Police Bhavan Kalaburagi

Police Bhavan Kalaburagi

Wednesday, January 16, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಪಂಡಿತ ತಂದೆ ಬಸವಣಪ್ಪ ಹರಸೂರ ಸಕಾರಿ ನೌಕರ ಸಾ: ಡಿಎಆರ ಹೆಡ್ ಕ್ವಾರ್ಟಸ  ಗುಲಬರ್ಗಾ ರವರು ನಾನು ದಿನಾಂಕ:15-01-2013 ರಂದು ರಾತ್ರಿ 9-30 ಗಂಟೆಗೆ ಅಟೋರಿಕ್ಷಾ ಕಾಯುತ್ತಾ ತಹಶೀಲ ಕಾರ್ಯಾಲಯದ ಎದುರು ರೋಡಿನ ಪಕ್ಕದಲ್ಲಿ ನಿಂತ್ತಿರುವಾಗ ಅಟೋರಿಕ್ಷಾ ನಂಬರ ಕೆಎ-32/7199 ನೇದ್ದರ ಚಾಲಕ ತನ್ನ ಅಟೋವನ್ನು ಸುಪರ ಮಾರ್ಕೆಟ ಕಡೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಟೋರಿಕ್ಷಾ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2013 ಕಲಂ 279,337 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಮಾಡಲು  ಪ್ರಯತ್ನ:
ಮುಧೋಳ ಪೊಲೀಸ್ ಠಾಣೆ:ಶ್ರೀ ಸಣ್ಣ ಮಾಣಿಕಪ್ಪಾ ತಂದೆ ಸಾಯಿಬಣ್ಣಾ ಇಳಿಗೇರ ವಯಾ||45 ವರ್ಷ ಜಾತಿ|| ಕಲಾಲ ಸಾ|| ಕಾನಾಗಡ್ಡಾ ಗ್ರಾಮ. ತಾ||ಸೇಡಂ ರವರು ನಮಗೆ ಹಾಗು ನಮ್ಮ ಅಣ್ಣತಮ್ಮಂದಿರಾದ ಸಾಯಿಬಣ್ಣಾ ಸಾಬಯ್ಯಾ ತಂದೆ ಆಶಣ್ಣಾ ಕಲಾಲ ಇವರ ಮದ್ಯ ಹೊಲದ ಸಂಬಂಧ 15-20 ವರ್ಷಗಳಿಂದ ತಕರಾರು ಇದ್ದು ಕೊರ್ಟಿನಲ್ಲಿ ಕೇಸ್ ಇದೆ. 8-10 ದಿವಸಗಳ ಹಿಂದೆ ಸದರಿ ಹೊಲ ಕೊರ್ಟಿನಲ್ಲಿ ನನ್ನ ಹೆಸರಿನಿಂದ ಆಗಿರುತ್ತದೆ.ಸಾಬಯ್ಯಾ ಇತನು ನನಗೆ ಕೊಲೆ ಮಾಡಿದರೆ ಸದರಿ ಆಸ್ತಿ ತನಗೆ ಬರುತ್ತದೆ ಅಂತಾ ನನ್ನ ಮೇಲೆ ವೈಮನಸ್ಸು ಹೊಂದಿ, ದಿನಾಂಕ 15-01-2013 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಹಾಗು ನಮ್ಮುರ ಸಾಯಪ್ಪಾ, ಮಾಹಾದೇವ ಪೂಜಾರಿ ಕೂಡಿಕೊಂಡು ಸಾಬಯ್ಯಾ ಕಲಾಲರವರ ಮನೆಯ ಮುಂದಿನ ರಸ್ತೆಯಿಂದ ಹೋಗುತಿದ್ದಾಗ ಸಾಯಿಬಣ್ಣಾ ಸಾಬಯ್ಯಾ ಕಲಾಲ ಹಾಗು ಆತನ ತಮ್ಮನಾದ ಮೈಪಾಲ ಕಲಾಲ ಇತನ ಮಕ್ಕಳಾದ ಮೋಹನಕುಮಾರ, ರಮೇಶ ರವರು ನಾಲ್ಕು ಜನರು ಅವಾಚ್ಯವಾಗಿ ಬೈದು, ನನಗೆ ತಮ್ಮ ಮನೆಯಲ್ಲಿ ಎಳೆದುಕೊಂಡು ಹೋಗಿ ಸಾಬಯ್ಯಾ,  ಮೈಪಾಲ, ಮೋಹನಕುಮಾರ, ರಮೇಶ ಇವರೆಲ್ಲರೂ ನನಗೆ ಕೊಡಲಿಯಿಂದ, ಬಡಿಗೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 05/2013 ಕಲಂ 341.323.324.307.504 ಸಂಗಡ 34 ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: