ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಚಂದ್ರಕಾಂತ ತಂದೆ ಕಲ್ಯಾಣರಾವ ಬಿರಾದಾರ ಸಾ||ರಾಜೀವ ಗಾಂಧಿ ನಗರ ಪೀಲ್ಟ್‌ರ ಬೆಡ್ ಗುಲಬರ್ಗಾರವರು ನಮ್ಮ ತಂದೆಯವರಾದ ಶ್ರೀ ಕಲ್ಯಾಣರಾವ ತಂದೆ ಚಂದ್ರಾಶ್ಯಾ ಬಿರಾದಾರ ರವರು ದಿನಾಂಕ:05/11/2012 ರಂದು ಸಂಗೋಳಗಿ ಗ್ರಾಮದಲ್ಲಿ ಸಂಬಂಧಿಕರ ಜವಳ ಕಾರ್ಯಕ್ರಮಕ್ಕೆ ಹೋಗಿ ಮರಳಿ ಗುಲಬರ್ಗಾಕ್ಕೆ ಟಿವಿಎಸ್ ಮೋಪೈಡ ನಂಬರ ಕೆಎ;32 ವ್ಹಿ;1447 ನೇದ್ದರ ಮೇಲೆ ಕೆರೆಬೋಸಗಾ ಕ್ರಾಸದಲ್ಲಿ ನಿಂತು ಮರಳಿ ನನ್ನ ಗಾಡಿಯ ಹತ್ತಿರ ಬರುವಾಗ ಮೋಟಾರ ಸೈಕಲ ನಂಬರ ಕೆಎ;32 /7415 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಲ್ಯಾಣರಾವ ಇವರಿಗೆ ಡಿಕ್ಕಿ ಹೊಡೆದು ಅವರು ಬಿದ್ದು ಅವರಿಗೂ ಗಾಯಗಳು ಆಗಿರುತ್ತವೆ. ನಂತರ ಅವರು ಅಲ್ಲಿಂದ ತಮ್ಮಮೋಟಾರ ಸೈಕಲ್ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂಬರ 354/12 ಕಲಂ 279 338 ಐಪಿಸಿ ಸಂ/187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಹೊನ್ನಪ್ಪ ತಂದೆ ರುಕ್ಕಪ್ಪ ದಿವಂಟಗಿ ಸಾ: ಬೀಮ್ಮಳ್ಳಿ ತಾ|| ಜಿ|| ಗುಲಬರ್ಗಾ ರವರು ದಿನಾಂಕ:04/11/2012 ರಂದು 10-00 ಗಂಟೆಗೆ ಹೊಲಕ್ಕೆ ಹೋಗಿ ನೋಡಲಾಗಿ ನಮ್ಮ ಹೊಲ ಸರ್ವೇ ನಂ:144 ನೇದ್ದರಲ್ಲಿ 32 ಎಕರೆ 1 ಗುಂಟೆ ಹೊಲದಲ್ಲಿ ಸರಕಾರದವರು 10 ಎಕರೆ 20 ಗುಂಟೆ ಜಮೀನು ಸ್ವಾಧೀನ ಮಾಡಿಕೊಂಡಿದ್ದು ಈ ಬಗ್ಗೆ ಕೋರ್ಟನಲ್ಲಿ ಕೇಸು ನಡೆದಿರುತ್ತದೆ. ಉಳಿದ 21 ಎಕರೆಯಲ್ಲಿ 3 ಜನ ಅಣ್ಣ ತಮ್ಮಂದಿರು ಪಾಲನ್ನು ಮಾಡಿ ಸಾಗುವಳಿ ಮಾಡುತ್ತಿದ್ದು . ನನ್ನ ಅಣ್ಣನ ಮಕ್ಕಳು ಹಾಗೂ ಅವನ ಪತ್ನಿ ಈಗ 3-4 ದಿವಸಗಳ ಹಿಂದೆ ಹೊಲದ ಬಾಂದರಿ ಕಲ್ಲು ಕಿತ್ತಿ ಹಾಕಿ ಹೊಲದಲ್ಲಿಯ ತೋಗರಿ ಬೆಳೆಯನ್ನು ಅಂದಾಜು 5000/- ರೂ. ಹಾಳು ಮಾಡಿರುತ್ತಾರೆ. ನಮ್ಮ ಅಣ್ಣನ ಮಗ ಮಲ್ಲಪ್ಪ ಅವನ ಹೆಂಡತಿ ಹಾಗೂ ಶಿವಶರಣಪ್ಪ ಜಮಾದಾರ ರೋಜಾ ಠಾಣೆ ಇವರ ಮಗ ಅನಿಲ ಬಂದು ಒಡೆದು ಹಾಕಿರುತ್ತಾರೆ. ನಾನು ಮನೆಗೆ ಬಂದು ಮಲ್ಲಪ್ಪ, ದಂಡಪ್ಪ, ರುಕ್ಕಪ್ಪ, ಮಹಾದೇವ ಇವರಿಗೆ ಕೇಳಿದಾಗ ನಾವೇ ಕಿತ್ತಿ ಹಾಕಿರುತ್ತೆವೆ ಅಂತಾ ಅವ್ಯಾಚ್ಛವಾಗಿ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:355/2012 ಕಲಂ 143 147 447 427 504 506 109 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment