ಶ್ರೀ ಎಸ್ ಬಿ ಸಂಬಾ ಡಿ ಎಸ್ ಪಿ ಆಳಂದ ಉಪ ವಿಭಾಗ ಮತ್ತು ಶ್ರೀ. ಜಿ ಎಸ್ ಉಡಗಿ
ಸಿ.ಪಿ.ಐ ಆಳಂದ ಇವರ ನೇತ್ರತ್ವದಲ್ಲಿ ಶ್ರೀ. ವಿನಾಯಕ ಪಿ ಎಸ್ ಐ ನರೋಣಾ ಪೊಲೀಸ ಠಾಣೆ ಶ್ರೀ.
ಬಂಡೆಪ್ಪ ಎಎಸ್ಐ ನರೋಣಾ ಪೊಲೀಸ ಠಾಣೆ ಮತ್ತು ಸಿಬ್ಬಂದಿಯವರಾದ ಚಂದ್ರಶೇಖರ ಕಾರಭಾರಿ, ಲಕ್ಷ್ಮಿಪುತ್ರ, ಬಸವರಾಜ,ಬಸವರಾಜ,ರವರನೊಳಗೊಂಡ
ಒಂದು ತಂಡ ರಚಿಸಿದ್ದು, ನರೊಣಾ ಗ್ರಾಮದಲ್ಲಿ ದಿನಾಂಕ:07/12/2012 ರಂದು ಸಾಯಂಕಾಲ
4-30 ಗಂಟೆಗೆ ವಾಹನ ಕಳ್ಳತನ ಮಾಡುವ ನರೋಣಾ ಗ್ರಾಮದ ಕೈಲಾಸ್ ತಂದೆ ಅರ್ಜುನ ದೇಖೂನ ಸಾ:ನರೋಣಾ ಇವನನ್ನು ವಶಕ್ಕೆ ತೆಗೆದುಕೊಂಡು ಅವನ
ತಾಬದಲ್ಲಿದ್ದ ಕಳ್ಳತನದ ದ್ವಿ-ಚಕ್ರ ವಾಹನ ಸಂ ಕೆಎ-32/ಎಕ್ಸ 773 ವಶಪಡಿಸಿಕೊಂಡು ಹೆಚ್ಚಿನ
ವಿಚಾರಣೆ ಮಾಡಿದಾಗ ಆಳಂದ ತಾಲೂಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಮೋಟಾರ ಸೈಕಲ್ ಮತ್ತು ಟಾಟಾ
ಸುಮೋ ವಾಹನ ಕಳುವು ಮಾಡಿರುವದನ್ನು ಅರಿತು ಮತ್ತೆ ಅವನಿಂದ
ಟಾಟಾ ಸುಮೋ ಮತ್ತು 3 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಅ||ಕಿ|| 5,00,000
ರೂಪಾಯಿ ಬೆಲೆ ಬಾಳುವದಾಗಿರುತ್ತವೆ. ಕೈಲಾಸ್ ಇತನು ಕುಖ್ಯಾತಿ ಕಳ್ಳನಿದ್ದು ವಿಜಾಪೂರ ಜಿಲ್ಲೆಯ
ಇಂಡಿ ಮತ್ತು ಸೊಲ್ಲಾಪೂರ, ಆಳಂದ ಮುಂತಾದ ಕಡೆ ವಾಹನ ಕಳ್ಳತನ ಮಾಡಿರುತ್ತಾನೆ. ಈ
ಮೋಟಾರ ಸೈಕಲ ಪತ್ತೆ ಕಾರ್ಯ ಮಾಡಿ ಆರೋಪಿ ಮತ್ತು ಮಾಲು ವಾಹನಗಳನ್ನು ವಶಪಡಿಸಿಕೊಂಡಿದ್ದಕಾಗಿ
ಮಾನ್ಯ ಎಸ.ಪಿ ಸಾಹೇಬರು ಇವರ ಕಾರ್ಯ ಸಾಧನೆಯನ್ನು ಶ್ಲಾಘಿಸಿರುತ್ತಾರೆ.
ವಶಪಡಿಸಿಕೊಳ್ಳಲಾದ ವಾಹನಗಳ ಮಾಹಿತಿ:ಒಂದು ಟಾಟಾ ಸುಮೊ ನಂ: ಕೆಎ-01/ಎ-9892, ಹಿರೋ ಹೊಂಡಾ ಮೋಟಾರ ಸೈಕಲ ನಂ:ಕೆಎ-32/ಎಕ್ಸ್-7973, ಹಿರೋ ಹೊಂಡಾ ಸ್ಪೇಲಂಡರ್ ನಂ:ಕೆಎ-32/ಎಕ್ಸ್-733, ಪಲ್ಸರ್ ಕೆಎ-32/ಎಕ್ಸ್-358, ಮತ್ತು
ಒಂದು ಬಜಾಜಾ ಡಿಸ್ಕವರಿ ಮೋಟಾರ ಸೈಕಲ ನಂ:ಕೆಎ-29/ಎಲ್-9931 ನೇದ್ದವುಗಳು.
No comments:
Post a Comment