ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-11-2012
ಧನ್ನೂರ ಠಾಣೆ ಗುನ್ನೆ ನಂ. 171/12 ಕಲಂ 279,
304 (ಎ)
ಐಪಿಸಿ :-
ದಿ:06/11/2012 ಕೋನಮೇಳಕುಂದಾ
ಅಮದಾಬಾದ ರೋಡಿನ ಮೇಲೆ ಹೊಸದಾಗಿ ತಯಾರಿಸಿದ ರೋಡ ಕೋನಮೇಳಕುಂದಾ ಗ್ರಾಮದ ಶಿವಾರದ ರಮೇಶ ತಂದೆ
ಹಾವಪ್ಪಾ ಬಿರಾದರ ರವರ ಹೊಲದ ಹತ್ತಿರ ರಸ್ತೆ
ಮೇಲೆ ಟ್ರ್ಯಾಕ್ಟರ ಚಾಲಕ ಜಗನ್ನಾಥ ತಂದೆ ಕರಬಸಪ್ಪಾ ನಾಗನಕೇರೆ, 35 ವರ್ಷ,
ಲಿಂಗಾಯತ, ಇತನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ
ಚಲಾಯಿಸಿದ್ದರಿಂದ ರಸ್ತೆ ಬದಿಯ ತಗ್ಗಿನಲ್ಲಿ ಹೋಗಿದ್ದರಿಂದ ಟ್ರಾಕ್ಟ್ ಇಂಜಿನ್ ಚಾಲಕನ ಮೇಲೆ
ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಫಿರ್ಯಾದಿ ಚನ್ನಬಸಪ್ಪಾ ತಂದೆ ಸಂಗಪ್ಪಾ ಕಣಜೆ ರವರು ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ದಿನಾಂಕ 06/11/2012 ರಂದು
1500
ಗಂಟೆಗೆ ಫಿರ್ಯಾದಿಶ್ರೀಮತಿ ಕಲಾವತಿ ಗಂಡ ಶಿವರಾಜ ಭುರೆ ವಯ 55 ವರ್ಷ,
ಲಿಂಗಾಯತ,
ಜಿಲ್ಲಾ
ಪಂಚಾಯತ ಕಾರ್ಯಲಯದಲ್ಲಿ ಎಸ್.ಡಿ.ಎ. ಕೆಲಸ, ಸಾ/ ಅರ್. ವಿ. ಬಿಡಪ್ಪಾ ಕಾಲೋನಿ
ಬೀದರ್ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಚಟನಳ್ಳಿ ಸಿವಾರದಲ್ಲಿ ಸವರ್ೆ ನಂ. 212 ಹೊಂದಿದ್ದು ಸದರಿ
ಹೊಲ ನಿರಾವರಿ ಜಮೀನು ಇರುತ್ತದೆ. ಹೊಲದಲ್ಲಿ
ಬಾವಿಗೆ ಪಂಪಸೇಟ್ ಮೊಟಾರ ಕೂಡಿಸಿದ್ದು ಮಾದರಿ ಹೆಚ್.ಪಿ./ಟಿ.ಓ.ಎಂ.-46/ಎಸ್.ಓ.ಟಿ.
5
ಹೆಚ್.ಪಿ. ಎಸ್. ನಂ. 10109 ಕೆ 18437 ನೇದ್ದು
ದಿನಾಂಕ 05, 06/11/2012 ನೇದ್ದರ ರಾತ್ರಿವೇಳೆಯಲ್ಲಿ ಯಾರೋ ಅಪರೀಚಿತ ಕಳ್ಳರು ಕಳ್ಳವು ಮಾಡಿಕೊಂಡು
ಹೊಗಿರುತ್ತಾರೆ. ಪಂಪಸೇಟ್ ಅಂದಾಜು ಕಿಮತ್ತು 30,000/- ರೂ ಇರುತ್ತದೆ. ಅಂತಾ ಇತ್ಯಾದಿ ಅರ್ಜಿಯ ಸಾರಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ದಿ: 06-11-12 ರಂದು
ಫಿರ್ಯಾದಿ ಚಾಂದಬೀ ಗಂಡ ಅಬ್ದುಲ್ ರೆಹಮಾನ ವ: 70 ವರ್ಷ ರವರು ನೀಡಿದ ದೂರಿನ
ಸಾರಾಂಶವೆನೆಂದರೆ ಫೀಯರ್ಾದಿರವರು ಬೆಳಿಗ್ಗೆ 10 ಗಂಟೆಗೆ ತನ್ನ ಹಿರಿಯ ಮಗನಾದ ಅಬ್ದುಲ್
ಸುಕುರ ರವರ ಮನೆಯಲ್ಲಿ ಊಟಮಾಡಿಕೊಂಡು ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಅಸ್ರಾ ಮೇಡಿಕಲ್
ಹತ್ತಿರ ಯಾರೋ ಅಪರಿಚಿತರ 3 ಜನರು ಇವರಲ್ಲಿ ಒಬ್ಬಳು
ಬುಕರ್ಾ ಹಾಕಿಕೊಂಡವಳು ಇನ್ನು ಇಬ್ಬರು ಹುಡುಗರು ಅಂದಾಜು 25 ರಿಂದ 30 ವರ್ಷ
ವಯಸ್ಸಿನವರು ಫಿಯರ್ಾದಿಗೆ ತಡೆದು ಸದರಿಯವರು ಓ ಅಮ್ಮಾ ಕಂಹಾ ಜಾರೆ ಆಪ ಕೋ ವಜೀಪಾ ಹುವಾ ಕ್ಯಾ ನಹೀ ? ಅಂತ
ಕೇಳಿದ್ದಕ್ಕೆ ನಾನು ನಹೀ ಹುವಾ ಜೀ ಬೇಟಾ ಅಂತ ಹೇಳಿದ್ದೆನು ಆಗ ವಂಹಾ ವಜೀಪಾ ದೆರೆ ಚಲೋ ಅಂತ ಹೇಳಿ ನನಗೆ ಸದರಿ 3-ಜನರು
ಸೇರಿಕೊಂಡು ದಗರ್ಾಪೂರಾ ಮುಲ್ತಾನಿ ಪಾಶ ದಗರ್ಾ ರೋಡ ಹತ್ತಿರ ಸಡಿ ಬೌಡಿ ಕಡೆ ಕರೆದುಕೊಂಡು ಹೋಗಿ
ಅಲ್ಲಿಯೇ ಕುಡಿಸಿ ನನಗೆ ಕೆಲವು ಕಾಗದ ಪತ್ರಗಳನ್ನು ತೊರಿಸಿ ಸಾಬ ಲೋಗ ಸೋನಾ ವಗೆರೆ ದೇಖೆ ತೋ ಆಪ ಕೋ ಬೇವಾ ನಹೀ
ಸಮಜತೇ, ವಜಿಪಾ ನಹೀ ದೆತೆ ಇಸಲಿಯೇ ತುಮ್ ಕಾನ್ ಮೇ ಕಾ ಔರ್ ಗಲೆ ಮೇ ಕಾ ಸೋನಾ
ನಿಕಲ್ಕೆ ಚಂಚಿ ಮೇ ರಖ ಲೋ ಅಂತ ಹೇಳಿದಕ್ಕೆ ನಾನು ಅವರಿಗೆ ನಂಬಿ ನನ್ನ ಕಿವಿಯಲ್ಲಿದ್ದ 3-ಗ್ರಾಂ
ಬಂಗಾರದ ಎರಡು ಹೂ ಹಾಗು ಕೊರಳಲಿದ್ದ 6-ಗ್ರಾಂ. ಬಂಗಾರದ ಬರಿಕೆ ದಾನೆ ಸರ ತೆಗೆದು
ಚಂಚಿಯಲ್ಲಿ ಹಾಕಿ ಸದರಿಯವರ ಹತ್ತೀರ ಇದ್ದ ನೀಲಿ ಥೈಲಿಯಲ್ಲಿ ಇಡಲು ಹೇಳಿದ್ದರಿಂದ
ಇಟ್ಟಿರುತ್ತೇನೆ. ನಂತರ ಸದರಿಯವರ ಪೈಕಿ ಕಪ್ಪಗೆ ಉದ್ದ ಇದ್ದ ವ್ಯಕ್ತಿ ಅಮ್ಮಾ ತುಮ್ಹಾರಾ ಮೂ
ಸುಕಗಯ್ಯಾ ಬಿಸ್ಕಿಟ್ ಖಾವ್ ಅಂತ ಒಂದು ಬಿಸ್ಕಿಟ್
ತೆಗೆದು ಕೊಟ್ಟಿದ್ದರಿಂದ ನಾನು ಸ್ವಲ್ಪ ಕಚ್ಚಿ ಅದು ವಾಸನೆ ಬರುತ್ತಿದ್ದುದ್ದರಿಂದ ಉಗುಳಿ
ಹಾಕಿರುತ್ತೇನೆ. ನಂತರ ನನಗೆ ತಲೆ ಸುತ್ತಿ ಚಕ್ಕರ್ ಬಂದಿದ್ದರಿಂದ ನಾನು ಕಣ್ಣು ಮುಚ್ಚಿ
ಕುಳಿತಿದ್ದು ಸದರಿ 3-ಜನರು ನನಗೆ ಗೊತ್ತಾಗಲಾರದಂತೆ
ಬಂಗಾರದ ಒಡವೆಗಳನ್ನು ತೆಗೆದುಕೊಂಡು ನಾನು ಹುಷಾರಾದ ನಂತರ ಸದ್ರಿ ನೀಲಿ ಥೈಲಿ ನನ್ನ
ಕೈಯಲ್ಲಿ ಕೋಟ್ಟು ಸಾಬ ಲೋಗ ಆಬೀ ಅತೆ ತುಮ್ ಯಹೀ
ಬೈಟೋ ಹಮ್ ದೇಖಲೇಕೆ ಬುಲಾಕೆ ಲಾತೆ ಅಂತ ಹೇಳಿ ಹೋಗಿರುತ್ತಾರೆ. ನಂತರ ನಾನು ಸದರಿ ಥೈಲಿ ಬಿಚ್ಚಿ
ನೋಡಲಾಗಿ ನನ್ನ ಬಂಗಾರದ ಒಡವೆಗಳು ಇಟ್ಟ ಚೆಂಚಿ ಇರಲಿಲ್ಲಾ . ಕಾರಣ ಸದರಿಯವರು ನನ್ನ ಕಿವಿಯಲ್ಲಿಯ
3
ಗ್ರಾಂ ಬಂಗಾರದ ಹೂವು , ಹಾಗೂ ಕೊರಳಲ್ಲಿದ್ದ ಬರಿಕೆ ದಾನೆ ಸರ ಅಂದಾಜು ಕಿಮ್ಮತ್ತು 16000=00 ರೂ
ಬೆಲೆ ಬಾಳುವುದನ್ನು ಹಾಗೂ ನಗದು ಹಣ 1400=00 ರೂ ಹೀಗೆ ಒಟ್ಟು 17400=00 ರೂಪಾಯಿ
ನೇದ್ದವುಗಳನ್ನು ಮೋಸದಿಂದ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 250/12 ಕಲಂ 279,337,338.
ಐ.ಪಿ.ಸಿ.ಜೊತೆ
187
ಐ.ಎಮ್.ವಿ.ಎಕ್ಟ :-
ದಿನಾಂಕ 06/11/2012 ರಂದು
17:00
ಗಂಟೆಗೆ ಫಿರ್ಯಾದಿಶ್ರೀಮತಿ ಸಿದ್ದಮ್ಮಾ ಗಂಡ ಶಿವರಾಜ 40 ವರ್ಷ ಜಾತಿ
ಧೋಬಿ ಉ/ ಮನೆ ಕೇಲಸ ಸಾ/ ಕೈಲಾಸ ನಗರ ಬೀದರ
ಮತ್ತು ಸಂಭಂದಿಕರಾದ ರತ್ನಮ್ಮಾ, ಜಗದೇವಿ, ಅರ್ಚನಾ ಎಲ್ಲರೂ
ಮೆನಯ ಮುಂದೆ ಅಂಗಳದಲ್ಲಿ ಮಾತಾಡುತ್ತಾ ಕುಳಿತಾಗ ಅದೇ ಸಮಯಕ್ಕೆ ಗೊರನಳ್ಳಿ ಕಡೆಯಿಂದ (ಶಾಪೂರ
ಬೈಪಾಸ) ಕಡೆಯಿಂದ ಒಬ್ಬ ಮೋಟಾರ ಸೈಕಲ ನಂ ಕೆಎ38ಎಲ್3598 ನೇದ್ದರ
ಚಾಲಕನು ಮೋಟಾರ ಸೈಕಲನ್ನು ವೇಗವಾಗಿ, ದುಡಕಿನಿಂದ ಮತ್ತು ನಿಷ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಮತ್ತು ಫಿಯರ್ಾದಿಯ ಸಂಭಂದಿಕರಿಗೆ ಡಿಕ್ಕಿ ಹೊಡೆದು ಭಾರಿ
ಮತ್ತು ಸಾದಾಗಾಯ ಪಡಿಸಿ ಅರೋಪಿಯು ಅಪಘಾತ ಸ್ಥಳದಲ್ಲಿ ಮೋಟಾರ ಸೈಕಲ ಬಿಟ್ಟು ಓಡಿ ಹೊಗಿರುತ್ತಾನೆ.
ಅಂತ ಫಿಯರ್ಾದಿಯ ಮೌಖಿಕ ಹೇಳಿಕೆಯನ್ನು ಬೀದರ ಶ್ರೀ ಆಸ್ಪತ್ರೆಯಲ್ಲಿ ಪಡೆದುಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 190/12 ಕಲಂ 143,147,
420, 328
ಜೊತೆ 149 ಐಪಿಸಿ :-
ದಿನಾಂಕ : 06/11/2012 ರಂದು ಪಿಎಸ್ಐ ರವರು ಸಿಬ್ಬಂದಿಯವರಾದ ಸಿಪಿಸಿ 1529 1579
1378
ರವರು ಸಿಬ್ಬಂದಿಯೊಂದಿಗೆ ಹೊದಾಗ ಸಂಗಮೇಶ್ವರ ಮಂದಿರ ಹತ್ತಿರ 20 -25 ಜನರು ಗುಂಪು
ಕಟ್ಟಿಕೊಂಡು ನಿಂತಿದ್ದನ್ನು ನೋಡಿ ಖಾತ್ರಿ ಪಡಿಸಿಕೊಂಡು
ನಂತರ ಸಂಗಮೇಶ್ವರ ಮಂದಿರದ ಸ್ವಲ ಅಂತರದಲ್ಲಿ ಹೋಗಿ ನೋಡಲು ಅಲ್ಲಿ 20-25 ಜನರು 1 ರೂಪಾಯಿಗೆ 80 ರೂಪಾಯಿ
ಕೊಡುತ್ತೆವೆ ಎಂದು ಕೂಗಿ ಕೂಗಿ ಜನಾಕರ್ಷಣೆ ಮಾಡಿ ಅವರಿಂದ ಹಣ ಪಡೆದುಕೊಂಡು 0 ಸಂಖ್ಯೆಯಿಂದ
99
ಸಂಖ್ಯೆವರೆಗೆ ಚಿಕ್ಕ ಚಿಕ್ಕ ನೋಟ ಬುಕಗಳಲ್ಲಿ ನಂಬರ ಬರೆದುಕೊಳ್ಳುತ್ತಿದ್ದರು ಅಲ್ಲಿ 15-20 ಸಾರ್ವಜನಿಕರು
ಕೂಡಾ ಇದ್ದು ಹಾಗು ಸದರಿ ನಂಬರ ಬರೆದುಕೊಳ್ಳುವ ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು ಅವರಿಗೆ
ಮತ್ತುಬರಿಸುವ ಗುಳಿಗೆಗಳು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ ಅವರಲ್ಲಿ ಒಬ್ಬನು ಸಿಕ್ಕಿಬಿದ್ದನು ಮತ್ತೊಬ್ಬನು ತನ್ನ ಹತ್ತಿರ ಇದ್ದ ಹಣ
ಮತ್ತು ನಶೆಗುಳಿಗೆಗಳ ಸ್ಲೀಪ ಬಿಸಾಡಿ ಓಡಿ ಹೋದನು ಆಗ ನಾವು ಸಿಕ್ಕಿ ಬಿದ್ದ ವ್ಯಕ್ತಿಯ ಹೆಸರು
ಮತ್ತು ವಿಳಾಸ ವಿಚಾರಣೆ ಮಾಡಲು ಆತ ತನ್ನ ಹೆಸರು
ಇಸ್ಮಾಯಿಲ @ ಸದ್ದಾಂ ತಂದೆ ಫರೀದಸಾಬ ಶೇಖ ವಯಸ್ಸು 20 ವರ್ಷ ಜಾ : ಮುಸ್ಲಿಂ
ಉ : ವಿಜಯಮಾಹಂತೇಶ್ವರ ಗಲ್ಲಿ ಭಾಲ್ಕಿ ಎಂದು ತಿಳಿಸಿದನು . ಆತನಿಂದ 1) ನಂಬರ
ಬರೆದುಕೊಂಡಿದ್ದ ಒಂದು ಸಣ್ಣ ಅಜಯ ನೋಟ ಬುಕ 2) ಒಂದು ಬಾಲ ಪೆನ್ನ 3) ನಗದು
ಹಣ 415
ರೂಪಾಯಿ 4) ಮೋಬೈಲ 5)
ಮತ್ತುಬರಿಸುವ
ಎರಡು ಗುಳಿಗೆ ಸ್ಲೀಪ ಜಪ್ತ ಮಾಡಿಕೊಳ್ಳಲಾಗಿದೆ . ಹಾಗು
1 ರೂಪಾಯಿಗೆ 80 ರೂಪಾಯಿ ಹಣ ಕೊಡುತ್ತೆವೆ ಎಂದು ಮತ್ತು ನಶೆಬರಿಸುವ ಗುಳಿಗೆಗಳು ಮಾರಾಟ ಮಾಡುತ್ತಿರುವ ಓಡಿ ಹೋದ
ಜನರ ಹೆಸರು ಸಿಕ್ಕಿ ಬಿದ್ದ ಆರೋಪಿ ಇಸ್ಮಾಯಿಲ @ ಸದ್ದಾಂ ಈತನಿಗೆ ವಿಚಾರಣೆ ಮಾಡಲು ಆತ 1)
ತಿಪ್ಪಣ್ಣಾ
ತಂದೆ ಸಂಗಪ್ಪಾ ವಡ್ಡರ 2) ಶಿವಕುಮಾರ ಜೋಳದಾಪಕೆ 3) ಸಂಜು ತಂದೆ ಗೈಬು ವಡ್ಡರ 4) ರಾಜು
ತಂದೆ ನಾರಾಯಣರಾವ 5) ಲಕ್ಷ್ಮಣ ತಂದೆ ಅಪ್ಪಣ್ನಾ
6) ಅನೀಲ ತಂದೆ ಸುಂಟೆ 7) ಬಾಲಾಜಿ ತಂದೆ ಸಂಗಪ್ಪಾ ವಡ್ಡರ 8)
ಇಬ್ರಾಹಿಂ
ಭೀಮ ನಗರ 9) ಮಾಣಿಕ ಬೇಲೂರೆ 10) ನಾಮದೇವ ತಂದ ಹಣಮಂತ ವಡ್ಡರ 11)
ಸಂತೋಷ
ಬೆಲೂರೆ 12) ಶಿವಕುಮಾರ ಸುಂಟೆ 13) ರಾಜಕುಮಾರ ಸುಂಟೆ 14) ಸುಭಾಷ ಸಂಪಂಗೆ 15) ಹಣಮಂತ ತಂದೆ
ಶಂಕರೆಪ್ಪಾ ವಡ್ಡರ 16) ವಿಶ್ವನಾಥ ಜೋಶಿ ನಗರ 17) ಗುರು ವಡ್ಡರ 18) ಯಲ್ಲಪ್ಪಾ
ತಂದೆ ಭೀಮರಾವ ವಡ್ಡರ 19) ವೆಂಕಟ ತಂದೆ ಗೋವಿಂದ ಸಿಂಧೆ 20) ಸುಭಾಷ ತಂದೆ
ಸಂಗಪ್ಪಾ ಆಲಕುಂಟೆ 21) ದಿಲೀಪ ತಂದೆ ಸಂಗಪ್ಪಾ ಅಣದೂರೆ ಎಲ್ಲರು ಸಾ : ಭಾಲ್ಕಿ ಇರುತ್ತಾರೆ ಹಾಗು
ಓಡಿ ಹೋಗುವಾಗ ದಿಲೀಪ ಅಣದೂರೆ ಈತನು ಬಿಸಾಡಿ ಹೋಗಿದ 1) ನಗದು 1720/-
ರೂಪಾಯಿ 2) ಮತ್ತುಬರಿಸುವ ಗುಳಿಗೆಗಳ ಸ್ಲೀಪ 3)
ಒಂದು
ನೋಕಿಯಾ ಮೊಬೈಲ 4) ಒಂದು ವಾತರ್ಾ ಶಕ್ತಿ ಎನ್ನುವ ಕಲ್ಯಾಣ, ಮುಂಬೈ
ಅಂಕಿವುಳ್ಳ ದೈನಂದಿನ ಮರಾಠಿ ಪತ್ರಿಕೆ
ಸ್ಥಳದಲ್ಲಿ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment