ಕೊಲೆ ಪ್ರಕರಣ:
ನರೋಣಾ ಪೊಲೀಸ್ ಠಾಣೆ:ದಿನಾಂಕ 09/01/2013 ರಂದು ಸನಗುಂದಾ ಗ್ರಾಮದ ಮಾಳಿಂಗರಾಯ ಗುಡಿಯಲ್ಲಿ ಒಬ್ಬ ಹೆಣ್ಣು ಮಗಳ ಕೊಲೆಯಾಗಿರುತ್ತದೆ ಎನ್ನುವ ಮಾಹಿತಿಯನ್ನು ಆಪಾಧಿತನ ಧಾನಯ್ಯ ತಂದೆ ರಾಮನಯ್ಯ ಚಿರಕುರಿ ಸಾ:ಸಿಂಗಪೇಠ [ಆಂದ್ರ ಪ್ರದೇಶ] ಇತನು ತೆಲಗು ಭಾಷೆಯಲ್ಲಿ ಹೇಳಿಕೆ ನೀಡಿದ್ದ ಸಾರಂಶವೇನೆಂದರೆ, ನಾನು ಮತ್ತು ತನ್ನೊಂದಿಗೆ ಈಗ ಒಂದು ವರ್ಷದಿಂದ ಅನೈತಿಕ ಸಂಬಂದ ಹೊಂದಿರುವ ಮಸನಮ್ಮ ಗಂಡ ವೆಂಕಯ್ಯ ಧೋಬಿ ಇಬ್ಬರು ಕೂಡಿ ಸನಗುಂದಾ ಗ್ರಾಮದಲ್ಲಿ ಆರ್ ಎಂ ಎನ್ ಕಂಪನಿಯಲ್ಲಿ ಕುಕ್ಕರ್ ಅಂತಾ ಕೆಲಸ ಮಾಡುತ್ತಿದ್ದು,ಕೆಲವು ದಿವಸಗಳಿಂದ ಅವಳ ನಡತೆಯ ಬಗ್ಗೆ ಬಲವಾಗಿ ಸಂಶ ಬರುತ್ತಿರುವದ್ದರಿಂದ ಜಗಳವಾಡುತ್ತಿದ್ದೆವು.ದಿನಾಂಕ:09//01/2013 ರಂದು ಬೆಳಿಗ್ಗೆ ಆರ್ ಎಂ ಎನ್ ಕ್ಯಾಂಪಿಗೆ ಹೋಗಿದ್ದು ಅಲ್ಲಿಯವರು ಕೆಲಸಕ್ಕೆ ಬೇಡವೆಂದಿದಕ್ಕೆ ಮರಳಿ ನಾನು ಮತ್ತು ಮಸನಮ್ಮ ಇಬ್ಬರು ಕೂಡಿ ನೇರವಾಗಿ ಊರ ಹತ್ತಿರ ಗುಡ್ಡದ ಮೇಲೆ ಇರುವ ಮಾಳಿಂಗರಾಯ ದೇವಸ್ಥಾನಕ್ಕೆ ಮಧ್ಯಾಹ್ನ 12-30 ಪಿ ಎಂ ಕ್ಕೆ ಹೋಗಿದ್ದು, ಅವಳ ನಡತೆಯ ವಿಷಯದಲ್ಲಿ ನಾನು ಜಗಳ ಮಾಡಿ ಅಲ್ಲಿಯೇ ಇರುವ ದೊಡ್ಡದ್ದಾದ ಕಲ್ಲಿನಿಂದ ಅವಳ ಮುಖದ ಮೇಲೆ 8-9 ಭಾರಿ ಹೊಡೆದು ಜಜ್ಜಿದ್ದರಿಂದ ಮುಖದ ಭಾಗ ಮತ್ತು ತಲೆಯ ಭಾಗ ಪೂರ್ತಿಯಾಗಿ ಒಡೆದು ಮೌಂಸ್ ಖಂಡ ಹೊರಬಂದು ಭಾರಿ ರಕ್ತಗಾಯವಾಗಿ ಚಿರಾಡುತ್ತಾ ಸ್ಥಳದಲ್ಲಿಯೇ ಸತ್ತಿರುತ್ತಾಳೆ. ಖುದ್ದಾಗಿ ಆರೋಪಿ ಠಾಣೆಗೆ ಹಾಜರಾಗಿದ್ದರಿಂದ, ನಾನು ಮತ್ತು ಸಿಬ್ಬಂದಿಯವರು ಆರೋಪಿತನೊಂದಿಗೆ ಸನಗುಂದಾ ಗ್ರಾಮದ ಮಾಳಿಂಗರಾಯನ ದೇವಸ್ಥಾನದ ಗರ್ಭಗುಡಿಯಲ್ಲಿ ಆರೋಪಿತನು ತೋರಿಸಿರುವ ಘಟನೆಯನ್ನು ನೋಡಲಾಗಿ ವಿಷಯ ನಿಜವೆಂದು ಕಂಡು ಬಂದಿರುತ್ತದೆ. ದಿನಾಂಕ;10/01/2013 ರಂದು ಮಧ್ಯರಾತ್ರಿ 00-30 ಎ ಎಂ ಕ್ಕೆ ಬಂದು ಆಪಾಧಿತ ಧಾನಯ್ಯ ತಂದೆ ರಾಮನಯ್ಯ ಚಿರುಕುರಿ ಇತನ ಮೇಲೆ ಸರಕಾರಿ ತರ್ಫೇ ಯಾಗಿ ಠಾಣೆ ಗುನ್ನೆ ನಂ:07/2013 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಸಂದೀಪ ರಾವಸಾಹೇಬ ಸಿತೋಲೆ ವಯ|| 35, ಉ|| ಜನರಲ್ ಮ್ಯಾನೇಜರ, ಸಾ|| ಶ್ರೀಶಾಂತ ಮಾಲ್, ಪಿಂಪೇಲೈನ ರೋಡ ಸವೇಡಿ ಅಹ್ಮದನಗರ (ಮಹಾರಾಷ್ಟ್ರ ರಾಜ್ಯ) ರವರು ನಮ್ಮ ಗುಲಬರ್ಗಾ ಶಾಖೆಯ ಮ್ಯಾನೇಜರ ದಿನಾಂಕ:09/01/2013 ರಂದು 09-00 ಗಂಟೆಗೆ ಪೋನ್ ಮಾಡಿ ಹೇಳಿದ್ದೆನೆಂದರೆ ನಮ್ಮ ಶಾಖೆಯ ಬಾಗಿಲು ತೆಗೆದು ನೋಡಲಾಗಿ ಯಾರೋ ಕಳ್ಳರುದಿನಾಂಕ:08/01/2013 ರಂದು 2200 ಗಂಟೆಯಿಂದದಿ:09/01/2013ರಬೆಳಿಗ್ಗೆ 09-00 ಗಂಟೆಯ ಮಧ್ಯದ ವೇಳೆಯಲ್ಲಿ ಬ್ಯಾಂಕ ಲಾಕರದಲ್ಲಿಟ್ಟ ನಗದು ಹಣ ರೂ.56,61,341/- ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ಸದರಿ ಕಳ್ಳತನ ಮಾಡಿದ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:03/2013 ಕಲಂ: 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment