ಕಾರು ಕಳ್ಳತನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ. ಮಲ್ಲಪ್ಪಾ ತಂದೆ
ವೀರಸಂಗಪ್ಪಾ ಭೀಮನಳ್ಳಿ ಸಾ|| ರಘೋಜಿ ಲೇಔಟ ಹುಮಾನಾಬಾದ ರೋಡ ರೇವಣಸಿದ್ದೇಶ್ವರ ಕಾಲೂನಿ ಗುಲಬರ್ಗಾ ರವರು ನಾನು ದಿನಾಂಕ. 27-11-2012 ರಂದು ರಾತ್ರಿ 10-30 ಗಂಟೆಯ
ಸುಮಾರಿಗೆ ಕೆಲಸದಿಂದ ಮರಳಿ ಮನೆಗೆ ಬಂದಾಗ ಮನೆಯ ಎದರುಗಡೆ ರೋಡ ಮತ್ತು ನಾಲಿ ಕೆಲಸ ನಡೆದಿದ್ದ
ಪ್ರಯುಕ್ತ ನನ್ನ ಟಾಟಾ ಇಂಡಿಕಾ
ಡಿ.ಎಲ್.ಎಸ್. ಕಾರ ನಂ.ಕೆ.ಎ.32 ಎಂ. 5797 ನೇದ್ದು,
ಆಕಾಶ ನೀಲಿ, ಅಕಿ. 1,75,000/- ರೂ
ಬೆಲೆ ಬಾಳುವದು ಮನೆಯ ಎದರುಗಡೆ ಇರುವ ರೋಡ ಬದಿಗೆ
ಲಾಕ್ ಮಾಡಿ ಮನೆಗೆ ಹೋಗಿದ್ದು, ದಿನಾಂಕ:28-11-2012
ರಂದು ಬೆಳಗ್ಗೆ 7-00 ಗಂಟೆಗೆ ಎದ್ದು ನೋಡಲಾಗಿ ಮನೆ ಎದರುಗಡೆ ರೋಡಿನ ಬದಿಗೆ ನಿಲ್ಲಿಸಿದ ನನ್ನ ಕಾರು ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನನ್ನ ಗೆಳೆಯರು ಕೂಡಿಕೊಂಡು ಎಲ್ಲಾ ಕಡೆಗೂ ಹುಡುಕಾಡಲಾಗಿ ಸಿಕ್ಕಿರುವದಿಲ್ಲ ಕಾರಣ ಕಾರು ಪತ್ತೆ ಮಾಡಿಕೊಡಬೇಕಾಗಿ ಅಂತಾ
ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:399/2012 ಕಲಂ. 379
ಐಪಿಸಿ ನೆದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾರು ಕಳ್ಳತನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಶಿವಶರಣಪ್ಪ ತಂದೆ
ಮ್ಲಲೇಶಪ್ಪ ಹೊನಗುಂಟಾ ಸಾ: ಶಹಾಬಜಾರ ಗುಲ್ಬರ್ಗಾರವರು ನಾನು ದಿನಾಂಕ:30/11/2012 ರಂದು ಮುಂಜಾನೆ ನನ್ನ ಮೋ ಸೈಕಲನಂ ಕೆಎ 32 ಎಕ್ಸ್ 6744
ನೇದ್ದರ ಮೇಲೆ ಶಿವಾಜಿ ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುವ ದೇವಕಮ್ಮ ಇವಳನ್ನು
ಕೂಡಿಸಿಕೊಂಡು ಆರ್‌ಎಸ್ ಕಾಲೋನಿಯಿಂದ ಮುಖ್ಯ
ರಸ್ತೆಗೆ ಬಂದು, ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಕ್ರೋಜರ ಜೀಪ ಕೆಎ 32 ಎ- 5405 ನೇದ್ದರ ಚಾಲಕ ತನ್ನ ವಾಹನವನ್ನು
ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೋಡಿದಿದ್ದರಿಂದ ಕೆಳಗೆ ಬಿದ್ದು ನನಗೆ
ರಕ್ತಗಾಯವಾಗಿದ್ದು ಮತ್ತು ಹಿಂದೆ ಕುಳಿತ ದೇವಕಮ್ಮ ಇವಳಿಗೆ ತಲೆಗೆ ಹಿಂದುಗಡೆ ಗಾಯವಾಗಿದ್ದು
ಮತ್ತು ಅಲಲ್ಲಿ ತರಚಿದ ಗಾಯವಾಗಿರುತ್ತವೆ ಜೀಪ ಚಾಲಕ ತನ್ನ ವಾಹನವನ್ನುಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ
ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 398/2012 ಕಲಂ, 279, 338 ಐಪಿಸಿ
ಸಂಗಡ 187 ಐ.,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಲಕ್ಷತನದಿಂದ ಬಿ.ಎಸ್.ಎನ್.ಎಲ್. ಕೇಬಲ್ ಗೆ ಕಟ್ಟ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ
ಗುಂಡೆರಾವ ತಂದೆ ನರಹರರಾವ ಕುಲಕರ್ಣಿ ಉ|| ಬಿ.ಎಸ್.ಎನ್.ಎಲ್ ಉಪ-ವಿಭಾಗದ
ಅಧಿಕಾರಿ ಆಳಂದ, ಸಾ||ವಿನಾಯಕ ಕಾಲೋನಿ ಕರುಣೆಶ್ವರ ನಗರ ಜೇವರ್ಗಿ ರೋಡ ಗುಲಬರ್ಗಾ ಹಾ|| ವ|| ಬಿ.ಎಸ್.ಎನ್.ಎಲ್ ವಸತಿ ಗೃಹ
ಆಳಂದ ರವರು ಆಳಂದ ತಾಲೂಕಿನ ಎಲ್ಲಾ ಬಿ.ಎಸ್.ಎನ್.ಎಲ್ ಎಕ್ಸೆಂಜಗಳು ತಮ್ಮ ಉಪ ವಿಭಾಗದ
ವ್ಯಾಪ್ತಿಗೆ ಬರುತ್ತಿದ್ದು, ದಿನಾಂಕ:28-11-2012 ರಂದು ನಾನು ಆಫೀಸ ಕೆಲಸದ ನಿಮಿತ್ಯವಾಗಿ ಕಡಗಂಚಿಗೆ ಹೋದಾಗ ತಮ್ಮ ಮೋಬೈಲ ನಂ.9449799967 ಕ್ಕೆ ಎಸ್.ಎಮ.ಎಸ್ ಮೂಲಕ ಮಾಡಿಯಾಳ, ಅರ್ಜುಣಗಿ, ನಿಂಬಾಳ
ಮತ್ತು ಮಾದನ ಹಿಪ್ಪರಗಾ ಟವರ್ ಫೇಲಾಗಿದ್ದ ಬಗ್ಗೆ ಮೆಸೇಜ ಬಂದಿದ್ದು, ನಾನು ಆ ಏರಿಯಾದ ಲೈನಮ್ಯಾನ
ಲಕ್ಷ್ಮಣ ತಂದೆ ಶ್ರೀಪತಿ ಛತ್ರಿ ಸಾ|| ಹಿತ್ತಲ ಶಿರೂರ ಇವರಿಗೆ ಫೋನ ಮಾಡಿ ಟವರ್ ಫೇಲ ಆದ ವಿಚಾರಿಸಲು ಆತನು ಲೈನ ಚೆಕ್ಕ
ಮಾಡಿ ನಿಂಬರ್ಗಾದಿಂದ ಮಾಡಿಯಾಳಕ್ಕೆ ಹೋಗುವ ಲೈನಿನ ಮಧ್ಯದಲ್ಲಿ ಅಂದರೆ ನಿಂಬರ್ಗಾದ ನಿಲಂಕರ
ಗುಡ್ಡದ ಹತ್ತಿರ ಓ.ಎಫ.ಸಿ ಕೇಬಲ ಕಟ್ ಮಾಡಿದ ಬಗ್ಗೆ ತಿಳಿಸಿದ್ದು, ನಾನು ಸ್ಥಳಕ್ಕೆ ಭೇಟ್ಟಿ
ನೀಡಿ ಪರಿಶೀಲಿಸಿ ಮತ್ತು ನನ್ನ ಜೊತೆಗೆ ಹಾಜರಿದ್ದ ಲಕ್ಷ್ಮಣ ಲೈನಮನ ಇವರನ್ನು ವಿಚಾರಿಸಲಾಗಿ
ಕೆ.ಇ.ಬಿ ಇಲಾಖೆಯ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿ ಅಡಿಯಲ್ಲಿ ವಿಧ್ಯುತ ಕಂಬಗಳನ್ನು ಹೂಳುವ
ಸಲುವಾಗಿ ಗುತ್ತಿಗೆ ಹಿಡಿದಿರುವ ಜೈನ ಎಲೆಕ್ಟ್ರಿಕಲ್ ಕಂಪನಿಯ ಮಾಲೀಕರಾದ ಅನಂತ ಜೈನ ಇವರ
ಅಧೀನದಲ್ಲಿ ಕೆಲಸ ಮಾಡುವ ಸೈಟ ಸೂಪರ ವೈಜರ ಆದ ಶರಣಯ್ಯ ತಂದೆ ಶಿವರಾಚಯ್ಯಾ ಸ್ವಾಮಿ ಸಾ|| ಆಲೂರ (ಬಿ) ಇತನು ದೇವೆಂದ್ರ
ಇವನು ಚಲಾಯಿಸುತ್ತಿರುವ ಜೆ.ಸಿ.ಬಿ ಯಿಂದ ದಿನಾಂಕ:28-11-2012
ಸಾಯಂಕಾಲ 5-30 ಗಂಟೆಗೆ ತಗ್ಗು ತೋಡಿಸುವಾಗ ಓ.ಎಫ.ಸಿ ಕೇಬಲನ್ನು ಕಟ ಮಾಡಿರುವ ಬಗ್ಗೆ
ಗೊತ್ತಾಗಿರುತ್ತದೆ. ಈ ಕಟ್ಟಾಗಿರುವ ಓ.ಎಫ.ಸಿ ಕೇಬಲನಿಂದ ನಮ್ಮ ಇಲಾಖೆಗೆ ಅಂದಾಜು1,50,000/- (ಒಂದು ಲಕ್ಷ ಐವತ್ತು ಸಾವಿರ) ರೂಪಾಯಿಗಳಷ್ಟು ಹಾನಿಯಾಗಿರುತ್ತದೆ. ಸಾರ್ವಜನಿಕ ಸೇವೆಗಾಗಿ ಹಾಕಿರುವ ಓ.ಎಫ.ಸಿ
ಕೇಬಲನ್ನು ಕಟ್ ಮಾಡಿ ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡಿರುವ ಜೈನ ಎಲೆಕ್ಟ್ರಿಕಲ ಗುಲಬರ್ಗಾದ
ಮಾಲೀಕರಾದ ಅನಂತ ಜೈನ, ಸೂಪರ ವೈಜರನಾದ ಶರಣಯ್ಯ ಸ್ವಾಮಿ ಮತ್ತು ಜೆ.ಸಿ.ಬಿ ಚಾಲಕನಾದ ದೇವಿಂದ್ರ ಇವರ ಮೇಲೆ
ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:
100/2012 ಕಲಂ427 ಸಂ. 34 ಐಪಿಸಿ ಮತ್ತು 2(ಎ) ಪ್ರವೇನಶನ ಆಫ ಡಿಸ್ಟ್ರಕ್ಷನ ಆ್ಯಂಡ ಲಾಸ ಆಫ
ಪ್ರಾಪರ್ಟಿ ಆಕ್ಟ 1981. ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಮಹ್ಮದ ಶರೀಫ ತಂದೆ ಮಹಿಮೂದ ಅಲಿ ಸಾ: ನಿಮರಾ ಮಜೀದ ಹತ್ತಿರ ಅಂಬಿಕಾ ನಗರ ಗುಲಬರ್ಗಾ ರವರು ನಾನು ದಿನಾಂಕ:29-11-2012 ರಂದು ರಾತ್ರಿ 10-10- ನಮ್ಮ ಓಣಿಯ ಶಮೀಮ ಅಹ್ಮದ ತಂದೆ ಲಾಡ್ಲೆ ಸಾಬ
ಮುಲ್ಲಾ ಇವರ ಮೋಟಾರ ಸೈಕಲ್ ನಂ:ಕೆಎ 32 ಎಕ್ಸ 2256 ನೇದ್ದರ ಮೇಲೆ ರೈಲ್ವೆ ಸ್ಟೆಶನ ಕಡೆಗೆ ಬರುವ
ಕುರಿತು ನಾನು ಆತನ ಮೋಟಾರ ಸೈಕಲ್ ಹಿಂದೆ ಕುಳಿತು ಅಂಬಿಕಾ ನಗರ ದಿಂದ ಹಳೆ ಜೇವರ್ಗಿ ರೋಡ ಕಡೆಗೆ
ಹೋಗುತ್ತಿದ್ದಾಗ ಪಿ & ಟಿ ಕಾಲೋನಿ ಎದುರು
ರೋಡಿನ ಮೇಲೆ ಶಮೀಮ ಅಹಮದ ಇನು ತನ್ನ ಮೋಟಾರ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿ ಕಟ್ ಹೊಡೆದು ಬ್ರೇಕ್ ಹಾಕಿದಾಗ ನಾನು ಮೋಟಾರ ಸೈಕಲ್ ಮೇಲಿಂದ ಪುಟಿದು ಕೆಳಗೆ ಬಿದ್ದು
ಬಾರಿ ಗಾಯ ಹೊಂದಿರುತ್ತೇನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:
117/2012 ಕಲಂ, 279,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment