Police Bhavan Kalaburagi

Police Bhavan Kalaburagi

Thursday, November 8, 2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 08-11-2012.

 
ಸಂತಪೂರ ಪೊಲೀಸ್ ಠಾಣೆ ಗುನ್ನೆ ನಂ. 84/12 ಕಲಂ 279, 337 ಐಪಿಸಿ :-


ದಿನಾಂಕ 07-11-2012 ರಂದು ಫಿರ್ಯಾಧಿ ಶ್ರೀಮತಿ ಕಮಳಮ್ಮಾ ಗಂಡ ಶರಣಪ್ಪಾ ಬಿರಾದಾರ ಸಾ: ಶಹಾಪೂರ ತಾ// ಜಿ// ಬೀದರ ºÁUÀÆ ಶಿಲ್ಪಾ ತಂದೆ ದೇವಿದಾಸ, ದೇವಿದಾಸ ತಂದೆ ಬಸಪ್ಪಾ, ಗುಂಡಮ್ಮಾ ಗಂಡ ಚಂದ್ರಪ್ಪಾ, ಇಂದುಮತಿ ಗಂಡ ರಾಜಪ್ಪಾ, ನರಸಪ್ಪಾ ತಂದೆ ಮಾದಗೊಂಡ, ಸಲಾಂಬೀ ಗಂಡ ಜಬ್ಬಾರ ಹಾಗೂ ಗನಿಮಿಯ್ಯಾ ತಂದೆ ಜಬ್ಬಾರ ಸಾ: ಎಲ್ಲರೂ ಗಡಿಕುಶನೂರ ಎಲ್ಲರೂ ಗಡಿಕುಶನೂರದಿಂದ ಬೀದರಕ್ಕೆ ಬರಲು 1100 ಗಂಟೆ ಸುಮಾರಿಗೆ ಟಾಟಾ ಮ್ಯಾಜೀಕ ನಂ, ಕೆಎ-56/0335 ನೇದರಲ್ಲಿ ಕುಳಿತು  ಸದರಿ ವಾಹನದಲ್ಲಿ ಕುಳಿತು ಬರುತ್ತಿದ್ದಾಗ  ವಡಗಾಂವ ಕೌಠಾ ರೋಡಿನ ಮೇಲೆ ಪಾಶಾಪೂರ ಕ್ರಾಸ ದಾಟಿ ನಾಗಶೆಟ್ಟಿ ಪಾಶಾಪೂರ ರವರ ಹೋಲದ ಹತ್ತಿರ ಬಂದಾಗ ಸದರಿ ಟಾಟಾ ಮ್ಯಾಜೀಕ ಚಾಲಕ ರವಿ ತಂದೆ ಕಾಮಶೆಟ್ಟಿ ಬಿರಾದಾರ ಸಾ: ಪಾಶಾಪೂರ ಇತನ್ನು ತನ್ನ ವಾಹನ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಟಾಟಾ ಮ್ಯಾಜೀಕ ಪಲ್ಟಿ ಮಾಡಿರುತ್ತಾನೆ. ಇದರಿಂದ   ಫಿರ್ಯಾದಿ ಹಣೆಗೆ, ಎಡಗಣ್ಣಿನ ಹತ್ತಿರ ಮತ್ತು ವಾಹನದಲ್ಲಿ ಕೂಳಿತಿರುವ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಖಟಕಚಿಂಚೋಳ್ಳಿ ಪೊಲೀಸ್ ಠಾಣೆ ಗುನ್ನೆ ನಂ.  97/2012 PÀ®A-304[J] L¦¹ :-

ದಿನಾಂಕ : 8/11/12 ರಂದು 0600 ಗಂಟೆಗೆ ಫಿರ್ಯಾದಿ ಶ್ರೀಮತಿ ಪದ್ಮಾವತಿ ಗಂಡ ದಿವಗಂತ ಹುಲೆಪ್ಪಾ ನಿರ್ಗುಣೆ ಸಾ-ಕುಂಟೆ ಸಿರ್ಸಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ-7/11/12 ರಂದು ಮುಂಜಾನೆ 0800 ಗಂಟೆಗೆ ದಾಡಗಿ ಗ್ರಾಂ. ಪಂಚಾಯತ ವತಿಯಿಂದ ವಿದ್ಯೂತ್ ಕಂಬಗಳಿಗೆ ಬಲ್ಬಗಳು ಹಾಕುವ ಕೆಲಸ ಇದೆ ಅಂತ ನನ್ನ ಗಂಡನಿಗೆ ಮತ್ತು ನಮ್ಮೂರ ಮಲ್ಲಿಕಾರ್ಜುನ ತಂದೆ ಭೀಮಣ್ಣಾ ಮಚಕೂರಿ ಇವರಿಬ್ಬರಿಗೂ ಪಂಚಾಯತ ಅಭಿವ್ರಧ್ದಿ ಅಧಿಕಾರಿಯವರು 1500/- ರೂಪಾಯಿ ಕೂಡುತ್ತೇನೆಂದು ಕರೆದುಕೊಂಡು ಹೋಗಿರುತ್ತಾರೆ. ಅವರ ಹೇಳೀಕೆಯ ಮೇರೆಗೆ ಫಿರ್ಯಾದಿಗಂಡ ಮತ್ತು ಮಲ್ಲಿಕಾರ್ಜುನ ಸಾ-ಕುಂಟೆ ಸಿರ್ಸಿ ಇವರಿಬ್ಬರು ದಾಡಗಿ ಗ್ರಾಮಕ್ಕೆ ಹೋಗಿ 70 ಕಂಬಗಳಿಗೆ ಬಲ್ಬ ಹಾಕುವ ವೇಳೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಫಿರ್ಯಾದಿ ಗಂಡ  ಕಂಬದ ಮೇಲಿಂದ  ಮರಣ ಹೊಂದಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

ಹುಮನಾಬಾದ ಠಾಣೆ ಗುನ್ನೆ ನಂ. 138/12 ಕಲಂ 341, 504, 302 ಜೊತೆ 34 ಐಪಿಸಿ :-

ದಿನಾಂಕ: 08-11-12 ರಂದು 07-30 ಗಂಟೆಗೆ ಫಿರ್ಯಾದಿ ಶ್ರೀ. ಮುಕೇಶ ತಂದೆ ಬಿಂದಾಮಜಿ ವಯ: 25ವರ್ಷ, ರವರು ನೀಡಿದ ದೂರಿನ ಸಾರಾಂಶವೆನಂದರೆ ದಿ: 07-11-2012 ರಂದು ಲಕ್ಕಿಮಾಜಿ ತಂದೆ ಹರಿಮಾಜಿ, ರಾಜು ಮಾಜಿ ತಂದೆ ರಾಮಧಾರಿ ಮಾಜಿ,  ರಾಜಕುಮಾರ ತಂದೆ ಚಂದ್ರಿಕಾಮಾಜಿ, ಟೀಮಲ್ ಮಾಜಿ ತಂದೆ ರಾಮನಾಥ ಮಾಜಿ ಸಾ: ಬವಲವಾಠರ್  ಬಿಹಾರ ಕುಪೇಂದ್ರ ಪಟೇಲ್ ತಂದೆ ದ್ರಾರಿಕಾ ಪಟೇಲ್, ಜಿತ್ತೇಂದ್ರಪಟೆಲ್, ಬಾಸದೇವ ಹೀಗೆ ಎಲ್ಲರು  ಪೌಲ್ಟ್ರಿ ಫಾರ್ಮನಲ್ಲಿ ಕೆಲಸಮಾಡಿ ಸಾಯಂಕಾಲ 6 ಗಂಟೆಗೆ  ತಮ್ಮ ರೂಮಿಗೆ ಹೋದಾಗ ಲಕ್ಕಿಮಾಜಿ ಇವರು ಮೋಟ್ಟೆ ಕುದಿಸಿ ಅನ್ನಸಾರು ಮಾಡಿದನು. ರಾತ್ರಿ ಅಂದಾಜು 8 ಗಂಟೆಗೆ ಟಿಮಲ್ ಇವರನು ಲಕ್ಕಿಮಾಜಿಗೆ  ಅವಾಚ್ಯವಾಗಿ ಬೈದು ಮುಜಕೊ ಅಂಡಾ ನಹಿ ದಿಯಾ ಅಂತಾ ಬೈದಿದ್ದಕ್ಕೆ  ಲಕ್ಕಿಮಾಜಿ ಮತ್ತು ಅವನ ನಡುವೆ ತಕರಾರಾಗಿ ರಾತ್ರಿ  ಅಂದಾಜು 9 ಗಂಟೆಗೆ ಬಾಸದೇವ ಇವರು ಕೈಯಲ್ಲಿ ತರಕಾರಿ ಕಟ್ ಮಾಡು ಒಂದು ಚಾಕುವಿನಿಂದ ಎಡಗಡೆ ಎದೆಯಲ್ಲಿ ತಿವಿದು ಭಾರಿ ರಕ್ತಗಾಯಗೋಳಿಗೆ ಕೊಲೆªÀiÁrರುತ್ತಾನೆ ಅಂತಾ ದಿ:08-11-2012 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬೀದರ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್. ನಂ. 05/2012 ಕಲಂ 174  ಸಿ.ಅರ್.ಪಿ.ಸಿ. 

ದಿನಾಂಕ: 07-11-2012 ರಂದು ಅಷ್ಟೂರ ಗ್ರಾಮದಲ್ಲಿ ಫಿರ್ಯಾದಿ ಶಶಿಕಲಾ ರವರ ಗಂಡನಾದ ಅಶೋಕ ಇತನು 4 ವರ್ಷಗಳಿಂದ ಹೊಟ್ಟೆ ಬೇನೆ ಇದ್ದು ಖಾಸಗಿ ಮತ್ತು ಸರಕಾರಿ ಇಲಾಜು ಮಾಡಿಸಿದರೂ ಕಡಿಮೆಯಾಗದ ಕಾರಣ ದಿನಾಂಕ 06/11/12 ರಂದು ಕೂಡ ಹೊಟ್ಟೆ ಬೇನೆಯಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/11/2012 ರಂದು 0030 ಗಂಟೆಯಿಂದ 0530 ಗಂಟೆಯವರೆಗಿನ ಅವಧಿಯಲ್ಲಿ. ತನ್ನ ಮನೆಯಲ್ಲಿ ದೇವರ ಕೊಣೆಯಲ್ಲಿ ತಗಡದ ದಂಟಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಫಿರ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಸಿ.ಆರ್. ನಂ. 155/2012,  ಕಲಂ 20(ಬಿ). ಎನ್.ಡಿ.ಪಿ.ಎಸ್. ಕಾಯ್ದೆ :-

ದಿನಾಂಕ 07/11/2012 ರಂದು ಯಾರೋ ಒಬ್ಬ ಮಹಿಳೆ ಎರಡು ಬ್ಯಾಗಗಳಲ್ಲಿ ಅನಧಿಕೃತವಾಗಿ ಗಾಂಜಾವನ್ನು ತುಂಬಿಕೊಂಡು ಮಾರಾಟ ಮಾಡುವ ಕುರಿತು ಮಹಾರಾಷ್ಟ್ರ ರಾಜ್ಯದ ಮುಂಬಯಿಗೆ ಹೋಗಲು ಸಸ್ತಾಪೂರ ಬಂಗ್ಲಾದ ಮೇಲೆ ನಿಂತಿರುತ್ತಾಳೆ ಎಂಬ ಖಚಿತ ಬಾತ್ಮಿ ಮೆರೆಗೆ ಶಿರೋಮಣಿ ಎ.ಎಸ್.ಐ. ಬಸವಕಲ್ಯಾಣ ನಗರ ಪೊಲೀಸ ಠಾಣೆ ರವರು   ಸಿಬ್ಬಂದಿಯವರಾದ ಸಿ.ಪಿ.ಸಿ. 917, 1389, 996,   ಸಸ್ತಾಪೂರ ಬಂಗ್ಲಾದ ಹತ್ತಿರ ಹೋಗಿ ಅವಳನ್ನು ವಿಚಾರಿಸಲಾಗಿ ಅವಳ ಹೆಸರು ಶ್ರೀಮತಿ ಕಮಳಾಬಾಯಿ ಗಂಡ ಅಜರ್ುನ ಜಾಧವ ವಯ 32 ವರ್ಷ ಜಾತಿ ಲಂಬಾಣಿ ಉ/ ಮನೆ ಕೆಲಸ ಸಾ; ಬಾವಲಗಾಂವ ತಾಂಡಾ ತಾ; ಔರಾದ ಎಂದು ತಿಳಿಸಿದಾಗ ಅವಳ ಬ್ಯಾಗಗಳನ್ನು ಪರಿಶೀಲಿಸಿದಾಗ  ಒಂದು ಬ್ಯಾಗದಲ್ಲಿ 8. ಕೆ.ಜಿ. ಮತ್ತೊಂದು ಬ್ಯಾಗದಲ್ಲಿ 3. ಕೆ.ಜಿ. ಇದ್ದುದರಿಂದ ಆರೋಪಿತಳನ್ನು ದಸ್ತಗಿರಿ ಮಾಡಿಕೊಂಡು ಮಾಲನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 251/12 ಕಲಂ 279, 337, 338 ಭಾ.ದ.ಸಂ. ಜೊತೆ185 ಮೋ.ವಾ. ಕಾಯ್ದೆ :-

ದಿನಾಂಕ 07/11/2012 ರಂದು 21:00 ಗಂಟೆಗೆ ಫಿರ್ಯಾದಿ ನರಸಿಂಹಲು ತಂದೆ ರಾಮಲು ಪಸಲಾ, ವಯ 24 ವರ್ಷ, ಎಸ್.ಸಿ(ಮಾದಿಗ), ಕೂಲಿ ಕೆಲಸ ಸಾ: ಸದಾಶಿವಪೇಟ. (ಎಪಿ) ಇತನು ಮೋಟಾರ ಸೈಕಲ ನಂ. ಕೆಎ38ಕೆ4100 ನೇದರ ಹಿಂಭಾಗ ಕುಳಿತು ಬೀದರದ ಗುಂಪಾ ಕಡೆಯಿಂದ ಗುಂಪಾ-ಶಾಹಪುರ ಗೇಟ ಬೈಪಾಸ ರಸ್ತೆ ಮುಖಾಂತರ ಬೈಪಾಸ ರಸ್ತೆಯ ಮಧ್ಯದಲ್ಲಿ ಹೊಸದಾಗಿ ಕಟ್ಟುತ್ತಿರುವ ಪೆಟ್ರೋಲ ಬಂಕಿಗೆ ಬರುತ್ತಿರುವಾಗ ಜೈ ಭವಾನಿ ಧಾಬಾ ಹತ್ತಿರ ತುಕಾರಾಮನು ಸರಾಯಿ ಕುಡಿದ ಅಮಲಿನಲ್ಲಿ ದುಡುಕಿನಿಂದ, ನಿರ್ಲಕ್ಷ್ಯದಿಂದ ನಡೆಸಿಕೊಂಡು ಬಂದು ರಸ್ತೆ ಮಧ್ಯ ಇರುವ ಡಿವೈಡರಗೆ ಡಿಕ್ಕಿಪಡಿಸಿದರಿಂದ ಫಿಯರ್ಾದಿಗೆ ಬೆನ್ನಿನಲ್ಲಿ ರಕ್ತ ಗಾಯ, ಹಾಗೂ ಇತರ ಕಡೆ ತರಚಿದ, ಗುಪ್ತ ಗಾಯಗಳಾಗಿವೆ. ತುಕಾರಾಮ ಇವನಿಗೆ ಬಲ ಮುಂಗೈಗೆ, ಗುಪ್ತ ಗಾಯವಾಗಿ ಎಲುಬು ಮುರಿದಂತಾಗಿದೆ, ಬಲ ತೊಡೆಗೆ ಗುಪ್ತ ಗಾಯ ಹಾಗೂ ಎಡಗಾಲಿನ ತೊಡೆಯ ಎಡ ಬದಿಗೆ ರಕ್ತ ಗಾಯ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರ ಠಾಣೆ ಯು.ಡಿ.ಆರ್. ನಂ. 174/12 ಕಲಂ 447, 427 ಐಪಿಸಿ :-

ದಿ:07/11/2012 ರಂದು 1900 ಗಂಟೆಗೆ ಫಿರ್ಯಾದಿ ಶ್ರೀ ಎ. ವೆಂಕಟರಾಮಣ್ಣಾ ತಂದೆ  ಇಂದ್ರಸೇನೆ ಆಗಿರ, 36 ವರ್ಷ, ಹಿಂದು ವೈಶಾ(ಕೊಂಟಿ), ಸಾ/ ಮುಸರಾಂಬಾದ ಹೈದ್ರಾಬಾದ ರವರು ಠಾಣೆಗೆ ಹಾಜರಾಗಿ ತನ್ನ ಲಿಖಿತ ಅಜರ್ಿ ಸಲ್ಲಿಸಿದರ ಸಾರಾಂಶವೆನೆಂದರೆ ದಿ:07/11/2012 ರಂದು ಫಿಯರ್ಾದಿ  ಜೊತೆ ಮನೋಹರ, ಸುಮಂತ, ಮೂವರ ಕೂಡಿ ಹೈದ್ರಾಬಾದದಿಂದ  ಫಿಯರ್ಾದಿಯ ಹೊಲ ನೋಡಲು ಬೀದರವರೆಗೆ  ಬಂದು ಫಿಯರ್ಾದಿ ಗೆಳೆಯ ವಿಜಯಕುಮಾರ ತಂದೆ ರಾಮಚಂದ್ರ ಬಚ್ಚಾ ಇವರಿಗೆ ಕರೆದುಕೊಂಡು ಮಧ್ಯಾಹ್ನ 4 ಗಂಟೆ ಸುಮಾರಿಗೆ ಫಿಯರ್ಾದಿ ಹೊಲಕ್ಕೆ ಬಂದು ನೋಡಲು ನಮ್ಮ ಹೊಲದಲ್ಲಿ ಕಲ್ಲುಗಳು ತೇಗೆಯುವ ಯಂತ್ರಗಳಿಂದ ಜನರು ಕಲ್ಲುಗಳು ತೇಗೆಯುತ್ತಿದ್ದರು ಅದನ್ನು ನೋಡಿ ಸದರಿ ಜನರಿಗೆ ವಿಚಾರಿಸಲಾಗಿ ಈ ಕಲ್ಲುಗಳು 1] ರಾಘವೆಂದ್ರ ತಂದೆ ದಾಮೋದರ ಬಚ್ಚಾ ಸಾ/ ಬೀದರ ಮತ್ತು 2] ರಮೇಶ ಪಾಟೀಲ ಸಾ/ ಮಾಳಚಾಪೂರ   ಹಾಗು ಇತರರು  ಕೂಡಿ ಕಲ್ಲುಗಳು ತೆಗೆಯಲು ನಮಗೆ ಕೂಲಿಯಿಂದ ಹಚ್ಚಿರುತ್ತಾರೆ.   ಇವರು ಈಗ ಸುಮಾರು 1 ವರ್ಷ ದಿಂದ ಈ ಭೂಮಿಯಿಂದ ಕಲ್ಲುಗಳು ತೇಗೆದುಕೊಂಡು ಮಾರಾಟ ಮಾಡುತ್ತಿದ್ದಾರೆ ಅಂತ ತಿಳಿಸಿದರು.  ಕಾರಣ ಸದರಿಯವರ ವಿರುದ್ದ ಸದರಿ ರಾಘವೇಂದ್ರ ಬಚ್ಚಾ ಮತ್ತು ರಮೇಶ ಪಾಟೀಲ ಹಾಗೂ ಇತರರು ಕೂಡಿ ನಮ್ಮ ಬಿಳುಬಿದ್ದ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಸುಮಾರು 10 ಎಕ್ಕರೆ ಭೂಮಿಯಲ್ಲಿ ನಮಗೆ ತಿಳಿಸಿದೆ ನಮ್ಮ ಹೊಲದಲ್ಲಿ ಯಂತ್ರಗಳಿಂದ ಕಲ್ಲುಗಳು ತೇಗೆದು ತಗ್ಗುಗಳು ಹಾಕಿ ಸುಮಾರು 10-15 ಲಕ್ಷ ರೂಪಾಯಿ ಲುಕ್ಷಾನ ಮಾಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: