ಕೊಲೆಗೆ ಪ್ರಯತ್ನ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಆಸೀಪ್ ಅಹಮದ ತಂದೆ ಅಲ್ಲಾವುದ್ದಿನ ಸಾ|| ಮದಿನಾ ಕಾಲೋನಿ ಎಮ.ಎಸ.ಕೆ. ಮಿಲ್ಲ್ ಗುಲಬರ್ಗಾ ರವರು ನಾನು ದಿನಾಂಕ:10-01-2013 ರಂದು ಸಂಜೆ 7 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ನಮ್ಮ ಓಣಿಯ ಅಸ್ಲಂ ಇವರು ತನ್ನ ಹೊಸ ಡಿಸ್ಕವರಿ ಮೋಟರ ಸೈಕಲ ಮೇಲೆ ಬಂದು ನನಗೆ ಮಾತನಾಡಿಸಿ ಚಾಹ ಕುಡಿದುಕೊಂಡು ಬರೋಣ ಅಂತ ಕೇಳಿಕೊಂಡನು, ನಾನು ಚಾಹ ಕುಡಿಯುದಿಲ್ಲಾ ಅಂತಾ ಹೇಳಿದರೂ ಸಹ ಕೇಳದೇ ಒತ್ತಾಯದಿಂದ ತನ್ನ ಗಾಡಿಯ ಮೇಲೆ ಕುಡಿಸಿಕೊಂಡು ಹೀರಾಪೂರ ಕ್ರಾಸದ ಮುಖಾಂತರ ರಿಂಗ ರೋಡಿನ ಬರ್ಫ ಖಾತಾ ಬಾವಿ ಕಡೆಗೆ ತಿರಗುವ ಬ್ರಿಜ ಹತ್ತಿರ ಕರೆದುಕೊಂಡು ಹೋಗಿರುತ್ತಾನೆ. ಒಂದು ವರ್ಷದ ಹಿಂದೆ ನಮ್ಮೂರ ಬಿಳವಾರದಲ್ಲಿ ಆದ ಜಗಳದಲ್ಲಿ ನನ್ನ ತಂದೆ ಮತ್ತು ನಾನು ಜಗಳ ಬಿಡಿಸಿದ್ದು ಇದೇ ವೈಮನಸ್ಸಿನಿಂದ ಸದರಿ ಅಲ್ಲಂ ತಂದೆ ಬಾಶಾ ಪಟೇಲ ಮತ್ತು ಅವನ ತಂದೆ ಬಾಶಾ ಪಟೇಲ ತಂದೆ ರುಕುಮ ಪಟೇಲ ಸಂಗಡ ಇನ್ನೊಬ್ಬ ಹುಡುಗ ಮೂರು ಜನರು ಪ್ಲಾನ ಮಾಡಿ ನನಗೆ ಚಾಹ ಕುಡಿಸುವುದಾಗಿ ಹೇಳಿ ಮನೆಯಿಂದ ಕರೆದುಕೊಂಡು ಹೋಗಿ ಹರಿತವಾದ ಆಯುಧದಿಂದ ತಲೆ ಮತ್ತು ಕುತ್ತಿಗೆ ಹಾಗು ಬಲಗೈ ಗೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಯತ್ನಿಸಿರುತ್ತಾರೆ ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:6/2013 ಕಲಂ. 324, 307, ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಳ್ಳಲಾಯಿತು.
No comments:
Post a Comment