ಅಪಘಾತ
ಪ್ರಕರಣ ಒಂದು ಸಾವು:
ಶಹಾಬಾದ
ನಗರ ಪೊಲೀಸ ಠಾಣೆ:ಶ್ರೀ ಸುಭಾಷ ತಂದೆ ದೇವಲಾ ರಾಠೋಡ ವ: 40 ಜಾ:ಲಂಬಾಣಿ ಉ: ಖಣಿಕೆಲಸ ಸಾ:ಲಕ್ಷ್ಮಿಪೂರವಾಡಿ
ತಾ:ಚಿತ್ತಾಫೂರ ರವರು ನಾನು ಮತ್ತು ಕಿಶನ
ಕೂಡಿಕೊಂಡು ದಿನಾಂಕ:03-11-2012 ರಂದು
ಖಣಿ ಕೆಲಸಕ್ಕೆ ಹೋಗಿದ್ದು, ಮಾಲಗತ್ತಿ
ಗ್ರಾಮದ ನಾಗರಾಜ ಹಡಪದ ರವರ ಹೊಟೇಲದಲ್ಲಿ ಚಹಾ ಕುಡಿದು ಎಡಗಡೆ ರಸ್ತೆಯ ಬದಿಗೆ ಹೋಗುತ್ತಿರುವಾಗ ಮುಂಜಾನೆ 9-30 ಗಂಟೆ
ಸುಮರಿಗೆ ವಾಡಿ
ಕಡೆಯಿಂದ ಒಂದು ಮಿನಿ ಗೂಡ್ಸ್ ಅಪೈ ಟ್ರಾಕ್ ನಂ: ಕೆಎ- 32 ಬಿ- 2727 ನೇದ್ದರ ಚಾಲಕನಾದ ಮಹೇಶ ಇತನು ತನ್ನ ವಾಹನವನ್ನು ಅತೀವೇಗ
ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಕಿಶನ ಇತನಿಗೆ ಡಿಕ್ಕಿ ಹೊಡೆದರಿಂದ ಕಿಶನ ಇತನು
ಕೆಳಗೆ ಬಿದ್ದನ್ನು. ಅದರಿಂದ ಅವನಿಗೆ ಎದೆಗೆ, ಎಡ
ಮತ್ತು ಬಲಗೈಗೆ ಬಾರಿ ಒಳಪೆಟ್ರಾಗಿ ರಕ್ತಗಾವ ವಾಗಿದ್ದು ಪ್ರಜ್ಞೆ ತಪ್ಪಿ ಬಿದ್ದಾಗ ನಾನು ಮತ್ತು
ಅಲ್ಲಿಯ ಜನರು ಕೂಡಿ ಕೊಂಡು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ರಾವೂರ ಕ್ಕೆ ತೆಗೆದುಕೊಂಡು ಹೋಗಿ ಸೇರಿಕೆ
ಮಾಡಿದೇವು. ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ. ಚಾಲಕ ಮಹೇಶ ಇತನ ಮೇಲೆ
ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 139/2012 ಕಲಂ:279 304 [ಎ] ಐಪಿಸಿ
ಸಂ: 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ಕುಡಕಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಅಂದರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ
ಬಂದ ಮೆರೆಗೆ ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆರವರು ಮತ್ತು ಸಿಬ್ಬಂದಿಯವರಾದ ಹಜರತ
ಅಲಿ, ಭೀಮಾಶಂಕರ, ಭೀಮಾಶಂಕರ ಶಿವಶರಣ ರವರುಗಳೆಲ್ಲರೂ ಕೂಡಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಶ್ರೀಕಾಂತ
ತಂದೆ ಅಪ್ಪಾಸಾಬ ಪಾಟೀಲ ವ|| 42 ವರ್ಷ, ಉ|| ಒಕ್ಕಲುತನ, ಜಾ|| ಕುರುಬರು, ಸಾ|| ಕುಡಕಿ
ಮತ್ತು ಪರಶುರಾಮ ತಂದೆ ಹವಳಪ್ಪ ಕಾಲಳ್ಳಿ ವ||
48 ವರ್ಷ, ಜಾ|| ಹರಿಜನ, ಉ|| ಕೂಲಿಕೆಲಸ, ಸಾ|| ಕುಡಕಿ
ಗ್ರಾಮ, ಓಡಿ ಹೋದ ಇಬ್ಬರಾದ ರಾಜು ತಂದೆ ಕೃಷ್ಣಾ
ಹೋಳಕುಂದಿ ವ|| 40 ವರ್ಷ, ಜಾ|| ಕುರುಬರು, ಉ|| ಒಕ್ಕಲುತನ, ಸಾ|| ಕುಡಕಿ, ಪಾಂಡು
ತಂದೆ ಜಟ್ಟೆಪ್ಪ ಮೋರ್ಖಂಡಿ ವ|| 55 ವರ್ಷ, ಜಾ|| ಕುರುಬರು, ಉ|| ಕೂಲಿಕೆಲಸ, ಸಾ|| ಕುಡಕಿ
ಗ್ರಾಮ ಅಂತ ಹೇಳಿದರು. ಹೀಗೆ 4 ಜನರು ಇಸ್ಪೀಟ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 560/-
ರೂಪಾಯಿಗಳು ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:94/2012 ಕಲಂ
87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಕಳ್ಳತನ
ಪ್ರಕರಣ:
ನಿಂಬರ್ಗಾ
ಪೊಲೀಸ್ ಠಾಣೆ: ಶ್ರೀ, ಮಲ್ಲಿಕಾರ್ಜುನ ತಂದೆ ಶಿವಶರಣಪ್ಪಾ ಕಲಬುರ್ಗಿ ಸಾ||
ಕಾವೇರಿ ನಗರ ಗುಲಬರ್ಗಾ ರವರು ನಾನು REVAN
BACK SECURETY OF INDIA LIMITED BANGLORE ಗುಲಬರ್ಗಾದಲ್ಲಿ ಪೆಟ್ರೊಲಿಂಗ ಸುಪರ ವೈಸರ ಅಂತ ಕೆಲಸ ಮಾಡುತ್ತಿದ್ದು., ದಿನಾಂಕ
28/10/2012 ರಂದು ಮುಂಜಾನೆ 5-45 ಗಂಟೆಗೆ ಗುಲಬರ್ಗಾ ನಗರದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿ
ನಿರತರಾಗಿದ್ದಾಗ ಭೂಸನೂರ ಟಾವರಿನ ತಾಂತ್ರಿಕ ನಿರ್ವಾಹಕರಾದ ಮಲ್ಲಿನಾಥ ತಂದೆ ಶ್ರೀಮಂತ ಕಲಶೇಟ್ಟಿ
ಸಾ||ಮಾಡಿಯಾಳ ಗ್ರಾಮ ಇವರು ಫೊನ ಮಾಡಿ ಏರಟೇಲ ಟಾವರಿನ 20 ಬ್ಯಾಟರಿಗಳು ಅ.ಕಿ 20,000/-
ರೂಪಾಯಿ ನೇದ್ದವುಗಳನ್ನು ದಿನಾಂಕ 28/10/2012 ರ 02-00 ಗಂಟೆಯಿಂದ 04-00 ಗಂಟೆ ಮಧ್ಯದ
ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ್ದರಿಂದ ನಾನು
ಪರಿಶೀಲನೆ ಖಚಿತ ಪಡಿಸಿಕೊಂಡ ನಂತರ ಇಂದು ತಡವಾಗಿ
ಠಾಣೆ ಬಂದು ದೂರು ಸಲ್ಲಿಸುತ್ತಿದ್ದೆನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ: 95/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ರಟಕಲ ಪೊಲೀಸ ಠಾಣೆ: ಶ್ರೀಮತಿ
ಬಸ್ಸಮ್ಮಾ ಗಂಡ ಭೀಮರಯ ಜಮಾದಾರ ಸಾ||ಕೊಡ್ಲಿ ರವರು ನನ್ನ ಸೊಸೆಯೊಂದಿಗೆ ಸೂರ್ಯಕಾಂತ ತಂದೆ ರಾಯಪ್ಪಾ ಪೂಜಾರಿ ಇತನು ಅನೈತಿಕ ಸಂಬಂಧ ಹೊಂದಿದ್ದು ಈಗ 7 ತಿಂಗಳ ಹಿಂದೆ ಸೊಸೆಗೆ ಅಪಹರಿಸಿಕೊಂಡು
ಹೋಗಿರುತ್ತಾನೆ. ಈಗ 6-7 ದಿವಸಗಳ ಹಿಂದೆ ಸೂರ್ಯಕಾಂತ ಹಾಗು ನನ್ನ
ಸೊಸೆ ವಾಪಸ ಕೊಡ್ಲಿಗೆ ಬಂದಿದ್ದು. ಈ ಕುರಿತು ಪಂಚಾಯತಿ ಕೂಡ ಮಾಡಿದ್ದು ಇರುತ್ತದೆ ಆದರೂ ಕೂಡ
ಮತ್ತೆ ದಿನಾಂಕ:02-11-2012 ರಂದು ನನ್ನ ಮಗನಿಗೆ ಪಂಚಾಯತಿ ಮಾಡೋಣ ಬಾ ಅಂತಾ ಸೂರ್ಯಕಾಂತ ಇತನ ಮನೆಗೆ ಕರೆದುಕೊಂಡು ಹೋಗಿ ಸೂರ್ಯಕಾಂತ ಸಂಗಡ 4 ಜನರು ನನ್ನ ಮಗನಿಗೆ ಕ್ರಿಮಿನಾಶಕ ಔಷಧ ಕುಡಿಸಿ ಕೊಲೆ ಮಾಡಿರುತ್ತಾರೆ.
ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:
51/2012 ಕಲಂ, 143, 147, 148, 341, 302 ಸಮಗಡ 149 ಐಪಿಸಿ ಮತ್ತು 3(1) (10) ಎಸಸಿ/ಎಸಟಿ ಪಿಎ
1989 ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ವಿದ್ಯಾವತಿ ಗಂಡ ಶಾಂತಪ್ಪ ಸಾ: ಕೆರೆಬೋಸಗಾ ತಾ||ಜಿ|| ಗುಲಬರ್ಗಾರವರು ನಾನು ದಿನಾಂಕ:-3/11/2012 ರಂದು ಮುಂಜಾನೆ 7-00 ಗಂಟೆಗೆ ಹೊಸ ಮನೆ ಕಟ್ಟುವ ಕುರಿತು ಮನೆಯ ಪಾಯವನ್ನು
ಜೆಸಿಬಿಯಿಂದ ಅಗೆಸುತ್ತಿರುವಾಗ ಭಾರತೀಬಾಯಿ
ಗಂಡ ಅಮೃತ ವಠಾರ, ರೇಣುಕಾ ಗಂಡ ಸುನೀಲ , ಸುನೀಲ ತಂದೆ ಅಮೃತ ವಠಾರ ಸಾ: ಎಲ್ಲರೂ
ಕೆರೆಬೋಸಗಾ ರವರು ನಮ್ಮ
ಜಾಗದಲ್ಲಿ ಏಕೆ
ಪಾಯ ಕೆದರುತ್ತಿದ್ದಿ ಅಂತ ಅವ್ಯಾಚ್ಛವಾಗಿ ಬೈದು ಕಲ್ಲನ್ನು ತೆಗೆದುಕೊಂಡು ಸುನೀಲ
ತಲೆಗೆ ಹೊಡೆದು ರಕ್ತಗಾಯ ಮಾಡಿ ಹಿಡಿದು ಎಳೆದು ಹೊಡೆ ಬಡೆ ಮಾಡಿರುತ್ತಾರೆ
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 353/12 ಕಲಂ 341,
323 324 504 ಸಂಗಡ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment