ದರೋಡೆ ಪ್ರಕರಣ:
ಕುಂಚಾವರಂ ಪೊಲೀಸ್ ಠಾಣೆ:ಪೆಂಟಮ್ಮ ಗಂಡ ಮಾಣೆಪ್ಪ ಕಾಮಣಿ ಕಂತುಲಾ ವಯ:65 ಜಾ:ಉ|| ಹೊಲ ಮನೆಕೆಲಸ ಕುರುಬುರ ಸಾ:ಲಚಮಸಾಗರ ರವರು ನಾನು ದಿನಾಂಕ:27-12-2012 ರಂದು ಸಾಯಂಕಾಲ 4-00 ಗಂಟೆಗೆ ಕುಂಚಾವರಂದಿಂದ ಲಚಮಸಾಗರ ಗ್ರಾಮಕ್ಕೆ ನಡೆದುಕೊಂಡು ಬರುತ್ತಿರುವಾಗ ದ್ವಿಚಕ್ರದ ಮೇಲೆ ಬಂದ ಮೂರು ಜನರು ನನ್ನ ಕಪಾಳಕ್ಕೆ ಹೊಡೆದು, ನನ್ನ ಕೊರಳಲ್ಲಿಯ ಒಂದು ತೊಲೆ ಬಂಗಾರದ ಸಣ್ಣ ಗುಂಡಿನ ಸರವನ್ನು ಕಿತ್ತುಕೊಂಡು ವಾಹನದ ಮೇಲೆ ಕುಂಚಾವರಂ ಮಾರ್ಗವಾಗಿ ಹೋಗುತ್ತಿರುವಾಗ ಸಾರ್ವಜನಿಕರು ಮತ್ತು ಪೊಲೀಸ್ ರು ಬೆನ್ನು ಹತ್ತಿ ಹಿಡಿದಿರುತ್ತಾರೆ. ಸದರಿ ಪೆಂಟಮ್ಮ ರವರು ನೀಡಿದ ಹೇಳಿಕೆ ಸಾರಂಶದ ಮೇಲಿಂದ ಸದರಿ ಆರೋಪಿತರಾದ ಪೃಥ್ವಿರಾಜ ತಂದೆ ನಿಂಗೋಜಿ, ಇರ್ಪಾನ್ ತಂದೆ ಖಲೀಲಮಿಯಾ, ಮತ್ತು ಇಬ್ರಾಹಿಂ ತಂದೆ ರಿಹಾದ ಖಾನ ಸಾ|| ಮೂರು ಜನರು ರಂಜೋಳ ಗ್ರಾಮ ಆಂದ್ರ ಪ್ರದೇಶ ರವರನ್ನು ಮತ್ತು ಕೃತ್ಯಕ್ಕೆ ಬಳಸಿದ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಂಡು ಠಾಣೆ ಗುನ್ನೆ ನಂ:52/2012 ಕಲಂ,394 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಗೋವಿಂದ ತಂದೆ ಖುಬ್ಯಾ ನಾಯಕ ಸಾ: ಬಟಗೇರಾ (ಕೆ) ಗೇಟ ತಾ:ಸೇಡಂ ಜಿ:ಗುಲಬರ್ಗಾರವರು ನಾನು ಮತ್ತು ನಮ್ಮ ಊರಿನವರಾದ ಮೇಗು ತಂದೆ ಕಾಶ್ಯಾ ನಾಯಕ, ಸಂತೋಷ ತಂದೆ ಲಷ್ಕರ ರವರು ದಿನಾಂಕ 21-12-12 ರಂದು ರಾತ್ರಿ 9-15 ಗಂಟೆ ಸುಮಾರಿಗೆ ಪುನಾಕ್ಕೆ ಹೋಗುವ ಸಲುವಾಗಿ ನಮ್ಮೂರಿನಿಂದ ಗುಲಬರ್ಗಾಕ್ಕೆ ಬಂದು ರಾಮಮಂದಿರ ರಿಂಗ ರೋಡ ಹತ್ತಿರ ಬಸ್ಸಿನಿಂದ ಇಳಿದು ಹಳೇ ಜೇವರ್ಗಿ ರೋಡ ರೈಲ್ವೆ ಅಂಡರ ಬ್ರೀಡ್ಜ ಮುಖಾಂತರ ರೈಲ್ವೆ ಸ್ಟೇಷನಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಟೋರಿಕ್ಷಾ ನಂಬರ ಕೆಎ-32/ಎ-4863 ಚಾಲಕ ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಹೋರಟು ಹೋಗಿರುತ್ತಾನೆ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 127/12 ಕಲಂ: 279,338 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ್ ಠಾಣೆ: ಶ್ರೀ ಸುಭಾಸ ತಂದೆ ಭೋಜಪ್ಪ ರಾಗಾ ಉ|| ಪ್ರಾಚಾರ್ಯರು ಮಾತೋಶ್ರಿ ನೀಲಾಂಬಿಕಾ ಎಸ್. ಪಾಟೀಲ ಪಬ್ಲೀಕ ಶಾಲೆ ಬೂಸನೂರ, ಸಾ||ಬೀದರ, ಹಾ||ವ||ಮುನ್ನೋಳ್ಳಿ ನಿವಾಸ ತಿಮ್ಮಾಪೂರ ಸರ್ಕಲ ಹತ್ತಿರ ಗುಲಬರ್ಗಾ ರವರು ನಾವು ದಿನಾಂಕ:26/12/2012 ರಂದು 1600 ಗಂಟೆಗೆ ಶಾಲೆಯ ಅವಧಿ ಮುಗಿದ ನಂತರ ಶಾಲಾ ಮಕ್ಕಳಿಗೆ ವಾಹನದಲ್ಲಿ ಕಳುಹಿಸಿದ ನಂತರ ಶಾಲೆಯ ಎಲ್ಲಾ ಎಂಟು ಕೊಣೆಗಳಿಗ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ:27/12/2012 ರಂದು ಬೆಳಿಗ್ಗೆ 9-30 ಗಂಟೆಗೆ ಶಾಲೆಗೆ ಬಂದಾಗ ಎಲ್ಲಾ ಕೊಣೆಗಳ ಬೀಗ ಮುರಿದಿದ್ದು ಕಂಡು ಬಂದಿದ್ದು, ಕಛೇರಿ ಕೊಣೆಯೊಳಗೆ ನೋಡಲಾಗಿ,ಮೈಕ –02, ಎಂಪ್ಲಿಫಾಯರ-01, ಅ||ಕಿ|| 21,000/- ಡಿಸೇಲ 25 ಲೀಟರ ಅ||ಕಿ||1050/- ನೀರಿನ ಪ್ಲಾಸ್ಟೀಕ ಪೈಪ 200 ಮೀಟರ ಉದ್ದ, ಅ||ಕಿ|| 2,000/- ನೇದ್ದವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತ ಅರ್ಜಿಯ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.:114/2012 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment