ಹಲ್ಲೆ, ಕೊಲೆಗೆ ಪ್ರಯತ್ನ:
ಚೌಕ ಪೊಲೀಸ್ ಠಾಣೆ:ಶ್ರೀ ಅಂಬು ತಂದೆ ಮಲ್ಕಣ್ಣಾ ಕುಂಬಾರ ಅಟೋ ಚಾಲಕ ಸಾ:ರಾಜೀವಗಾಂಧಿ
ನಗರ ಗುಲಬರ್ಗಾ ನಾನು ದಿನಾಂಕ:21.12.2012 ರಂದು ರಾತ್ರಿ 21-30 ಗಂಟೆ ಸುಮಾರಿಗೆ ಲಿಂಗರಾಜ ತಂದೆ ಸುಭಾಶ್ಚಂದ್ರ
ಜಮಾದಾರ ಸಾ: ಫಿಲ್ಟರ್ ಬೆಡ್ ಗುಲಬರ್ಗಾ ಇಬ್ಬರೂ ಕೂಡಿಕೊಂಡು ಮಾಸ್ತರ ಖಾನಾವಳಿಯಿಂದ ಊಟ
ತಗೆದುಕೊಂಡು ಮಹೇಶ ವೈನ್ ಶಾಪ ಎದುರುಗಡೆಯಿಂದ ನಮ್ಮ ಬಡಾವಣೆಗೆ ಹೋರಟಾಗ ಕೈಲಾಸ, ರಾಜು,ಪ್ರಕಾಶ ಡೊಲಾರೆ,ಜಗು, ಆಕಾಶ, ಕೃಷ್ಣಾ ಸಾ:ಎಲ್ಲರೂ ಆರ್ಯ ನಗರ ಗುಲಬರ್ಗಾ ಇವರೆಲ್ಲರೂ
ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ ಕಲ್ಲು ಬಡಿಗೆ ಹಿಡಿದುಕೊಂಡು ನಮ್ಮನ್ನು ನೋಡಿ ಅವಾಚ್ಯವಾಗಿ
ಬೈದು ಮೊನ್ನೆ ನಮ್ಮ ಬಡಾವಣೆ ಹುಡುಗರಿಗೆ ಹೊಡೆದಿದ್ದಿರಿ ಇವುತ್ತು ನಾವು ನಿಮ್ಮನ್ನು ಖಲಾಸ
ಮಾಡುತ್ತೇವೆ ಅಂತ ನನಗೆ ಮತ್ತು ಲಿಂಗರಾಜ ಇತನಿಗೆ ಎಲ್ಲರೂ ಕೂಡಿಕೊಂಡು ತಲವಾರ, ಕಲ್ಲು, ಬಡಿಗೆಗಳಿಂದ ನನಗೆ ಹಣೆಯ ಎಡಭಾಗಕ್ಕೆ, ಎಡಮೊಳಕಾಲ ಮೇಲೆ ಮತ್ತು ಲಿಂಗರಾಜ ಇತನಿಗೆ ಭಾಯಿ
ಮತ್ತು ತುಟಿಯ ಮೇಲೆ,
ಎರಡು ಭುಜಗಳಿಗೆ, ಬೆನ್ನಿಗೆ ಹೊಡೆದು ಭಾರಿ ರಕ್ತಗಾಯ ಮತ್ತು
ಗುಪ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ. 211/2012 ಕಲಂ, 143, 147, 148, 341, 323, 324, 504, 307 ಸಂಗಡ 149 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಬಾಬುರಾವ ತಂದೆ
ಶಿವಶರಣಪ್ಪ ಗೊಬ್ಬೂರ ಗ್ರಾಮ ಪಂಚಾಯತ ಸದಸ್ಯರು ಭೂಸನೂರ, ಸಾ|| ಭೂಸನೂರ ರವರು ನಾನು ಭೂಸನೂರ
ಗ್ರಾಮದ ಗ್ರಾಮ ಪಂಚಾಯತಿಯ ವಾರ್ಡ ನಂ.02 ರಲ್ಲಿ ಹೋದ
ಚುನಾವಣೆಯಲ್ಲಿ ಚುನಾಯಿತನಾಗಿ ಸದಸ್ಯನಾಗಿರುತ್ತಾನೆ. ದಿನಾಂಕ 24/12/2012 ರಂದು ಭೂಸನೂರ ಗ್ರಾಮ
ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಇದ್ದು ಅದರ ಸಂಭಂಧ ಜವಳಿ (ಡಿ) ಗ್ರಾಮದ ಪಂಚಾಯತ
ಸದಸ್ಯರ ಹತ್ತಿರ ಹೋಗಿ ಮರಳಿ ನಮ್ಮ ಮನೆಗೆ ರಾತ್ರಿ ವೇಳೆ ಬರುತ್ತಿದ್ದಾಗ ದಾರಿಯಲ್ಲಿ ನನ್ನ ಹೆಂಡಿತಿಯಾದ
ಕವಿತಾ ಇವಳು ದೂರವಾಣಿ ಮೂಲಕ
ತಿಳಿಸಿದ್ದೇನೆಂದರೆ ನಾನು ಮನೆಯ ಬಾಗಿಲು ಹಾಕಿಕೊಂಡು ಮಲಗಿಕೊಂಡಿದ್ದು ಒಂದು ಗಂಟೆಯ ಹಿಂದೆ ನಮ್ಮ ಮನೆಯ ಬಾಗಿಲು ಯಾರೋ ಬಡೆದಿದ್ದರಿಂದ
ಅವಾಜ ಕೇಳಿ ನನ್ನ ಗಂಡನೆ ಮನೆಗೆ ಬಂದಿರಬಹುದೆಂದು ತಿಳಿದು ಬಾಗಿಲು ತೆಗೆದು ನೋಡಲು ಮನೆಯ ಮುಂದೆ ಬಾಬುಗೌಡ ತಂದೆ ಸಿದ್ದಣ್ಣಗೌಡ ಪಾಟೀಲ, ಶಂಕರರಾವ ಪಾಟೀಲ, ಅಣ್ಣಾರಾವ ಪಾಟೀಲ, ಅನೀಲ ಎಸ್. ಪಾಟೀಲ,ಅಶೋಕ ಎಸ್. ಪಾಟೀಲ, ರಾಜಶೇಖರ ಮಲಶೆಟ್ಟಿ ಎಲ್ಲರೂ ಸಾ|| ಭೂಸನೂರ ಇವರೆಲ್ಲರೂ ನಿನ್ನ ಗಂಡ
ಎಲ್ಲಿದ್ದಾನೆ ಅವನಿಗೆ ಹೊರಗಡೆ ಕಳುಹಿಸು ಅಂತ ಅಂದಾಗ ಅವರು ಮನೆಯಲ್ಲಿ ಇಲ್ಲ ಅಂತ ಹೇಳಿದೆನು. ಆಗ
ಬಾಬುಗೌಡ ಈತನು ಆ ಭೋಸಡಿ ಮಗ ಎಲ್ಲಿಗೆ ಹೋಗಿದ್ದಾನೆ ಅವನಿಗೆ ಹೇಳು ನಾವು ಹೇಳಿದವರಿಗೆ ಓಟ
ಹಾಕಬೇಕು ಇಲ್ಲವೆಂದರೆ ಊರಲ್ಲಿ ಹೇಗೆ ಜೀವಿಸುತ್ತಾನೆ ನೋಡುತ್ತೇವೆ ಅಂತ ಹೇಳಿ ಹೋಗಿದ್ದಾರೆಂದು
ತಿಳಿಸಿದಳು. ನಾನು ರಾತ್ರಿ 11-30 ಗಂಟೆ ಸುಮಾರಿಗೆ ಗುರುಶಾಂತಪ್ಪ ತಂದೆ ನಿಂಗಪ್ಪ ಕಡಕೋಳ, ಶಾಂತಮಲ್ಲಪ್ಪ ನೆಲ್ಲೂರ ಕೂಡಿಕೊಂಡು
ಬರುತ್ತಿರುವಾಗ ಗ್ರಾಮದ ಚಕ್ರ ಕಟ್ಟೆಯ ಮುಂದಿನ ರೋಡಿನ ಮೇಲೆ ಮೇಲಿನವರು ದಿನಾಂಕ 24/12/2012
ರಂದು ನಡೆಯುವ ಗ್ರಾಮ ಪಂಚಾಯತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನಾವು ಹೇಳಿದವರಿಗೆ
ಓಟ ಹಾಕಬೇಕು ಇಲ್ಲವಾದರೆ ನಿನ್ನನ್ನು ಖಲಾಸ ಮಾಡುತ್ತೇವೆಂದು ಜೀವದ ಭಯ ಹಾಕಿದರು. ಆಗ ನಾನು ನನ್ನ
ಮನಸ್ಸಿಗೆ ಬಂದವರಿಗೆ ಓಟು ಹಾಕುತ್ತೇವೆ ಅಂದಾಗ ಮಗನೆ ನನ್ನ ಮಾತು ಕೇಳುವದಿಲ್ಲ ಅಂತ ಹೊಡೆ ಬಡೆ
ಮಾಡಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.110/2012 ಕಲಂ 143, 147, 148, 307, 341, 323, 324, 325, 504, 506 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment