Police Bhavan Kalaburagi

Police Bhavan Kalaburagi

Thursday, November 29, 2012

GULBARGA DISTRICT


ಅಫಜಲಪೂರ ಪೊಲೀಸ್ ರ ಕಾರ್ಯಚರಣೆ.
ಒಂದು ತಿಂಗಳ ಹಿಂದೆ ಕೊಲೆಯಾದ ಅಪರಿಚಿತ ಹೆಣ್ಣುಮಗಳ ಕೊಲೆ
ಪ್ರಕರಣದ ಆರೋಪಿಗಳ ಬಂದನ.
               ದಿನಾಂಕ:-26-10-2012 ರಂದು ಶ್ರೀ ರಾಜಶೇಖರ ತಂದೆ ಬೀರಣ್ಣಾ ಬಂಡಗಾರ ಸಾ|| ಉಡಚಣ ಹಟ್ಟಿ ಇವರು ದಿನಾಂಕ 26-10-2012 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ನಮ್ಮ ಗ್ರಾಮದಲ್ಲಿ ಜನರು ಮಾತಾಡುವುದನ್ನು ಕೇಳಿ ಹಿರಿಯಾಳ ರೋಡಿಗೆ ಹಿರಿಗೆಪ್ಪ ತಂದೆ ಕನ್ನಪ್ಪ ಪೂಜಾರಿ ಇತನ ಹೊಲದ ಹತ್ತಿರ ನೀರು ಹರಿಯುವ ಪೈಪಿನ ಪಕ್ಕದಲ್ಲಿ ಒಬ್ಬಳು ಹೆಣ್ಣು ಮಗಳ ಶವ ಬಿದ್ದಿದೆ ಅವಳ ಮೈ ಮೇಲೆ ಬಾಳೆಯ ಎಲೆಗಳು ಹಾಕಿರುತ್ತಾರೆ ಎಂದು  ತಿಳಿದು ಬಂದ ಮೇರೆಗೆ ನಾನು ಸ್ಥಳಕ್ಕೆ ಬಂದು ನೋಡಲಾಗಿ ರೋಡಿನ ಪಕ್ಕದಲ್ಲಿ ತಗ್ಗು ಬಿದ್ದಿರುವ ಸ್ಥಳದಲ್ಲಿ ಸಿಮೆಂಟ ಫೈಪಿನ ಪಕ್ಕಕ್ಕೆ ಒಬ್ಬಳು ಹೆಣ್ಣು ಮಗಳ ಶವ ಬೋರಲಾಗಿ ಬಿದ್ದಿದ್ದು ಶವದ ಮೇಲೆ ಬಾಳೆ ಗಿಡದ ಎಲೆಗಳು ಹಾಕಿ ಮುಚ್ಚಿದ್ದು ಇರುತ್ತದೆ. ಮೃತಳು ಎಲ್ಲಿಯವಳು ಏನು, ಆಕೆಯ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಅವಳನ್ನು ಯಾರೋ ದುಷ್ಕರ್ಮಿಗಳು ಯಾವುದೋ ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿ ಯಾವುದೋ ವಾಹನದಲ್ಲಿ ಶವ ಹಾಕಿಕೊಂಡು ಬಂದು ಸದರಿ ಸ್ಥಳದಲ್ಲಿ  ಹಾಕಿ ಶವದ ಮೇಲೆ ಬಾಳೆ ಗಿಡದ ಎಲೆಗಳು ಹಾಕಿರುತ್ತಾರೆ. ಸದರಿಯವಳ ಕೊಲೆ ದಿನಾಂಕ 25-10-2012 ರಂದು ಮಾಡಿರುವದಾಗಿ ಕಂಡು ಬಂದಿದ್ದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಅಫಜಲಪೂರರವರು ಕೇಸಿನ ತನಿಖೆ ಕೈಕೊಂಡಿರುತ್ತಾರೆ. 
          ನಂತರ ಗುಲಬರ್ಗಾ ಜಿಲ್ಲೆಯ ಮಾನ್ಯ ಪ್ರಭಾರಿ ಎಸ್.ಪಿ.ಸಾಹೇಬರವರಾದ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಆಳಂದ ಶ್ರೀ ಎಸ್.ಬಿ.ಸಂಬಾ ರವರ ಮಾರ್ಗದರ್ಶನದಲ್ಲಿ ಒಂದು ತಂಡವನ್ನು ರಚಿಸಿಕೊಂಡು ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ, ಪಿ.ಎಸ್.ಐ.ಮಂಜುನಾಥ ಮತ್ತು ಸಿಬ್ಬಂದಿಯವರಾದ ಚಂದ್ರಕಾಂತ,ರಾಮಚಂದ್ರ, ಪಿಸಿ. ರಾಜಶೇಖರ, ತುಳಜಪ್ಪ, ಚಂದ್ರಕಾಂತ, ಶಿವಾನಂದ, ಅರವಿಂದ, ವಾಹನ ಚಾಲಕ ಭೀಮಾಶಂಕರರವರನ್ನಳಗೊಂಡ ತಂಡ ದಿನಾಂಕ:-27-11-2012 ರಂದು ವಿಜಯಕುಮಾರ ತಂದೆ ದೇವಿಂದ್ರ ಡೊಂಗ್ರಾಜೆ, ರಮೇಶ ತಂದೆ ಹಣಮಂತ ಡೊಂಗ್ರಾಜೆ ಇಬ್ಬರು ಸಾ|| ಸಲಗರ (ಎಮ್) ಇವರನ್ನು ದುಧನಿ ರೈಲ್ವೆ ನಿಲ್ದಾಣದ ಹತ್ತಿರ ದಸ್ತಗಿರಿ ಮಾಡಿರುತ್ತಾರೆ. ಈ ಕೊಲೆಯ ಉದ್ದೇಶ ಮೃತ ಸುರೇಖಾ ಗಂಡ ಸಿದ್ದರಾಮ ಹೊರಪೇಟ ಇವಳ ಮೈ ಮೇಲಿನ ಬಂಗಾರದ ಒಡವೆಗಳನ್ನು ದೋಚಿಕೊಳ್ಳುವ ಉದ್ದೇಶದಿಂದ ಅವಳನ್ನು ದಿ;25-10-2012 ರಂದು ಅಫಜಲಪೂರದಲ್ಲಿನ ಪೈನಾನ್ಸಗಳಲ್ಲಿ ಮಾರಾಟಕ್ಕಿರುವ ಕ್ರೋಷರ ವಾಹನಗಳನ್ನು ನೋಡಿಕೊಂಡು ಬರೋಣ ಅಂತ ಆಸೆ ಹುಟ್ಟಿಸಿ ಅವಳನ್ನು ಆರೋಪಿ ವಿಜಯಕುಮಾರನ ಪಿಕಪ್ ನಂ;ಎಮ್.ಹೆಚ್.13 ಆರ್.9635 ನೇದ್ದರಲ್ಲಿ ಅಕ್ಕಲಕೋಟದಿಂದ ಅಫಜಲಪೂರಕ್ಕೆ ಕರೆದುಕೊಂಡು ಬಂದು ಮರಳಿ ತಮ್ಮ ಊರಿಗೆ ಹೋಗುವಾಗ ರಾತ್ರಿ ದುಧನಿ ಗ್ರಾಮ ದಾಟಿದ ನಂತರ ಶಾಂಭವಿ ಹೊಟೇಲ ಮುಂದುಗಡೆಯಿಂದ  ರುದ್ದೆವಾಡಿ ಗ್ರಾಮದ ಕಡೆಗೆ ಹೋಗುವ ರೋಡಿಗೆ ಕರೆದುಕೊಂಡು ಹೋಗಿ ರೈಲ್ವೆ ಓವರ್ ಬ್ರಿಡ್ಜ ಸಮೀಪದಲ್ಲಿ ಪಿಕಪ್ ವಾಹನ ನಿಲ್ಲಿಸಿ ಡಿಸೆಲ್ ಆಗಿದೆ ಅಂತ ಸುಳ್ಳು ಹೇಳಿದಾಗ ಮೃತಳು ರಾತ್ರಿ ಹೊತ್ತಿನಲ್ಲಿ ಮೈಮೇಲಿದ್ದ ಬಂಗಾರದ ಆಭರಣಗಳನ್ನು ಯಾರಾದರು ಹೊಡೆದು ಕಸಿದುಕೊಳ್ಳಬಹುದು ಅಂತ ಅವುಗಳನ್ನು ತೆಗೆದು ತನ್ನಲ್ಲಿರುವ ಸಣ್ಣ ಚೀಲದಲ್ಲಿ ಹಾಕಿಕೊಂಡು ಪಿಕಪ್ ವಾಹನದ ಹಿಂದುಗಡೆ ರೋಡಿನ ಮೇಲೆ ಕುಳಿತಿದ್ದಾಗ ವಿಜಯಕುಮಾರ ಮತ್ತು ರಮೇಶ ಇಬ್ಬರು ಕತ್ತಲಲ್ಲಿ ಅವಳ ಹಿಂದಿನಿಂದ ಹೋಗಿ ಮೃತಳಿಗೆ ತಲವಾರದಿಂದ ಹೊಡೆದು ಕೊಲೆ ಮಾಡಿ ಶವವನ್ನು ತಮ್ಮ ಪಿಕಪ್ ವಾಹನದಲ್ಲಿ ಹಾಕಿಕೊಂಡು ಉಡಚಣ ಹಟ್ಟಿಯಿಂದ ಹಿರಿಯಾಳ ಗ್ರಾಮದ ಕಡೆಗೆ ಹೋಗುವ ರೋಡಿನ ಪಕ್ಕದಲ್ಲಿರುವ ತೆಗ್ಗಿನಲ್ಲಿ ಹಾಕಿ ಮೃತಳ ಮೈಮೇಲಿನ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗಿರುವದಾಗಿ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿತರಿಂದ ಮೃತಳ ಮೈಮೇಲಿನ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಆರೋಪಿತರು ಮೃತಳ ಶವ ಸಾಗಿಸಲು ಉಪಯೋಗಿಸಿದ ಪಿಕಪ್ ವಾಹನ ನಂ;ಎಮ್.ಹೆಚ್.13 ಆರ್. 9635 ನೇದ್ದು  ಒಟ್ಟು ಅ||ಕಿ|| 2,55,000=00 ರೂ ನೇದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.        ಈ ಪತ್ತೆ ಕಾರ್ಯಕ್ಕೆ ಮಾನ್ಯ ಪ್ರಭಾರಿ ಎಸ್.ಪಿ.ಸಾಹೇಬರಾದ ಶ್ರೀ ಕಾಶಿನಾಥ ತಳಕೇರಿ ರವರು ಅಫಜಲಪೂರ ವೃತ್ತ ಮತ್ತು ಠಾಣೆಯ ಪೊಲೀಸರ ಪತ್ತೆ ಕಾರ್ಯವನ್ನು ಪ್ರಶಂಶಿಸಿರುತ್ತಾರೆ. 

No comments: