ಎಲ್.ಐ.ಸಿ
ಏಜೆಂಟನಿಂದ ಮಹಿಳೆಯ ಅಪಹರಣ::
ಚಿಂಚೋಳಿ
ಪೊಲೀಸ್ ಠಾಣೆ: ಶ್ರೀ ರಾಜಕುಮಾರ
ತಂದೆ ರಾಮಚಂದ್ರ ವ|| 40 ಉ|| ಸೈಕಲ್ ಮೆಕ್ಯಾನಿಕ ಸಾ|| ಚಂದಾಪೂರ, ತಾ|| ಚಿಂಚೋಳಿ ರವರು ನಾನು ಸುಮಾರು 12 ವರ್ಷಗಳ ಹಿಂದೆ ಆಂದ್ರ
ಪ್ರದೆಶದ ಖಾಜಾಮಲ್ಕಾಪೂರ ಗ್ರಾಮದ ಗಣಪತಿ ಇವರ ಮಗಳಾದ ರಾಣಿಬಾಯಿ ಇವಳನ್ನು ಮದುವೆಯಾಗಿದ್ದು, ನನಗೆ
ನಾಲ್ಕು ಜನ ಮಕ್ಕಳಿರುತ್ತಾರೆ. ಶಶಿಕಾಂತ ಇತನು ಎಲ್. ಐ.ಸಿ ಏಜೆಂಟ ಅಂತಾ ಕೆಲಸ ಮಾಡುತ್ತೆನೆಂದು ಹೇಳಿ ಚಂದಾಪೂರದಲ್ಲಿರುವ ನಮ್ಮ
ಮನೆಯನ್ನು ಬಾಡಿಗೆ ತೆಗೆದುಕೊಂಡು ಮೂರು ತಿಂಗಳವರೆಗೆ ವಾಸ ಮಾಡಿರುತ್ತಾನೆ ನಾನು ಚಿಂಚೋಳಿಯಲ್ಲಿ ನನ್ನ
ಸ್ವಂತದೊಂದು ಸೈಕಲ್ ಅಂಗಡಿ ಇದ್ದು ಅದರಲ್ಲಿ ನಾನು ಸೈಕಲ್ ರೀಪೆರಿ ಕೆಲಸ ಮಾಡುತ್ತೆನೆ. ದಿನಾಲು ಮುಂಜಾನೆ ಮನೆಯಿಂದ 10.00 ಗಂಟೆಗೆ ಅಂಗಡಿ ಕಡೆಗೆ ಬಂದರೆ ರಾತ್ರಿ 9.00 ಗಂಟೆಗೆ ಮನೆಗೆ ಹೋಗುತ್ತೆನೆ. ಶಶಿಕಾಂತ ಇತನು ಎರಡು
ತಿಂಗಳ ಹಿಂದೆ ನನಗೆ ನಿನ್ನ ಹೆಂಡತಿಯನ್ನು ಒಂದಿಲ್ಲ ಒಂದು ದಿವಸ ಅಪಹರಣ ಮಾಡಿಕೊಂಡು ಹೋಗುತ್ತನೆಂದು
ಹೇಳಿದ್ದ. ಆಗ ನಾನು ಮತ್ತು ನನ್ನ ತಂದೆ- ತಾಯಿಯವರು ಅವನಿಗೆ ಹಾಗೆಲ್ಲ ಮಾತಾಡುವುದು ಸರಿಯಲ್ಲಾ
ಎಂದು ತಿಳಿ ಹೇಳಿರುತ್ತೆವೆ. ಕಳೆದ 10 ದಿನಗಳ ಹಿಂದೆ ನನ್ನ ಮನೆಯನ್ನು ಖಾಲಿ ಮಾಡಿ
ಹೋಗಿರುತ್ತಾನೆ.ದಿನಾಂಕ:02-12-2012 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ನನ್ನ ಕೆಲಸಕ್ಕೆಂದು ದಿನ ನಿತ್ಯದಂತೆ ಅಂಗಡಿಗೆ
ಹೋಗಿರುತ್ತೆನೆ, ನಮ್ಮ ಮನೆಯಲ್ಲಿ ನನ್ನ ತಾಯಿ ಮತ್ತು ಹೆಂಡತಿ ಇಬ್ಬರು ಮನೆಯಲ್ಲಿದ್ದಾಗ ಸಾಯಾಂಕಾಲ 6.00
ಗಂಟೆಗೆ ಶಶಿಕಾಂತ ಇವನು ನಮ್ಮ ಮನೆಗೆ ಬಂದು ನನ್ನ ಹೆಂಡತಿಗೆ ನಂಬಿಸಿ ಪುಸಲಾಯಿಸಿ,ನಿನಗೆ
ಮದುವೆಯಾಗುತ್ತೆನೆ ಅಂತಾ ಹೇಳಿ ಆಕೆಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ.ಮನೆಯಲ್ಲಿದ್ದ ವಯಸ್ಸಾದ ನನ್ನ ತಾಯಿಯು ಏ
ಶಶಿಕಾಂತ ನನ್ನ ಸೋಸೆಗೆ ಈ ತರಹ ಅಪಹರಣ ಮಾಡಿಕೊಂಡು ಹೋಗಬೇಡ ಅವಳಿಗೆ ನಾಲ್ಕು ಜನ ಚಿಕ್ಕ ಚಿಕ್ಕ
ಮಕ್ಕಳು ಇದ್ದಾರೆ ಅವಳಿಗೆ ಇಲ್ಲಿಯೇ ಬಿಡು ಎಂದು ಚೀರಾಡಿದರೂ ಕೇಳದೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ.
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ:122/2012 ಕಲಂ 366,498,504,506, ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಕಳ್ಳತನ
ಪ್ರಕರಣ:
ಶಹಾಬಾದ
ನಗರ ಪೊಲೀಸ್ ಠಾಣೆ:ಶ್ರೀ ಶಬ್ಬೀರ ತಂದೆ
ಹಾಜಿಲಾಲ ಕಾರೋಬಾರಿ ಉ:ಖಣಿ ವ್ಯಾಪಾರ ಸಾ:ಮಿಲ್ಲತ ನಗರ ಶಹಾಬಾದರವರು ನಮ್ಮ ಖಣಿಯಲ್ಲಿ ದಿನಾಂಕ:27/11/2012 ರಂದು ರಾತ್ರಿ 7 ಗಂಟೆಯವರೆಗೆ ಖಣಿಯಲ್ಲಿಯ ಕಲ್ಲುಗಳು ಕತ್ತರಿಸುವ ಕೆಲಸ
ಮುಗಿಸಿ ಮನೆಗೆ ಹೋಗಿರುತ್ತೆನೆ. ದಿನಾಂಕ:28/11/2012 ರಂದು ಬೆಳ್ಳಿಗ್ಗೆ 7.00 ಗಂಟೆಗೆ ಖಣಿಗೆ ಬಂದು ನೋಡಲು ಖಣಿಯಲ್ಲಿಯ ಕಲ್ಲುಗಳ ಕತ್ತರಿಸುವ
ಕ್ವಾರಿ ಕಟ್ಟಿಂಗ ಮಶೀನಗೆ ಜೋಡಿಸಿದ ಕೇಬಲ ವೈರ್ 150 ಪೀಟ ಅ.ಕಿ. 12,000/-ರೂಪಾಯಿಗಳದ್ದು ಯಾರೋ ಕಳ್ಳರು
ಕತ್ತಿರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:160/2012
ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ
ಜೂಜಾಟ ಪ್ರಕರಣ:
ನಿಂಬರ್ಗಾ
ಪೊಲೀಸ್ ಠಾಣೆ:ದಿನಾಂಕ:04-12-2012
ರಂದು 10-30 ಗಂಟೆಗೆ ದುತ್ತರಗಾಂವ ಗ್ರಾಮದ ವೀರೇಶ್ವರ ಗುಡಿಯ ಹತ್ತಿರ ಆಲದ ಮರದ ಕೆಳಗೆ ಒಬ್ಬನು ಸಾರ್ವಜನಿಕರಿಂದ
ಒಂದು ರೂಪಾಯಿಗೆ ಎಂಬತ್ತು ರೂಪಾಯಿ ನೀಡುವ ಕರಾರಿನ ಮೇಲೆ ಅಂಕಿ-ಸಂಖ್ಯೆಯ ಮೇಲೆ ಹಣವನ್ನು ಪಣಕ್ಕೆ
ಪಡೆದು ದೈವಲೀಲೆ ನಡೆಯುವ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಪಿಐ ಶ್ರೀ
ಜಿ.ಎಸ್. ಉಡಗಿ ಆಳಂದ ವೃತ್ತ ರವರು ಸಿದ್ದಣ್ಣ
ತಂದೆ ವೀರಣ್ಣ ಪೊಲೀಸ್ ಪಾಟೀಲ ಸಾ|| ದುತ್ತರಗಾಂವ ಇತನನ್ನು ವಶಕ್ಕೆ ತೆಗೆದುಕೊಂಡು ಅಕ್ಕಲಕೋಟದ
ನಿವಾಸಿ ಶಪೀ ಇತನಿಗೆ ಕೊಡುತ್ತಿದ್ದ ಮಟಕಾ ಜೂಜಾಟ ಚೀಟಿಗಳು, ಮತ್ತು ಆತನ ಹತ್ತಿರವಿರುವ ಮೊಬಾಯಿಲ್,
ನಗದು ಹಣ, ಪೆನ್ನ ಇತ್ಯಾದಿ ಜಪ್ತಿ ಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ:103/2012 ಕಲಂ 78 (3) ಕೆ.ಪಿ.ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲ
ಮಾಡಿಕೊಳ್ಳಲಾಗಿದೆ.
No comments:
Post a Comment