ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಸಿದ್ದಲಿಂಗಪ್ಪ ಭೀಮಾಶಂಕರ ಅವಟಿ, ವಯ : 36 ವರ್ಷ, ಉ: ಶಿಕ್ಷಕ , ಸಾ:ಹೊಡ್ಡಿಮನಿ ಬಾಳೆ ಲೇಔಟ ಗುಲಬರ್ಗಾ ರವರು ನಾನು ದಿನಾಂಕ:13-01-2013 ರಂದು ಬೆಳಗ್ಗೆ 7-30 ಗಂಟೆಯ ಸುಮಾರಿಗೆ ಮನೆಗೆ ಬೀಗ ಹಾಕಿ ಹೆಂಡತಿ ಮಕ್ಕಳೊಂದಿಗೆ ಮಹಾರಾಷ್ಟ್ರದ ರಾಜ್ಯದ ಸೋಲ್ಲಾಪೂರದ ಜಾತ್ರೆಗೆ ಹೋಗಿದ್ದು ದಿನಾಂಕ:15-01-2013 ರಂದು ಬೆಳಗ್ಗೆ 7-30 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೊಂಡಿ ಮುರಿದಿತ್ತು. ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು 46 ಗ್ರಾಂ ನೇದ್ದು ಅ||ಕಿ||1,25,000/- ಹಾಗೂ ಬೆಳ್ಳಿಯ ಆಭರಣಗಳು 66 ತೊಲೆ ಅ||ಕಿ|| 40,000 /- ಮತ್ತು ಒಂದು ಪ್ಯೂಜಿ ಕಂಪನಿಯ ಕ್ಯಾಮರಾ ಅ||ಕಿ|| 6000/- ರೂ. ಹೀಗೆ ಒಟ್ಟು 1,71,000 /- ರೂ. ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ಒಂದು ಕ್ಯಾಮರಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:06/2013 ಕಲಂ, 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ:ದಿನಾಂಕಃ 15/01/2013 ರಂದು ಮದ್ಯಾಹ್ನ 3-15 ಪಿ.ಎಂ. ಸುಮಾರಿಗೆ ಮಾನ್ಯ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತ ಉಪ ವಿಭಾಗ ಗುಲಬರ್ಗಾ ಹಾಗು ಮಾನ್ಯ ಎಸ್. ಅಸ್ಲಾಂ ಬಾಷ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ, ಜಿ.ಡಿ.ಎ ಕಾಲೋನಿಯಲ್ಲಿರುವ 1 ನೇ ಗಾರ್ಡನದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಅಂದರ ಬಾಹರ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ ನಾಗಶೆಟ್ಟಿ ತಂದೆ ಭೀಮರೆಡ್ಡಿ ಹಳ್ಳಿ ವಯಃ 45 ವರ್ಷ ಉಃ ಆಟೋ ಚಾಲಕ ಸಾಃ ಸ್ವರಸ್ವತಿಪೂರ ಕಪನೂರ ರೋಡ್ ಗುಲಬರ್ಗಾ,ಸೋಮಣ್ಣ ತಂದೆ ಬಸವಣ್ಣ ಮೇತ್ರೆ ವಯಃ 29 ವರ್ಷ ಉಃ ಮೆಕ್ಯಾನಿಕ್ ಸಾಃ ಕಮಲವಾಡಿ ಸ್ಟೇಷನ ಬಜಾರ ಏರಿಯಾ ಗುಲಬರ್ಗಾ, ಶಂಬುಲಿಂಗ ತಂದೆ ಮಲ್ಲಯ್ಯ ಮಠಪತಿ ವಯಃ 50 ವರ್ಷ ಉಃ ಒಕ್ಕಲತನ ಸಾಃ ಕುಮಸಿ ತಾಃಜಿಃ ಗುಲಬರ್ಗಾ, ಸುನೀಲ ಕುಮಾರ ತಂದೆ ರೇವಣಸಿದ್ದಯ್ಯ ಮಠಪತಿ ವಯಃ 32 ವರ್ಷ ಉಃ ಖಾಸಗಿ ಕೆಲಸ ಸಾಃ ಜಿ.ಡಿ.ಎ ಕಾಲೋನಿ ಗುಲಬರ್ಗಾ ಇವರುಗಳನ್ನು ವಶಕ್ಕೆ ತೆಗೆದುಕೊಂಡು ನಗದು ಹಣ 15,150/- ರೂ. ಹಾಗು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಸರ್ಕಾರಿ ತರ್ಪೆಯಾಗಿ ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ.ಐ ಎಂ.ಬಿ.ನಗರ ರವರು ಠಾಣೆ ಗುನ್ನೆ ನಂ: 06/2013 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
No comments:
Post a Comment