Police Bhavan Kalaburagi

Police Bhavan Kalaburagi

Friday, November 23, 2012

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಾಚರಣೆ, ಶಂಕರ ವಡ್ಡರ ಕೊಲೆ ಮಾಡಿದ 6 ಜನ ಆರೋಪಿಗಳ  ಬಂದನ,
 ದಿನಾಂಕ 10/11/2012 ರಂದು ಸಾಯಂಕಾಲ 7-00 ಗಂಟೆಯಿಂದ ರಾತ್ರಿ 9-00 ಗಂಟೆಯ ಮದ್ಯದ ಅವಧಿಯಲ್ಲಿ ಫರಹತಾಬಾದ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಸಿರನೂರ ಗ್ರಾಮದ ಶಂಕರ ತಂದೆ ಗಿಡ್ಡೇಪ್ಪ ವಡ್ಡರ ನನ್ನು ನಂದಿಕೂರ ಕ್ರಾಸ ಬಳಿ ಕೊಲೆ ಮಾಡಿದ್ದು, ಈ ಸಂಬಂಧ ಫರಹತಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಪ್ರಕರಣವನ್ನು ಭೇದಿಸಿ ಆರೋಪಿತರನ್ನು ದಸ್ತಗಿರಿ ಮಾಡಲು, ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್  ಜಿಲ್ಲಾ ಪೊಲೀಸ್ ಅಧೀಕ್ಷಕರವರು,ಶ್ರೀ ಅಸ್ಲಂ ಭಾಷ ಪ್ರಭಾರಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾರವರು ಹಾಗೂ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಮ್.ಬಿ ನಗರ ಮತ್ತು ಸಿಬ್ಬಂದಿಯವರಾದ ಶ್ರೀ ದೇವಿಂದ್ರಪ್ಪ, ಪ್ರಭಾಕರ, ಬಲರಾಮ, ಶಂಕರ, ಆನಂದ ಸುಬ್ಬು ನಾಯಕ, ವಿಜಯಕುಮಾರ, ವೇದರತ್ನಂ,  ಅರ್ಜುನ, ಶ್ರೀನಿವಾಸರೆಡ್ಡಿ, ಗಂಗಾಧರ, ಜಮೀಲ, ಸಿದ್ರಾಮಯ್ಯ ಸ್ವಾಮಿ ರವರನ್ನು ಒಳಗೊಂಡಂತೆ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಈ ತನಿಖಾ ತಂಡವು ಶ್ರೀ ಕಾಶೀನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮತ್ತು ಶ್ರೀ ಎ.ಡಿ.ಬಸಣ್ಣನವರ ಡಿ.ಎಸ.ಪಿ (ಬಿ) ಉಪ-ವಿಭಾಗ , ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ.ಪಿ (ಗ್ರಾಮಾಂತರ) ಉಪ-ವಿಭಾಗ ರವರು ಮಾರ್ಗದರ್ಶನದಲ್ಲಿ ದಿನಾಂಕ:23/11/2012 ರಂದು ಹೈದ್ರಾಬಾದ ಮತ್ತು ಗುಲಬರ್ಗಾ ನಗರದಲ್ಲಿ ವಿವಿಧ ಕಡೆ ದಾಳಿ ಮಾಡಿ,1) ಶೇಟ್ಟಪ್ಪ ತಂದೆ ರಾಮಯ್ಯ ಮೇಳಕುಂದಿ ವಃ 47 ವರ್ಷ ಜಾಃ ವಡ್ಡರ ಉಃ ಗುತ್ತೆದಾರ ಸಾ||ಸಿರನೂರ ತಾ||ಜಿ ಗುಲಬರ್ಗಾ ,2) ಯಲ್ಲಪ್ಪ ತಂದೆ ಶೇಟ್ಟೇಪ್ಪ ಮೇಳಕುಂದಿ ವಃ 25 ವರ್ಷ ಜಾಃ ವಡ್ಡರ ಉಃ ಒಕ್ಕಲುತನ ಸಾ|| ಸಿರನೂರ ತಾ||ಜಿ ಗುಲಬರ್ಗಾ ,3) ವಿನೋದ ತಂದೆ ವಿಠ್ಠಲ ಸಿಂಗೆ ವಯಃ 26 ವರ್ಷ ಜಾತಿಃ ಹರಿಜನ ಉಃ ಫೈನಾನ್ಸ ಕೆಲಸ ಸಾಃ ಸುಲ್ತಾನಪೂರ ಜಿಃ ಗುಲಬರ್ಗಾ,4) ಕಳ್ಳೊಳಿ ತಂದೆ ದುರ್ಗಪ್ಪ ಮೇಳಕುಂದಿ ವಃ 30 ವರ್ಷ ಜಾಃ ವಡ್ಡರ ಉಃ ಒಕ್ಕಲುತನ ಸಾ||ಸಿರನೂರ ತಾ||ಜಿ ಗುಲಬರ್ಗಾ,5) ಯಲ್ಲಪ್ಪ ತಂದೆ ದುರ್ಗಪ್ಪ ಮೇಳಕುಂದಿ ವಃ 26 ವರ್ಷ ಜಾಃ ವಡ್ಡರ ಉಃ ಒಕ್ಕಲುತನ ಸಾ||ಸಿರನೂರ ತಾ||ಜಿ ||ಗುಲಬರ್ಗಾ,6) ಶಂಕರ ತಂದೆ ಈರಪ್ಪಾ @ ಕಾಳಪ್ಫಾ ನಿಂಗನಕಲ್ ವಯ|| 25 ವರ್ಷ ಉ|| ಒಕ್ಕುಲತನ ವಡ್ಡರ ಸಾ|| ಸಿರನೂರ. ಈ  ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಶಂಕರ ವಡ್ಡರನನ್ನು ಅದೇ ಗ್ರಾಮದ ಮತ್ತು ಸಂಬಂಧಿಕರಾಗಬೇಕಾದ ಶೇಟ್ಟೇಪ್ಪ ಮತ್ತು ಯಲ್ಲಪ್ಪರವರು ಗುಲಬರ್ಗಾ ನಗರದ ವಿನೋದ ತಂದೆ ವಿಠಲ ಸಿಂಗೆ ವಃ 26 ವರ್ಷ ಸಾ|| ಸುಲ್ತಾನಪುರ ಇವನಿಗೆ ಶಂಕರ ವಡ್ಡರ ಇತನ ಕೊಲೆ ಮಾಡಲು 3.50,000/- ರೂ ಸುಫಾರಿ ನೀಡಿದ್ದು ವಿನೋದ ಹಾಗೂ ಇತರರು ಸೇರಿ ಶಂಕರ ವಡ್ಡರ ಕೊಲೆಯನ್ನು ಮಾಡಿರುತ್ತಾರೆ. ಈ ತನಿಖಾ ತಂಡದ ಕಾರ್ಯಾಚರಣೆಯನ್ನು ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್  ಜಿಲ್ಲಾ ಪೊಲಿಸ ಅಧೀಕ್ಷಕ ಗುಲಬರ್ಗಾ ರವರು ಶ್ಲಾಘಿಸಿರುತ್ತಾರೆ.ಹಾಗು ಈ ತನಿಖಾ ತಂಡಕ್ಕೆ 10,000/- ರೂಪಾಯಿಗಳ ಬಹುಮಾನ ಘೋಷಿಸಿರುತ್ತಾರೆ.
ವರದಕ್ಷಿಣೆ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಶ್ರೀಮತಿ ಸವಿತಾ ಗಂಡ ವಿನೋದ ಧರ್ಮಕಾರೆ ಸಾ:ಶಿವಾಜಿ ನಗರ ಗುಲಬರ್ಗಾರವರು ನನ್ನ ಗಂಡನಾದ ವಿನೋದ ಎಸ್.ಡಿ.ಎ ಆಳಂದ ತಹಸೀಲ್ ಆಫೀಸನಲ್ಲಿ ಸರಕಾರಿ ಹುದ್ದೆಯಲ್ಲಿದ್ದು (ವಾಸಸ್ಥಳ ಗಂಜ ಏರಿಯಾ ಶಿವಾಜಿ ನಗರ ಗುಲಬರ್ಗಾ) ನಮ್ಮಿಬ್ಬರ ವಿವಾಹವನ್ನು ದಿನಾಂಕ:12/05/2009 ರಂದು  ಸಂಪ್ರದಾಯದಂತೆ ಮದುವೆಯಾಗಿದ್ದು. ಮದುವೆ ಕಾಲಕ್ಕೆ ವರದಕ್ಷಿಣೆ ಅಂತಾ 3 ಲಕ್ಷ ರೂಪಾಯಿ 6 ತೊಲೆ ಬಂಗಾರ ನೀಡಿದರು ಮದುವೆಯಾದ ಮೊದಲನೆಯ ರಾತ್ರಿ ನನ್ನ ಗಂಡ 50 ಸಾವಿರ ರೂಪಾಯಿ ತರಲು ಹೇಳಿದರು. ನಂತರ ನಮ್ಮ ಅತ್ತೆ ಗೌರಬಾಯಿ, ಬಾವ ಸತೀಶ, ನೆಗೆಣಿ ಲತಾ, ಗಂಡ ವಿನೋದ ಎಲ್ಲರು ಸೇರಿ ನನಗೆ ಹೊಡೆದು ಹಣ ತರುವವರೆಗೆ ನಮ್ಮ ಮನೆಯಲ್ಲಿ ಕಾಲಿಡಬೇಡ  ಎಂದು ಮನೆಯಿಂದ ಹೊರ ಹಾಕಿದರು. ನಾನು ಹಾಗು ನನ್ನ ತವರು ಮನೆಯಿಂದ ಗಂಡ ಹಾಗೂ ಅತ್ತೆಯ ಕೈಯಲ್ಲಿ ಕೊಟ್ಟೆದ್ದು,ಸ್ವಲ್ಪ ದಿನ ಸರಿಯಾಗಿದ್ದು,ನಂತರ ನನಗೆ ನನ್ನ ಭಾವ ಕಾಲಿನಿಂದ ಒದ್ದು ನನ್ನ ಅತ್ತೆ ಕೂದಲು ಹಿಡಿದು ಬೆಂಕಿಯ ಮುಂದೆ ಸುಡಲು ಪ್ರಯತ್ನಿಸಿದರು ಮನೆಯಿಂದ ಹೋರ ಹಾಕಿ ಬೇರೆ ಮನೆ ಮಾಡಿ ಇದ್ದಾಗ ನನ್ನ ಅಕ್ಕ ಬೇಟಿಯಾಗಲು ಬಂದಾಗ ಅವಳಿಗೆ ಹೋಡೆದು ನಂತರ ನನ್ನ ತವರು ಮನೆಗೆ ನುಗ್ಗಿ ದಿನಾಂಕ:24.04.2010 ರಂದು ನನ್ನ ಗಂಡನ ಮನೆಯವರಾದ ಗಂಡ ವಿನೋಧ,ಅತ್ತೆ ಗೌರಬಾಯಿ,ಭಾವ ಸತೀಶ,ನೆಗೆಣಿ ಲತಾ, ಮಾವ ಸುಧಾಕರ,ಈ ಸಮಯದಲ್ಲಿ ನನಗೆ ಎಳೆದುಕೊಂಡು ಹೋದರು ಗರ್ಬಿಣಿಯಾದ ನನಗೆ ಗರ್ಭಪಾತ ಮಾಡಲು ಗಂಡ ಹಾಗೂ ಗಂಡನ ಮನೆಯವರು ಪ್ರಯತ್ನಿಸಿದರು. ನಾನು ತವರು ಮನೆಗೆ ಬಂದು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ನನಗೆ 1 1/2 ವರ್ಷದ ಮಗುವಿದೆ. 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಗಂಡ ಹಾಗೂ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದಾರೆ.ಈ ಹಿಂದೆ ತಮ್ಮ ಕಚೇರಿಗೆ ಬಂದಾಗ ಅಧಿಕಾರಿಗಳು ವಿನೋದ ಇತನಿಗೆ ಕರೆಯಿಸಿ ಎಚ್ಚರಿಕೆ ನೀಡಿ ಮರಳಿಸಿದ್ದಾರೆ. ನನಗೆ ಆರು ತಿಂಗಳಿಂದ ತವರು ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾನೆ. ಕರೆದುಕೊಂಡು ಹೇಳಿದರೆ ಅವನು ಕರೆದುಕೊಂಡು ಹೋಗಲು ಒಪ್ಪುತ್ತಿಲ್ಲಾ ಹಣ ತೆಗೆದುಕೊಂಡರೆ ಮಾತ್ರ ಮನೆಯಲ್ಲಿ ಕರೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:80/2012 ಕಲಂ 498(ಎ).323.504.506. ಸಂಗಡ 34 ಐ.ಪಿ.ಸಿ ಮತ್ತು 3 &4 ಡಿ.ಪಿ.ಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: