ದರೋಡೆ
ಪ್ರಕರಣ:
ಶಹಾಬಾದ
ನಗರ ಪೊಲೀಸ ಠಾಣೆ:ಶ್ರೀ ಶರಣಬಸಪ್ಪಾ
ತಂದೆ ಅಪ್ಪಾರಾವ ಶೇರಿಕರ ಸಾ:ಲಕ್ಷ್ಮೀಗಂಜ ಶಹಾಬಾದ ರವರು ನಾನು ಮತ್ತು ಶಿವಕುಮಾರ ತಂದೆ ಬಾಬುರಾವ
ಕೊರವಾರ ಕೂಡಿಕೊಂಡು ದಿನಾಂಕ:27/11/2012 ರಂದು ಮುಂಜಾನೆ ನನ್ನ ಮೋಟಾರ ಸೈಕಲ ಟಿವಿಎಸ್ ಎಕ್ಸಸ
ನಂ.ಕೆಎ-32 ಡಬ್ಲೂ-4897 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿ ಮರಳಿ ಶಹಾಬಾದ ಕಡೆಗೆ ಮರತೂರ
ಮಾರ್ಗವಾಗಿ ಮರತೂರ ಗ್ರಾಮದ ಹತ್ತಿರ ರಾತ್ರಿ ಅಂದಾಜು 9.30 ಪಿಎಂ ಸುಮಾರಿಗೆ ಬರುತ್ತಿರುವಾಗ
ಹಿಂದುಗಡೆಯಿಂದ ಮೂರು ಜನರು ಮೋಟಾರ ಸೈಕಲ ಮೇಲೆ ಬಂದು ನಮಗೆ ಸೈಡು ಹೊಡೆದು ಮುಂದೆ ಹೋಗಿ
ನಿಲ್ಲಿಸಿ,ಕಣ್ಣಿಗೆ ಕಾರಪುಡಿ ಎರಚಿ ಮಚ್ಚಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿ
ನನ್ನಲ್ಲಿದ್ದ ನಗದು ಹಣ 10,000/-ರೂ ಹಾಗೂ ಒಂದು ಸ್ಯಾಮಸಂಗ ಕಂಪನಿಯ ಮೊಬೈಲ ಅ.ಕಿ.7000/-ರೂ ಹೀಗೆ ಒಟ್ಟು 17,000/-ರೂ
ಕಿಮ್ಮತ್ತಿನೇದ್ದವುಗಳನ್ನು ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ: 156/2012 ಕಲಂ, 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ
ಪ್ರಕರಣ:
ಬ್ರಹ್ಮಪೂರ
ಪೊಲೀಸ ಠಾಣೆ:ಶ್ರೀ. ರಜನಿಕಾಂತ ತಂದೆ ಕಂಠೆಪ್ಪಾ ಸಾ||
ಕಪನೂರ ತಾ||ಜಿ|| ಗುಲಬರ್ಗಾ ರವರು ನಾನು ದಿನಾಂಕ:19/11/2012 ರಂದು 14-30 ಗಂಟೆಗೆ ಸರಾಫ ಬಜಾರ ಮೈಲಾಪೂರ ಬಂಗಾರದ ಅಂಗಡಿ ಹತ್ತಿರ ಹೀರೋ ಹೊಂಡಾ ಸ್ಪೇಲೆಂಡರ್
ಪ್ಲಸ್ ಸಿಲ್ವರ್ ಬಣ್ಣದ ಮೋಟರ ಸೈಕಲ ನಂ:ಕೆಎ 32 ಎಕ್ಸ್ 1119 ಅ||ಕಿ|| 40,000/- ನೇದ್ದನ್ನು ನಿಲ್ಲಿಸಿ ಮಾರ್ಕೆಟ ಮಾಡಲು ಹೋಗಿ, ಮರಳಿ ಬರುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ್
ಕಳ್ಳತನ ಮಾಡಿಕೊಂಡು ಹೋಗಿದ್ದು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ. ಕಾರಣ ಯಾರೋ
ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ:124/2012 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment