Police Bhavan Kalaburagi

Police Bhavan Kalaburagi

Wednesday, October 17, 2012

GULBARGA DISTRICT


ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ದಂಡಾಧಿಕಾರಿಗಳು ಗುಲಬರ್ಗಾ ಇವರ ನಡುವಳಿಕೆಗಳು
ವಿಷಯ:- ದಿನಾಂಕ: 18-10-2012 ರಂದು ಗುಲಬರ್ಗಾ ಜಿಲ್ಲೆಯಲ್ಲಿ ನಡೆಯುವ ಸಚಿವ ಸಂಪುಟ ನಿಮಿತ್ಯ ಮುಂಜಾಗ್ರತಾ ಕ್ರಮವಾಗಿ ಗುಲಬರ್ಗಾ ನಗರಾದ್ಯಂತ ಪ್ರತಿಭಟನೆ, ಮೇರವಣಿಗೆ, ರಸ್ತೆ ತಡೆ ಇತ್ಯಾದಿ ಚಳುವಳಿಗಳು ನಡೆಸದಂತೆ ನಿಷೇದಿಸುವ ಬಗ್ಗೆ.
ಉಲ್ಲೇಖಿತ ಪತ್ರದನ್ವಯ ಪೊಲಿಸ್ ಅಧೀಕ್ಷಕರು ಗುಲಬರ್ಗಾರವರು ದಿನಾಂಕ:18-10-2012 ರಂದು ಗುಲಬರ್ಗಾ ನಗರದ ಮಾನ್ಯ ಪ್ರಾದೇಶಿಕ ಆಯುಕ್ತರು ಗುಲಬರ್ಗಾ ಅವರ ಕಾರ್ಯಲಯದ ಸಭಾಂಗಣದಲ್ಲಿ ಸಚಿವ ಸಂಪುಟ ನಿಗಧಿಯಾಗಿರುತ್ತದೆ. ಈ ಸಚಿವ ಸಂಪುಟ್ ಸಭೆಯಲ್ಲಿ  ಭಾಗವಹಿಸಲು ಮಾನ್ಯ ಮುಖ್ಯ ಮಂತ್ರಿಗಳು, ಉಪ-ಮುಖ್ಯಮಂತ್ರಿಗಳು ಹಾಗು ಇತರೆ ಸಚಿವರು ಗುಲಬರ್ಗಾಕ್ಕೆ ಆಗಮಿಸಲಿರುವದ ರಿಂದ ದಿನಾಂಕ:17-10-2012 ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ:18-10-2012 ರ ರಾತ್ರಿ 8-000 ಗಂಟೆಯವರಗೆ ಗುಲಬರ್ಗಾ ತಾಲೂಕಿನಾದ್ಯಂತ ಯಾವದೇ ತರಹದ ಪ್ರತಿಭಟನೆಳು, ಮೆರವಣಿಗೆಗಳು, ರಸ್ತೆ ತಡೆ ಇತ್ಯಾದಿ ಚಳುವಳಿಗಳು ನಡೆಯದಂತೆ ಕರ್ನಾಟಕ ಪೊಲೀಸ್ ಕಾಯಿದೆ 1963 ಕಲಂ 35 ರ ಅಡಿ ಆದೇಶ ಜಾರಿಗೊಳಿಸಲು ಕೋರಿರುತ್ತಾರೆ. ಪೊಲೀಸ್ ಅಧೀಕ್ಷಕರು ಗುಲಬರ್ಗಾ ಅವರ ಉಲ್ಲೇಖಿತ ಪತ್ರವನ್ನು ಪರಿಶೀಲಿಸಲಾಗಿ ಉಲ್ಲೇಖಿತ ಸಚಿವ ಸಂಪುಟವನ್ನು ವ್ಯವಸ್ಥಿತವಾಗಿ ನಡೆಯಲು ಹಾಗು ಗಣ್ಯರಿಗೆ ಭದ್ರತೆ ಒದಗಿಸುವದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವದು ಅವಶ್ಯಕವಾಗಿರುತ್ತದೆ. ಅದರನ್ವಯ ದಿನಾಂಕ:18-10-2012 ರಂದು ಸಚಿವ ಸಂಪುಟ ಸಭೆಯನ್ನು ವ್ಯವಸ್ಥಿತವಾಗಿ ನಡೆಸುವ ದೃಷ್ಟಿಯಿಂದ ಮತ್ತು ಗುಲಬರ್ಗಾ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಉದ್ದೇಶದಿಂದ ಹಾಗು ಯಾವದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ದೃಷ್ಟಿಯಿಂದ  ಕರ್ನಾಟಕ ಪೊಲೀಸ್ ಕಾಯಿದೆ 1963 ಕಲಂ 35 ರ ಅಡಿ ದಿನಾಂಕ:17-10-2012 ರಂದು ಸಾಯಂಕಾಲ 6-00 ಗಂಟೆಯಿಂದ ದಿನಾಂಕ: 18-10-2012 ರಂದು ರಾತ್ರಿ 8-00 ಗಂಟೆಯವರೆಗೆ ಗುಲಬರ್ಗಾ ನಗರದಲ್ಲಿ ಯಾವದೇ ತರಹದ ಪ್ರತಿಭಟನೆಗಳು, ಮೆರವಣಿಗೆಗೆಗಳು, ರಸ್ತೆ ತಡೆ ಇತ್ಯಾದಿ ಚಳುವಳಿಗಳು ನಡೆಸದಂತೆ ನಿಷೇದಿಸಿ ಆದೇಶ ಹೋರಡಿಸುವದು ಅವಶ್ಯಕವೆಂದು ಮನಗಂಡು, ಆದೇಶ.ಸಂಖ್ಯೆ:ಡಿಸಿಜಿ/ದಂಡ/509/2012-12 ದಿನಾಂಕ:16/17-10-2012 ರಂತೆ ಪೀಠಿಕೆಯಲ್ಲಿ ವಿವರಿಸಿದ ಕಾರಣಗಳಿಂದಾಗಿ ಎನ್.ಎಸ್. ಪ್ರಸನ್ನಕುಮಾರ, ಭಾ.ಆ.ಸೇ. ಗುಲಬರ್ಗಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗು ದಂಡಾಧಿಕಾರಿಯಾದ ನಾನು ಕರ್ನಾಟಕ ಪೊಲೀಸ ಕಾಯಿದೆ 1963 ಕಲಂ 35 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ: 17-10-2012 ರಂದು ಸಾಯಂಕಾಲ 6-00 ಗಂಟೆಯಿಂದ ದಿನಾಂಕ:18-10-2012 ರಂದು ರಾತ್ರಿ 8-00 ಗಂಟೆಯವರೆಗೆ ಗುಲಬರ್ಗಾ  ನಗರಾದ್ಯಂತ ಯಾವದೇ ತರಹದ ಪ್ರತಿಭಟನೆಗಳು, ಮೆರವಣಿಗೆಗೆಗಳು, ರಸ್ತೆ ತಡೆ ಇತ್ಯಾದಿ ಚಳುವಳಿಗಳು ನಡೆಸದಂತೆ ನಿಷೇದಿಸಿ ಆದೇಶಿಸಲಾಗಿದೆ. 

No comments: