ಮೋಟಾರ ಸೈಕಲ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ,ವಿಧ್ಯಾದರ ತಂದೆ ಮಲ್ಲಿಕಾರ್ಜುನ ಬಿರಾದಾರ ಸಾ|| ಗೋದುತಾಯಿ ನಗರ
ಗುಲಬರ್ಗಾ ರವರು ನಾನು ದಿನಾಂಕ:26/10/2012 ರಂದು ಎಂದಿನಂತೆ ಆಶ್ರಯ ಲಾಡ್ಜದಲ್ಲಿ 7-30
ಪಿ.ಎಂ.ಕ್ಕೆ ರಿಸೆಷ್ಟನಿಸ್ಟ ಕೆಲಸಕ್ಕಾಗಿ ನನ್ನ ಹಿರೋ ಹೊಂಡಾ ಸಿ.ಡಿ 100 ನಂ. ಕೆ.ಎ-32 ಜೆ-234
ನೇದ್ದು ಆಶ್ರಯ ಲಾಡ್ಜ ಎದುರಿಗೆ ನಿಲ್ಲಿಸಿ ನನ್ನ ಕೆಲಸ ಮಾಡುತ್ತಿದ್ದೇನು. ನಂತರ 10-30
ಪಿ.ಎಂ.ಕ್ಕೆ ನೋಡಲಾಗಿ ನನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ನನ್ನ ಮೋಟಾರ ಸೈಕಲ್ ಹಿರೋ ಹೊಂಡಾ ಸಿಡಿ
100 ನಂ. ಕೆ.ಎ-32 ಜೆ-234 ಇಂಜನ ನಂ. 97ಸಿ10ಇ05162 ಚೆಸ್ಸಿ ನಂ. 97ಸಿ10ಎಫ್04732 ಅ.ಕಿ. 25,000/- ರೂ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.112/2012 ಕಲಂ. 379 ಐಪಿಸಿ ನೇದ್ದರ
ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ರವಿ
ತಂದೆ ಬಸವರಾಜ ಅಟ್ಟೂರ @ ಕೊಳ್ಳುರು ಸಾ:ಪಟ್ಟಣ
ಗ್ರಾಮ ತಾ:ಜಿ: ಗುಲಬರ್ಗಾರವರು ನಾನು ಮತ್ತು ಶರಣಬಸಪ್ಪಾ
ದಿನಾಂಕ:03-12-2012 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಹೋಟಲ ಸಾಮಾನು
ಖರೀದಿಸಲು ಪಟ್ಟಣದಿಂದ ಹೊಂಡಾ ಸೈನ ಕೆಎ-34 ವಿ-3945 ನೇದ್ದರ
ಮೇಲೆ ಗುಲಬರ್ಗಾಕ್ಕೆ ಬಂದು ಸ್ಟೋ
ಮತ್ತು ಚಹಾ ಗ್ಲಾಸುಗಳು ಖರೀದಿಸಿ ವಾಪಸ್ಸ ಪಟ್ಟಣಕ್ಕೆ ಅದೇ ಮೋಟಾರ ಸೈಕಲ ಮೇಲೆ ಹೋರಟಿದ್ದು, ಮೋಟಾರ
ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋರಟಿದ್ದನ್ನು ನೋಡಿ ಸಾವಕಾಶವಾಗಿ
ನಡೆಯಿಸು ಅಂತಾ ಹೇಳಿದರೂ ಅತಿವೇಗದಿಂದ ನಡೆಸುತ್ತಾ ವಿಶ್ವರಾಧ್ಯ ಗುಡಿ ದಾಟಿ ಹೊಸದಾಗಿ ರೇಲ್ವೆ ಟ್ರಾಕ ಬ್ರೀಡ್ಜ ಸಲುವಾಗಿ ರೋಡಿಗೆ ಅಡ್ಡಲಾಗಿ 4-5 ಫೀಟ ಎತ್ತರದ ಇಟ್ಟಂಗಿ ಗೋಡೆ ಕಟ್ಟಿದ್ದನ್ನು ನೋಡದೇ
ಅತಿವೇಗದಿಂದ ನಡೆಸುತ್ತಾ ಹೋರಟಿದ್ದನ್ನು,ಗೋಡೆ ಹತ್ತಿರ ಬಂದಾಗ ಒಮ್ಮಿಂದ ಒಮ್ಮೇಲೆ
ವೇಗದಲ್ಲಿ ಬ್ರೇಕ ಹಾಕಿ ವೇಗದ ನಿಯಂತ್ರಣ ತಪ್ಪಿ
ರೋಡಿಗೆ ಅಡ್ಡವಾಗಿ ಕಟ್ಟಿದ ಇಟ್ಟಂಗಿ ಗೋಡೆಗೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ನನ್ನ ತಲೆಗೆ,
ಬಲ ಮೆಲಕಿನ
ಹತ್ತಿರ, ಕೈಯಿಗೆ ಕಾಲಿಗೆ ರಕ್ತಗಾಯವಾಗಿದ್ದು ಮೃತ ಶರಣುವಿಗೆ ತಲೆಗೆ, ಬಲ ಮೆಲಕಿನ ಹತ್ತಿರ,
ಎದೆಗೆ, ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ನಂ:403/12 ಕಲಂ 279, 337, 304 (ಎ) ಐಪಿಸಿ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
No comments:
Post a Comment