Police Bhavan Kalaburagi

Police Bhavan Kalaburagi

Sunday, November 25, 2012

GULBARGA DISTRICT REPORTED CRIME


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀಮತಿ ರಿಯಾನಾ ಬೇಗಂ ಗಂಡ ನಜೀರ ಅಹ್ಮದ ಶೇಖ ಸಾ:ಕೊಳಸಾಫೈಲ ಶಹಾಬಾದ ರವರು ನನ್ನ ಗಂಡನು ನನ್ನ ಮೇಲೆ ಸಂಶಯದಿಂದ ನೋಡುತ್ತಿದ್ದು ದಿನಾಂಕ:22/11/2012 ರಂದು 1.30 ಎಎಂ ಕ್ಕೆ ಸುಮಾರಿಗೆ ನ್ನ ಗಂಡ ಹಾಗೂ ತನ್ನ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿಕೊಂಡಾಗ ನನಗೆ ನನ್ನ ಗಂಡನು ಎಬ್ಬಿಸಿ ವಿನಾಕಾರಣ ನನ್ನ ಮೇಲೆ ಸಂಶಯ ಪಟ್ಟು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ  ನನ್ನ ಕುತ್ತಿಗೆ  ಹಿಡಿದು ಹಿಚುಕಿ  ನೆಲಕ್ಕೆ ಒತ್ತುತ್ತಿರುವಾಗ ನನ್ನ ಮಗಳು ಸಪ್ಪಳ ಕೇಳಿ ಎದ್ದು ಅಳುತ್ತಿರುವಾಗ ಬಾಜು ಮನೆಯ ನನ್ನ ಭಾವನಾದ ಜಹೀರ ಅಹ್ಮದ ಇವರು ಬಂದು ಬಿಡಿಸಿರುತ್ತಾರೆ  ನನಗೆ ವಿನಾಕಾರಣ ಸಂಶಯದಿಂದ ನೋಡಿ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಹಿಚುಕಿದ್ದು ಇರುತ್ತದೆ ನನ್ನ ಎರಡು ಕಣ್ಣುಗಳು ಕೆಂಪಾಗಿದ್ದು ನನ್ನ ಕುತ್ತಿಗೆ ಮೇಲೆ ಗಾಯದ ಗುರುತು ಬಿದ್ದಿರುತ್ತವೆ ಅಂತಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 155/2012 ಕಲಂ:324,504,307 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.     

No comments: