA DISTRICT REPORTED CRIMES


ಪತ್ರಿಕಾ ಪ್ರಕಟಣೆ:
ಗುಲಬರ್ಗಾ ನಗರದ ರೋಜಾ ಪೊಲೀಸ ಠಾಣೆ ಗುನ್ನೆ ನಂ:77/2012 ಕಲಂ,406,419,420 ಸಂ. 149 ಐಪಿಸಿ ನೇದ್ದರಲ್ಲಿ 395 ಜನರ ಪಾಸ್ ಪೋರ್ಟಗಳನ್ನು ತೆಗೆದು ಕೊಂಡು ಹೊರದೇಶಕ್ಕೆ (ಹಜ್ ಯಾತ್ರೆಗೆ) ಹೋಗಲು ಪರವಾನಿಗೆ ಕೊಡಿಸುತ್ತೇವೆಂದು ಐದು ಜನರಾದ  ಮಹ್ಮದ ಜಾಫರ ತಂದೆ ಮಹ್ಮದ ಶಲಾರೋದ್ದೀನ್, ಮಹ್ಮದ ರಹೀಮತುಲ್ಲಾ ತಂದೆ ಮಹ್ಮದ ಅಸಾದುಲ್ಲಾ, ಶೇಖ ಅಕ್ತರ ಫಾತೀಮಾ ಗಂಡ ಶೇಖ ಮಹ್ಮದ ಸಲೀಂ ಇವರುಗಳನ್ನು ದಿನಾಂಕ:21.09.2012 ರಂದು ದಸ್ತಗಿರ ಮಾಡಿ ಅವರಿಂದ 19 ಮೂಲ ಪಾಸಪೋರ್ಟಗಳು ಹಾಗೂ ಅವರಿಂದ 6,69,500/- ರೂಪಾಯಿಗಳ ನಗದು ಹಣ ವಶಪಡಿಸಿಕೊಳ್ಳಲಾಗಿತ್ತು. ದಿನಾಂಕ:08.10.2012 ರಂದು ಶೇಖ ಮಹ್ಮದ ಸಲೀಮ ಇತನಿಗೆ  ದಸ್ತಗಿರ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಕೊಡಲಾಗಿರುತ್ತದೆ. ಸದರಿ ಪ್ರಕರಣದಲ್ಲಿ  ಗುಲಬರ್ಗಾ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ಅಪರ ಪೊಲೀಸ್ ಅಧೀಕ್ಷಕರು, ಶ್ರೀ ಕಾಶಿನಾಥ ತಳಕೇರಿಗುಲಬರ್ಗಾ (ಬಿ) ಉಪ-ವಿಭಾಗದ ಡಿ.ಎಸ್.ಪಿ.ರವರಾದ ಶ್ರೀ, ಎ.ಡಿ.ಬಸಣ್ಣವರ ರವರ ಮಾರ್ಗದರ್ಶನದಲ್ಲಿ  ತನಿಖಾಧಿಕಾರಿ ಶ್ರೀ ಎಂ.ನಾರಾಯಣಪ್ಪ ಪಿ.ಐ. ರೋಜಾ ಪೊಲೀಸ ಠಾಣೆ ಹಾಗೂ ತನಿಖಾ ತಂಡದಲ್ಲಿರುವ ಡಾ:ಸುಧಾಕರ್ ಪಿ.ಎಸ್.ಐ. ಡಿ.ಸಿ.ಆರ್.ಬಿ. ರವರು ಮತ್ತು  ಅವರ ಸಿಬ್ಬಂದಿಯವರು ಸದರಿ ಪ್ರಕರಣದಲ್ಲಿಯ 336 ಮೂಲ ಪಾಸಪೋರ್ಟಗಳನ್ನು ಮುಂಬೈ ನಗರದ ಶಿವಾಜಿ ನಗರ ಪೊಲೀಸ ಠಾಣೆ ರವರು ತಮ್ಮ ಪ್ರಕರಣದಲ್ಲಿ ಜಪ್ತ  ಮಾಡಿ ತಾಬಾಕ್ಕೆ ತೆಗೆದು ಕೊಂಡು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಅವುಗಳನ್ನು ನ್ಯಾಯಾಲಯದಿಂದ ಮುಂದಿನ ತನಿಖೆಗಾಗಿ ತಂದು ಹಾಜರ ಪಡಿಸಿದ್ದು ಈಗಾಗಲೆ ತನಿಖೆಯಲ್ಲಿ 355 ಪಾಸಪೋರ್ಟ ಹಾಗೂ 6,69,500/- ರೂಪಾಯಿಗಳನ್ನು ವಶಪಡಿಸಿಕೊಂಡಿದ್ದು ಇವುಗಳನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗುವುದು ಸಂಬಂಧ ಪಟ್ಟವರು ತಮ್ಮ ಮೂಲ ದಾಖಲಾತಿಗಳನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯಾಲಯದಿಂದ ಪಡೆದು ಕೊಳ್ಳಬಹುದು. 
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:30-10-2012 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ನನ್ನ ಖಾಸಗಿ ಕೆಲಸದ ನಿಮಿತ್ಯ ನಮ್ಮೂರಿನಿಂದ ಕಮಲಾಪೂರಕ್ಕೆ ಬಂದಿದ್ದುಗುಲಬರ್ಗಾದಲ್ಲಿರುವ ಮ್ಮ ಸಂಭಂದಿಕರನ್ನು ಮಾತನಾಡಿಸಿಕೊಂಡು ಕ್ರೂಜರ್ ಜೀಪ್ ನಂ: ಎಪಿ-11ಡಬ್ಲೂ-8061 ನೇದ್ದರಲ್ಲಿ ಕುಳಿತುಕೊಂಡಿದ್ದು ತನ್ನಂತೆ ಈ ಮೊದಲು ಕ್ರೂಜರ್ ಜೀಪಿನಲ್ಲಿ ಕೆಲವು ಪ್ರಯಾಣಿಕರು ಕುಳಿತಿದ್ದರು. ರಾತ್ರಿ 7-45 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 218 ಸಾನದಗಿ ಸೇತುವೆ ಸಮೀಪ ಹೋಗುತ್ತಿರುವಾಗ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಎದುರುಗಡೆಯಿಂದ ಟಿಪ್ಪರ್ ವಾಹನ ನಂ:ಕೆಎ-56-0133 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತ ಕ್ರೂಜರ್ ಜೀಪ್ ಮತ್ತು ಟಿಪ್ಪರ್ ವಾಹನ ಒಂದಕ್ಕೊಂದು ಡಿಕ್ಕಿ ಹೊಡೆದು ಜೀಪಿನಲ್ಲಿ ಕುಳಿತ ನನಗೆ ಮತ್ತು ಕಲ್ಯಾಣಿ ತಂದೆ ಸಂಭಣ್ಣ ಮಾಂಗ ಸಾ||ತಡಕಲ್ ಮತ್ತು ಶ್ರೀಮಂತರಾವ ತಂದೆ ಯಶ್ವಂತರಾವ ಪಟ್ಟಣಕರ ಕಮಲಾಪೂರ ಎ.ಎಸ್.ಐ ಎಲ್ಲರಿಗೂ  ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಅಲ್ಲದೇ ಕ್ರೂಜರ್ ಜೀಪಿನಲ್ಲಿ ಕುಳಿತ ಇತರ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ. ಕಾರಣ ವಾಹನಗಳ ಚಾಲಕರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದಶರಥ ತಂದೆ ದೇವಪ್ಪ ಜಾನ್ ಸಾ:ಜೀವಣಗಿ ಗ್ರಾಮ ತಾ:ಜಿ: ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:113/2012 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: