ಬುದ್ದಿ ಮಾಂದ್ಯ ಬಾಲಕಿಯರ ಬಾಲ ಮಂದಿರದಿಂದ ಹುಡಗಿ ಕಾಣೆಯಾದ ಬಗ್ಗೆ:
ಮಹಿಳಾ ಪೋಲಿಸ ಠಾಣೆ: ಕು: ಸುವರ್ಣಲತಾ ತಂದೆ ಯಲ್ಲಪ್ಪಾ ಚಂದ್ರಗೀರಿ ವ:56 ವರ್ಷ ಉ: ಅದೀಕ್ಷಕರು ಸಾ:ಬುದ್ದಿಮಾಂದ್ಯ ಬಾಲಕಿಯರ ಬಾಲ ಮಂದಿರ ಆಳಂದ ರಸ್ತೆ ಗುಲಬರ್ಗಾ ರವರು ನಮ್ಮ ನಿಲಯದಲ್ಲಿ ವಾಸವಾಗಿದ್ದ ದುರ್ಗಾವ್ವಾ ಅನ್ನುವ 15 ವರ್ಷದ ಹುಡಗಿ ದಿನಾಂಕ:29.09.2012 ರಂದು ಮದ್ಯಾಹ್ನ 4.00 ಗಂಟೆಯಿಂದ ಓಡಿ ಹೋಗಿರುತ್ತಾಳೆ. ಸಂಸ್ಥೆಯ ಆವರಣದ ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 73/12 ಕಲಂ 363 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾಡಬೂಳ ಪೊಲೀಸ್ ಠಾಣೆ:ದಿನಾಂಕ:16/10/2012 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಟೆಂಗಳಿ ಕ್ರಾಸ ಹತ್ತಿರ ಅಪಘಾತವಾಗಿ ಒಬ್ಬ ವ್ಯಕ್ತಿ ಮೃತ ಪಟ್ಟಿರುತ್ತಾನೆ ಅಂತ ತಿಳಿದು ಬಂದ ಮೇರೆಗೆ ನಾನು ನೋಡಲಾಗಿ ಸುಮಾರು 2-3 ತಿಂಗಳ ಹಿಂದೆ ಒಬ್ಬ ಅರೆ ಹುಚ್ಚ ಮನುಷ್ಯ ಬಸ್ ನಿಲ್ದಾಣದ ಹತ್ತಿರ ಇರುತ್ತಿದ್ದು. ತನ್ನಲ್ಲಿಯೇ ಮಾತನಾಡುತ್ತಾ, ವಿಚಿತ್ರವಾಗಿ ವರ್ತಿಸುತ್ತಿದ್ದ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಸದರಿಯವನಿಗೆ ದಿನಾಂಕ: 15-16/10/2012 ರ ರಾತ್ರಿ ವೇಳೆಯಲ್ಲಿ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತ ಶ್ರೀ ಮಹ್ಮದ ಸಾಬ ತಂದೆ ಅಜೀಜಮೀಯಾ ಮಾಸುಲ್ದಾರ ಸಾ|| ದಂಡೋತಿ ತಾ|| ಚಿತ್ತಾಪೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 90/2012 ಕಲಂ: 279,304(ಎ) ಐ.ಪಿ.ಸಿ. ಸಂ.187 ಐ.ಎಮ್.ವಿ.ಅಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ
No comments:
Post a Comment