ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಚಂದ್ರಕಾಂತ ತಂದೆ ಗುಂಡಪ್ಪ ನಿಂಬಾಜಿ ಸಾ||
ಕಲ್ಲ ಹಂಗರಗಾ ನಾನು ಮನೆಯಲ್ಲಿದ್ದಾಗ ನಮ್ಮ ತಂದೆ ಹೆಸರಿನಲ್ಲಿದ್ದ ಒಟ್ಟು 29 ಎಕರೆ ಜಮೀನು ಮತ್ತು ಎರಡು ಮನೆ ಗಂಡು
ಮಕ್ಕಳಿಗೆ ಹಂಚಬೇಕು ಮತ್ತು ಸಿವಿಲ ಕೋರ್ಟನಲ್ಲಿ ಹೆಣ್ಣು ಮಕ್ಕಳಿಗೆ
ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಕೇಸ
ಹಾಕಿದ್ದಕ್ಕೆ ಕೇಸು ವಾಪಸ್ಸು ತೆಗೆದುಕೋ ಅಂತಾ ಶರಣಬಸಪ್ಪಾ ತಂದೆ ಮಾಧುರಾಯ, ರೇವಣಸಿದ್ದಪ್ಪ
ತಂದೆ ಮಾಧುರಾಯ ಸಾ: ಇಬ್ಬರು ಕಲ್ಲಹಂಗರಗಾ ರವರು ನಮ್ಮ ಜೋತೆ ಜಗಳಾ
ತೆಗೆದು ನನಗೆ ಮತ್ತು ಇತರರಿಗೆ ಅವಾಚ್ಯವಾಗಿ ಬೈದು ರಾಡಿನಿಂದ,
ಕಲ್ಲಿನಿಂದ,
ಕೈಯಿಂದ, ಬಾಯಿ ಕಚ್ಚಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿರುತ್ತಾರೆ
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:424/2012 ಕಲಂ 504, 323, 324, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಮೊನಪ್ಪ ತಂದೆ ಲಕ್ಷ್ಮಣರಾವ ಜಮಾದಾರ ವ; 38, ಉ:
ಒಕ್ಕಲುತನ ಸಾ: ಕುಮಸಿ, ತಾ:ಜಿ: ಗುಲಬರ್ಗಾ ರವರು ದಿನಾಂಕ: 21/22-12-2012 ರಂದು ಮಧ್ಯರಾತ್ರಿ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿನ ಫಳಿ ಮುರಿದು, ಕಬ್ಬಿಣದ ಟ್ರಂಕನಲ್ಲಿಟ್ಟದ್ದ ಹಣ 11,000/- ತಾಮದ್ರ ಕೊಡ
ಬಂಗಾರದ ಆಭರಣ ಹೀಗೆ ಒಟ್ಟು 20,000/- ಮೌಲ್ಯದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 425/2012 ಕಲಂ, 457, 380 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕುಡಿದ ಅಮಲಿನಲ್ಲಿ ಹೆಂಡತಿಯ ಮೇಲೆ ಹಲ್ಲೆ :
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀಮತಿ ರಿಜ್ವಾನ
ಬೇಗಂ ಗಂಡ ಮೊಹ್ಮದ ರಫೀಕ ವ:30 ಜಾ:ಮುಸ್ಲಿಂ ಉ:ಮನೆಕೆಲಸ ಸಾ:ಇಂಜೈನ ಫೈಲ ಪಠಾಣ ಗಲ್ಲಿ ಶಹಾಬಾದ ರವರು ನಾನು ದಿನಾಂಕ:21/12/2012 ರಂದು ರಾತ್ರಿ 9-30 ಗಂಟೆ ಸುಮಾರಿಗೆ
ಮನೆಯಲ್ಲಿದ್ದಾಗ ನನ್ನ ಗಂಡ ಮೊಹ್ಮದ ರಫೀಕ ಇತನು ಕುಡಿದು ಬಂದು ವಿನಾಕಾರಣ ನನ್ನೊಂದಿಗೆ ಜಗಳ
ತೆಗೆದು ಅವಾಚ್ಯ ಶಬ್ದಗಳಿಂದ
ಬೈದು ಅಲ್ಲಿಯೇ ಬಿದ್ದಿದ್ದ ಗಾಜಿನ ಬಾಟಲಿ ಒಡೆದು ಅದರಿಂದ ನನ್ನ ಎಡಗೈ ಹೆಬ್ಬೆರಳಿಗೆ ಚುಚ್ಚಿ
ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 163/2012 ಕಲಂ, 341,
324, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ
ಠಾಣೆ:ಶ್ರೀ.ರಾಣೋಜಿ ತಂದೆ ಶಿವಪುತ್ರ ಸಿಂಗೆ ಜ್ಯಾತಿ; ಪರಿಶಿಷ್ಟ.ಜಾತಿ. ಉ;
ವಿದ್ಯಾರ್ಥಿ ಸಾ;ಕುಮಸಿ ಗ್ರಾಮ ತಾ;ಜಿ;ಗುಲಬರ್ಗಾ ರವರು ನಮ್ಮ ಮನೆಯವರೆಗೆ ನಮ್ಮ ಊರಿನ ಅಂಬರೀಷ ತಂದೆ ಸೂರ್ಯಕಾಂತ ಕೇವಂಟಗಿ,ಶಿವಾನಂದ ತಂದೆ
ಹಣಮಂತರಾಯ ಕೇವಂಟಿಗಿ,ಬಸವರಾಜ ತಂದೆ ಮಾದುರಾಯ ಕೇವಂಟಿಗಿ, ವಿಠಲ ತಂದೆ ಮಾದುರಾಯ
ಕೇವಂಟಗಿ, ಹಾಗೂ ಶಿವರಾಜ ತಂದೆ ಮಾದುರಾಯ
ಕೇವಂಟಿಗಿ ಎಲ್ಲರೂ ಕೂಡಿಕೊಂಡು ದಿನಾಂಕ. 22-12-2012 ರಂದು ಅಂದಾಜ ರಾತ್ರಿ 10-30 ಗಂಟೆಯ ಬಂದು ನಮ್ಮ ಮನೆಯವರೆಗೆ ಬಂದು ಅವಾಚ್ಯವಾಗಿ ಜಾತಿ ಎತ್ತಿ ಬೈಯುತ್ತಿದ್ದಾಗ ಹೊರಗಡೆ ಬಂದೆನು. ಪಕ್ಕದ ಮನೆಯ ಹಣಮಂತ ಸಿಂಗೆ
, ಹಣಮ್ಮಂತ ತಂದೆ ಲಕ್ಕಪ್ಪಾ ಸಿಂಗೆ , ಮತ್ತು ಹಣಮಂತ ತಂದೆ ಲಕ್ಷ್ಮಣ ಕರಪೈಕಿ ಇವರುಗಳು ಬಂದು , ಶಿವಾನಂದನಿಗೆ ನಾನು ನಿಮ್ಮ
ಅಳಿಯ ಅಂಬರೀಷನೊಂದಿಗೆ ಜಗಳವಾಡಿಲ್ಲಾ, ಅವನೆ ತಕರಾರು
ಮಾಡುತ್ತಿದ್ದಾಗ ನಾನೇ ಅವನನ್ನು ಸಮಜಾಯಿಸಿರುತ್ತೇನೆ ಅಂತಾ ಹೇಳುವಷ್ಟರಲ್ಲಿ ಊರಲ್ಲಿ ಬಹಳ ಉರುಣಿಗಿ ನಡೆದಿದೆ ಅಂತಾ ಅಂದವನೆ
ತನ್ನ ಕೈಯಲ್ಲಿದ್ದ ಕುಡಗೋಲು ದಿಂದ ನನಗೆ ಹೋಡೆಯಲು ಬಂದಾಗ ನಾನು ತಪ್ಪಿಸಿಕೊಳ್ಳಲು ನನ್ನ
ಬಲಗೈ ಅಂಗೈ ಹಾಗೂ ತೋರು ಬೆರಳಿನ ಹತ್ತಿರ ಹತ್ತಿ ರಕ್ತಗಾಯವಾಯಿತು. ಜಗಳ ಬಿಡಿಸಲು ಬಂದ ಹಣಮಂತ ಸಿಂಗೆ ಮತ್ತು ಹಣಮಂತ ಕರಪೈಕಿ ಇವರು ಶಿವಾನಂದನ ಕೈಯಲಿದ್ದ ಕುಡುಗೋಲು ಕಸಿದುಕೊಳ್ಳಲು
ಹೋದಾಗ ಹಣಮಂತ ಸಿಂಗೆ ಇತನ ಬಲಗೈ ಅಂಗೈಯಲ್ಲಿ
ಕೂಡಾ ಕುಡಗೋಲು ಹತ್ತಿ ರಕ್ತ ಗಾಯವಾಯಿತು. ಮತ್ತು ಹಣಮಂತ ಕರಪೈಕಿ ಇತನನ ಎಡಗೈ ಮಣಿಕಟಿನ ಹತ್ತಿರ ತರಚಿದಗಾಯವಾಗಿರುತ್ತದೆ. ಶಿವಾನಂದನ ಸಂಗಡ ಇದ್ದ ಶಿವರಾಜ ಕೇವಂಟಿಗಿ ಇತನು ಹಣಮಂತ ತಂದೆ ಶಿವಲಿಂಗಪ್ಪಾ ಸಿಂಗೆ ಇತನಿಗೆ
ಕೈಯಿಂದ ಮುಷ್ಠಿ ಮಾಡಿ ಹೊಟ್ಟೆಯಲ್ಲಿ, ಎದೆಗೆ ಹೊಡೆಬಡಿ ಮಾಡಿದ್ದು, ಬಸವರಾಜ ಕೇವಂಟಿಗಿ , ವಿಠಲ್
ಕೇವಂಟಿಗಿ ಇವರಿಬ್ಬರು ಕೂಡಿ ಹಣಮಂತ ಕರಪೈಕಿ
ಮತ್ತು ಹಣಮಂತ ತಂದೆ ಲಕ್ಕಪ್ಪಾ ಸಿಂಗೆ ಇವರಿಗೆ ಕೈಗಳಿಂದ ಹೊಡೆಬಡಿ ಮಾಡುವಾಗ, ನನ್ನ ತಂಗಿ
ಸಾವಿತ್ರಿಬಾಯಿ ಇವಳು ಸದರಿ ಜಗಳ ಬಿಡಿಸಲು ಬಂದಾಗ ಶಿವಾನಂದನು ಆಕೆಗೆ
ನೂಕಿಸಿಕೊಟ್ಟಿದರಿಂದ ಅವಳು ಕೆಳೆಗೆ ಬಿದ್ದಿದ್ದು
ಅದರಿಂದ ಅವಳ ಎಡಕಣ್ಣಿನ ಹತ್ತಿರ ರಕ್ತಗಾಯವಾಗಿರುತ್ತದೆ. ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ
ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:427/2012 ಕಲಂ.341,323,324,504,307,ಸಂಗಡ 34
ಐಪಿಸಿ.ಮತ್ತು 3 (1) (10), (11) ಎಸ್.ಸಿ/ಎಸ್.ಟಿ
ಪಿ.ಎ.ಆಕ್ಟ 1986 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment