Police Bhavan Kalaburagi

Police Bhavan Kalaburagi

Sunday, November 11, 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ ಪ್ರದೀಪ ತಂದೆ ವಿಠಲರಾವ ಮಸ್ತಾಪೂರ ಸಾ|| ಗಡಿನಿಂಗದಳ್ಳಿ ರವರು ನಾನು ಟಾವರಿಗೆ REVAN BACK SECURITY OF INDIA LTD BENGALORE  ಕಂಪನಿ ವತಿಯಿಂದ ಟವರ ಕಾವಲುಗಾರನಾಗಿ ಸುಮಾರು ಒಂದು ವರ್ಷದಿಂದ  ಕೆಲಸ ಮಾಡುತ್ತಿದ್ದೆನೆ ನನಗೆ ದಿನಾಂಕ 01.11.2012 ರಂದು ರಾತ್ರಿ ವೇಳೆಯಲ್ಲಿ ಟಾವರ ಕಾಯುತ್ತಿದ್ದಾಗ ವಾಂತಿಬೇದಿಯಾಗಿ ಜ್ವರ ಬಂದ ಕಾರಣ ನಾನು ವಿಶ್ರಾಂತಿ ತೆಗೆದುಕೊಂಡಿದ್ದು, ಅದೆ ನಸುಕಿನ ಜಾವಾ 02.45  ಗಂಟೆ ಸುಮಾರಿಗೆ ಟವರಕ್ಕೆ ಅಳವಡಿಸಿದ ‘’ಎಲ್ ಸಿ ಯು’’  ವೈರ್  ಕಳುವಾಗಿದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೋಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.116/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಶೇಕ ಜಾಫರ ಹುಸೇನ ತಂದೆ ಶೇಕ ಮಹ್ಮದ ಹುಸೇನ  ಸಾ:ಬಿಲಾಲಬಾದ ಕಾಲನಿ ಗುಲಬರ್ಗಾರವರು ನಾನು ತಾಜ ಸುಲ್ತಾನಪುರ ಸೀಮೆಯಲ್ಲಿ ಬರುವ  ಹೊಲ ಸರ್ವೆ ನಂ. 186/4 ರಲ್ಲಿ 2 ಎಕರೆ ಜಮೀನನ್ನು ಮಹ್ಮದ ಇಲಿಯಾಸ ತಂದೆ ಅಬ್ದುಲ ಕರೀಮ ಸಾ:ತಾಜ ಸುಲ್ತಾನಪೂರ ಸಧ್ಯ  ಖಾದ್ರಿ ಚೌಕ  ಶೇಖ ರೋಜಾ ಆಳಂದ ರೋಡ ಗುಲಬರ್ಗಾ ಇತನಿಂದ  11,70,000/- ರೂ.ಗೆ ಖರೀದಿ ಮಾಡಿದ್ದು  ದಾಖಲಾತಿ ಸಂಖ್ಯೆ 6923/2012-13 ದಿನಾಂಕ 21-08-12 ಇರುತ್ತದೆ. ಆದರೆ ಮಹ್ಮದ ಇಲಿಯಾಸ ಇತನು ಮತ್ತು ಹಣಮಂತರಾಯ ತಂದೆ ಶಂಕ್ರೆಪ್ಪ ಸಾ: ತಾಜ ಸುಲ್ತಾನಪೂರ ಇಬ್ಬರು ಕೂಡಿಕೊಂಡು ಖೊಟ್ಟಿ ದಾಖಲಾತಿ ತಯಾರಿಸಿ ನನಗೆ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:363/2012 ಕಲಂ, 420, 463, 467, 468 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಅನೀಲಕುಮಾರ ತಂದೆ ನಾರಾಯಣರಾವ ಕುಲಕರ್ಣಿ   ಸಾ: ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಗುಲಬರ್ಗಾ  ಕಲೋನಿ  ಗುಲಬರ್ಗಾ ನಾನು ದಿನಾಂಕ:10-11-2012 ರಂದು ನಾನು ನನ್ನ ಮೋಟಾರ ಸೈಕಲ ನಂ ಕೆಎ-32 ಇಬಿ- 7683 ನೇದ್ದರ  ಮೇಲೆ ಹಳೆ ಜೇವರ್ಗಿ ರಸ್ತೆಯಿಂದ ಮೋಹನ ಲಾಡ್ಜ ಕಡೆಗೆ ಹೋಗುತ್ತಿದ್ದಾಗ ನಾಗಾರ್ಜುನ ಲಾಡ್ಜ  ಎದರು ರೋಡಿನ ಮೇಲೆ ಕಾರ  ನಂ:ಕೆಎ-32 ಎನ್ -19 ನೇದ್ದರ ಚಾಲಕ  ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ  ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡಿಸಿ  ಗಾಯಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 113/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಧ್ಯದ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ10/11/2012 ರಂದು ದೇವಿಂದ್ರ ಎ.ಎಸ್.ಐ ರವರು ಮತ್ತು ಪಿಸಿ ರಾಮಚಂದ್ರ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ದಂಗಾಪೂರ ಗ್ರಾಮದಿಂದ ಕಡಗಂಚಿ ಕಡೆಗೆ ಹೋಗುವ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಹೋಗಿ ನೋಡಲಾಗಿ ದಂಗಾಪೂರ ಗ್ರಾಮದಿಂದ ಕಡಗಂಚಿ ಕಡೆಗೆ ಹೋಗುವ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಪ್ಲಾಸ್ಟೀಕ ಚೀಲದಲ್ಲಿ ಮಧ್ಯದ ಬಾಟಲಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಅನಧೀಕೃತವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಮಧ್ಯದ ಬಾಟಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು ಸದರಿ ಮಧ್ಯದ ಬಾಟಲಿಗಳನ್ನು ಪರಿಶೀಲಿಸಲಾಗಿ  ರೂ. 1735/-  ರೂಪಾಯಿಗಳ ಮೌಲ್ಯದ ಮಧ್ಯದ ಬಾಟಲಿಗಳಿದ್ದು ಜಪ್ತಿ ಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 96/2012  ಕಲಂ 32,34 ಕೆ.ಇ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಆನಂದ ತಂದೆ ಗಿಡ್ಡೇಪ್ಪಾ ವಡ್ಡರ ವಯ: 26 ವರ್ಷ ಉ: ಕಾರ ಚಾಲಕ ಜಾ: ವಡ್ಡರ ಸಾ: ಸಿರನೂರ, ತಾ:ಜಿ: ಗುಲಬರ್ಗಾ ರವರು ನನ್ನ ತಮ್ಮ ಶಂಕರ ಡಿಪ್ಲೊಮ ಓದಿಕೊಂಡು ಇರುತ್ತಾನೆ ನನ್ನ ತಂಗಿಯರಾದ ನಾಗಮ್ಮ ಮತ್ತು ರೂಪಾ ಇವರು ಕೂಡಾ ನನ್ನ ಮನೆಯಲ್ಲಿರುತ್ತಾರೆ. ನನ್ನ ತಂಗಿಯಾದ ರೂಪಾ ಇವಳು ಈಗ ಸುಮಾರು 6 ತಿಂಗಳ ಹಿಂದೆ ನಮ್ಮೂರಿನ ಯಲ್ಲಪ್ಪಾ ತಂದೆ ಶೇಟ್ಟೇಪ್ಪ ಮೇಳಕುಂದಿ ಇವನಿಗೆ ಮದುವೆಯಾಗಿ 2 ಮಕ್ಕಳಿದ್ದರೂ ಕೂಡಾ ನನ್ನ ತಂಗಿ ಇವಳು ಅವನೊಂದಿಗೆ ಪ್ರಿತಿಸಿ ನಂದೂರ ಗ್ರಾಮದ ದೇವಸ್ಥಾನದ ಹತ್ತಿರ ಮದುವೆಯಾಗಿರುತ್ತಾರೆ. ನಮ್ಮ ತಂಗಿಯಾದ ರೂಪಾ ಇವಳು ತನ್ನ ಗಂಡನ ಮನೆಗೆ ಹೋದಳು. 3 ತಿಂಗಳವರೆಗೆ ನಮ್ಮೂರ ಬಿಟ್ಟು ಚಿಂಚೋಳಿಗೆ ಹೋಗಿ ಅಲ್ಲಿಂದ ಪುನಃ ವಾಪಸ ಊರಿಗೆ ಬಂದಿರುತ್ತಾರೆ. ಊರಿಗೆ ಬಂದು ತನ್ನ ಗಂಡನ ಮನೆಯಲ್ಲಿದ್ದಾಗ ನನ್ನ ತಂಗಿಯ ಗಂಡನಾದ ಯಲ್ಲಪ್ಪ ಮೇಳಕುಂದಿ, ಮಾವನಾದ ಶೇಟ್ಟೆಪ್ಪಾ ಮೇಳಕುಂದಿ, ಅತ್ತೆಯಾದ ರಾಮಬಾಯಿ ಮೇಳಕುಂದಿ, ಇವರು ನನ್ನ ತಂಗಿ ರೂಪಾಳಿಗೆ ತೊಂದರೆ ಕೊಡುತ್ತಿದ್ದರು, ನಮ್ಮ ಮನೆ ಅವರ ಮನೆ ಎದರು ಬದರು ಇದ್ದು ನಮ್ಮ ತಂಗಿಗೆ ತೊಂದರೆ ಕೊಡುವುದನ್ನು ತಾಳಲಾರದೆ ವಾಪಸ ಗಂಡನ ಮನೆಯಿಂದ ನಮ್ಮ ಮನೆಯಲ್ಲಿ ಬಂದು ಈಗ ಸುಮಾರು  ಒಂದೂವರೆ ಗಳಾಗಿರಬಹುದು. ಈ ವಿಷಯ ಇವತ್ತು ನಾಳೆಗೆ ಸರಿ ಹೋಗಬಹುದು ಅಂತಾ ನಾವು ನಮ್ಮ ಪಾಡಿಗೆ ಸುಮ್ಮನೆ ಇದ್ದೇವು. ದಿನಾಂಕ: 09-11-2012 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನಮ್ಮೂರಿನ ನೀಲಮ್ಮ ಹೊಟೇಲದ ಮುಂದೆ ಶೆಟ್ಟೇಪ್ಪ ತಂದೆ ಬಸಪ್ಪಾ ಮೇಳಕುಂದಿ, ಯಲ್ಲಪ್ಪಾ ತಂದೆ ಶೆಟ್ಟೇಪ್ಪಾ ಮೇಳಕುಂದಿ,  ರಾಮಬಾಯಿ ಗಂಡ ಶೆಟ್ಟೇಪ್ಪಾ ಮೇಳಕುಂದಿ,ಕಳ್ಳೊಳಿ ತಂದೆ ದುರ್ಗಾಪ್ಪಾ ಮೇಳಕುಂದಿ,ಯಲ್ಲಪ್ಪಾ ತಂದೆ ದುರ್ಗಾಪ್ಪಾ ಮೇಳಕುಂದಿ,ಬಸಪ್ಪಾ ತಂದೆ ದುರ್ಗಪ್ಪಾ ಮೇಳಕುಂದಿ,ವಿಜಯಲಕ್ಷ್ಮಿ ತಂದೆ ಶೆಟ್ಟೇಪ್ಪಾ ಮೇಳಕುಂದಿ,ಶಂಕರ ತಂದೆ ಈರಪ್ಪಾ ನಿಂಗನಕಲ್ಲ, ಶೀವು ತಂದೆ ಭೀಮರಾವ ಕಡಗಂಚಿ ಹಾಗೂ ಇತರರು ಕೂಡಿಕೊಂಡು ನಮ್ಮೂರಿನ ಶಂಕರ ಮತ್ತು ಆನಂದ ಇವಳ ತಂಗಿಯಾದ ರೂಪಾ ಇವಳು ನನ್ನ ಮಗ ಯಲ್ಲಪ್ಪ ಈತನ ಮದುವೆಯಾದರೂ ಕೂಡಾ ರೂಪಾ ಇವಳು ಮತ್ತೆ ಮದುವೆ ಮಾಡಿಕೊಂಡಿರುತ್ತಾಳೆ. ಇದ್ದರಿಂದ ನಮ್ಮ ಮನೆಯ ಮರ್ಯಾದೆ ಹಾಳಾಗಿದೆ ಅಂತಾ ಶೆಟ್ಟೇಪ್ಪಾ ಮೇಳಕುಂದಿ ಮಾತಾನಾಡುತ್ತಿದ್ದನು. ಶಂಕರ ವಡ್ಡರ ಮತ್ತು ನನಗೆ ಕೊಲೆ ಮಾಡಿದರೆ 1 ಲಕ್ಷ ರೂಪಾಯಿ ಕೊಡುತ್ತೇನೆ ಮತ್ತು ನಮ್ಮಗೆ ಕೊಲೆ ಮಾಡಲು ಅವರೆಲ್ಲರೂ ಕೂಡಿ ಒಳಸಂಚು ರೂಪಿಸುವುದನ್ನು ನನ್ನ ತಂಗಿಯಾದ ನಾಗಮ್ಮ ಇವಳು ಕೇಳಿ ಮನೆಗೆ ಬಂದು ಸದರಿ ವಿಷಯವನ್ನು ನನಗೆ ಮತ್ತು ನನ್ನ ತಮ್ಮ ಶಂಕರನಿಗೆ ತಿಳಿಸಿದಳು. ಆದರೂ ಕೂಡಾ ನಾವು ನಮ್ಮ ಪಾಡಿಗೆ ಸುಮ್ಮನಿದ್ದೇನು.ದಿನಾಂಕ:10-11-2012 ರಂದು ಬೆಳಗ್ಗೆ 9-00 ಗಂಟೆಯ ಸುಮಾರಿಗೆ ನನ್ನ ಕ್ರೂಜರ ವಾಹನ ತಗೆದುಕೊಂಡು ಗುಲಬರ್ಗಾಕ್ಕೆ ಹೋದೇನು. ನಾನು ಮನೆಯಿಂದ ಹೋಗುವಾಗ ನನ್ನ ತಾಯಿಯಾದ ಕಮಲಾಬಾಯಿ, ತಮ್ಮನಾದ ಶಂಕರ, ತಂಗಿಯರಾದ ನಾಗಮ್ಮ, ರೂಪಾ ಇವರು ಮನೆಯಲ್ಲಿದ್ದರು. ನಾವು ಊರಲ್ಲಿ ಮನೆ ಕಟ್ಟುತ್ತಿದ್ದು ಹಗ್ಗ ಕಡಿಮೆ ಬಿದಿದ್ದರಿಂದ ನನ್ನ ತಮ್ಮ ಶಂಕರ ನನಗೆ ಫೊನ ಮಾಡಿ ಹಗ್ಗ ತಗೆದುಕೊಂಡು ಬರಲು ಬೆಳಗ್ಗೆ 11-30 ಗಂಟೆಯ ಸುಮಾರಿಗೆ ಹೇಳಿದನು. ನಾನು ಅವನಿಗೆ ನೀನೆ ಮೊಟಾರ ಸೈಕಲ ತೆಗೆದುಕೊಂಡು ಬಂದು ತೆಗೆದುಕೊಂಡು ಹೋಗು ಅಂತಾ ಹೇಳಿದನು. ಅದರಂತೆ ನನ್ನ ತಮ್ಮ ಹೀರೋ ಹೊಂಡಾ ಮೊಟಾರ ಸಕಲ ನಂ: ಕೆಎ-32 ಇಬಿ-2342 ನೇದ್ದರ ಮೇಲೆ ನಮ್ಮೂರಿಂದ ಗುಲಬರ್ಗಾಕ್ಕೆ ಬಂದು ಹಗ್ಗ ಖರೀದಿ ಮಾಡಿಕೊಂಡು ಸಾಯಂಕಾಲ 6 ಗಂಟೆಯ ಸುಮಾರಿಗೆ ನಾನು ಅವನಿಗೆ ಫೊನ ಮಾಡಿದಾಗ ನಾನು ಈಗ ಊರಿಗೆ ಹೋಗುತ್ತಿದ್ದೆನೆ ಅಂತಾ ತಿಳಿಸಿದನು. ಅವನು ಗುಲಬರ್ಗಾದಿಂದ ಊರಿಗೆ ಹೋಗಿರಬಹುದು ಅಂತಾ ನಾನು ತಿಳಿದಿದ್ದು, ಆದರೂ ಕೂಡಾ ರಾತ್ರಿಯಾದರು ಮನೆಗೆ ಬರಲಿಲ್ಲ. ನಂತರ ನಾನು ನನ್ನ ತಮ್ಮನ ಫೊನಿಗೆ ಫೊನ ಮಾಡಿದರು ಕೂಡಾ ಅವನು ತನ್ನ ಫೊನ ಎತ್ತಿರುವುದಿಲ್ಲ. ನಂತರ ರಾತ್ರಿ 9 ಗಂಟೆಯ ಸುಮಾರಿಗೆ ನನ್ನ ತಮ್ಮನ ಪೋನಿಗೆ ಕರೆ ಮಾಡಿದಾಗ ಪೊಲೀಸನವರು ಮಾತನಾಡಿ ನಂದಿಕೂರ ಕ್ರಾಸ ಹತ್ತಿರ ಇರುವ ಇಟ್ಟಿಗೆ ಭಟ್ಟಿ ಹತ್ತಿರ ಬರಲು ತಿಳಿಸಿದರು. ನಾವು ಹೋಗಿ ನೋಡಲಾಗಿ ರಸ್ತೆಯ ಪಕ್ಕದ ತೆಗ್ಗಿನಲ್ಲಿ ಹುಲ್ಲಿನ ಮೇಲೆ ನನ್ನ ತಮ್ಮ ಶಂಕರನ ಕೊಲೆಯಾಗಿದ್ದು ಬೊರಲಾಗಿ ಬಿದಿದ್ದು ಅವನಿಗೆ ಬಲ ಕುತ್ತಿಗೆ ಹತ್ತಿರ ಮತ್ತು ಹೊಟ್ಟೆಗೆ ತಲವಾರದಿಂದ ಹೊಡೆದು ಭಾರಿ ರಕ್ತಗಾಯ ಗೊಳಿಸಿ ಕೊಲೆ ಮಾಡಿರುತ್ತಾರೆ. ನನ್ನ ತಮ್ಮನ ಕೊಲೆಯು ರಾತ್ರಿ ಸುಮಾರು 7 ಗಂಟೆಯಿಂದ 9 ಗಂಟೆಯ ಅವಧಿಯ ಮಧ್ಯದಲ್ಲಿ ನಡೆದಿರಬಹುದು. ನನ್ನ ತಮ್ಮನಾದ ಶಂಕರ ಕೊಲೆ ಮಾಡಿದ ನಂತರ ತಲವಾರನ್ನು ಅಲ್ಲೇ ಬಿಟ್ಟು ಅವನ ಮೊಟಾರ ಸೈಕಲ ನಂ: ಕೆಎ-32 ಇಬಿ-2342 ಕೂಡಾ ಸ್ಥಳದಲ್ಲಿ ಇರಲಿಲ್ಲ. ಸದರಿ ನನ್ನ ತಮ್ಮನಾದ ಶಂಕರ ಇತನಿಗೆ ನಮ್ಮ ತಂಗಿಯಾದ ರೂಪಾಳ ವಿಷಯದಲ್ಲಿ ಒಳಸಂಚು ರೂಪಿಸಿ ಕೊಲೆ ಮಾಡಿರುತ್ತಾರೆ. ನಮ್ಮ ತಮ್ಮನ ಕೊಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 136/2012 ಕಲಂ, 143, 147, 148, 302, 102 (ಬಿ) ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: