ಬೇಲಿ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಶಿವಪುತ್ರಪ್ಪ ಡಿಗ್ಗಿಕರ ಸಾ|| ಖಂಡ್ರೆಗಲ್ಲಿ ಭಾಲ್ಕಿ ಜಿ|| ಬೀದರ (ಶ್ರೀ ಗಂಗಾಧರ ಮಜ್ಜಗೆ ರವರ ಎಸ್.ಪಿ.ಎ ಹೊಲ್ಡರ) ರವರು ನನಗೆ ಶ್ರೀ ಗಂಗಾಧರ ಮಜಗೆ ರವರು ಬೆಂಗಳೂರು ವಾಸಿಯಾಗಿದ್ದರೂ ಬಾಲ್ಕಿಗೆ ಬಂದು ಹೋಗುತ್ತಿರುತ್ತಾರೆ. ನನ್ನ ಖಾಯಂ ಮನೆ ಗುಲಬರ್ಗಾಕ್ಕೆ ಇರುವುದ್ದರಿಂದ ಮೇ|| ಧನಲಕ್ಷ್ಮಿ ಪ್ರಮೋಟರ್ಸ ಮತ್ತು ಬಿಲ್ಡರ್ಸರವರ ಪಾಲುದಾರರಾಗಿದ್ದಾರೆ. ಮೇ|| ಧನಲಕ್ಷ್ಮಿ ಪ್ರಮೋಟರ್ಸ ಮತ್ತು ಬಿಲ್ಡಿರ್ಸನ ಪಾಲುದಾರನಾದ ಶ್ರೀ ದೀಪಕ ಚಂದ ಕೋಠಾರಿ ಮತ್ತು ಸದರಿ ಶ್ರೀ ಗಂಗಾಧರ ಮಜಗೆರವರು ಕೂಡಿ ದಿನಾಂಕ:12-102-2012 ರಂದು ಗುಲಬರ್ಗಾ ತಾಲೂಕು ಮತ್ತು ಜಿಲ್ಲೆಯ ಬ್ರಹ್ಮಪೂರದ ಸರ್ವೆ ನಂ:74/34 ಎ.ಡಿ.ಎಲ್.ಆರ್ ಕಚೇರಿಯನ್ವಯ ಮತ್ತು ಸರ್ವೆ ನಂ. 74/10 ಮತ್ತು 15 ಭೂ ಪರಿವರ್ತನೆ ಆದೇಶದ ಪ್ರಕಾರ ಭೂ-ಪರಿವರ್ತನೆಯಾದ 29 ಗುಂಟೆ ಜಮೀನನ್ನು (ಅದರಲ್ಲಿ ಚಂದ್ರಕಾಂತ ರವರ 15 ಗುಂಟೆ ಮತ್ತು ಕವಿತಾರವರ 14 ಗುಂಟೆ ಜಮೀನು ಇರುತ್ತದೆ, ಸದ್ರಿ ಬಿಲ್ಡರ್ಸನ ಹೆಸರಿನಲ್ಲಿ ಸದ್ರಿ ಜಮೀನಿನ ಮಾಲಿಕರಾದ ಶ್ರೀ ಚಂದ್ರಕಾಂತ ತಂದೆ ಗುರಪ್ಪಾ ಮತ್ತು ಶ್ರೀಮತಿ ಕವಿತಾ ಗಂಡ ಚಂದ್ರಕಾಂತ ರವರಿಂದ ಪತ್ರಿಕಾ ಪ್ರಕಟಣೆ ಕೊಟ್ಟು, ಕಾನೂನಿನ ರೀರಿ ಖರೀಧಿ ಮಾಡಿ ನೊಂದಾಯಿಸಿಕೊಂಡಿರುತ್ತಾರೆ. ಖರೀದಿ ಮಾಡಿದ ಜಮೀನಿನ ಸುತ್ತಲೂ ಕಬ್ಬಿಣದ ತಂತಿ ಬೇಲಿಯನ್ನು ಹಾಕಿಸಿರುತ್ತಾರೆ. ದಿನಾಂಕ:16-12-2012 ರಂದು ಮದ್ಯಾಹ್ನ 2-00 ಗಂಟೆಗೆ ನಾನು ಜಮೀನಿಗೆ ಹೋದಾಗ ಅದರ ಪಶ್ಚಿಮ ದಿಕ್ಕಿನ ತಂತಿ ಬೇಲಿಯನ್ನು ಕೆಡವಿ ಹಾನಿಗೊಳಿಸಿದ್ದು ಕೆಲವು ಕಬ್ಬಿಣದ ತಂತಿ ಮತ್ತು ಕಂಬಗಳನ್ನು ಕದ್ದುಗೊಂಡು ಹೋಗಿದ್ದಲ್ಲದೆ ಮತ್ತೆ ಕೆಲವು ಕಂಬ ಮತ್ತು ತಂತಿ ಬೇಲಿಯನ್ನು ಹಾನಿಗೊಳಿಸಿದ್ದು ನೋಡಲಾಗಿ ಅಂದಾಜು 25,000/- ಮೋತ್ತದ ಹಾನಿ ಮಾಡಿರುತ್ತಾರೆ. ಸದ್ರಿ ವಿಷಯವನ್ನು ಗಂಗಾಧರ ಮಜಗೆರವರಿಗೆ ತಿಳಿಸಿದಾಗ, ಅವರು ಅವರ ಪರವಾಗಿ ದೂರನ್ನು ಸಲ್ಲಿಸಲು ಎಸ್.ಪಿ.ಎ ಕೊಟ್ಟಿರುತ್ತಾರೆ.ಆದಕಾರಣ ಈ ದೂರನ್ನು ಕೊಡುತ್ತಿದ್ದೇನೆ. ಅಂತಾ ಅರ್ಜಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:116/2012 ಕಲಂ, 379, 427 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ಸೈಯ್ಯದ ಮುಸ್ತಾಕ ಹುಸೇನಿ ತಂದೆ ಅಬ್ದುಲ ರಜಾಕ ಸಾ:ಮನೆ ನಂ.5-408/40/45/15 ಸೈಯ್ಯದ ಕಾಂಪ್ಲೆಕ್ಸ್ ಕೆ.ಸಿ.ಟಿ ಕಾಲೇಜ ರೋಡ ಬಾಂಬೆ ಮೆಡಿಕಲ್ಸ್ ಅಂಗಡಿಯ ಹಿಂದುಗಡೆ ಖಾಜಾ ಕಾಲೋನಿ ಗುಲಬರ್ಗಾ ರವರು ನನಗೆ ಸೈಯ್ಯದ ಇಮಾದ ಹುಸೇನ ತಂದೆ ಸೈಯ್ಯದ ಮುಸ್ತಾಕ ಹುಸೇನ ವಯ: 17 ವರ್ಷ ವಯಸ್ಸಿನ ಮಗನಿದ್ದು ಇತನು ಗುಲಬರ್ಗಾ ನಗರದ ಜಿಡಿಎ ಲೇಔಟ ಸಂತ್ರಾಸವಾಡಿ ಬಡಾವಣೆಯಲ್ಲಿ ಇರುವ ಆರ.ಎಮ.ಪಾಲಿಟೆಕ್ನಿಕ ಕಾಲೇಜದಲ್ಲಿ ಸಿವಿಲ್ ಡಿಪ್ಲೋಮಾ ಪ್ರಥಮ ವರ್ಷದಲ್ಲಿ ವಿಧ್ಯಾಬ್ಯಾಸ ಮಾಡುತಿದ್ದು ದಿನಾಂಕ:15/11/2012 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಕಾಲೇಜಿಗೆ ಹೋಗುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋಗಿರುತ್ತಾನೆ. ಅಂದು ಕಾಲೇಜಿಗೆ ಹೋಗದೇ ಮನೆಗೂ ಸಹ ಬಾರದೇ ಕಾಣೆಯಾಗಿರುತ್ತಾನೆ.ನನ್ನ ಮಗನ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ನಮ್ಮ ಸಂಬಂದಿಕ ಬಂದು ಬಳಗ ಅಲ್ಲದೇ ಅವರ ಗೆಳೆಯರ ಕಡೆಗಳಲ್ಲಿ ನನ್ನ ಮಗ ಸೈಯ್ಯದ ಇಮಾದ ಹುಸೇನ ಈತನ ಬಗ್ಗೆ ಯಾವುದೇ ಮಾಹಿತಿ ಸುಳಿವು ಸಿಕ್ಕಿರುವದಿಲ್ಲಾ. ಸೈಯ್ಯದ ಇಮಾದ ಹುಸೇನ ಇತನ ಚಹರೆ ಪಟ್ಟಿ ಎತ್ತರ-4’ 5’’ , ದುಂಡು ಮುಖ, ಸದೃಡವಾದ ಮೈಕಟ್ಟು, ಗೋದಿ ಬಣ್ಣ, ಚಪ್ಪಟೆ ಮೂಗು, ಕ್ರೀಮ್ ಕಲರ್ ಟೀ-ಶರ್ಟ, ಲೈಟ ಬ್ಲೂ ಜೀನ್ಸ ಪ್ಯಾಂಟ್, ಹಿಂದಿ, ಉರ್ದು, ಇಂಗ್ಲೀಷ ಭಾಷೆ ಮಾತನಾಡುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.88/2012 ಕಲಂ ಹುಡುಗ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment