ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ನಿಂಗಣ್ಣ ತಂದೆ ಮಲ್ಲಿಕಾರ್ಜುನ ಜಗತ, ಶಿಕ್ಷಕರು ಬಿದ್ದಾಪೂರ ಕಾಲನಿ ಗುಲಬರ್ಗಾ ರವರು ನಾವು ದಿನಾಂಕ:11/11/2012 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ ಸ್ವಂತ ಊರಾದ ಬಸವನ ಬಾಗೇವಾಡಿಗೆ ಹೋಗಿದ್ದು ಪಕ್ಕದ ಮನೆಯವರಿಗೆ ಮನೆಯನ್ನು ನೋಡಿಕೊಳ್ಳಲು ಹೇಳಿರುತ್ತೆವೆ.ದಿನಾಂಕ:13/11/2012 ರಂದು ಮಧ್ಯರಾತ್ರಿ 3 ಗಂಟೆಯಿಂದ ಬೆಳಿಗ್ಗೆ 5 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಮನೆಯಲ್ಲಿಟ್ಟಿದ್ದ 45000/- ಕಿಮ್ಮತ್ತನಿನ ಬಂಗಾರದ ಸಾಮಾನು, 12000/- ರೂ ಕಿಮ್ಮತ್ತಿನ ಬೆಳ್ಳಿ ಸಾಮಾನು ಹಾಗೂ 3 ಸೀರೆಗಳು 3000/- ರೂ ಕಿಮತ್ತಿನವುಗಳು ಯಾರು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 364/12 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಕರಣ ತಂದೆ ಭೀಮಶಾ ಗಾಯಕವಾಡ ಸಾ|| ಗಾಜೀಪೂರ ಗುಲಬರ್ಗಾ ಇತನು ನಾನು ದಿನಾಂಕ:12-11-2012 ರಂದು ರಾತ್ರಿ 9-30 ಗಂಟೆಗೆ ಮದ್ಯ ಸೇವನೆ ಮಾಡಲು ನರ್ತಕಿ ವೈನ್ಯ ಶಾಪಗೆ ಹೋಗಿ ಕೌಂಟರ ಹತ್ತಿರ ನಿಂತು ಮ್ಯಾನೇಜರ ನಾಗಭೂಷಣ ಇವರಿಗೆ ವ್ಯಾಟ-69 ಕೊಡು ಅಂತಾ ಕೇಳಿದೇನು. ಅಷ್ಟರಲ್ಲಿ ಕೆಲಸ ಮಾಡುವ ಒಬ್ಬ ವೇಟರ ಬಂದು ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದನು. ಆಗ ನಾನು ಸದರಿ ವೇಟರನಿಗೆ ಯಾಕಪ್ಪ ಸರಿಯಾಗಿ ಮಾತಾಡು ಅಂತಾ ಹೇಳಿದೇನು. ಆಗ ವೇಟರನು ಅವಾಚ್ಯ ಶಬ್ದಗಳಿಂದ ಬೈದನು. ಆಗ ನರ್ತಕಿ ಬಾರ ಮ್ಯಾನೇಜರ ನಾಗಭೂಷಣ ಇವರಿಗೆ ನಾನು ನಿಮ್ಮ ವೇಟರ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾನೆ ಅವನಿಗೆ ಹೇಳಲು ಬರುವದಿಲ್ಲ ಅಂತಾ ಕೇಳಿದಾಗ ಸದರಿ ಮ್ಯಾನೇಜರ ಕೌಂಟರದಿಂದ ಹೊರಗೆ ಬಂದು ಶೆಟರ ಹಾಕರಿ ಅಂತಾ ಎಲ್ಲಾ ವೇಟರಗಳಿಗೆ ಕರೆಯಿಸಿ ಬಾರಿನ ಶೆಟರ ಮುಚ್ಚಿ ಜಾತಿ ನಿಂದನೆ ಮಾಡಿ ನಮ್ಮ ವೇಟರಗಳ ಜೊತೆ ಜಗಳ ಮಾಡುತ್ತಿಯಾ ಅಂತಾ ಜಾತಿ ಎತ್ತಿ ಬೈದು, ಕೈಯಿಂದ ಬಾಯಿ ಮತ್ತು ಮೂಗಿನ ಮೇಲೆ ಹೊಡೆದು ತರಚಿದ ರಕ್ತಗಾಯ ಪಡಿಸಿದನು. ನಂತರ 7 ಜನ ವೇಟರಗಳು ಬಂದು ನನಗೆ ವೈನ್ಯ ಶಾಪಿನಲ್ಲಿ ಇದ್ದ ರಾಡುಗಳು ತೆಗೆದುಕೊಂಡು ನನ್ನ ಎಡಗೈ ರಟ್ಟೆಯ ಮೇಲೆ, ಭುಜದ ಮೇಲೆ, ಮೊಣಕೈಗೆ,ತಲೆಯ ಹಿಂಭಾಗದಲ್ಲಿ, ಮತ್ತು ಎಡಗೈ ಬಲ ಕೆಳಭಾಗದಲ್ಲಿ ಹೊಡೆದು ಒಳಗುಪ್ತ ಗಾಯ ಮತ್ತು ತರಚಿದ ರಕ್ತಗಾಯ ಪಡಿಸಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 116/2012 ಕಲಂ, 143, 147, 148, 323, 324, 504, 506 ಸಂಗಡ 149 ಐಪಿಸಿ ಮತ್ತು 3(1) (10) ಎಸ.ಸಿ / ಎಸಟಿ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗಿ ಕಾಣೆಯಾದ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಚಂದ್ರಶೇಖರ ತಂದೆ ಬಸಪ್ಪ ಅಲ್ಲೂರ ರವರು ನನ್ನ ಮಗಳಾದ ಕು. ಆಶಾರಾಣಿ ಇವಳು ಬಿ.ಹೆಚ್.ಎಮ್.ಎಸ್ ವಿದ್ಯಾರ್ಥಿನಿ ಗುಲಬರ್ಗಾದಲ್ಲಿದ್ದು, ಚಿತ್ತಾಪುರಕ್ಕೆ ಬಂದು ಹೋಗುತ್ತಿದ್ದಳು,ದಿನಾಂಕ:08/11/2012 ರಂದು ಕಾಲೇಜಿನಲ್ಲಿ ಕೆಲಸ ಇದೆ ನಾಳೆ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದಳು. ಅಂದು ನಾನೂ ಕೂಡಾ ಊರಲ್ಲಿ ಇರಲಿಲ್ಲ ಮರುದಿನ ಮಗಳು ಮನೆಗೆ ಬಾರದೇ ಇದ್ದಾಗ ಅವಳ ಮೊಬೈಲಿಗೆ ಸಂಪರ್ಕಿಸಲು ಮೊಬೈಲ ಸ್ವಿಚ್ ಆಫ್ ಆಗಿರುತ್ತದೆ. ನಾನು ಎಲ್ಲಾ ಕಡೆ ಹುಡುಕಾಡಿ ಅವಳ ಗೆಳತಿಯರ ಹತ್ತಿರ ಹಾಗು ಸಂಬಂದಿಕರ ಹತ್ತಿರ ಸಂಪರ್ಕಿಸಿದರು ಎಲ್ಲಿಯೂ ಸಿಗಲಿಲ್ಲಾ ಕಾರಣ ಕಾಣೆಯಾದ ನಮ್ಮ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಸದರಿಯವರ ಚಹರೆ ಪಟ್ಟಿ ಈ ರೀತಿಯಾಗಿರುತ್ತದೆ. ಹೆಸರು:ಕು. ಆಶಾರಾಣಿ ತಂದೆ ಚಂದ್ರಶೇಖರ ಅಲ್ಲೂರ ವ-25 ಉ-ವಿಧ್ಯಾರ್ಥಿನಿ ಸಾ~ಚಿತ್ತಾಪೂರ ಎತ್ತರ: 4’ 9’’ ದುಂಡು ಮುಖ, ದಪ್ಪ ಮೂಗು ಕೆಂಪು ಬಣ್ಣ, ಕರಿಯ ಬಣ್ಣದ ಕೂದಲು, ಮಾತನಾಡುವ ಭಾಷೆ:ಕನ್ನಡ ಮತ್ತು ಇಂಗ್ಲೀಷ ಪಿಂಕ್ ಬಣ್ಣದ ಚೂಡಿದಾರ ಧರಿಸಿರುತ್ತಾರೆ ಇವರುಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಠಾಣೆ ಫೋನ ನಂ: 08474-236123 ಮೊಬೈಲ ನಂ 9480803573 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಬಸ್ಸ ಕಂಡಕ್ಟರನ ಮೇಲೆ ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಮಕಸೂದ ಅಲಿ ತಂದೆ ಮಹ್ಮದ ಜಿಲಾನಿ ಉ|| ನಿರ್ವಾಹಕ 3ನೇ ಘಟಕ ಗುಲಬರ್ಗಾ, ರವರು ನಾನು ಮತ್ತು ಬಸ್ಸಿನ ಚಾಲಕ ಅಬ್ದುಲ್ ನಾಸೀರ ರವರು ದಿನಾಂಕ:13-11-2012 ರಂದು ಬೆಳಿಗ್ಗೆಯಿಂದ ಕೆ-32 ಎಫ್-1795 ನೃಪತುಂಗ ನಗರ ಸಾರಿಗೆ ಬಸ್ಸಿನಲ್ಲಿ ಗುಲಬರ್ಗಾ ನಗರದ ಖಾಜಾ ಬಂದೆನವಾಜ ದರ್ಗಾದಿಂದ ಮದಿನಾ ಕಾಲೋನಿ ವರೆಗೆ ಕರ್ತವ್ಯ ನಿರ್ವಹಿಸುತ್ತಿರುವಾಗ ಮಧ್ಯಾಹ್ನ 12-30 ಗಂಟೆಗೆ ಬಸ್ಸು ಕೆಬಿಎನ್ ದರ್ಗಾದಿಂದ ಬಸ್ಸು ಬಿಟ್ಟಿದ್ದು ನ್ಯಾಷನಲ್ ಕಾಲೇಜ ಎದುರುಗಡೆ ಅಲ್ಲಿ ಕೆಲವು ವಿದ್ಯಾರ್ಥಿಗಳು ಬಸ್ಸಿನಲ್ಲಿ ಹತ್ತಿದ್ದು ಅವರು ಬಸ್ಸಿನ ಬಾಗಿಲಿನಲ್ಲಿ ನಿಂತಿದ್ದಾಗ ಅವರಿಗೆ ನಿರ್ವಾಹಕ ಇತನು ಒಳಗಡೆ ಬನ್ನಿ ಅಂತಾ ಹೇಳಿದಾಗ ಆತನ ಜೊತೆಯಲ್ಲಿ ಬಾಯಿ ಮಾತಿನ ತಕರಾರು ಮಾಡುತ್ತಾ ಹೊರಟರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಸ್ಸು ಮದಿನಾ ಕಾಲೋನಿಯ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜು ಹತ್ತಿರ ಹೋದಂತೆ ಬಸ್ಸಿನಲ್ಲಿದ್ದ 7-8 ಜನ ಹುಡುಗರು ಒಟ್ಟಿಗೇ ಸೇರಿ ನನಗೆ ಬಸ್ಸಿನಿಂದ ಕೆಳಗೆ ದಬ್ಬಿಕೊಂಡು ಹೋಗಿ ಕೈಯಿಂದ ಹೊಡೆ ಬಡೆ ಮಾಡಿ ನೆಲಕ್ಕೆ ಹಾಕಿ ಕಾಲಿನಿಂದ ತುಳಿದಿದ್ದು ಅಲ್ಲದೆ ನನ್ನ ಜೇಬಿನಲ್ಲಿ ಇದ್ದ ಬಸ್ಸಿನ ಟಿಕೇಟ ದರದ ಹಣ 3318/-ರೂ ಮತ್ತು ಎರಡು ವೇ ಬಿಲ್ಲ ಬಿದ್ದು ಕಳೆದಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:82/2012 ಕಲಂ 143, 147, 341, 323, 353, 504 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment