ಪಡಿತರ ಚೀಟಿದಾರರಿಗೆ ವಿತರಿಸಬೇಕಾದ ಆಹಾರ ಧ್ಯಾನ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 20-12-12 ರಂದು ಮಧ್ಯಾಹ್ನ ಬಡ ಜನರಿಗೆ ಹಂಚುವ ಪಡಿತರ (ರೇಶನ) ಅಕ್ಕಿಯನ್ನು, ಪಡಿತರ ಚೀಟಿದಾರರಿಗೆ ವಿತರಿಸಬೇಕಾದ ಆಹಾರ ಧ್ಯಾನ ಅಕ್ಕಿಯನ್ನು ಸಾರ್ವಜನಿಕರಿಗೆ ವಿತರಿಸದೇ ಮೋಸ ಮಾಡಿ ತಮ್ಮ ಲಾಭಕ್ಕಾಗಿ ಲಾರಿ ನಂಬರ ಕೆಎ-56/0062 ರಲ್ಲಿ ಗುರುಮಿಟಕಲ್ಲದಿಂದ ಮುಂಬೈ ಮತ್ತು ವಾಸಿಗೆ ಸಾಗಾಣಿಕೆ ಮಾಡುತ್ತಿದ್ದಾರೆ. ಲಾರಿ ಗುಲಬರ್ಗಾ ನಗರದ ಸೇಡಂ ರಿಂಗ ರೋಡ ಮುಖಾಂತರ ಬರುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಸ್ರೀ ಕಾಶಿನಾಥ ತಳಕೇರಿ ಹೇಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಡಿ.ಎಸ್.ಪಿ.(ಗ್ರಾ) ಐ/ಸಿ (ಬಿ) ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಪಿಐ ಡಿಸಿಐಬಿ ಮತ್ತು ಸಿಬ್ಬಂದಿಯವರೆಲ್ಲರು. ಸಿಪಿಐ ಗ್ರಾಮೀಣ, ಪಿ.ಎಸ್.ಐ. ಗ್ರಾಮೀಣ ಮತ್ತು ಸಿಬ್ಬಂದಿಯವರೊಂದಿಗೆ, ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಜಬ್ಬಾರ ಫಂಕ್ಷನ ಹಾಲ ಹತ್ತಿರ ಲಾರಿ ಕೆಎ-56/0062 ನೇದ್ದು ಬರುತ್ತಿರುವದನ್ನು ಗಮನಿಸಿ ನಿಲ್ಲಿಸಿಲು ಸೂಚಿಸಿದರು ಲಾರಿ ಚಾಲಕನ್ನು ತನ್ನ ಲಾರಿ ನಿಲ್ಲಿಸದೇ ಹಾಗೇ ಹುಮನಾಬಾದ ರಿಂಗ ರೋಡ ಕಡೆ ಓಡಿಸಿಕೊಂಡು ಹೋಗುತ್ತಿದ್ದನು. ಪಿ.ಐ. ಡಿಸಿಐಬಿ ಮತ್ತು ಸಿಪಿಐ ಗ್ರಾಮೀಣ, ಪಿ.ಎಸ್.ಐ. ಸಿಬ್ಬಂದಿಯವರು ಲಾರಿಯನ್ನು ಬೆನ್ನು ಹತ್ತಲು ಲಾರಿ ಹುಮನಾಬಾದ ರಿಂಗ ರೋಡಿನಲ್ಲಿ ಹಿಡಿದು ನಿಲ್ಲಿಸಿ ಲಾರಿ ಚಾಲಕ ಜಯತೀರ್ಥ ಮತ್ತು ಕ್ಲೀನರ ಸೂರ್ಯಕಾಂತ ಇವರಿಗೆ ವಿಚಾರಿಸಲಾಗಿ ಸದರಿ ನರೇಂದ್ರ ರಾಠೋಡ, ಮಣಿಕಂಠ ರಾಠೋಡ, ರಾಜಕುಮಾರ ರಾಠೋಡ, ಮುನೀಮ ಚನ್ನಬಸಯ್ಯ ಸ್ವಾಮಿ ಸಾ: ಎಲ್ಲರೂ ಗುರುಮಿಟಕಲ್ಲ ಇವರು ಬಡವರಿಗೆ ಹಂಚುವ ನ್ಯಾಯ ಬೆಲೆಯ ಅಂಗಡಿಯ ಪಡಿತರ ಅಕ್ಕಿಯನ್ನು ಸರಕಾರಿ ಮುದ್ರೆಯೊಂದಿಗೆ ಗೋಣಿ ಚೀಲದಲ್ಲಿ ಬಂದಂತಹ ಪಡಿತರ ಅಕ್ಕಿಯನ್ನು ಗುರುತು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಅವುಗಳು ಪಡಿತರ ಅಕ್ಕಿ ಅಂತಾ ಗುರುತು ಸಿಗದಂತೆ ಸರಕಾರಿ ಗೋಣಿ ಚೀಲದಲ್ಲಿರುವ ಪಡಿತರ ಅಕ್ಕಿಯನ್ನು ಮಯೂರಿ ಬ್ರ್ಯಾಂಡ ಬೆಸ್ಟ್ ಕ್ವಾಲಿಟೀ ರೈಸ ರಡಿ ಫಾರ ಕುಕ್ಕ ಅಂತಾ ಮುದ್ರಿಸಿದ ಪ್ಲಾಸ್ಟಿಕ ಚೀಲಗಳಲ್ಲಿ ತುಂಬಿ ಅಲ್ಲಿಯೇ ತೂಕ ಮಾಡಿ ಪ್ಯಾಕ ಮಾಡಿ ಯಾರಿಗೂ ಗುರುತು ಸಿಗದಂತೆ ಸರಕಾರಿ ಪಡಿತರ ಅಕ್ಕಿಯನ್ನು ದುರುಪಯೋಗ ಮಾಡಿಕೊಂಡು ಸಾರ್ವಜನಿಕರಿಗೆ ಹಂಚುವ ಅಕ್ಕಿಯನ್ನು ಮಾರಾಟ ಮಾಡಲು ಉದ್ದೇಶಿಸಿ ಖೊಟ್ಟಿ ದಾಖಲಾತಿ ಸೃಷ್ಟಿಸಿರುತ್ತಾರೆ ಲಾರಿಯಲ್ಲಿದ್ದ 25 ಕೆ.ಜಿ. ತೂಕವುಳ್ಳ ಒಟ್ಟು 680 ಚೀಲಗಳು ಒಟ್ಟು 170 ಕ್ವಿಂಟಾಲ್ ಅ:ಕಿ: 3,35,750 ರೂ. ಹಾಗೂ ಲಾರಿ ಕೆಎ-56/0062 ಅ:ಕಿ: 12 ಲಕ್ಷ ರೂ. ಹೀಗೆ ಒಟ್ಟು 15,35, 750/- ರೂ. ಅಕ್ಕಿ ಚೀಲಗಳನ್ನು ಮತ್ತು ಲಾರಿಯನ್ನು ಕೇಸಿನ ಪುರಾವೆಗೋಸ್ಕರ ಜಪ್ತ ಪಡಿಸಿಕೊಂಡಿದ್ದು, ಈ ಮೇಲಿನ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಎಸ್.ಎಸ್. ಹುಲ್ಲೂರು ಪಿ.ಐ. ಡಿಸಿಐಬಿ ಘಟಕ ಗುಲಬರ್ಗಾ ರವರು ಜಪ್ತಿ ಪಂಚನಾಮೆ ಮತ್ತು ಜಪ್ತಿ ಪಡಿಸಿಕೊಂಡ ಮುದ್ದೆಮಾಲು ಹಾಗೂ ಇಬ್ಬರು ಆಪಾದಿತರನ್ನು ಒಪ್ಪಿಸಿ ಸದರಿ ಆರು ಜನ ಆಪಾದಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.421/12 ಕಲಂ 406, 408, 468, 471, 420 ಐಪಿಸಿ ಮತ್ತು 3 ಮತ್ತು 7 ಈ.ಸಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
No comments:
Post a Comment