Police Bhavan Kalaburagi

Police Bhavan Kalaburagi

Thursday, December 27, 2012

GULBARGA DISTRICT


:: ಪತ್ರಿಕಾ ಪ್ರಕಟಣೆ ::
        ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ದಿನಾಂಕ:17/12/2012 ರಿಂದ 30/01/2013 ರವರಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಶುಲ್ಕವಾದ ರೂ. 150/- ( ಎಸ.ಸಿ./ಎಸ.ಟಿ./ಪ್ರವರ್ಗ-1) ಮತ್ತು ರೂ. 250/- (ಇತರೆ) ಪಾವತಿಸಬೇಕಾಗಿರುತ್ತದೆ.  ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಅವರ ವಿಧ್ಯಾರ್ಹತೆಗೆ ಸಂಬಂಧಿಸಿದ ವಿಭಾಗಗಳನ್ನು ಆಯ್ಕೆ ಮಾಡಿಕೊಂಡು ನಿಗಧಿಪಡಿಸಲಾಗಿರುವ ಶುಲ್ಕವನ್ನು ಪಾವತಿ ಮಾಡತಕ್ಕದ್ದು. ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ವಿಧಾನ, ವಿಧ್ಯಾರ್ಹತೆ, ಮೀಸಲಾತಿಗಳು, ಆಯ್ಕೆ ವಿಧಾನ, ನೇಮಕಾತಿ ಅರ್ಹತೆಗಳು ಹಾಗು ಖಾಲಿ ಹುದ್ದೆಗಳ ವರ್ಗಿಕರಣ ಮತ್ತು ಇತರೆ ಸಂಪೂರ್ಣ ಮಾಹಿತಿ / ವಿವರಗಳನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ www.ksp.gov.in  ನಲ್ಲಿ ಲಭ್ಯವಿರುತ್ತದೆ.   

No comments: