Police Bhavan Kalaburagi

Police Bhavan Kalaburagi

Saturday, December 22, 2012

GULBARGA DISTRICT PRESS NOTES


ಪತ್ರಿಕಾ ಪ್ರಕಟಣೆ
: ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಾಚರಣೆ:
ಇಬ್ಬರು ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆದಾರರ ಬಂಧನ ಸುಮಾರು ರೂ. 25,55,000/-  ಮೌಲ್ಯದ ಅಕ್ಕಿ ಹಾಗೂ ಸಾಗಾಣಿಕೆ ಮಾಡುತ್ತಿದ್ದ ರೂ. 12,00,000/- ಲಕ್ಷ್ಮ ಮೌಲ್ಯದ ಲಾರಿ ಜಪ್ತಿ

  ಗುರಮಿಟಕಲ್ ಪಟ್ಟಣದಿಂದ ಮುಂಬೈ ವಾಸಿಗೆ ಗುಲಬರ್ಗಾ ಮಾರ್ಗವಾಗಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಮಾನ್ಯ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಲಿಖಿತ ರೂಪದಲ್ಲಿ ಮಾಹಿತಿಯನ್ನು ತಿಳಿಸಿ ದಾಳಿಗೆ ಸಹಕರಿಸಲು ಕೋರಿ, ಈ ತನಿಖಾ ತಂಡದಲ್ಲಿ ಡಿಸಿಐಬಿ ಘಟಕ ಹಾಗು ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾನ್ಯ ಶ್ರೀ ಕಾಶೀನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಶ್ರೀ ಎ.ಡಿ. ಬಸಣ್ಣನವರ್ ಡಿ.ಎಸ್.ಪಿ. ಬಿ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಹುಮ್ನಾಬಾದ ರಿಂಗ್ ರೋಡ್ ಹತ್ತಿರ ಲಾರಿ ನಂ: ಕೆ.ಎ. 56 0062 ನೇದ್ದನ್ನು ಹಿಡಿದು ಲಾರಿಯಲ್ಲಿದ್ದ ಆರೋಪಿತರಾದ 1) ಚಾಲಕ ಜಯತೀರ್ಥ ರಂಜೋಳ ವಯ: 25 ವರ್ಷ ಸಾ: ಹುಡಗಿ ತಾ:ಹುಮ್ನಾಬಾದ, 2) ಲಾರಿ ಕ್ಲೀನರ್ ಸೂರ್ಯಕಾಂತ ಬೋರಾಳ ವಯ:21 ವರ್ಷ ಸಾ: ಹಳ್ಳಿಖೇಡ ತಾ:ಹುಮ್ನಾಬಾದ ಇವರನ್ನು ಹಿಡಿದು ಲಾರಿಯಲ್ಲಿದ್ದಂತಹ ಅಕ್ರಮವಾಗಿ ಸಾಗುತ್ತಿದ್ದ ಪಡಿತರ ಅಕ್ಕಿ ಸುಮಾರು 680 ಚೀಲಗಳಲ್ಲಿ ಸುಮಾರು 17 ಟನ್ ಅದರ ಅಂದಾಜು ಕಿಮ್ಮತ್ತು ರೂ. 3,35,750/- ಹಾಗೂ ಲಾರಿ ಅಂದಾಜು ಕಿಮ್ಮತ್ತು 12 ಲಕ್ಷ ರೂಪಾಯಿ ಹೀಗೆ ಒಟ್ಟು ಸುಮಾರು ರೂ. 17,35,750/- ಮಾಲನ್ನು ಜಪ್ತಿಪಡಿಸಿಕೊಂಡು, ಲಾರಿ ಚಾಲಕ ಜಯತೀರ್ಥ ಈತನ ಹೇಳಿಕೆಯಂತೆ ಗುರಮಿಟಕಲ್ ಪಟ್ಟಣದ ಲಕ್ಷ್ಮಿ ತಮ್ಮಪ್ಪ ಸ್ವಾಮಿ ಟ್ರೇಡಿಂಗ್  ಇದರ ಮಾಲಿಕರಾದ ನರೇಂದ್ರ ರಾಠೋಡ ಇವರ ಗೋದಾಮಿಗೆ ಹೋಗಿ ಅಲ್ಲಿ ಅಪಾರ ಪ್ರಮಾಣದ ಸರಕಾರಿ ಸರಬರಾಜಿನಿಂದ ಬಂದಂತಹ ಅಕ್ಕಿಯನ್ನು ಖಾಸಗಿ ಟ್ರೇಡಿಂಗ್ ಗಳಾದ ಡೀರ್ ಹಾಗೂ ಅನ್ನಪೂರ್ಣ ಕಂಪನಿಯ ಬ್ಯಾಗ್ ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದನ್ನು ಗಮನಿಸಿ, ಸದರ್ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಅಕ್ಕಿ ಹಾಗೂ ಆರೋಪಿತರನ್ನು ದಸ್ತಗಿರಿ ಮಾಡುತ್ತಿದ್ದಾಗ ನರೇಂದ್ರ ರಾಠೋಡ್ ಹಾಗೂ ಸಾಯಬಣ್ಣಾ ವಕೀಲ ಇವರ ಪ್ರಚೋದನೆಯ ಮೇರೆಗೆ 100-150 ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿ ಬಂಧಿತ ಆರೋಪಿತರಾದ ರಾಜು ರಾಠೋಡ ಹಾಗೂ ಚನ್ನಬಸಯ್ಯಾ ಇವರುಗಳನ್ನು ಪೊಲೀಸರ ವಶದಿಂದ ಬಲಪ್ರದರ್ಶಿಸಿ ಬಿಡಿಸಿಕೊಂಡು ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿಯನ್ನು ಜಪ್ತಿಪಡಿಸಿಕೊಳ್ಳಲು ಅಡ್ಡಿಯುಂಟು ಮಾಡಿರುತ್ತಾರೆ. ಈ ಕುರಿತು ಗುರಮಿಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪುನಃ ಹೆಚ್ಚಿನ ಸಿಬ್ಬಂದಿಯೊಂದಿಗೆ ನರೇಂದ್ರ ರಾಠೋಡ್‌ರವರಿಗೆ ಸೇರಿದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಂತಹ ಮಯೂರ ಬ್ರಾಂಡ್ ಬೆಸ್ಟ್ ಕ್ವಾಲಿಟಿ ಹಾಗೂ ಡೀರ್ ಬ್ರಾಂಡ್ ಬೆಸ್ಟ ಕ್ವಾಲಿಟಿಯ ಸುಮಾರು 74 ಟನ್ ಪಡಿತರ ಅಕ್ಕಿಯನ್ನು ಜಪ್ತಿಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ರೂ. 22,20,000/- ಹೀಗೆ ಒಟ್ಟು ಸುಮಾರು ರೂ. 25,55,000/- ಮೌಲ್ಯದ ಪಡಿತರ ಅಕ್ಕಿ ಹಾಗೂ ರೂ. 12 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಹಾಗೂ ಈ ಮೊದಲು ಅನಧೀಕೃತವಾಗಿ ಸಾಗಿಸಿದ ಪಡಿತರ ಅಕ್ಕಿಯ ದಾಖಲಾತಿಗಳನ್ನು ಹಾಗೂ ಚೀಲ ಹೊಲಿಯುವ ಮಶೀನ್ ಮತ್ತು ತೂಕದ ಯಂತ್ರವನ್ನು ಕೂಡಾ ಜಪ್ತಿಪಡಿಸಿಕೊಳ್ಳಲಾಗಿದೆ.   
          ನರೇಂದ್ರ ರಾಠೋಡ್ ಈತನು ಸರ್ಕಾರಿ ಪಡಿತರ ಅಕ್ಕಿಯನ್ನು ಗುರಮಿಟಕಲ್ ಪಟ್ಟಣದ ತನ್ನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಪಡಿತರ ಅಕ್ಕಿ ಅಂತಾ ಗುರುತು ಸಿಗದ ಹಾಗೆ ಮಯೂರಾ ಬ್ರಾಂಡ್, ಅನ್ನಪೂರ್ಣ ಬ್ರಾಂಡ್, ಡೀರ್ ಬ್ರಾಂಡ್‌ಗಳ 25 ಹಾಗೂ 50 ಕೆ.ಜಿ. ಬ್ಯಾಗ್‌ಗಳಲ್ಲಿ ತುಂಬಿಸಿ ಅಕ್ರಮವಾಗಿ ಮುಂಬೈ ಹಾಗೂ ಇತರೆ ಕಡೆಗಳಲ್ಲಿ ಸಾಗಿಸಿರುವುದು ತನಿಖೆಯ ಕಾಲಕ್ಕೆ ವಶಪಡಿಸಿಕೊಂಡ ದಾಖಲಾತಿಗಳಿಂದ ತಿಳಿದು ಬಂದಿರುತ್ತದೆ.  
          ಈ ತನಿಖಾ ತಂಡದ ಪತ್ತೇಕಾರ್ಯವನ್ನು ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.  

ಗುಲಬರ್ಗಾ  ಜಿಲ್ಲಾ ಪೊಲೀಸ್ ರ ಕಾರ್ಯಚರಣೆ
2 ಜನ ಸರಗಳ್ಳರ ಬಂಧನ, 1.65 ಲಕ್ಷ ಮೌಲ್ಯದ ಬಂಗಾರದ ಸರ ಮತ್ತು ಮೋಟಾರ ಸೈಕಲ್ ಜಪ್ತಿ.
 ಗುಲಬರ್ಗಾ ನಗರದಲ್ಲಿ ಇತ್ತಿಚಿಗೆ ಮನೆಗಳ್ಳತನ ಹಾಗು ಮಹಿಳೆಯರ ಸರಗಳ್ಳತನದಿಂದ ಗುಲಬರ್ಗಾ ನಾಗರೀಕರಲ್ಲಿ ಆತಂಕ ಉಂಟಾಗಿದ್ದರಿಂದ ಈ ವಿಷಯದ ಕುರಿತು ಬೆಳಗಾಂ ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚೆಯಾಗಿತ್ತು, ಈ ಕುರಿತು ಮಾನ್ಯ ಶ್ರೀ ಎ.ಎಮ್. ಪ್ರಸಾದ ಐ.ಪಿ.ಎಸ್,. ಹೆಚ್ಚುವರಿ ಪೊಲೀಸ್ ಮಹಾ ನಿರ್ದೆಶಕರು (ಅಪರಾಧ) ಬೆಂಗಳೂರು ರವರ ನಿರ್ದೇಶನದ ಮೇರೆಗೆ ಮಾನ್ಯ ಈಶಾನ್ಯ ವಲಯ ಗುಲಬರ್ಗಾ ಶ್ರೀ ಮಹಮದ ವಜೀರ ಅಹಮದ ಐ.ಪಿ.ಎಸ್., ಪೊಲೀಸ್ ಮಹಾ ನಿರೀಕ್ಷಕರು, (ಈವ) ಗುಲಬರ್ಗಾ ಇವರು ಒಂದು ವಿಶೇಷ ತಂಡವನ್ನು ರಚಿಸಿ ಅವರ ಮಾರ್ಗದರ್ಶನದಲ್ಲಿ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ನೇತ್ರತ್ವದಲ್ಲಿ ಸಿಪಿಐ ಶ್ರೀ ಎಸ್. ಅಸ್ಲಾಂ ಬಾಷ ಪ್ರಭಾರಿ ಸಿ.ಪಿ.ಐ ಎಂ.ಬಿ ನಗರ ವೃತ್ತ,  ಶ್ರೀಮಂತ ಇಲ್ಲಾಳ ಪಿ.ಎಸ್.ಐ, ತಿಮ್ಮಣ್ಣ ಎಸ್ ಚಾಮನೂರ ಪಿ.ಎಸ್.ಐ (ಅ.ವಿ) ಹಾಗು ಸಿಬ್ಬಂದಿಯವರಾದ ಪ್ರಭಾಕರ್, ವೇದರತ್ನಂ, ಅಶೋಕ, ಮಾಶಕ, ಮಲ್ಲಿಕಾರ್ಜುನ, ಅಣ್ಣಪ್ಪಾ, ಗಂಗಾಧರ, ಶ್ರೀನಿವಾಸರೆಡ್ಡಿ, ಮಸೂದ ಅಹ್ಮದ, ಸಿದ್ರಾಮಯ್ಯ ಸ್ವಾಮಿ ರವರುಗಳು ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ಆರೋಪಿಗಳಾದ ರಾಜಕುಮಾರ ತಂದೆ ಹಣಮಂತ ಗಡದಳ್ಳಿ ವಯಃ25 ವರ್ಷ, ಭೀಮಾಶಂಕರ ತಂದೆ ಮರೆಪ್ಪಾ ಹಿಟ್ಟಲಗೇರ್ ವಯಃ24 ವರ್ಷ ಇಬ್ಬರು ವಾಸಃಭೂಪಾಲ್ ತೆಗನೂರು ತಾಃಜಿಃ ಗುಲಬರ್ಗಾ, ಈ ಆರೋಪಿಗಳು  3  ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರಿಂದ ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ  3 ಬಂಗಾರದ ಚೈನ್  36 ಗ್ರಾಂ ಅಃಕಿಃ 1,15.000/-  ರೂ. ಹಾಗು ಸರಗಳ್ಳತನ ಮಾಡಲು ಬಳಸಿದ ಮೋಟಾರ ಸೈಕಲ್ ಅಃಕಿಃ  50,000/- ರೂ. ಹೀಗೆ ಒಟ್ಟು  1, 65, 000/- ರೂ. ಬೆಲೆ ಬಾಳುವುದನ್ನು ಜಪ್ತಿ ಮಾಡಿರುತ್ತಾರೆ.ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ. 

No comments: