Police Bhavan Kalaburagi

Police Bhavan Kalaburagi

Monday, December 3, 2012

GULBARGA DISTRICT REPORTED CRIMES


ಕೊಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಅಲ್ಲಾಬಕ್ಷ ತಂದೆ ಅಬ್ದುಲ್ಲಾ ಸಾ:ಶಹಾ ಜೀಲಾನಿ ದರ್ಗಾ, ಎಮ್.ಎಸ್.ಕೆ. ಮೀಲ್  ಮದೀನಾ ಕಾಲೋನಿ ಗುಲಬರ್ಗಾರವರು ನನ್ನ ಮಗನಾದ ಮಾಜೀದ ತನು ಟೋರಿಕ್ಷಾ ನಂ ಕೆಎ-32, 7308 ನೇದ್ದನ್ನು ಬಾಡಿಗೆ ಹೊಡೆಯಲು ದಿನಾಂಕ: 02/12/2012 ರಂದು ಮನೆಯಿಂದ ಮಧ್ಯಾಹ್ನ 2-00 ಗಂಟೆಗೆ ಹೋದನು ಸಾಯಂಕಾಲ 7-00 ಗಂಟೆ ಸಮಯಕ್ಕೆ ನಮ್ಮ ಓಣಿಯ ಖಾಜಾ ಪಾಶಾ ಮತ್ತು ನಜೀರ ಅಹ್ಮದ ಇವರು ಆಟೋದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಬಂದು ಮನೆ ಮುಂದೆ ಆಟೋ ಬಿಟ್ಟು ಹೋದರು ನ್ನ ಮಗನಿಗೆ ನೋಡಲು ಅವನ ಹೊಟ್ಟೆಗೆ ರಕ್ತಗಾಯವಾಗಿ ನರಳಾಡುತಿದ್ದನು ವಿಚಾರಿಸಲಾಗಿ ಜಾಕೀರ @ ಜಕ್ಕ್ಯಾ,ಖಾಜಾ ಪಾಶಾ @ ಖಾಜಾ ಬೀಡಿ ಆಟೋ ಡ್ರೈವರ,ಮೈನು @ ಮೈನೋದ್ದಿನ ದೊಸಾ ಆಟೋ ಡ್ರೈವರ,ಮಹೇಬೂರ @ ಬುಡ್ಯಾ,ನಜೀರ ಅಹ್ಮದ  ಸಾ: ಎಲ್ಲರೂ ಗುಲಬರ್ಗಾರವರು ಅವರಿಗೆ ಸರಾಯಿ ಕುಡಿಸದೇ ಇದುದ್ದರಿಂದ ಚಾಕುವಿನಿಂದ ಹೊಟ್ಟೆಗೆ ಹೊಡೆದು ಭಾರಿ ರಕ್ತಗಾಯಪಡಿಸಿದ್ದು, ಸದರಿಯವನಿಗೆ ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ರಾತ್ರಿ 9-20 ಗಂಟೆಗೆ ಹೋದಾಗ ವೈದ್ಯಧಿಕಾರಿಗಳು ನೋಡಿ ಮೃತಪಟ್ಟಿರುತ್ತಾನೆ ಅಂತ ತಿಳಿಸಿದರು, ಸದರಿ ಮೇಲ್ಕಂಡ 5 ಜನರು ಮಾಜೀದನಿಗೆ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 400/2012 ಕಲಂ 143, 147, 148,  504, 341, 302 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಪ್ರಕಾಶ ತಂದೆ ಜೈರಾಜ ಕರಕಿ   ಸಾ:ಅಂಬಾಬಾಯಿ ಗುಡಿ ಹತ್ತಿರ ಶಕ್ತಿ ನಗರ  ಗುಲಬರ್ಗಾ  ರವರು ನಾನು ದಿನಾಂಕ:02-12-2012 ರಂದು ನನ್ನ ತಂದೆಯಾದ ಜೈರಾಜ ಇವರು ಐವಾನ ಈ ಶಾಯಿ ಕಡೆಗೆ ನನಗೆ ಪರಿಚಯ ಇರುವವರಿಗೆ ಬೇಟಿಯಾಗಲು ಹೋಗುತ್ತೆನೆ ಅಂತಾ ಹೇಳಿ ಹೋಗಿದ್ದರು. ನಮ್ಮ ತಂದೆಯವರು ವಿಜಯ ವಿಧ್ಯಾಲಯ ಕಾಲೇಜ ಎದುರಗಡೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ  ಕೆಎ-51 ಇಡಿ 7822 ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ನಮ್ಮ ತಂದೆಯಾದ ಜೈರಾಜ ಇವರಿಗೆ   ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 118/2012 ಕಲಂ, 279,338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶಿವರಾಜ ತಂದೆ ಮಲ್ಲಿಕಾರ್ಜುನ ಮಾಶಟ್ಟಿ ಸಾ|| ಹೊಸ ರಾಘವೇಂದ್ರ ಕಾಲೋನಿ ಗುಲಬರ್ಗಾರವರು ನಮ್ಮ ತಾಯಿಯ ತವರು ಮನೆ ಗುಲಬರ್ಗಾ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿದ್ದು, ಸದರಿ ಗ್ರಾಮದಲ್ಲಿ ತಾಯಿಯ ತಂದೆಯಾದ ಕಲ್ಲಪ್ಪ ಇವರ ಹೆಸರಿನಲ್ಲಿ 5 ಎಕರೆ ಹೊಲ ಇದ್ದು, ಅದಕ್ಕೆ ನಾನು ಮತ್ತು ನಮ್ಮ ಅಣ್ಣ  ಸಿದ್ದು ಇಬ್ಬರು ಒಟ್ಟಿಗೆ ಸೇರಿ ಆಸ್ತಿ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹಾಕಿರುತ್ತೆವೆ.15 ದಿವಸಗಳಿಂದ  ಸಿದ್ದು ಈತನು ನನಗೆ  ಕೇಸು ವಾಪಸ್ಸು ತೆಗೆದುಕೊ ಅಂತ ಅಂದಿದ್ದು, ಅದಕ್ಕೆ ನಾಣು ನಿರಾಕರಿಸಿರುತ್ತೆನೆ, ಇದೇ ವಿಷಯದಲ್ಲಿ ತಕರಾರು ಮಾಡುತ್ತಾ ಸಿದ್ದು ಈತನು ತನ್ನ ಜೊತೆ ಮಂಜು ಹಾಗು ಇನ್ನೊಬ್ಬನೊಂದಿಗೆ ಬಂದು ನನ್ನ ಮನೆಯೊಳಗೆ ಪ್ರವೇಶ ಮಾಡಿ, ಅವಾಚ್ಯದಿಂದ ಬೈದು, ಕೈಯಿಂದ ಹಾಗು ಕಲ್ಲಿನಿಂದ ಹೋಡೆದು ಗುಪ್ತಗಾಯಪಡಿಸಿದ್ದು, ಅಲ್ಲದೆ ಜಗಳದಲ್ಲಿ ನನ್ನ ಕೊರಳಲ್ಲಿದ್ದ ಬಂಗಾರ ಲಾಕೇಟ ಮತ್ತು ಜಗಳ ಬಿಡಿಸಲು ಬಂದ ನನ್ನ  ಹೆಂಡತಿ ಕೋರಳಲ್ಲಿದ್ದ ಬಂಗಾರದ ಮಂಗಳ ಸೂತ್ರ ಹಾಗು ಬೋರಮಳ ಸರ ಕಡಿದು ಬಿದ್ದಿದ್ದು ಸಿಕ್ಕಿರುವದಿಲ್ಲಾ. ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:90/2012 ಕಲಂ 448, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: