ಕಳ್ಳತನ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ರೇಖಾ ಗಂಡ ಕಿರಣಕುಮಾರ ಉ||
ಬೆರಳಚ್ಚುಗಾರರು ಸಂಚಾರಿ ಪೀಠ, ಸಾ|| ಹೈಕೊರ್ಟ ಪೀಠ ಕ್ವಾಟ್ರಸ್ ಗುಲಬರ್ಗಾರವರು ನಾನು ದಿನಾಂಕ:21/12/2012 ರಂದು ಸಂಜೆ ರಜೆಯ ಮೇಲೆ ಬೆಂಗಳೂರಿಗೆ (ಸ್ವಂತ ಊರಿಗೆ) ಹೋಗಿದ್ದು,ಇನ್ನೊಂದು ಕೀ ನನ್ನ
ಹತ್ತಿರವಿದ್ದು,ನಾನು ದಿನಾಂಕ:15/12/2012 ರಂದು ನನ್ನ ಸ್ವಂತ ಊರು ಮಂಗಳೂರಿಗೆ ಹೋಗಿರುತ್ತೆನೆ.
ನಾನು ನಮ್ಮ ಊರಿನಿಂದ ಮರಳಿ ಬಂದು ಬೀಗ ತೆರೆಯಲು ಹೋದಾಗ ಬಾಗಿಲನ ಕೊಂಡಿಯು ಸ್ಕ್ರೂ ಬಿಚ್ಚಿದ್ದು
ಒಳಗೆ ಹೋಗಿ ನೋಡಲಾಗಿ ಬೆಡ್‌ರೂಮಿನಲ್ಲಿದ್ದ ಆಲಮಾರಿ ಬಾಗಿಲು ಮುರಿದಿದ್ದು ಬಟ್ಟೆಗಳೆಲ್ಳಾ ಚೆಲ್ಲಾಪಿಲ್ಲಿಯಾಗಿ
ಬಿದ್ದಿದ್ದನ್ನು ಕಂಡು ನಾನು ಚಂದ್ರನಾಥರವರಿಗೆ ಪೋನ್ ಮಾಡಿ ಕೇಳಲಾಗಿ ಮನೆಯ ಕಳ್ಳತನವಾದ ಬಗ್ಗೆ
ತಿಳಿಸಿದ್ದು, ಅವರು ಹೇಳಿದ್ದೇನೆಂದರೆ ಅಲ್ಮಾರಿಯಲ್ಲಿ ನಗದು ಹಣ ಸುಮಾರು 500/- ಹಾಗೂ
ನಾಲ್ಕು ಗ್ರಾಂ ಬಂಗಾರ ಇಟ್ಟಿದ್ದನೆಂದು ಹೇಳಿರುತ್ತಾರೆ. ಹೀಗೆ ಒಟ್ಟು ನಗದು ಹಣ ಮತ್ತು ಬಂಗಾರ
ಕೂಡಿ ರೂ 12500/- ಮೌಲ್ಯದ
ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ21/12/2012 ರ ರಾತ್ರಿಯಿಂದ ದಿನಾಂಕ 26/12/2012 ರ ಬೆಳಿಗ್ಗೆ 8:30 ಗಂಟೆ ಮಧ್ಯದ
ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ: 432/2012 ಕಲಂ, 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಗೋಪಾಲರಾವ ತಂದೆ ವಿಶ್ವನಾಥ ಸೂರ್ಯವಂಶಿ ಉ: ಅಟೋಚಾಲಕ ಸಾ:ಮಾಣಿಕೇಶ್ವರ ಕಾಲೋನಿ ಗುಲಬರ್ಗಾ ರವರು ನಾನು ಮತ್ತು
ನನ್ನ ರಾಧಾ ಸೂರ್ಯವಂಶಿ ರವರು ಇಬ್ಬರೂ
ಕೂಡಿಕೊಂಡು ದಿನಾಂಕ 22-12-12 ರಂದು ಮನೆಯ ಸಾಮಾನುಗಳು ಖರೀದಿಸಿಬೇಕಾಗಿರುವದರಿಂದ ತಿಮ್ಮಾಪೂರ
ಸರ್ಕಲಕ್ಕೆ ಬಂದು ಸುಪರ ಮಾರ್ಕೆಟಕ್ಕೆ ಅಟೋ ಮುಖಾಂತರ ಹೋಗಬೇಕು ಅಂತಾ ರಸ್ತೆ ದಾಟುತ್ತಿರುವಾಗ
ಮಿನಿವಿಧಾನ ಸೌಧ ಕಡೆಯಿಂದ ಮೋಟಾರ ಸೈಕಲ ನಂಬರ:ಕೆಎ-32/ಇಎ-8677 ಸವಾರ ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು
ನನಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿರುತ್ತಾನೆ ಅಂತಾ ದಿನಾಂಕ:26-12-2012 ರಂದು ಸಾಯಂಕಾಲ 19-15
ಗಂಟೆಗೆ ಗೋಪಲರಾವ ರವರು ಅರ್ಜಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ,
279, 338 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮನುಷ್ಯ
ಕಾಣೆಯಾದ ಬಗ್ಗೆ:
ಬ್ರಹ್ಮಪೂರ
ಪೊಲೀಸ್ ಠಾಣೆ:ಶ್ರೀಮತಿ,
ಲಕ್ಷ್ಮಿ ಗಂಡ ನಾಗೇಶ
ಸಾತಾಳ, ವಯ|| 25 ವರ್ಷ, ಉ|| ಮನೆ ಕೆಲಸ,ಜಾತಿ|| ಭೋವಿ ವಡ್ಡರ, ಸಾ||ನಿಟ್ಟುನಹಳ್ಳಿ ಬಸ್ಸ
ನಿಲ್ದಾಣ ಹತ್ತಿರ ದಾವಣಗೆರೆ, ಹಾ||ವ|| ಪೊಲೀಸ ವಸತಿ ಗೃಹ ಡಿ.ಎ.ಆರ್ ಕೇಂದ್ರ ಸ್ಥಾನ
ಗುಲಬರ್ಗಾರವರು ನನ್ನ ಗಂಡನಾದ ನಾಗೇಶ ಇವನು ಸುಮಾರು 8 ವರ್ಷಗಳಿಂದ ಗುಲಬರ್ಗಾದ ಬಹುಮನಿ ಹೊಟೇಲದಲ್ಲಿ ಕೆಲಸ
ಮಾಡುತ್ತಿದ್ದನು. ನಾನು ಮತ್ತು ನನ್ನ ಗಂಡ ಇಬ್ಬರು ಕೂಡಿ ದೀಪಾವಳಿ ಹಬ್ಬಕ್ಕೆ ದಾವಣಗೆರೆಯಿಂದ
ಗುಲಬರ್ಗಾದ ಪೊಲೀಸ ವಸತಿ ಗೃಹಕ್ಕೆ ಬಂದಿರುತ್ತೇವೆ. ದಿನಾಂಕ:24/11/2012 ರಂದು ನನ್ನ ಗಂಡ ಮತ್ತು ನನ್ನ ಅಣ್ಣನಾದ ಭೀಮಾಶಂಕರ
ಇಬ್ಬರು ಕೂಡಿಕೊಂಡು ಆದಿತ್ಯ ಹೊಟೇಲ ಹತ್ತಿರ ಇರುವ ಹೆಚ್.ಡಿ.ಎಫ.ಸಿ ಬ್ಯಾಂಕಿಗೆ ಎ.ಟಿ.ಎಮ್
ಪಿನಕೋಡ ನಂಬರ ನೋಡಲು ಹೋಗುತ್ತೇವೆ ಅಂತಾ ಹೇಳಿ ಮನೆಯಿಂದ ಹೋದರು. ನಂತರ ನನ್ನ ಅಣ್ಣ ಮನೆಗೆ ಬಂದು
ಹೇಳಿದ್ದೆನೆಂದರೆ, ನಾಗೇಶನು ಬ್ಯಾಂಕಿನಲ್ಲಿ ಇರುವಾಗ ನನಗೆ ಪೋನ್ ಬಂದಿದೆ ಹೊರಗೆ ಹೋಗಿ
ಮಾತಾಡುತ್ತೇನೆ ಅಂತಾ ಹೊರಗೆ ಹೋದವನು ಬ್ಯಾಂಕ ಒಳಗಡೆ ಬಂದಿರುವದಿಲ್ಲ.ನಾನು 2-3 ತಾಸು ಬ್ಯಾಂಕಿನಲ್ಲಿ ಕುಳಿತುಕೊಂಡು ಅವನು ಬರದೆ
ಇರುವದರಿಂದ ಮನೆಗೆ ಬಂದಿರುತ್ತೇನೆ ಅಂತಾ ಹೇಳಿದನು. ನಾನು ಕೂಡ ನನ್ನ ಗಂಡನು ಬರಬಹುದೆಂದು
ತಿಳಿದು ಸುಮ್ಮನೆ ಇದ್ದೇನು. ನನ್ನ ಗಂಡನು ಹೋಗಿದ್ದ ದಿನದಿಂದ ಪೋನದಲ್ಲಿ ಮಾತಾಡಿರುವದಿಲ್ಲ.
ದಿನಾಂಕ:20-12-2012 ರಂದು ನನ್ನ ಭಾವನಾದ ನಾಗಭೂಷಣ ಇವರಿಗೆ ಮೊಬೈಲ ನಂ:09642522117
ನೇದ್ದರಿಂದ ಕಾಲ್ ಮಾಡಿ ನಾನು ತಿರುಪತಿಯಲ್ಲಿ ಇದ್ದೇನೆ ಬರುತ್ತೇನೆ ಅಂತಾ ಹೇಳಿರುತ್ತಾನೆ. ನಾನು
ಈ ನಂಬರಗೆ ಕರೆ ಮಾಡಿದಾಗ ಯಾವುದೇ ಪ್ರತಿ ಕ್ರಿಯೆ ನೀಡಿರುವದಿಲ್ಲ. ನನ್ನ ಗಂಡನು ಮನೆಗೆ
ಬರಬಹುದೆಂದು ತಿಳಿದು ತಡವಾಗಿ ಬಂದು ಈ ಅರ್ಜಿ ಕೊಟ್ಟಿರುತ್ತೇನೆ. ಕಾರಣ ನನ್ನ ಗಂಡನಿಗೆ ಪತ್ತೆ
ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:140/2012 ಕಲಂ, ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.ಕಾಣೆಯಾದ ಮನುಷ್ಯನ ಚಹರೆ ಪಟ್ಟಿ : ವಯಸ್ಸು 31 ವರ್ಷ, ಎತ್ತರ- 5’7” ದುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ತೆಲಗು,
ಕನ್ನಡ, ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ. ಸದರಿಯವರನು ಬಿಳಿ ಚೌಕಡಿ ಬಣ್ಣದ ಶರ್ಟ, ಕಪ್ಪು
ಬಣ್ಣದ ಪ್ಯಾಂಟ ಧರಿಸಿರುತ್ತಾನೆ. ಸದರಿ ಮನುಷ್ಯ ಕಂಡು ಬಂದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆ
ದೂರವಾಣಿ ನಂ: 08472-263618, ಗುಲಬರ್ಗಾ ಕಂಟ್ರೊಲ್ ರೂಮ್ ನಂ: 08472-263604 ಅಥವಾ
9480803608 ಸದರಿಯವರ ಪಾಲಕರ ದೂರವಾಣಿ ಸಂ: 9591634932 ನೇದ್ದಕ್ಕೆ ಸಂಪರ್ಕಿಲಸು ಕೋರಲಾಗಿದೆ.
No comments:
Post a Comment