Police Bhavan Kalaburagi

Police Bhavan Kalaburagi

Friday, December 14, 2012

GULBARGA DISTRICT REPORTED CRIMES



ಕಳ್ಳತನ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ. ಗುರುಪಾದಪ್ಪ ತಂದೆ ಹುಚ್ಚಪ್ಪ ಮಾಟೂರ ಸಾ: ಕಮಲಾಪೂರ ತಾ;ಜಿ:ಗುಲಬರ್ಗಾರವರು ನಾನು ಮತ್ತು ನಮ್ಮ ಪೆಟ್ರೊಲ ಪಂಪದಲ್ಲಿ ಕೆಲಸ ಮಾಡುವ ಮಲ್ಲಣ್ಣಗೌಡ ತಂದೆ ಅಣ್ಣಾರಾವ  ಮಾಲಿಪಾಟೀಲ್, ಶಂಕರ ತಂದೆ ಬಸವಣ್ಣಪ್ಪ ಬಿರಾದಾರ ಕೂಡಿಕೊಂಡು ದಿನಾಂಕ:13/12/2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅಮವಾಸ್ಯೆ ಪೂಜೆ ಮುಗಿಸಿಕೊಂಡು ರಾತ್ರಿ 9-30 ಗಂಟೆ ಸುಮಾರಿಗೆ ಪೆಟ್ರೊಲ್ ಪಂಪ ಸ್ಟಾಕ್ ನೋಡಿಕೊಂಡು ಮನೆಗೆ ಹೋಗಿರುತ್ತೆವೆ. ದಿನಾಂಕ:14/12/2012 ರಂದು ಬೆಳಗಿನ ಜಾವ 5-30 ಗಂಟೆ ಸುಮಾರಿಗೆ ನಮ್ಮ ಪೆಟ್ರೊಲ ಪಂಪದಲ್ಲಿ ಕೆಲಸ ಮಾಡುವ ಶಂಕರ ಬಿರಾದಾರ ಇತನು ನನಗೆ ಫೋನ್ ಮಾಡಿ ರಾತ್ರಿ 11-30 ಗಂಟೆಗೆ ನಾನು ಮತ್ತು ಮಲ್ಲಣ್ಣಗೌಡ ಕೂಡಿಕೊಂಡು ಪೆಟ್ರೊಲ ಪಂಪ ಬಂದ ಮಾಡಿ ಊಟ ಮಾಡಿಕೊಂಡು ಹಿಂದಿನ ರೂಮಿಗೆ ಕೀಲಿ ಹಾಕಿ ಮಲಗಿಕೊಂಡಿದ್ದು, ಬೆಳೆಗ್ಗೆ 5-00 ಗಂಟೆ ಸುಮಾರಿಗೆ  ನೋಡಲಾಗಿ ಪೆಟ್ರೊಲ್ ಮತ್ತು ಡಿಜೇಲ್ ಟ್ಯಾಂಕಿನ ಮೇಲೆ ಮುಚ್ಚುವ ಕಬ್ಬಿಣದ ಪ್ಲೇಟಗಳು ಕಾಣಲಿಲ್ಲ. ಗಾಬರಿಗೊಂಡು ಮಲ್ಲಣ್ಣಗೌಡರನ್ನು ತೋರಿಸಿದೆನು. ಹಿಂದಿನ ಕೋಣೆಗೆ ಹೋಗಿ ನೋಡಲಾಗಿ ಬಾಗಿಲ ಕೀಲಿ ಮುರಿದು ಕೆಳಗೆ ಬಿದ್ದಿರುತ್ತದೆ ಅಂತಾ ತಿಳಿಸಿದರು ನಾನು ಬಂದು ನೋಡಲು ನಿಜವಿರುತ್ತದೆ ನಮ್ಮ ಪೆಟ್ರೊಲ್ ಪಂಪದಿಂದ ಅಂದಾಜು 1200 ಲೀಟರ್  ಅ.ಕಿ. 61752-00 ರೂಪಾಯಿಗಳದ್ದು, ಪೆಟ್ರೊಲ್ ಅಂದಾಜು 700 ಲೀಟರ್ ಅ.ಕಿ. 51632-00 ರೂಪಾಯಿಗಳದ್ದು, ಆಯೀಲ್ 40 ಎಂ.ಎಲ್ ಅಳತೆಯ 5 ಕಾಟನಗಳು ಮತ್ತು 20 ಎಂ.ಎಲ್.ದ ಎರಡು ಕಾಟನಗಳು ಅ.ಕಿ. 21000-00, 4.8 ಬ್ಯಾಟರಿಗಳು ಅ.ಕಿ.108000-00 ರೂಪಾಯಿಗಳದ್ದು, ಒಂದು ಯು.,ಪಿ.ಎಸ್. ಅ.ಕಿ. 90,000-00 ರೂಪಾಯಿಗಳದ್ದು ಹೀಗೆ ಒಟ್ಟು 3,32,384-00 ರೂಪಾಯಿಗಳ ಕಿಮ್ಮತ್ತಿನವುಗಳು ದಿನಾಂಕ: 13/12/2012 ರಂದು ರಾತ್ರಿ  11-30 ಗಂಟೆಯಿಂದ ದಿನಾಂಕ:14/12/2012 ರ ಬೆಳಗಿನ ಜಾವ 5-00 ಗಂಟೆಯ ಮಧ್ಯದ ಅವಧಿಯ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:126/2012 ಕಲಂ  457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ;ಶ್ರೀಮತಿ;ನಿರ್ಮಲಾ ಗಂಡ ವಿ.ಸಿ ನಾಗರಾಜ ಸಾ|| ಮನೆ ನಂ 167  ಯಶವಂತಪೂರ ಬೆಂಗಳೂರ ಹಾ||ವ|| ಸಂಗಮೇಶ್ವರ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:08.04.2012 ರಂದು ವಿ.ಸಿ ನಾಗರಾಜ ತಂದೆ ಚಂದ್ರಶೇಖರ ಸಾ:ಯಶವಂತಪೂರ ಇತನೊಂದಿಗೆ ಮದುವೆಯಾಗಿದ್ದು, ಮದುವೆಯ ನಿಶ್ಚಿತಾರ್ಥ ಕಾಲಕ್ಕೆ ಗುರು ಹಿರಿಯರ ಸಮಕ್ಷಮ 10.3.2012 ರಂದು ವರದಕ್ಷಿಣೆ 1 ಲಕ್ಷ ರೂಪಾಯಿ ಅರ್ದ ತೊಲೆ ಬಂಗಾರ ನೀಡಿದ್ದು, ಮದುವೆಯಲ್ಲಿ ಮತ್ತೆ 1 ಲಕ್ಷ ರೂಪಾಯಿ 20 ಗ್ರಾಂ ಬಂಗಾರದ ಚೈನ , 20 ಗ್ರಾಂ ಬ್ರಾಸ್ಲೆಟ,  5 ಗ್ರಾಂ ಬಂಗಾರದ ಉಂಗುರ,  20 ಗ್ರಾಂ ಸುತ್ತುಂಗುರ ನಾಗರಾಜನಿಗೆ ವರದಕ್ಷಿಣೆ ರೂಪದಲ್ಲಿ ಕೊಟ್ಟು ಶೂಟು ಬೂಟು ಬಟ್ಟೆ ಬರೆ ಅಲ್ಲದೇ ಅವಳ ತಂದೆ ತಾಯಿ ಕಾಲು ಚೈನ 250 ಗ್ರಾಂ ಅಲ್ಲದೇ ಬೆಳ್ಳಿಯ ಬೀಗದ ಗುಚ್ಚುಗಳು 2 ಜೊತೆ 100 ಗ್ರಾಂ ಒಂದು ಬೆಳ್ಳಿಯ ನಾಣ್ಯ 15 ಗ್ರಾಂ ಕೊಟ್ಟು 10 ಲಕ್ಷ ರೂಪಾಯಿ ಮದುವೆ ಕಾಲಕ್ಕೆ ಖರ್ಚು ಮಾಡಿರುತ್ತಾರೆ. ನಾನು ಗಂಡನ ಮನೆಯಾದ  ರೇಲ್ವೆ ಕ್ವಾರ್ಟಸ ಯಶವಂತಪೂರ ಬೆಂಗಳೂರದಲ್ಲಿ ಸಂಸಾರ ಮಾಡಲು ಹೋದಾಗ ಮದುವೆಯ ದಿನದಿಂದಲೇ ನನ್ನ ಗಂಡ, ಅತ್ತೆಯಾದ ಸುಗುಣ, ಮಾವನಾದ ಚಂದ್ರಶೇಖರ, ಮೈದುನರರಾದ ಮಂಜುನಾಥ ಮತ್ತು ವಿಕ್ರಮ,ನಾದಿನಿಯಾದ ಶಾಮಲಾ ಇವರೆಲ್ಲರೂ ನೀನು ಕೂರುಪಿ ಇದ್ದೀ ಸರಿಯಾಗಿ ಜೋಡಿ ಅಲ್ಲಾ ಸೂಳೇ ಮಗಳೇ ಎಷ್ಟು ವರ್ಷದಿಂದ ನಮ್ಮ ಮನೆಗೆ ಬರಬೇಕೆಂದು ಕಾದಿರುವೆ ಅಂತಾ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಗ್ಯಾಸ ಸಿಲೆಂಡರ ಚಾಲು ಮಾಡಿ ಗ್ಯಾಸ ರೆಗ್ಯೂಲೇಟರ ವಾಸನೆ ತಿಳಿದು ತಾನು ಜಾಗೃತಗೊಂಡಿದ್ದು, ಅಲ್ಲದೇ ಎಲ್ಲರೂ ಹಣದ ಆಸೆಗಾಗಿ ಜೀವಂತ ಸುಟ್ಟು ಬೀಡುತ್ತೇವೆ ಅಂತಾ ಪ್ರಾಣದ ಬೆದರಿಕೆ ಹಾಕಿರುತ್ತಾರೆ. ಇದೆಲ್ಲಾ ಆದ ಮೇಲೆ ನನ್ನ ತಂದೆ ತಾಯಿ ತನಗೆ ಒಂದು ಸ್ಟೀಲ ಅಲಮಾರಿ ಒಂದು ಕರ್ಲಾನ ಕ್ಲಾಸಿಕ ಖುರ್ಚಿಗಳು ಹೀಗೆ 2 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳು ಕೊಡಿಸಿ ಹೋಗಿದ್ದು, ಮತ್ತೇ ತನ್ನ ಗಂಡ ಎಲ್ಲರೂ ಕೂಡಿ ತಕ್ಷಣ 10 ಲಕ್ಷ ರೂಪಾಯಿ ತಂದು ಕೊಡಬೇಕು ಅಂತಾ ಎಲ್ಲರೂ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಂದ ಬೈದು ನಿನ್ನ ತಂದೆಯ ಎಲ್ಲಾ ಆಸ್ತಿ ತೆಗೆದುಕೊಂಡು ಬಾ ಅಂತಾ ತೊಂದರೆ ಕೊಟ್ಟಿದ್ದು ದಿನಾಂಕ 30.06.2012 ರಂದು ನನ್ನ ತಂದೆ ಸರ್ಕಾರಿ ನೌಕರಿ ನಿವ್ರುತ್ತಿ ಹೊಂದಿದ್ದು, ಆ ಕಾಲಕ್ಕೆ ನನ್ನ ಗಂಡ ಗುಲಬರ್ಗಾಕ್ಕೆ ಬಂದು ನಿವೃತ್ತಿ ಕಾರ್ಯಕ್ರಮ ಮಾಡಿ ನಿಮ್ಮ ತಂದೆಗೆ ಬಂದ ನಿವೃತ್ತಿ ಹಣದಲ್ಲಿ 5 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಜಗಳ ಮಾಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:85/2012 ಕಲಂ 498 (ಎ)323.504.506 ಸಂಗಡ 34 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: