Police Bhavan Kalaburagi

Police Bhavan Kalaburagi

Monday, October 22, 2012

GULBARGA DISTRICT


ಅರವಿಂದ ನರೋಣಿ ಕೊಲೆ ಮಾಡಿದ ಮೂರು ಜನ ಆರೋಪಿಗಳ ಬಂಧನ.
     ದಿನಾಂಕ:25-09-2012 ರಂದು ಸಾಯಂಕಾಲ ಗುಲಬರ್ಗಾ ನಗರದ ಆಳಂದ ರೋಡಿಗೆ ಇರುವ ಕಡಗಂಚಿ ಕಾಂಪ್ಲೇಕ್ಸ ಹತ್ತಿರ ಕಾಂಪ್ಲೇಕ್ಸ ಮಾಲಿಕರಾದ ಶ್ರೀ ಅರವಿಂದ ನರೋಣಿ, ನಿರ್ದೇಶಕರು, ಕರ್ನಾಟಕ ಹಾಲು ಒಕ್ಕೂಟ ಗುಲಬರ್ಗಾ ಸಾ|| ಕಡಗಂಚಿ ಇವರಿಗೆ, ಕಡಗಂಚಿ ಗ್ರಾಮದ ಯೋಗೇಶ ಹೊಸಕುರಬರ, ಬೀರಣ್ಣ ವಗ್ಗಿ, ಭೀಮರಾಯ ಹೊಸಕುರಬರ, ಮಲ್ಲಪ್ಪ ವಗ್ಗಿ, ಸೋಮಯ್ಯ ಸ್ವಾಮಿ, ಶ್ರೀಶೈಲ ಅಲ್ದಿ, ಜಗಪ್ಪ ಹೊಸಕುರಬರ, ವಿಠಲ ಹೊಸಕುರಬರ ಹಾಗು ಇತರರು ಕೂಡಿಕೊಂಡು ಬಂದು, ಪಿಸ್ತೂಲ್ ಹಾಗು ತಲವಾರದಿಂದ ಹೊಡೆದು ಕೊಲೆ ಮಾಡಿದ್ದಲದೇ,  ಶರಣು ನರೋಣಿ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿರುತ್ತಾರೆ ಅಂತಾ ಶಿವಪತ್ರ ತಂದೆ ಚಂದ್ರಶಾ ಕ್ಯಾರ ಇವರು ಕೊಟ್ಟ ದೂರಿನ ಮೇರೆಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
      ಸದರಿ ಪ್ರಕರಣದ ತನಿಖೆ ಮತ್ತು ಆರೋಪಿತರ ಪತ್ತೆಗಾಗಿ ಗುಲಬರ್ಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪವಾರ ಪ್ರವೀಣ ಮಧುಕರ ಐ.ಪಿ.ಎಸ್,  ಎಸ.ಪಿ ಗುಲಬರ್ಗಾ ಇವರು ಕೊಲೆ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿದ್ದು, ಸದರಿ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿತರ ಪತ್ತೆ ಮಾಡಿ ಆರೋಪಿತರಾದ       1.ಯೋಗೇಶ ತಂದೆ ಮಾಳಪ್ಪಾ ಹೊಸಕುರಬರ ಸಾ|| ಕಡಗಂಚಿ, 2.ಸೈಪನಸಾಬ ತಂದೆ ಹುಸೇನಸಾಬ ಶೇಖ ಸಾ|| ಝಳಕಿ ತಾ|| ಆಳಂದ, 3.ಮಲ್ಲಪ್ಪ ತಂದೆ ಶಾಂತಪ್ಪಾ ವಗ್ಗೆ ಸಾ|| ಕಡಗಂಚಿ ಇವರನ್ನು ರಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಮಚ್ಚು, ಎರಡು ಮೊಬೈಲಗಳು, ವಿವಿಧ ಕಂಪನಿಯ ಸಿಮ್ ಗಳು ಜಪ್ತಿ ಪಡಿಸಿಕೊಂಡಿರುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರೋಪಿತರ ಪತ್ತೆ ಕಾರ್ಯ ಹಾಗು ತನಿಖೆ ಜಾರಿಯಲ್ಲಿರುತ್ತದೆ. 

No comments: