Police Bhavan Kalaburagi

Police Bhavan Kalaburagi

Tuesday, November 13, 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರಿ ಹಣಮಂತ ತಂದೆ ಯಲ್ಲಪ್ಪಾ ಯಾಳಗಿ ವ:35 ಜಾ:ಭೋವಿ ವಡ್ಡರ ಉ:ಖಣಿ ಕೆಲಸ ಸಾ:ಶೀಬರ ಕಟ್ಟಾ ಶಹಾಬಾದ ರವರು ನನ್ನ ಅಳಿಯ ನರೇಶ ತಂದೆ ಹುಲಗಪ್ಪಾ ವ:18 ಇತನ ಸಂಗಡ ತಿರುಪತಿ, ಭೀಮಣ್ಣಾ, ಹಳ್ಳೆಪ್ಪಾ ಇವರು ಪರ್ಶಿ ತುಂಬಲು ಲಾರಿ ನಂ.ಎಮ್‌ಹೆಚ್‌‌-09/ಎಲ್‌-8555 ನೇದ್ದರಲ್ಲಿ ದಿನಾಂಕ:12/11/2012 ರಂದು ಮುಂಜಾನೆ  ಲಾರಿಯ ಕ್ಯಾಬಿನ ಮೇಲೆ ಕುಳಿತುಕೊಂಡು ಶೀಬರ ಕಟ್ಟಾದಿಂದ ತರನಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು ಸದರಿ ಲಾರಿಯನ್ನು ಮೌಲಾಲಿ ತಂದೆ ಹಸನಸಾಬ ಇತನು ಚಲಾಯಿಸುತ್ತಿದ್ದನು.ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಳೆ ಶಹಾಬಾದದ ಫಕೀರಪ್ಪಾ ಹೊತಿನ ಮಡ್ಡಿ ರವರ ಮನೆಯ  ಎದರುಗಡೆ ರೋಡಿನ ಮೇಲೆ ಜಂಪಿನಲ್ಲಿ ಒಮ್ಮಲೆ ಬ್ರೇಕ ಹಾಕಿದ್ದರಿಂದ ಅಳಿಯ ನರೇಶ ಇತನು ಲಾರಿಯ ಕ್ಯಾಬಿನ ಮೇಲಿಂದ ಕೆಳಗೆ ಬಿದ್ದಿದ್ದರಿಂದ ಸದರಿಯವನಿಗೆ ಬಲಗಾಲ ತೊಡೆಗೆ ಒಳಪೆಟ್ಟಾಗಿರುತ್ತದೆ. ಮತ್ತು ಬಲಗೈಗೆ ಒಳಪೆಟ್ಟು  ಮತ್ತು ರಕ್ತಗಾಯವಾಗಿರುತ್ತದೆ. ಮತ್ತು ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ  ಉಳಿದವರಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲಾ.ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 148/2012 ಕಲಂ:279,337 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಡಾ. ಗೌಸುದ್ದಿನ ಆರೀಫ್ ಸಾ|| ಮನೆ ನಂ. 1-406 ಓನ್ ವೆ ಸ್ಟೇಷನ್ ರೋಡ ಸ್ಟೇಷನ್ ಬಜಾರ ಗುಲಬರ್ಗಾ ರವರು ನಾನು ದಿನಾಂಕ.05.11.2012 ರಂದು 3.00 ಗಂಟೆಯ ಸುಮಾರಿಗೆ ನಮ್ಮ ಆಸ್ಪತ್ರೆಯ ಮುಂದೆ ನನ್ನ ಮಾರುತಿ ಎ-ಸ್ಟಾರ್ ಕಾರ್ ನಂ. ಕೆಎ-32-ಎಮ್-7825 ನೆದ್ದು ನಿಲ್ಲುಗಡೆ ಮಾಡಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಉಪಚಾರ ಮಾಡಿ ನಂತರ 4.30 ಪಿ.ಎಂ ಗೆ ಹೊರಗಡೆ ಬಂದು ನೋಡಲು ನನ್ನ ಕಾರ್ ಇರಲಿಲ್ಲ ಇಲ್ಲಿಯ ವರೆಗೆ ಎಲ್ಲಾ ಕಡೆ ಹುಡುಕಾಡಿದರು ನನ್ನ ಕಾರ್ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ನನ್ನ ಕಾರ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಮಾರುತಿ ಎ-ಸ್ಟಾರ್ ಕಾರ್ ನಂ. ಕೆಎ-32-ಎಮ್-7825  ಮಾಡಲ್-2009 , ಚೆಸ್ಸಿ ನಂ.148129, ಅಂದಾಜು ಕಿಮತ್ತು . 2,50,000/- ರೂ ಇರುತ್ತದೆ. ಕಾರಣ ನನ್ನ ಆಸ್ಪತ್ರೆ ಮುಂದುಗಡೆ ನಿಲುಗಡೆ ಮಾಡಿದ್ದ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.138/2012 ಕಲಂ.138/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ವಿನಾಯಕ ತಂದೆ ತುಳಜಾರಾಮ  ನಾಯಿಂದ್ರಕರ ವಯ;31 ಸಾ; ಬಂಬೂಬಜಾರ ಹುಮನಾಬಾದ ಬೇಸ್ ಗುಲಬರ್ಗಾ ರವರು  ನಾನು ದಿನಾಂಕ. 09-11-2012 ರಂದು 9-30 ಪಿ.ಎಂ. ಗಂಟೆಯ ಸುಮಾರಿಗೆ ಇಂಡಸ್ಟ್ರೀಯಲ್ ಏರಿಯಾದಿಂದ ಮನೆಗೆ ಬರುವಾಗ ಹುಮನಾಬಾದ ರೋಡಿನ  ಟಿ.ವಿ. ಸ್ಟೇಶನ ಎದರುಗಡೆ ರೋಡಿನ ಮೇಲೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ವೇಗದಲ್ಲಿ ನಡೆಯಿಸಿಕೊಂಡು ಬಂದು ಒಬ್ಬ ಪಾದ ಚಾರಿಗೆ ಡಿಕ್ಕಿ ಹೊಡೆದು ಹೋಗಿದ್ದು ,ಆ ವ್ಯಕ್ತಿಯ ತಲೆಗೆ ಭಾರಿ ಪೆಟ್ಟಾಗಿ ಮೆದಳು ಹೊರ ಬಿದ್ದು ಭಾರಿ ರಕ್ತಸ್ರಾವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ  ಮೇಲಿಂದ ಠಾಣೆ ಗುನ್ನೆ ನಂ.362/12 ಕಲಂ.279,304(ಎ)ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ಸದರಿ ವ್ಯಕ್ತಿಯ ಚಹರೆ ಪಟ್ಟಿ ,ಅಪರಿಚಿತ ಗಂಡು ಮನುಷ್ಯ, ಎತ್ತರ 5 5 ತೆಳುವಾದ ಮೈಕಟ್ಟು, ಸಾದಾಗಪ್ಪು  ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಕೂದಲು, ಬಡಕಲು ಶರೀರ ಒಂದು ಬಿಳಿ ಪ್ಯಾಂಟು, ಒಂದು ಕಪ್ಪು ಪ್ಯಾಂಟ ಇರುತ್ತದೆ. ಸದರಿ ವ್ಯಕ್ತಿಯ ವಾರಸುದಾರರು ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ 08472263631,  ಅಥವಾ ಸಿಪಿಐ ಗ್ರಾಮೀಣ 08472263630 ಅಥವಾ ಕಂಟ್ರೋಲ್ ರೂಮ 08472263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

No comments: