ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-11-2012
ಚಿಂತಾಕಿ ಪೊಲೀಸ ಠಾಣೆ ಗುನ್ನೆ ಸಂ: 69/2012 ಕಲಂ: 498[ಎ], 306 ಜೊತೆ 34 ಐ.ಪಿ.ಸಿ :-
ದಿನಾಂಕ 13/11/2012 ರಂದು ಅಂದಾಜು 1600 ಗಂಟೆಗೆ ಮೃತ ಮೃತ ಪವಿತ್ರಾ ಗಂಡ ಸಂತೋಷ 25 ವರ್ಷ ಜಾತಿ ಎಸ್.ಸಿ ಮಾದಿಗ ಸಾ/ ಯಡೂರ [ಬಿ] ಇವಳು ತನ್ನ ಗಂಡ ಮತ್ತು ಮನೆಯಲ್ಲಿರುವ ಇತರರ ಮಾನಸಿಕ ಮತ್ತು ದೈಹಿಕ ಕಿರುಕುಳ ತಾಳಲಾರದೆ ತನ್ನ ಗಂಡನ ಮನೆಯಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವಿದಾಗ ಅರೋಪಿ ಸಂತೋಷ ತಂದೆ ಬಾಪು ಸೂರ್ಯವಂಶಿ 30 ವರ್ಷ ಇತನು ತನ್ನ ಮೇಲೆ ಬರುತ್ತದೆ ಅಂತಾ ಮೃತ ಪವಿತ್ರಾ ರವರ ಹೊಲದಲ್ಲಿರುವ ತಾಯಿಯ ಹತ್ತಿರ ಬಿಟ್ಟು ಓಡಿ ಹೋಗಿರುತ್ತಾರೆ ನಂತರ ಮೃತಳ ತಾಯಿ ತನ್ನ ಮಗಳೊಂದಿಗೆ ಮನೆಗೆ ಬಂದಾಗ ಮೃತನ ತಂದೆಗೆ ಔಷಧ ಕುಡಿದ ಬಗ್ಗೆ ತಿಳಿಸಿರುತ್ತಾಳೆ ತಕ್ಷಣ ಎಲ್ಲರು ಗಾಬರಿಗೊಂಡು ಚಿಕಿತ್ಸೆ ಕುರಿತು 108 ಅಂಬುಲೆನ್ಸನಲ್ಲಿ ತೆಗೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ 1830 ಗಂಟೆಗೆ ಮೃತ ಪಟ್ಟಿರುತ್ತಾಳೆ. ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಕೊಂಡಿರುತ್ತಾರೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಗುನ್ನೆ ಸಂ: 134/2012 ಕಲಂ: 166,167,120(ಬಿ),209, 420,423, 424, 468,467,471, 506 ಜೊತೆ 149 ಐಪಿಸಿ:-
ದಿನಾಂಕ 13-11-2012 ರಂದು 1700 ಗಂಟೆಗೆ ಫಿರ್ಯಾದಿ ಶ್ರೀ ನಾಗಪ್ಪಾ ತಂದೆ ಭೀಮಗೊಂಡ ಖಂಡೆ ಬಲ್ಲೆ ವಯ 50 ವರ್ಷ ಜಾತಿ ಕುರುಬ ಉ: ಒಕ್ಕಲತನ ಸಾ: ಗಾದಗಿ ಗ್ರಾಮ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೆನಂದರೆ ದಿನಾಂಕ 25-11-2009, 2010 ನೇ ಫೆಬ್ರವರಿ ಮತ್ತು 21-11-2009 ರಂದು ಅರೋಪಿ 1) ರವಿ ಸ್ವಾಮಿ ಹಾಗೂ ಇನ್ನು 8 ಜನರು ಎಲ್ಲರೂ ಸಾ: ಬೀದರ ಇವರು ಫಿರ್ಯಾದಿದಾರರ ಗಾದಗಿ ಗ್ರಾಮದ ಶಿವಾರದ ಸವರ್ೆ.ನಂ. 292,293,303/1,304/2 ಕ್ಷೆತ್ರ 4 ಎಕ್ಕರೆ 29 ಗುಂಟೆ ಜಮೀನು ಮತ್ತು ಬೀದರ ನಗರದ ನೌಬಾದನಲ್ಲಿರುವ ಪ್ಲಾಟ್.ನಂ.17 ರ ನಕಲಿ ಇಚ್ಚಾಪತ್ರವನ್ನು ಸೃಷ್ಟಿಸಿ ನೊಂದಣಿ ಮಾಡಿಸಿಕೊಂಡು ಮೊಸ ಮಾಡಿರುತ್ತಾರೆ ಅಂತಾ ಫಿರ್ಯಾದಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲೆ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment