ಅಪಘಾತ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ: ದಿನಾಂಕ 13-12-2012 ರಂದು
ಮುಂಜಾನೆ ಮೃತ ಕಾವ್ಯ ಇವಳು ದಿನಾಲು ಶಾಲೆಗೆ ಹೋಗುವ ಕುರಿತು ಮಳಖೇಡ ಬಸ್ ಸ್ಟ್ಯಾಂಡಕ್ಕೆ ಹೋಗಿದ್ದು, ಮುಂಜಾನೆ 7.30 ಗಂಟೆಗೆ ಶಾಲೆಗೆ ಹೋಗುವ
ಬಸ್ಸಿಗೆ ನಿಲ್ಲಿಸಲು ಕೈ ಮಾಡಿದಾಗ ಬಸ್ ನಂ, ಕೆಎ. 32/ಬಿ.
0693 ನೇದ್ದರ ಚಾಲಕನಾದ ಅಬ್ದುಲ್ ಅಜೀಜ್ ತಂದೆ ಉಸಮಾನ ಅಲೀ ಜಮಾದಾರ ಇತನು ಬಸ್ಸನ್ನು ಅಲಕ್ಷತನದಿಂದ
ನಡೆಯಿಸಿ ಕಾವ್ಯ ಇವಳಿಗೆ ಅಪಘಾತ ಪಡಿಸಿದಾಗ ಹೋಟ್ಟೆಗೆ ಮತ್ತು ಎಡ ತೋಡೆಗೆ ಭಾರಿಗಾಯವಾಗಿದ್ದು, ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಮೃತ ಪಟ್ಟಿರುತ್ತಾಳೆ
ಅಂತಾ ಅವರ ತಂದೆಯವರಾದ ಶಿವಶರಣಪ್ಪಾ ತಂದೆ ಚಂದ್ರಶೇಖರ್ ತಮ್ಮಗೋಳ ಸಾ:ಅರಳಗುಂಡಗಿ. ತಾ:ಜೇವರ್ಗಿ
ಹಾ:ವ:ಮಳಖೇಡ ತಾ:ಸೇಡಂ ರವರು
ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 75/2012 ಕಲಂ, 279, 304 (ಎ) ಐಪಿಸಿ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:13-12-12 ರಂದು ರಾತ್ರಿ
9-00 ಗಂಟೆ ಸುಮಾರಿಗೆ ಲಕ್ಷ್ಮಣ ತಂದೆ ಸಿದ್ರಾಮಪ್ಪಾ ಸಾ|| ಮೇಳಕುಂದಿ ಹಾ||ವ|| ಗಂಗಾ ನಗರ
ಗುಲಬರ್ಗಾ, ದತ್ತು ತಂದೆ ಸಿದ್ದಪ್ಪಾ ಭಾಸಗಿ ಸಾ|| ಹೇರೂರ ಹಾ||ವ|| ಬುದ್ದ ನಗರ ಗುಲಬರ್ಗಾ, ಮತ್ತು
ಯಲ್ಲಾಲಿಂಗ ತಂದೆ ವಿಠಲ್ ಪೂಜಾರಿ ಸಾ|| ಮೇಳಕುಂದಿ ಈ ಮೂರು ಜನರು ಬಿದ್ದಾಪೂರ ಕಾಲೋನಿ ಹನುಮಾನ ಗುಡಿ ಕಟ್ಟೆಯ ಮೇಲೆ ಲೈಟಿನ
ಬೆಳಕಿನಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ
80 ರೂಪಾಯಿ ಅಂತಾ ನಂಬಿಸಿ ಮಟಕಾ ಚೀಟಿಗಳನ್ನು ಸಾರ್ವಜನಿಜನಿಕರಿಗೆ ಬರೆದುಕೊಡುತ್ತಿದ್ದಾಗ ಶ್ರೀ
ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಮತ್ತು ಅವರ ಸಿಬ್ಬಂದಿಯವರು ದಾಳಿ ಮಾಡಲು ಯಲ್ಲಾಲಿಂಗ ಪೂಜಾರಿ ಓಡಿ ಹೋಗಿದ್ದು, ಲಕ್ಷ್ಮಣ
ಮತ್ತು ದತ್ತು ಇವರಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 12,090/-ರೂ. ಮಟಕಾ ಚೀಟಿಗಳು, ಬಾಲಪೆನ್ನುಗಳು ಜಪ್ತ ಮಾಡಿಕೊಂಡಿದ್ದು, ಲಕ್ಷ್ಮಣ ಮತ್ತು ದತ್ತು
ಇವರಿಬ್ಬರು ಕ್ರಮವಾಗಿ ರಾಜಪ್ಪಗೌಡ ಮತ್ತು ಸಿದ್ದು ಕಂಬಾರ ಬುಕ್ಕ ಮಾಲೀಕರಿಗೆ ಮಟಕಾ ಚೀಟಿ ಮತ್ತು
ಹಣ ಕೊಡುವುದಾಗಿ ತಿಳಿಸಿರುತ್ತಾರೆ ಸದರಿಯವರ ಮೇಲೆ ಕ್ರಮ ಕೈಕೊಳ್ಳುವ
ಕುರಿತು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 414/2012 ಕಲಂ, 78 (3) ಕೆ.ಪಿ
ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment