ಕಳ್ಳತನ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀ,ಸೋಮಶೇಖರ ತಂದೆ ಚಿಕ್ಕತಮ್ಮೆಗೌಡ ಸಾ|| 1507/1 8 ನೇ ಮುಖ್ಯೆ ರಸ್ತೆ ಮುನ್ನೇಶ್ವರ ಬ್ಲಾಕ ಬೆಂಗಳೂರು 560026 ನಿವಾಸಿ ಇದ್ದು ರೋಬೊ ರೆಮಿಡೆಸ್ ಕಂಪನಿ ಬೆಂಗಳೂರ ಇವರ ಕಂಪನಿಯ ಜಾಹಿರಾತು ಪ್ರಕಟಣೆಗಾಗಿ ನನ್ನ ಬಿಳಿಯ ಬಣ್ಣದ ಟಾಟಾ ಸುಮೋ ವಾಹನ ನಂ ಕೆಎ 01 ಎ 9892 ನೇದ್ದು ಈಗಾ ಸುಮಾರು ಒಂದೂವರೆ ವರ್ಷದಿಂದ ಬಾಡಿಗೆಗೆ ನೀಡಿ ನಾನು ಸಹ ಸಂಬಳದ ಮೇಲೆ ವಾಹನ ಚಲಾಯಿಸುತ್ತೇನೆ. ದಿನಾಂಕ 26/11/2012 ರಂದು ಸದರಿ ಕಂಪನಿಯವರ ಆದೇಶದಂತೆ ನಾನು ಬಾಡಿಗೆಗೆ ನೀಡಿದ ಟಾಟಾ ಸುಮೋ ನಂ:ಕೆಎ-01 ಎ-9892 ನೇದ್ದರಲ್ಲಿ ನನ್ನೊಂದಿಗೆ ರೋಬೊ ರೆಮಿಡಸ್ ಕಂಪನಿಯಲ್ಲಿ [ಔಷದ] ಕೆಲಸ ಮಾಡುವ ಮಂಜುನಾಥ, ದರ್ಶನ್, ರಮೇಶ, ಸುದರ್ಶನ್ ಇವರು ಸಹ ಬಂದರು.ನಾವು ಕಂಪನಿಯ ಔಷದ ಜಾಹಿರಾತ ಪ್ರಕಟಣೆ ಮಾಡುತ್ತಾ ಟಾಟಾ ಸುಮೊದೊಂದಿಗೆ ದಿನಾಂಕ:26/11/2012 ರಂದು ಆಳಂದಕ್ಕೆ ರಾತ್ರಿ 9.00 ಗಂಟೆ ಸುಮಾರಿಗೆ ಬಂದು ಆಳಂದದ ಆರ್.ಟಿ.ಓ ಚೆಕ್ ಪೊಸ್ಟ ಹತ್ತಿರವಿರುವ ಸಾಯಿರಾಮ ಹೋಟಲಗೆ ಹೋಗಿ ಬಾಡಿಗೆಗೆ ರೂಮ ಪಡೆದು ಅಲ್ಲೇ ಉಳಿದುಕೊಂಡೆವು. ಬೆಳಿಗ್ಗೆ ಎದ್ದು ಆಳಂದ ತಾಲೂಕಿನ ಕೆಲವು ಹಳ್ಳಿಗಳಿಲ್ಲಿ ತಿರುಗಾಡಿ ಜಾಹಿರಾತು ಪ್ರಕಟಣೆ ಮಾಡಿ ದಿನಾಂಕ:28/11/2012 ರಂದು ದಿನಿತ್ಯದಂತೆ ಸಾಯಿರಾಮ ಹೋಟಲ ಎದುರಿಗೆ ನಮ್ಮ ಟಾಟಾ ಸುಮೊ ನಂ ಕೆಎ-01 ಎ-9892 ನೇದ್ದು ನಿಲ್ಲಿಸಿ ಮಲಗಿಕೊಂಡಿದ್ದೆವು. ದಿನಾಂಕ:29/11/2012 ರಂದು ಬೆಳಗ್ಗೆ 6.00 ಗಂಟೆಗೆ ಎದ್ದು ನೋಡಲಾಗಿ ಯಾರೋ ಕಳ್ಳರು ನಮ್ಮ ಟಾಟಾ ಸುಮೊವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 237/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.ಹಗಲು ಕಳವು ಪ್ರಕರಣ:
ಬ್ರಹ್ಮಪೂರ ಪೊಲೀಸ್
ಠಾಣೆ:ಶ್ರೀ. ಶ್ರೀ.ವಿನಾಯಕ
ತಂದೆ ನಾರಾಯಣರಾವ ಪಡವಳೆ, ಸಾ|| ಮನೆ ನಂ: 51, ಕೆ.ಹೆಚ್.ಬಿ ಪಿ.ಡಬ್ಲು.ಡಿ ಕ್ವಾರ್ಟಸ ಹಿಂದುಗಡೆ
ರಾಜಾಪೂರ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:30/11/2012 ರಂದು ಮಧ್ಯಾಹ್ನ ಯಾರೋ ಕಳ್ಳರು
ಶಹಾಬಾದ ರಸ್ತೆಯ ರಾಜಾಪೂರ ಕಾಲೋನಿ ಕೆ.ಹೆಚ್.ಬಿ ಪಿ.ಡಬ್ಲು.ಡಿ ಕ್ವಾರ್ಟಸ ಹಿಂದುಗಡೆ ಮನೆ ನಂ:
51, ನೇದ್ದರ ಬಾಗಿಲ ಕೀಲಿ ಹಾಗೂ ಒಳಗಡೆ ಅಲಮಾರಿ ಕೀಲಿಗಳನ್ನು
ತೆಗೆದು ಒಳಗಿನಿಂದ 39 ಗ್ರಾಂ ಬಂಗಾರದ ಆಭರಣಗಳು, ಬೆಳ್ಳಿ ಸಾಮಾನುಗಳು, ನಗದು ಹಣ 10,000/- ಹೀಗೆ ಒಟ್ಟು 1,10,000/- ಬೆಲೆಬಾಳುವ
ಮಾಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ:125/12 ಕಲಂ: 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದರೋಡೆ ಪ್ರಕರಣ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ಶ್ರೀಮತಿ ಸುಮಾ ಗಂಡ ಶಿವಪ್ರಕಾಶ ಗಂಗಾಧರ ಮಠ ಸಾ|| ಎಂ.ಬಿ.ನಗರ
ಹೊಸ ಬಡಾವಣೆ ಗುಲಬರ್ಗಾ ರವರು ನಾನು ಮತ್ತು ದಾನಮ್ಮ, ರೂಪಾ ಕೂಡಿಕೊಂಡು ದಿನಾಂಕ:01/12/2012
ರಂದು ಸಾಯಂಕಾಲ 5-20 ಗಂಟೆ ಸುಮಾರಿಗೆ ಬಳೆ
ಹಾಕಿಕೊಳ್ಳುವ ಸಂಬಂಧ ಬಸವೇಶ್ವರ ಚೌಕ್ ಹತ್ತಿರ ಇರುವ ಅಂಗಡಿಗೆ ಹೋಗಿ ಬಳೆಗಳನ್ನು ಹಾಕಿಕೊಂಡು
ಎಲ್ಲರು ನಡೆದುಕೊಂಡು ಮನೆ ಕಡೆ ಬರುತ್ತಿರುವಾಗ ಮಾಣಿಕರೆಡ್ಡಿ ಇವರ ಮನೆಯ ಹತ್ತಿರ
ಬರುತ್ತಿದ್ದಂತೆ ಒಂದು ಕಪ್ಪು ಬಣ್ಣದ ಮೋಟಾರು ಸೈಕಲ್ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅತೀ ವೇಗವಾಗಿ ಬಂದವರೆ ನನ್ನ
ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ ಬಂಗಾರದ ಒಡವೆಗಳನ್ನು ಕಿತ್ತುಕೊಂಡು ಹೋದರು. ನನ್ನ
ಕೊರಳಲ್ಲಿದ್ದ 5 ತೊಲೆಯ ಬಂಗಾರದ ಮಂಗಳ ಸೂತ್ರದಲ್ಲಿ 2 ತೊಲೆ ಮತ್ತು 10 ಗ್ರಾಂ ದ ಬಂಗಾರದ ಚೈನ್
ಹಾಗು ಇನ್ನೊಂದು 10 ಗ್ರಾಂ ಚೈನ್ ನಲ್ಲಿಯ 5 ಗ್ರಾಂ. ಬಂಗಾರ ಹೀಗೆ ಒಟ್ಟು 3.1/2 ತೊಲೆ ಬಂಗಾರ
ಅ.ಕಿ. 1,05,000=00 ರೂಪಾಯಿ ಬೆಲೆ ಬಾಳುವುದನ್ನು ಕಿತ್ತುಕೊಂಡು ಮೋಟಾರು ಸೈಕಲ್ ಮೇಲೆ ಓಡಿ
ಹೋಗಿರುತ್ತಾರೆ. ಸದರಿಯವರ ವಯಸ್ಸು 20 ರಿಂದ 25 ವರ್ಷ ಇದ್ದು ಮೋಟಾರು ಸೈಕಲ್ ನಡೆಸುವನು ಚೌಕಡಿ
ಬಣ್ಣದ ಶರ್ಟ ಧರಿಸಿದ್ದು ಉದ್ದನೇಯ ಕೂದಲು ಮತ್ತು ಮೋಟಾರು ಸೈಕಲ್ ಮೇಲೆ ಹಿಂದುಗಡೆ ಕುಳಿತವನು
ತನ್ನ ಕೊರಳಲ್ಲಿಯ ಬಂಗಾರದ ಒಡವೆಗಳನ್ನು ಕಿತ್ತುಕೊಂಡವನು ಬಿಳಿ ಟೀ-ಶರ್ಟ ಧರಿಸಿದ್ದನು. ಸದರಿಯವರ ಮೇಲೆ ಕಾನೂನು
ಕ್ರಮ ಕೈಗೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:132/2012 ಕಲಂ.392
ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ
ದಾಮೋಧರ ತಂದೆ ಬನಸಿಲಾಲಜೀ ಕಲಂತ್ರಿ ಸಾ: ಕಲಂತ್ರಿ ಕುಂಜ ಎಸ್.ಬಿ.ಹೆಚ. ನೆಹರು ಗಂಜ ಕಾಲೋನಿ
ಗುಲಬರ್ಗಾ ರವರು ನಾನು ಟಾಟಾ 2515 ಇಎಕ್ಸ್ ಲಾರಿ ನಂ. ಕೆ.ಎ. 32 ಬಿ 5321 ಇದರ ಮಾಲೀಕನಿದ್ದು, ರಾಜು ತಂದೆ ಬಾಳಾಸಾಹೇಬ ಕುಲಕರ್ಣಿ ರವರು ದಿನಾಂಕ:27/11/2012 ರಂದು 12:15
ಎಎಮ್ ಕ್ಕೆ ಲಾಹೋಟಿ ಶೋರೂಮ್ ಮತ್ತು ಲಾಹೋಟಿ ಪೆಟ್ರೋಲ್ ಬಂಕ ಮದ್ಯದಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ
ಹೋಗಿದ್ದು ದಿನಾಂಕ:28/11/2012 ರಂದು
ಬೆಳಿಗ್ಗೆ ಬಂದು ನೋಡಿದಾಗ ನಮ್ಮ ಡ್ರೈವರ ನಿಲ್ಲಿಸಿದ ಟಾಟಾ 2515 ಇಎಕ್ಸ್ ಲಾರಿ ನಂ. ಕೆಎ. 32 ಬಿ 5321 ಬಣ್ಣ ಕೆಂಪು ಬಣ್ಣ NP COLOR, ಇಂಜನ ನಂ.60F62485719, ಚೆಸ್ಸಿ ನಂ. 426031FTZ123253 ನೇದ್ದು ಇರಲಿಲ್ಲಾ ಅವನು ಈ
ವಿಷಯ ನಾನು ಲಾತೂರದಲ್ಲಿ ಆಸ್ಪತ್ರೆಗಾಗಿ ಹೋದಾಗ ನನಗೆ ತಿಳಿಸಿದ್ದು ನಾನು ನಮ್ಮ ಇನ್ನೂಳಿದ
ಮುನೀಮರವರಿಗೆ ನಮ್ಮಲಾರಿಯ ಬಗ್ಗೆ ಹುಡುಕಾಡಿರಿ ಅಂತಾ ತಿಳಿಸಿದ್ದು ನಾನು ಕೂಡಾ ದಿನಾಂಕ:28/11/2012 ರಂದು ರಾತ್ರಿ 8:00 ಗಂಟೆಗೆ ಗುಲಬರ್ಗಾ ಕ್ಕೆ
ಬಂದು ನನ್ನ ಲಾರಿಯ ಬಗ್ಗೆ ಎಲ್ಲಾ ಕಡೆ ಹುಡುಕಾಡಲು ಸಿಕ್ಕಿರುವದಿಲ್ಲಾ ಯಾರೋ ಕಳ್ಳರು ನ್ನ ಲಾರಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಕಳುವಾಗಿರುವ ನನ್ನ ಲಾರಿ ಅ.ಕಿ.8,40,000/-ರೂಪಾಯಿ ಬೆಲೆವುಳ್ಳದ್ದು ಪತ್ತೆ ಮಾಡಿಕೊಡಬೇಕಾಗಿ ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ:86/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment