Police Bhavan Kalaburagi

Police Bhavan Kalaburagi

Sunday, November 18, 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಜಗದೇವ ತಂದೆ ಸಿದ್ದಣ್ಣ ಹಳಕೆ ಸಾ: ಕರಹರಿ ತಾ: ಆಳಂದ ರವರು ದಿ:10-11-2012 ರಂದು ಸಾಯಂಕಾಲ 4-00 ಗಂಟೆಗೆ  ಹುಮನಾಬಾದ ರಿಂಗ ರೋಡ ಹತ್ತಿರವಿರುವ ವಿಜಯ ಆಟೋಮೊಬೈಲ್ಸ ಎದರುಗಡೆ ನನ್ನ ಹಿರೋ ಹೊಂಡಾ ಸ್ಟ್ಲೇಂಡರ್ ಪ್ಲಸ್ ದ್ವಿಚಕ್ರವಾಹನ ನಂ ಕೆಎ-32 ಎಕ್ಸ- 6364 ನೇದ್ದನ್ನು ನಿಲ್ಲಿಸಿ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು  4-30 ಪಿ.ಎಂಕ್ಕೆ ಹೊರಗಡೆ ಬಂದು ನೋಡಲಾಗಿ ನನ್ನ ದ್ವಿಚಕ್ರವಾಹನ ಇರಲಿಲ್ಲ ಸುತ್ತ ಮುತ್ತಲೂ ಹುಡಕಲಾಗಿ ಸಿಕ್ಕಿರುವುದಿಲ್ಲ.  ಸದರಿ ದ್ವಿ ಚಕ್ರವಾಹನದ ಅಕಿ: 30,000/- ರೂ ಇರುತ್ತದೆ.  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 373/12  ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ನರಸಯ್ಯಾ ತಂದೆ ಮುರಗಯ್ಯಾ ಕಲಾಲ ಸಾ:ಮಲ್ಲಿಕಾರ್ಜುನ ದೇವರ ಗುಡಿಯ ಹಿಂದುಗಡೆ ಖಾದ್ರಿ ಚೌಕ ಗುಲಬರ್ಗಾ ರವರು ನಮ್ಮ ಫೈನಾನ್ಸ ಮಿಟಿಂಗ ಇದ್ದ ಕಾರಣ ದಿನಾಂಕ 17/11/2012 ರಂದು ಎಲ್ಲಾ ಮೇಂಬರಗಳಿಗೆ ಫೈನಾನ್ಸದಲ್ಲಿ ಸಾಯಾಂಕಾಲ 7:00 ಗಂಟೆಯ ಸುಮಾರಿಗೆ ಮೀಟ್ಟಿಂಗ ಕರೆದಿದ್ದು ಮೀಟ್ಟಿಂಗ ಮುಗಿದ ನಂತರ ನಾನು ಮತ್ತು ನನ್ನ ಸಂಗಡ ಶಶಿಧರ ತಂದೆ ಶಾಂತಪ್ಪಾ ಕಟ್ಟಿಮನಿ,ಆನಂದ ತಂದೆ ಅಮರಯ್ಯಾ ಮಠ, ಧರ್ಮಯ್ಯಾ ತಂದೆ ರಾಮಯ್ಯಾ ಕಲಾಲ,ಕಿರಣಕುಮಾರ ತಂದೆ ಸುಭಾಷ ಖಿಂಡೇ,ಶಾಂತಕುಮಾರ @ ಶಾಂತು ತಂದೆ ಶಿವಲಿಂಗಪ್ಪಾ ವಾಡಿ,ಭರತ ತಂದೆ ಜೀವಾನಂದ ದೇವುರ,ಶರಣಪ್ಪಾ ತಂದೆ ಸಿದ್ದಣ್ಣಾ ಹಾವನೂರ,ಕೇವಲ ತಂದೆ ಜಗದೀಶ ಆದೋಂಲ,ಸಂಜೀವ ತಂದೆ ಗುರನಾಥ ಮದರಿ  ಎಲ್ಲರೂ ಕೂಡಿಕೊಂಡು ನಮ್ಮ ನಮ್ಮ ಮೋಟಾರ ಸೈಕಲಗಳ ಮೇಲೆ ರಾತ್ರಿ ಆಳಂದ ರೋಡಿಗೆ ಇರುವ ಕೇರಿ ಬೋಸಗಾ ಕ್ರಾಸ ದಾಟಿದ ನಂತರ ಇರುವ ದಾಬಾದಲ್ಲಿ ಎಲ್ಲರೂ ಹೋಗಿ ದಾಬಾದಲ್ಲಿ ಊಟ ಮಾಡಿಕೊಂಡು ತಮ್ಮ ತಮ್ಮ ಮೋಟಾರ ಸೈಕಲ ಮೇಲೆ ಮನೆ ಕಡೆಗೆ ಹೊರಟಿದ್ದು, ಕಿರಣ ಈತನು ತನ್ನ ಬಜಾಜ ಪಲ್ಸರ ಕೆಎ 32 ಡಬ್ಲ್ಯೂ 3555 ನೇದ್ದರ ಹಿಂದೆ ಧರ್ಮಯ್ಯ ಈತನಿಗೆ ಕೂಡಿಸಿಕೊಂಡು ಎಲ್ಲರಕ್ಕಿಂತ ಮುಂದೆ ಹೊರಟಿದ್ದು, ಅವರ ಹಿಂದೆ ಸ್ವಲ್ಪ ಅಂತರದ ಮೇಲೆ ನಾನು ಮತ್ತು ನನ್ನ ಗೆಳೆಯರು ತಮ್ಮ ಮೋಟಾರ ಸೈಕಲಗಳ ಮೇಲೆ   ಹಿಂದೆ ಹೊರಟಿದ್ದೇವು. ರಾತ್ರಿ 10-15 ಗಂಟೆ ಸುಮಾರಿಗೆ  ಕೆರೆ ಭೋಸಗಾ ಕ್ರಾಸ ದಾಟಿ  ಸಂತೋಷ ದಾಬಾದ ಸಮೀಪ ಹೊರಟಾಗ ಅವರ ಮುಂದೆ ಒಂದು ಯಾವುದೋ ವಾಹನ ಅತಿವೇಗವಾಗಿ ಹೋಗುತ್ತಿದ್ದು,  ರೋಡಿನ ಬಾಜು ತೆಗೆದುಕೊಳ್ಳದೇ ಮತ್ತು ನಿಲ್ಲಿಸುವ ಯಾವುದೇ ಮನ್ಸಚೂನೆ ನೀಡದೇ ಅಜಾಗೂರಕತೆ ಮತ್ತು ನಿಷ್ಕಾಳಿಜಿತನದಿಂದ ಒಮ್ಮಿಂದ ಒಮ್ಮೇಲೆ ವೇಗದಲ್ಲಿ ಬ್ರೇಕ ಹೊಡೆದು ಗಾಡಿ ನಿಲ್ಲಿಸುತ್ತಿದ್ದಾಗ ಹಿಂದೆ ಮೋಟಾರ ಸೈಕಲ ಮೇಲೆ ಹೊರಟಿದ್ದ  ಕಿರಣಕುಮಾರ ಇವನ ಮೋಟಾರ ಸೈಕಲವು  ಹಿಂದಿನ ಭಾಗಕ್ಕೆ ಡಿಕ್ಕಿ  ಹೊಡೆದು ಮೋಟಾರ ಸೈಕಲದೊಂದಿಗೆ ರೋಡಿಗೆ ಬಿದ್ದರು. ಸದರಿ ಯಾವುದೋ ವಾಹನ ಚಾಲಕ ನಿಲ್ಲಿಸದೇ ಹಾಗೇ  ಗುಲಬರ್ಗಾ ಕಡೆಗೆ ಹೋದನು. ನಾವು ಅಪಘಾತವಾದದ್ದನ್ನು ನೋಡಿ  ಕಿರಣಕುಮಾರ ಮತ್ತು ಧರ್ಮಯ್ಯ ಇವರಿಗೆ ನೋಡಲಾಗಿ ಕಿರಣಕುಮಾರ ಇವನಿಗೆ ಹಣೆಯ ಬಲಗಣ್ಣಿನ ಮೇಲೆ ಮತ್ತು ತಲೆ ಹಿಂದೆ ಭಾರಿ ರಕ್ತಗಾಯವಾಗಿ ರಕ್ತ ಬರುತ್ತಿದ್ದು, 108 ಗಾಡಿ ಪೋನ ಮಾಡಿದಾಗ  ಅವರು ಸರಿಯಾಗಿ ಮಾಹಿತಿ ಸ್ಪಂದಿಸದೇ ಇದುದ್ದರಿಂದ, ಅವರಿಬ್ಬರಿಗೆ ಭಾರಿ ರಕ್ತಗಾಯವಾಗಿದ್ದರಿಂದ ಮತ್ತು ನೋವಿನ ಭಾದೆಯಿಂದ ನರಳಾಡುತ್ತಿದ್ದರಿಂದ ಅವರಿಬ್ಬರಿಗೆ ಉಪಚಾರ ಕುರಿತು ಕಾಮರಡ್ಡಿ ಆಸ್ಪತ್ರೆ ಗುಲಬರ್ಗಾಕ್ಕೆ ರಾತ್ರಿ 10-45 ಗಂಟೆ ಸುಮಾರಿಗೆ ತೆಗೆದುಕೊಂಡು ಬಂದಾಗ , ಅಲ್ಲಿ  ವೈದ್ಯರು ನೋಡಿ ಎರಡು ಜನರು ಮೃತಪಟ್ಟಿರುತ್ತಾರೆಂದು ತಿಳಿಸಿದರು. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.374/12 ಕಲಂ 279, 304 (ಎ) ಐಪಿಸಿ ಸಂ. 187 ಎಂ.ವಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ. 

No comments: