ಗಾಂಜಾ ಜಪ್ತಿ:
ನೆಲೋಗಿ ಪೊಲೀಸ್ ಠಾಣೆ: ಶ್ರೀ ಜಗದೀಶ
ಕೆ.ಜಿ.ಪಿ.ಎಸ್.ಐ ನೆಲೋಗಿ ಪೊಲೀಸ ಠಾಣೆ ರವರು ದಿನಾಂಕ:22-11-2012 ರಂದು ನೆಲೋಗಿ ಸಿಮಾಂತರದಲ್ಲಿಯ ಹೊಲ
ಸರ್ವೇ ನಂ 65 ರಲ್ಲಿ ಅಕ್ರಮವಾಗಿ 10 ಗಾಂಜಾದ
ಗಿಡಗಳು ಗುರುಲಿಂಗಪ್ಪ ತಂದೆ ಮರೇಪ್ಪ ಝಳಕಿ ಇವರು ಬೆಳಸಿರುವುದಾಗಿ ತಿಳಿದು ಬಂದಿದ್ದು, ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾ ರವರ ಆದೇಶದ ಮೇರೆಗೆ ಗಾಂಜಾ ಗಿಡಗಳು ಅಂದಾಜು ಕಿಮ್ಮತ್ತು
15000=00 ರೂಪಾಯಿಗಳದ್ದು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:149/2012 ಕಲಂ 8 (ಬಿ), 20 (ಎ) ಎನ್.ಡಿ.ಪಿ.ಎಸ್. ಆಕ್ಟ 1985 ನೇದ್ದರ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಅಂಬಾರಾಯ ತಂದೆ ಶರಣಪ್ಪಾ
ಕೊರಳ್ಳಿ ಸಾ|| ಕೊರಳ್ಳಿ ಗ್ರಾಮ ಆಳಂದ ತಾಲೂಕ, ಸಧ್ಯ ಬಿದ್ದಾಪೂರ ಕಾಲೋನಿ ಹೈ ಕೊರ್ಟ ಹತ್ತಿರ ಗುಲಬರ್ಗಾ
ರವರು ನಾನು
ದಿನಾಂಕ: 19-11-2012 ರಂದು ರಾತ್ರಿ ಟಿಪ್ಪರ ಕೆಎ 32 ಬಿ-2679 ನೇದ್ದನನ್ನು ಸಿಲ್ಲಿಸಿದ್ದು,
ಬೆಳಿಗ್ಗೆ ಎದ್ದು ನೋಡಲು ಟಿಪ್ಪರ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:380/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
No comments:
Post a Comment