ಅಪಘಾತ ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ:ಶ್ರೀ ಯಾಕುಬಸಾಬ ತಂದೆ ಇಸ್ಮಾಯಿಲ್ ಬೇಗ ಮಿರ್ಜಾ ಸಾ| ಕಾಶಿಬುಗ್ಗಾ ಸರಸಂಪೇಠ ರೋಡ ವಾರಂಗಲ್ ಆಂದ್ರ ಪ್ರದೇಶ ರವರು ನಾನು ಹಾಗು ಮೃತ ಶೇಖ ಮಜೀದ ತಂದೆ ಅಬ್ದುಲ್ಲಾಶೇಖ ಸಾ|| ಲಾಲ ಬಹದ್ದೂರ ನಗರ ಸಾ||ವಾರಂಗಲ ಇಬ್ಬರೂ ಎಲಕ್ಟ್ರಿಶಿಯನ ಕೆಲಸ ಮಾಡುವ ಸಲುವಾಗಿ ಕೆ,ವೆಂಕಟರಾವ ಎಂಬುವ ಗುತ್ತೇದಾರನ ಪರಿಚಯದಿಂದ ವಾರಂಗಲದಿಂದ ದಿನಾಂಕ|| 11/01/2013 ರಂದು ಮಹಾಗಾಂವ ಕ್ರಾಸನಲ್ಲಿ ಹೋಸದಾಗಿ ನಿರ್ಮಾಣವಾಗುತ್ತಿದ್ದ ಐ.ಎನ.ಜಿ ವೈಶ್ಯಾ ಬ್ಯಾಂಕನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುವ ಕುರಿತು ಬಂದ್ದಿದ್ದು, ನಿನ್ನೆ ರಾತ್ರಿ ಸುಮಾರು 8.45 ಗಂಟೆಗೆ ಮೃತ ಶೇಖಮಜೀದ ಇತನು ಊಟ ಮಾಡುವ ಕುರಿತು ಹೋಗುತ್ತಿರುವಾಗ ಒಬ್ಬ ತುಫಾನ ಕ್ರೂಸರ ಚಾಲಕನು ತನ್ನ ವಾಹನವನ್ನು ಕಮಲಾಪೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎ-ಒನ್ ಬ್ರಾಂಡಿ ಶಾಪ ಎದುರುಗಡೆ ಡಿಕ್ಕಿ ಹೋಡೆದನು. ಡಿಕ್ಕಿ ಪಡಿಸಿದ ರಭಸಕ್ಕೆ ಆತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಕ್ರೂಸರ ಚಾಲಕ ವಾಹನ ಸಮೇತಾ ಓಡಿ ಹೋದನು. ವಾಹನ ನಂಬರ ಗೊತ್ತಾಗಿರುವುದಿಲ್ಲಾ.108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದಾಗ ಉಪಚಾರ ಫಲಕಾರಿಯಾಗದೇ ರಾತ್ರಿ 10.50 ಗಂಟೆಗೆ ಮೃತ ಪಟ್ಟನು. ಅಪಘಾತ ಪಡಿಸಿ ಓಡಿ ಹೋದ ಕ್ರೂಸರ ವಾಹನ ಮತ್ತು ಅದರ ಚಾಲಕನ ಪತ್ತೆ ಹಚ್ಚಿ ಅತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 05/2013 ಕಲಂ, 279, 304 (ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment