Police Bhavan Kalaburagi

Police Bhavan Kalaburagi

Friday, January 18, 2013

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಭೋಜರಾಜ ತಂದೆ ರಾಮಚಂದ್ರ ಪಾಟೀಲ  ಸಾ||ಸರಸಂಬಾ ತಾ|| ಆಳಂದ ರವರು ನನಗೆ ದಿನಾಂಕ:16/01/2013 ರಂದು ರಾತ್ರಿ 8 ಗಂಟೆಗೆ ವರದಾಶಂಕರ ತಂದೆ ಯಶ್ವಂತರಾವ ಪೊಲೀಸ್ ಪಾಟೀಲ ಸಾ|| ಸರಸಂಬಾ ಇತನು  ಸರಸಂಬಾ ಗ್ರಾಮ ಪಂಚಾಯತಿಯ ಎದುರುಗಡೆ ಬಸವೇಶ್ವರ ಚೌಕ ಅಗಸಿಯಲ್ಲಿ ರಾಜಶೇಖರ ತಂದೆ ಚನ್ನಬಸ್ಸಪ್ಪ ಮಾಲಿ ಪಾಟೀಲ ಇತನಿಗೆ ಇಲ್ಲಿ ಯಾಕೇ ಕುಳಿತುಕೊಂಡಿರಿ ಅಂತಾ ಅವಾಚ್ಯವಾಗಿ ಬೈದು ಪಿಸ್ತೂಲ್ ತೋರಿಸಿ ಇಲ್ಲಿಂದ ಹೋಗು ಇಲ್ಲವಾದರೆ ಜೀವ ತೆಗೆಯುತ್ತೆನೆ ಅಂತಾ ಬೇದರಿಕೆ ಹಾಕಿ ಕೈಯಿಂದ ಹೊಡೆದಿರುತ್ತಾನೆ. ಮತ್ತು ರಾತ್ರಿ 10 ಗಂಟೆಯ ಸುಮಾರಿಗೆ ಬಿ.ಆರ್. ಪಾಟೀಲ ಇವರು ಸರಸಂಬಾ ಕ್ಕೆ ಬಂದು ವರದಶಂಕರನಿಗೆ ವಿಚಾರಿಸುತ್ತಿದ್ದಾಗ ವರದಾಶಂಕರನು ನೀನು ಸುಭಾಷ ಗುತ್ತೆದಾರ ಎದುರು ಚುಣಾವಣೆಗೆ ಹೇಗೆ ನಿಲ್ಲುತ್ತಿ ನೊಡುತ್ತೆನೆ, ನೀನು ಚುಣಾವಣೆಗೆ ನಿಂತರೆ ನಿನ್ನ ಜೀವ ತೆಗೆಯುತ್ತೆನೆ ಎಂದು ಬೈದು ಪಿಸ್ತೂಲ ತೋರಿಸಿ ಜೀವದ ಭಯದ ಬೇದರಿಕೆ ಹಾಕಿದ್ದಲ್ಲದೆ ಎದೆಯ ಮೇಲಿನ ಶರ್ಟ ಹಿಡಿದು ಹರಿದು ಹಾಕಿರುತ್ತಾನೆ. ಈ ಘಟನೆಗೆ  ಸುಭಾಷ ಗುತ್ತೆದಾರ ಇವರ ಕುಮ್ಮಕ ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳಬೇಕು ಅಂತಾ ದೂರು ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:06/2013 ಕಲಂ 323, 341, 504, 506 [2] 109 ಸಂಗಡ 34 ಐ.ಪಿ.ಸಿ. ಮತ್ತು 25 ಆರ್ಮ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ವರದಾಶಂಕರ ತಂದೆ ಯಶ್ವಂತರಾವ  ಪಾಟೀಲ  ಸಾ||ಸರಸಂಬಾ ತಾ||ಆಳಂದ ರವರು ನಾನು ದಿನಾಂಕ:16/01/2013 ರಂದು ಆಳಂದದಿಂದ ಸರಸಂಬಾಕ್ಕೆ ಬಂದಾಗ ಊರ ಅಗಸಿಯಲ್ಲಿ ನನ್ನ ಸ್ನೇಹಿತ ಹಣಮಂತ ಜಮಾದಾರ ಈತನಿಗೆ ರಾಜಶೇಖರ ಪಾಟೀಲ ಸರಸಂಬಾ ಇವರು ವರದಾಶಂಕರನ ಜೋತೆ ಹಾಗೂ ಗುತ್ತೇದಾರನ ಜೋತೆ ಯ್ಯಾಕೆ ತಿರುಗಾಡಿತ್ತಿ ಅಂತಾ ಕೇಳುತ್ತಿದ್ದನು. ಆಗ ನಾನು ಅವರ ಹತ್ತಿರ ಬಂದು ಹಣಮಂತ ಜಮಾದಾರ ಇವರಿಗೆ ನನ್ನ ಮೋಟರ್ ಸೈಕಲ್ ಮೇಲೆ ಕುಡಿಸಿಕೊಂಡು ಅವರ ಮನೆಗೆ ಬಿಟ್ಟು ಮತ್ತೆ ರಾಜಶೇಖರ ಪಾಟೀಲ ಇವರ ಎದುರುಗಡೆಯಿಂದ ಬರುತ್ತಿರುವಾಗ ರಾಜಶೇಖರ ಇತನು  ಅವಾಚ್ಯವಾಗಿ ಬೈದು ಅವನಿಗೆ ಯ್ಯಾಕೆ ಕರೆದುಕೊಂಡು ಹೋಗಿದ್ದಿ ಅಂತ ನನಗೆ ಪ್ರಶ್ನಿಸಿದರು, ಅದಕ್ಕೆ ನಾನು ಅದು ನನ್ನ ವೈಯಕ್ತಿಕ ವಿಚಾರ ನೀವು ಕೇಳುವ ಸಂಬಂದ ಇಲ್ಲ ಎಂದು ಹೇಳಿದಾಗ,ಅವನು ಅವಾಚ್ಯವಾಗಿ ಬೈದು ನಿನಗೆ ಇಲ್ಲೆ ಕೂಲೆ ಮಾಡುತ್ತೆನೆ ಅಂತ ಹೆದರಿಸಿದನು. ನಾನು ಬಿ.ಆರ್.ಪಾಟೀಲ ಬಂದರೂ ನನ್ನನ್ನೂ ಕೊಲ್ಲುವುದಕ್ಕೆ ಆಗುವುದಿಲ್ಲ ಇದು ಪ್ರಜಾಪ್ರಭುತ್ವ ಇದು ನನ್ನ ಹಕ್ಕು ಎಂದೆ, ನಾನು ಅಲ್ಲಿಂದ ಹೋಗಿ ಸಾವಳೇಶ್ವರದಲ್ಲಿ ಸಾರಾಯಿ ಕುಡಿದು ಪುನ: ಸರಸಂಬಾಕ್ಕೆ ಬಂದು ಸರಸಂಬಾ ಗ್ರಾಮ ಪಂಚಾಯತ ಹತ್ತಿರ ಬಂದು ನನ್ನ ಬೈಕ್ ನಿಲ್ಲಿಸಿ ನಿಂತಾಗ ಅಷ್ಟರಲ್ಲಿ ಸುಮಾರು 25-30 ಜನರು ಅದರಲ್ಲಿ ಬಿ.ಆರ್.ಪಾಟೀಲ, ರಾಜಶೇಖರ ಪಾಟೀಲ,ನಾಗರಾಜ ಪಾಟೀಲ, ಸಚೀನ,ಬಸವರಾಜ,ಪಂಡಿತ ಜಿಡಗೆ ಹಾಗೂ ಬೇರೆ ಊರಿನಿಂದ ನಾಲ್ಕರೂ ವಾಹನಗಳಲ್ಲಿ 25-30 ಕ್ಕೂ ಹೆಚ್ಚು ಜನರು ಬಂದು ಮೊದಲಿಗೆ ಬಿ.ಆರ್.ಪಾಟೀಲ ನನಗೆ ಪಿಸ್ತೂಲ್ ಎದೆಗೆ ಹಚ್ಚಿ ಮಗನೆ ನಿನಗೆ ಕೊಲ್ಲುತ್ತೇನೆ ಸರಸಂಬಾದಲ್ಲಿ ಜೆ.ಡಿ.ಎಸ್ ಕಛೇರಿ ಮುಚ್ಚು ಇಲ್ಲವಾದಲ್ಲಿ ನಿನಗೆ ಸಾಯಿಸುತ್ತೇನೆ ಎಂದು ಹೆದರಿಸಿದರು ಅವರ ಸಂಗಡಿಗರಾದ ರಾಜಶೇಖರ ಪಾಟೀಲ,ನಾಗರಾಜ ಪಾಟೀಲ,ಪಂಡಿತ ಜಡಗೆ ಇನ್ನೀತರ ಬೇರೆ ಊರಿನಿಂದ ಬಂದ ಸುಮಾರು 25-30 ಜನ ನನಗೆ ತಲೆ,ಎದೆ,ಹೊಟ್ಟೆ ಹಾಗೂ ನನ್ನ ಮರ್ಮಾಂಗಕ್ಕೂ ಮನಸ್ಸು ಬಂದಂತೆ ಹೊಡೆದು ನನ್ನ ಕೊರಳಿನಲ್ಲಿದ್ದ 1 ತೊಲೆಯ (10 ಗ್ರಾಂ) ಚಿನ್ನದ ಚೈನು,ಮೊಬಾಯಿಲ್, ನನ್ನ ಡೈರಿ ಕಿತ್ತುಕೊಂಡಿರುತ್ತಾರೆ. ಸದರಿಯವರ ಮೇಲೆ ಕಾನೂನಿನ ಪ್ರಕಾರ  ಕ್ರಮ ಕೈಕೊಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2013 ಕಲಂ:143,147,323,329,363,504,506(2),ಸಂಗಡ 149 ಐ.ಪಿ.ಸಿ. ಮತ್ತು 25 ಆರ್ಮ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: